ಪುತ್ತೂರು: ಇಲ್ಲಿನ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಸವಿನೆನಪಿಗಾಗಿ ಶತಸಂಭ್ರಮದ ಅಂಗವಾಗಿ ಆಯೋಜಿಸಿದ ಎರಡು ದಿನಗಳ ಸಾರಸ್ವತ ಕ್ರಿಕೆಟ್ ಪಂದ್ಯಾಟವು ವಿವೇಕಾನಂದ ವಿದ್ಯಾರ್ಧಕ ವಿದ್ಯಾಸಂಸ್ಥೆಗಳ ಕ್ರೀಡಾಂಗಣ ನೆಹರೂನಗರದಲ್ಲಿ ನಡೆಯಿತು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ, ರಾಷ್ಟ್ರೀಯ ಕಬಡ್ಡಿ ತರ್ಪುಗಾರ ವಿದ್ಯಾಶಂಕರ್ ದಂಬೆ, ಸದೃಢ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದರು.
ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣಬರ್ಕರ್ ಕತ್ತಲಕಾನ, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರಿನ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ, ಬಿ.ಆರ್.ಎಸ್.ಎಸ್. ಸಂಘ ಸುಳ್ಯದ ಅಧ್ಯಕ್ಷ ಹೇಮಂತ್ ಕುಮಾರ್ ಕಂದಡ್ಕ ,ಪುತ್ತೂರು ಸಂಘದ ಉಪಾಧ್ಯಕ್ಷ ಹರೀಶ್ ಬರ್ಕರ್ ಕತ್ತಲಕಾನ, ಶ್ರೀ ಸರಸ್ವತಿ ಕ್ರೆಡಿಟ್ ಸೌಹರ್ದ ಸಂಘದ ನರ್ದೇಶಕ ದೇವಿಪ್ರಸಾದ್ ಕಲ್ಲಾಜೆ, ಭಾ.ಗೌ.ಸಾ.ಬ್ರಾ ಸಮಾಜ ಸೇವಾ ಸಂಘ ಪುತ್ತೂರಿನ ನರ್ದೇಶಕ ಗೋಪಾಲಕೃಷ್ಣ ಕುಂಟಿನಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಹರೀಶ್ ಬರ್ಕರ್ ಸ್ವಾಗತಿಸಿ, ನರ್ದೇಶಕ ವಿಷ್ಣು ಪ್ರಭು ವಂದಿಸಿದರು.
ಸಮಾಜ ಬಾಂಧವರಿಗಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೨೫ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.