ಪುತ್ತೂರು: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಶಾಂತಿನಗರ ವಿಟ್ಲ ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಡಿ.18ರಂದು ವಿಟ್ಲ ಶಾಂತಿನಗರ ಅಕ್ಷಯ ಶ್ರೀಮತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭ ಕುಳ, ಇಡ್ಕಿದು, ನೆಟ್ಲಮುಡ್ನೂರು, ಕೆದಿಲ, ಪುಣಚ, ಬಿಳಿಯೂರು, ಪೆರ್ನೆ, ವಿಟ್ಲಮುಡ್ನೂರು ಒಕ್ಕಲಿಗ ಸ್ವಸಹಾಯ ಸಂಘದ ಒಕ್ಕೂಟಗಳ ಪದಗ್ರಹಣ ನಡೆಯಲಿದೆ.
ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 8ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 10-30ಕ್ಕೆ ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಮೋನಪ್ಪ ಗೌಡ ಶಿವಾಜಿನಗರ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇದರ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ಗೌಡ, ಶಾಸಕ ಸಂಜೀವ ಮಠಂದೂರು, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್, ದ.ಕ. ಜಿಲ್ಲಾ ಗೌಡ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಲೋಕಯ್ಯ ಗೌಡ ಅತಿಥಿಗಳಾಗಿರುವರು. ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ ಡಿ.ವಿ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಗೌರವಾಧ್ಯಕ್ಷ ಮೋಹನ್ ಕಾಯರ್ಮಾರ್ ಗೌರವ ಉಪಸ್ಥಿತರಿರಲಿದ್ದಾರೆ. ಅಲ್ಲದೇ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದವರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.