ಶ್ರೀ ಭಾರತಿ ಮತ್ತು ಗೋಪಾಲಕೃಷ್ಣ ಕಿಲಂಗೋಡಿಯವರ ಮನೆಯಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜಾ ಕರ‍್ಯಕ್ರಮದ ಬಳಿಕ ನಡೆದ ಸಮಾರಂಭದಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ಇದರ ಶತಮಾನೋತ್ಸದ ಶತಕರ‍್ಯಕ್ರಮದ ಅಂಗವಾಗಿ ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನಿವೃತ್ತ ಮುಖ್ಯಗುರು ಶ್ರೀಮತಿ ರೇವತಿ ಕುಕ್ಕಂಬಳ್ಳ ಅವರನ್ನು ಗೌರವಿಸಿ ಅಭಿನಂದಿಸಲಾಯಿತು .ಕರ‍್ಯಕ್ರಮದಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ನ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ,ನರ‍್ದೇಶಕ ವಿಷ್ಣು ಪ್ರಭು ಸೇರಿದಂತೆ ಶ್ರೀಸರಸ್ವತಿ ಮಹಿಳಾ ಮಂಡಳಿಯ ಸದಸ್ಯೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು .
ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ಇದರ ವತಿಯಿಂದ ನಿವೃತ್ತ ಶಿಕ್ಷಕಿಗೆ ಅಭಿನಂದನೆ
