ದುಬೈ: ಜಗತ್ತಿನಲ್ಲಿಯೇ ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ದೇಶ ಯುಎಇಯದ್ದು ಎಂದು ವರದಿಯೊಂದು ತಿಳಿಸಿದೆ.
ಆರ್ಟನ್ ಕ್ಯಾಪಿಟಲ್ ಸಂಸ್ಥೆ ಪ್ರಕಟಿಸಿದ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಜಗತ್ತಿನಲ್ಲಿಯೇ ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ದೇಶ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಗಿವೆ. ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ಟಾಪ್ ೧೦ ದೇಶಗಳ ಪಟ್ಟಿಯಲ್ಲಿ ಯುರೋಪಿಯನ್ ದೇಶಗಳ ಪಾರಮ್ಯದ ನಡುವೆ ಯುಎಇ ಅಗ್ರ ಸ್ಥಾನ ಗಳಿಸಿದೆ.
ಯುಎಇ ಪಾಸ್‌ಪೋರ್ಟ್ ಹೊಂದಿದವರು ಯಾವುದೇ ಸಮಸ್ಯೆಯಿಲ್ಲದೆ ೧೮೦ ದೇಶಗಳನ್ನು ಪ್ರವೇಶಿಸಬಹುದಾಗಿದೆ. ಜರ್ಮನಿ ಮತ್ತು ಸ್ವೀಡನ್ ದೇಶಗಳ ಪಾಸ್‌ಪೋರ್ಟ್ಗಳನ್ನು ಬಳಸಿ ಪ್ರಯಾಣಿಸಬಹುದಾದ ದೇಶಗಳ ಸಂಖ್ಯೆಗಿAತ ಯುಎಇ ಪಾಸ್‌ಪೋರ್ಟ್ ಏಳು ಹೆಚ್ಚು ದೇಶಗಳಿಗೆ ಪ್ರವೇಶಾವಕಾಶ ಕಲ್ಪಿಸಿದರೆ, ಜಪಾನಿಗಿಂತ ಒಂಬತ್ತು ಹೆಚ್ಚು ದೇಶಗಳಿಗೆ ಯುಎಇ ಪಾಸ್‌ಪೋರ್ಟ್ ಹೊಂದಿರುವವರಿಗೆ ಪ್ರವೇಶ ಕಲ್ಪಿಸುತ್ತದೆ. ಸುಲಭ ಪ್ರವೇಶ ಹೊಂದಿದ ೧೭೧ ದೇಶಗಳ ಪಟ್ಟಿಯಲ್ಲಿ ಯುಎಇ ೨೫ನೇ ಸ್ಥಾನದಲ್ಲಿದೆ.