ಪುತ್ತೂರು: ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಚೆಲ್ಯಡ್ಕ ಪುಳಿತ್ತಡಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಾಸಕ ಸಂಜೀವ ಮಠಂದೂರು ಅವರು ಡಿ. 16ರಂದು ಶಂಕುಸ್ಥಾಪನೆ ನೆರವೇರಿಸಿದರು.
ಶಕ್ತಿ ಕೇಂದ್ರದ ಅಧ್ಯಕ್ಷ ಜಗನಾಥ್ ರೈ ಕೋರ್ಮಂಡ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಂದ್ರ್ ತೀರ್ಥ ಶಿವಾಜಿ ಫ್ರೆಂಡ್ ಕಾರ್ಯಕರ್ತರು PLD ಬ್ಯಾಂಕ್ ಸದಸ್ಯ ಪ್ರವೀಣ್ ರೈ , ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.