ಪುತ್ತೂರು: ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಪ್ರಾರಂಭಿಸಿ, ಸರಕಾರಿ ಶಾಲೆಗಳಿಗೇ ಮಾದರಿಯಾಗಿರುವ ಕಾವು ಸರಕಾರಿ ಉನ್ನತೀಕರಿಸಿದ ಮಾದರಿ ಹಿ.ಪ್ರಾ ಶಾಲೆಯ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ರೆಡ್ ಡೇ ಕಾರ್ಯಕ್ರಮ ನಡೆಯಿತು.
ಕೆಂಪು ಬಣ್ಣದ ವಸ್ತುಗಳ ಸಂಗ್ರಹ ಮತ್ತು ಕೆಂಪು ಬಣ್ಣದ ವಸ್ತ್ರ ಧರಿಸಿದ್ದ ಎಲ್‌ಕೆಜಿ, ಯುಕೆಜಿ ಮಕ್ಕಳು, ರೆಡ್ ಡೇಯನ್ನು ಆಚರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎಲ್‌ಕೆಜಿ, ಯುಕೆಜಿ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಗೂ ಕಾವು ಶಾಲೆಯನ್ನು ದತ್ತು ಸ್ವೀಕರಿಸಿರುವ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಲ್‌ಕೆಜಿ, ಯುಕೆಜಿ ನಿರ್ವಹಣಾ ಸಮಿತಿ ಕಾರ್ಯದರ್ಶಿ ಹರೀಶ್ ಕುಂಜತ್ತಾಯ, ಎಸ್‌ಡಿಎಂಸಿ ಸದಸ್ಯ ಹೇಮನಾಥ, ಪ್ರಭಾರ ಮುಖ್ಯಶಿಕ್ಷಕಿ ಸವಿತಾ ಕುಮಾರಿ, ಸಹಶಿಕ್ಷಕ ಭಾಸ್ಕರ ಉಪಸ್ಥಿತರಿದ್ದರು.
ಜ್ಞಾನದೀಪ ವಿದ್ಯಾಸಂಸ್ಥೆಯ ಡಿ.ಎಂಎಡ್ ವಿದ್ಯಾರ್ಥಿ ಶಿಕ್ಷಕಿ ಪೂರ್ಣಿಮಾ ಗಿರೀಶ್ ಗೌಡ ಕುತ್ತಿಮುಂಡ ಸಹಕರಿಸಿದರು. ಎಲ್‌ಕೆಜಿ, ಯುಕೆಜಿ ಶಿಕ್ಷಕಿಯರಾದ ಪೂರ್ಣಿಮಾ ಸ್ವಾಗತಿಸಿ, ಅರ್ಚನಾ ವಂದಿಸಿ, ನಿವೇದಿತಾ ರಾಘವ ಕಾರ್ಯಕ್ರಮ ನಿರೂಪಿಸಿದರು.