ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಕಾರ್ಯಾಗಾರ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಪಿನ್ಯಾಕಲ್ ಐಟಿಕ್ಲಬ್ ಹಾಗೂ ಇನ್‌ಸ್ಟಿಟ್ಯೂಶನ್ಸ್ ಇನ್ನೋವೇಶನ್ ಕೌನ್ಸಿಲ್ ಸಯೋಗದಲ್ಲಿ ಕಾಲೇಜಿನ ಗಣಕ ವಿಜ್ಞಾನ ಪ್ರಯೋಗಾಲಯದಲ್ಲಿ ಇಂಟರನೆಟ್ ಓಫ್ ಥಿಂಗ್ಸ್ (ಐಒಟಿ) ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.


ಕಾರ್ಯಾಗಾರ ಉದ್ಘಾಟಿಸಿದ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಗಣೇಶ್ ಭಟ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಅವಿಭಾಜ್ಯ ಅಂಗ. ಅವರು ತಮ್ಮ ಜ್ಞಾನವನ್ನು ಪ್ರಸಕ್ತ ವಿದ್ಯಾರ್ಥಿಗಳೊಂದಿಗೆ ಹಂಚಿಕೊಡಲ್ಲಿ ಶೈಕ್ಷಣಿಕ ಕ್ಷೇತ್ರ ಹಾಗೂ ಔದ್ಯೋಗಿಕ ಕ್ಷೇತ್ರಗಳ ನಡುವಿನ ಅಂತರವನ್ನು ಕಡಿಮೆಗೊಳಿಸಹುದು ಎಂದರು.


ಸAಪನ್ಮೂಲವ್ಯಕ್ತಿಯಾಗಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಡೇಟಾ ಅನಲಿಸ್ಟ್ ಆಗಿರುವ ಗ್ಯಾವಿನ್ ಕ್ರಿಸ್ ಮಸ್ಕರೇಞಸ್ ಮಾತನಾಡಿ, ಡೇಟಾ ಅನಾಲಿಸಿಸ್ ಕ್ಷೇತ್ರದಲ್ಲಿ ನುರಿತ ಐಒಟಿ ವೃತ್ತಿಪರರ ಅವಶ್ಯಕತೆ ಬಹಳ ಇದೆ. ಹೊಸ ವಿಷಯಗಳನ್ನು ಕಲಿಯಲು ಉತ್ಸುಕರಾದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಅನನ್ಯ ಸೃಜನಶೀಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಕ್ಷೇತ್ರದಲ್ಲಿ ಸದಾ ಅವಕಾಶಗಳಿವೆ. ಈ ತಂತ್ರಜ್ಞಾನವು ಸರಳವಾಗಿದ್ದು, ಗಣಕ ವಿಜ್ಞಾನದಲ್ಲಿ ಮಾಹಿತಿ ಹೊಂದಿದ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಬಹುದಾಗಿದೆ ಎಂದರು.































 
 


ಕಾರ್ತಿಕ್ ಕೆ.ಆರ್. ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಸ್ವಾಗತಿಸಿದರು. ಪಿನ್ಯಾಕಲ್ ಐಟಿ ಕ್ಲಬ್ ಅಧ್ಯಕ್ಷ ಜೋನ್ ವಿಸ್ಟನ್ ಡಯಾಸ್ ವಂದಿಸಿದರು. ಲಿಖಿತಾ ಎ.ಜೆ. ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಗಾರದಲ್ಲಿ೫೦ ವಿದ್ಯಾರ್ಥಿಗಳನ್ನು ೨-೩ ವಿದ್ಯಾರ್ಥಿಗಳ ತಂಡಗಳನ್ನಾಗಿ ವಿಭಜಿಸಿ ಆರ್ಡಿನೋ ಬೋರ್ಡ್ ಹಾಗೂ ವಿವಿಧ ರೀತಿಯ ಸೆನ್ಸರ್‌ಗಳನ್ನು ಬಳಸಿ ಐಒಟಿ ಮಾದರಿಗಳನ್ನು ನಿರ್ಮಿಸಲು ತರಬೇತಿ ನೀಡಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಐಒಟಿ ಕ್ಷೇತ್ರದ ಪರಿಣತರಾದ ಗ್ಯಾವಿನ್, ಜಗನ್ನಿವಾಸ ಬಿ, ರಂಜನ್ ನಾಯಕ್ ಹಾಗೂ ನವೀನ್ ಅವರು ವಿದ್ಯಾರ್ಥಿಗಳಿಗೆ ಐಒಟಿ ಮಾದರಿ ನಿರ್ಮಿಸಲು ಮಾರ್ಗದರ್ಶನ ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top