ಬೆಂಗಳೂರು: ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’ ಭಾನುವಾರ ಬೆಂಗಳೂರಿನ ಅರಮನೆ ವೈದಾನದಲ್ಲಿ ಜರಗಿತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶವನ್ನು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಶಕ್ತಿ ಸಂಗಮ ಕಾರ್ಯಕ್ರಮ ಜರಗಿದ್ದು, ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಪ್ರಕೋಷ್ಠಗಳ ಇಂತಹ ಶಕ್ತಿ ಸಂಗಮವು, ಪಕ್ಷದ ಕಾರ್ಯಚಟುವಟಿಕೆಗಳಿಗೆ ಹೊಸ ಶಕ್ತಿಯನ್ನು ತುಂಬಿದಂತಾಗಿದೆ.