ಡಿ. ೧೭ರಿಂದ ಜ. ೧೪ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ ೧೭ರಂದು ಧನು ಪೂಜೆ ಆರಂಭಗೊಳ್ಳಲಿದೆ. ಒಂದು ಪರ್ಯಂತ ಕಾಲ ಉಷಃ ಕಾಲದಲ್ಲಿ ನಡೆಯುವ ಧನು ಪೂಜೆಯು ಜ. ೧೪ರವರೆಗೆ ನಡೆಯಲಿದೆ.

ಊರ – ಪರವೂರ ಭಕ್ತರನ್ನು ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಯಾವುದೇ ವಿಶೇಷ ಉತ್ಸವವೆಂದರೆ ಭಕ್ತರ ದಂಡೇ ಹರಿದು ಬರುತ್ತದೆ. ಧನು ಮಾಸದ ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ, ಭಕ್ತಸಮೂಹ ದೇವಸ್ಥಾನಕ್ಕೆ ಧಾವಿಸಿ ಬರುತ್ತಾರೆ. ಹಾಗಾಗಿ, ಧನು ಪೂಜೆಯಲ್ಲಿ ಭಕ್ತರಿಗೆ ಪಾಲ್ಗೊಳ್ಳುವ ಸಡಗರವಾದರೆ, ಶ್ರೀ ಮಹಾಲಿಂಗೇಶ್ವರನಿಗೆ ಭಕ್ತರ ಸೇವೆಯನ್ನು ಪಡೆದುಕೊಳ್ಳುವುದೇ ಸಂಭ್ರಮ.

ಧನು ಪೂಜೆಯ ವಿಶೇಷ:































 
 

ಸೂರ್ಯನು ಧನುರಾಶಿಗೆ ಪ್ರವೇಶಿಸುವ ಮಾಸವೇ ಧನುರ್ಮಾಸ. ಒಂದು ತಿಂಗಳ ಕಾಲ, ಅಂದರೆ ಈ ವರ್ಷ ಡಿ. ೧೭ರಿಂದ ಜ. ೧೪ರವರೆಗೆ ಮಾರ್ಗಶಿರ ಬಹುಳ ಪಂಚಮಿಯಿAದ ಪೌಷ ಬಹುಳ ಚೌತಿಯವರೆಗೆ ಈ ಮಾಸವು ವ್ಯಾಪಿಸಿದೆ. ಈ ಮಾಸದಲ್ಲಿ ಪೂಜೆಯನ್ನು ಸೂರ್ಯೋದಯಕ್ಕೆ ಮೊದಲೇ ಮಾಡಬೇಕು ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಮಾಸ ಸಂದರ್ಭ ಬೆಳಿಗ್ಗೆ ೫.೩೦ಕ್ಕೆ ಬೆಳಗ್ಗಿನ ಪೂಜೆ ನಡೆಯಲಿದೆ.

ಬ್ರಾಹ್ಮಿ ಮುಹೂರ್ತದಲ್ಲಿ ದೇವತೆಗಳು ಪರಮಾತ್ಮನನ್ನು ಪೂಜಿಸುತ್ತಾರೆ. ಅದರಂತೆ ಆಸ್ತಿಕರು ಬೆಳಕು ಹರಿಯುವುದಕ್ಕಿಂತ ಮೊದಲೇ ಎದ್ದು, ಸ್ನಾನಾದಿಗಳನ್ನು ಪೂರೈಸಿ, ದೇವ ಪೂಜೆ ಮಾಡಬೇಕು ಎಂಬ ನಿಯಮವಿದೆ. ತಾರೆಗಳು ಇನ್ನು ಆಗಸದಲ್ಲಿ ಕಂಗೊಳಿಸುತ್ತಿರುವ ಹೊತ್ತಿನಲ್ಲೇ ಪೂಜೆಯನ್ನು ಮುಗಿಸಿದರೆ ಶ್ರೇಷ್ಠ ಎಂಬ ಉಲ್ಲೇಖಗಳು ಸಿಗುತ್ತವೆ.

ಧನು ಮಾಸದಲ್ಲಿ ಒಂದು ದಿನ ಉಷಃ ಕಾಲದಲ್ಲಿ ಪೂಜೆಯನ್ನು ಪೂರೈಸಿದರೂ, ಸಾವಿರಾರು ವರ್ಷಗಳ ಕಾಲ ಪೂಜೆ ಮಾಡಿದ ಫಲವಿದೆ. ಹೀಗೆ ಪ್ರತಿದಿನ ಪೂಜೆ ಮಾಡಿದರೆ ಉತ್ತಮ ಎಂದು ಹೇಳಲಾಗಿದೆ.

ಸೂರ್ಯ ಉತ್ತರಾಯಣಕ್ಕೆ ಪ್ರವೇಶ

ಇದೀಗ ದಕ್ಷಿಣಾಯನದಲ್ಲಿ ಪರಿಭ್ರಮಿಸುತ್ತಿರುವ ಸೂರ್ಯ, ಡಿ. ೧೬ರಿಂದ ಉತ್ತರಾಯಣಕ್ಕೆ ಹೋಗುವ ಕಾಲ. ಮುಂದಿನ ಆರು ತಿಂಗಳು ಸೂರ್ಯ ಉತ್ತರಾಯಣದಲ್ಲಿ ತಿರುಗುತ್ತಾನೆ. ಇದರ ಮೊದಲ ಮಾಸವೇ ಧನು ಮಾಸ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ. ಆದರೆ ಧನು ಮಾಸ ರಾತ್ರಿ ಹಾಗೂ ಹಗಲು ಎರಡೂ ಸೇರಿದ ಸಮಯ. ಆದ್ದರಿಂದ ಈ ಮಾಸದ ಬ್ರಾಹ್ಮೀ ಮುಹೂರ್ತ ಎದ್ದು, ದೇವರನ್ನು ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top