ಮುಗಿಬಿದ್ದು ಖರೀದಿಸಿದ ಜನ
ರಾಯಚೂರು: ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ಕುರಕು ತಿಮಡಿ ಕುರ್ಕುರೆಯ ಪೊಟ್ಟಣದಲ್ಲಿ 500 ರೂ. ನೋಟುಗಳು ಸಿಕ್ಕಿರುವ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹುನೂರು ಗ್ರಾಮದ ಒಂದು ಅಂಗಡಿಯಲ್ಲಿ ಮಾರಾಟವಾದ 5 ರೂ. ಬೆಲೆಯ ಕುರ್ಕುರೆ ಪೊಟ್ಟಣಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ದೊರಕಿವೆ! ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ಹಬ್ಬುತ್ತಿದ್ದಂತೆ ಜನ ಮುಗಿಬಿದ್ದು ಕುರ್ಕುರೆ ಪೊಟ್ಟಣಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್ ಖಾಲಿಯಾಗಿದೆ, ಮಾಲೀಕ ಪುನಃ ಸ್ಟಾಕ್ ತರಿಸಿದಾಗ ಅವುಗಳಲ್ಲಿ ನೋಟು ಸಿಕ್ಕಿಲ್ಲ. ಈ ನೋಟುಗಳು ಅಸಲಿಯೋ, ನಕಲಿಯೋ ಎಂದು ಇನ್ನಷ್ಟೇ ಪತ್ತೆಯಾಗಬೇಕು. ಮುದ್ಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.