ವಾಷಿಂಗ್ಟನ್: ಚೀನಾವಷ್ಟೇ ಅಲ್ಲ, ಅಮೆರಿಕ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಜಪಾನ್‌ನಲ್ಲೂ ಕೋವಿಡ್-19 ಸೋಂಕಿನ ಪ್ರಕರಣ ಏಕಾಏಕಿ ಉಲ್ಬಣಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೋವಿಡ್ ವಿರುದ್ಧದ ಲಸಿಕೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ.
2020ರಲ್ಲಿ ಕೋವಿಡ್ ಸೋಂಕು ಆರಂಭಗೊಂಡಂದಿನಿಂದ ಇದುವರೆಗೆ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 100 ದಶಲಕ್ಷದ ಗಡಿ ದಾಟಿದೆ. ಅಮೆರಿಕದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 10 ಲಕ್ಷ ದಾಟಿದೆ ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿವಿ ಹೇಳಿದೆ.
ಕೋವಿಡ್ ಸೋಂಕಿನಿಂದಾಗಿ ವಿಶ್ವದಲ್ಲಿ ಪ್ರತೀ ವಾರ 8ರಿಂದ 10 ಸಾವಿರದಷ್ಟು ಜನತೆ ಸಾಯುತ್ತಿದ್ದು ಕೋವಿಡ್ -19ರ ವಿರುದ್ಧದ ಲಸಿಕೆ ಪಡೆಯುವುದು ಅತ್ಯಗತ್ಯವಾಗಿದೆ. ಪ್ರತೀ ದೇಶದ 70%ದಷ್ಟು ಜನಸಂಖ್ಯೆಗೆ ಲಸಿಕೆ ನೀಡಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ಗುರಿ ಇದುವರೆಗೆ ಈಡೇರಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಮರಿಯಾ ವಾನ್‌ಕೆರ್ಖೋವ್ ಹೇಳಿದ್ದಾರೆ.