ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು, ಸ್ತ್ರೀ ಶಕ್ತಿ ಗುಂಪುಗಳಾದ ಪ್ರೀತಿ, ಸ್ನೇಹ, ಹಾಗೂ ಭಾಗ್ಯಶ್ರೀ ಬಾಲವಿಕಾಸ ಸಮಿತಿ ಹಾಗು ಪುರುಷರಕಟ್ಟೆ ಅಂಗನವಾಡಿ ಕೇಂದ್ರದ ಆಶ್ರಯದಲ್ಲಿ ಮಕ್ಕಳ ಬಾಲ ಮೇಳ (ಮಕ್ಕಳ ಹಬ್ಬ) ಪುರುಷರ ಕಟ್ಟೆ ರೈತ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಬೇಬಿ ವಿಂಧ್ಯಾ ಹಾಗೂ ಬೇಬಿ ರೈಝ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ, ಸರ್ವೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ನಮಿತ ನಾಯಕ್, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಕುಲಾಲ್, ಪಂಚಾಯತ್ ಸದಸ್ಯರಾದ ಉಮೇಶ್ ಎಂ., ಪುಷ್ಪಾವತಿ, ಪ್ರತಿಮಾ, ಬಾಲವಿಕಾಸ ಸಮಿತಿ ಅಧ್ಯಕ್ಷ ಶಶಿಕಲಾ, ಸದಸ್ಯರಾದ ಯಶೋದಾ, ಆಶಾ ಕಾರ್ಯಕರ್ತೆ ಸುಲೋಚನಾ ಉಪಸ್ಥಿತರಿದ್ದರು.
ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಲಾಭಾಂಶದ ಚೆಕ್ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಸುಧಾ ಬಿ ಸ್ವಾಗತಿಸಿದರು. ಶ್ರೀ ಸತೀಶ್ ಪುರುಷ ಎಂ. ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಸುಜಾತ ವಂದಿಸಿದರು.