ಅಂಬಿಕಾ ಮಹಾವಿದ್ಯಾಲಯದಲ್ಲಿ `ಅನ್ವೇಷಣಾ-೨೦೨೨’ ಸಮಾರೋಪ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ನೇತೃತ್ವದ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯವು ಪಿ.ಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್‌ಕಾಲೇಜು ಸಾಂಸ್ಕೃತಿಕ ಹಾಗೂ ಸೃಜನಶೀಲ ಸ್ಪರ್ಧೆ `ಅನ್ವೇಷಣಾ-೨೦೨೨’ರಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ನಿಂತಿಕಲ್ಲು ಕೆ.ಎಸ್. ಗೌಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.

ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಭಾರತ ದೇಶ ಕಲೆ, ಸಂಸ್ಕ್ರತಿ, ಸಂಗೀತ, ಆರೋಗ್ಯ, ಆಹಾರ ಪದ್ದತಿಯ ಮೂಲಕ ವಿಶ್ವದಲ್ಲೇ ಭಿನ್ನವಾಗಿ ಗುರುತಿಸಿಕೊಂಡಿದೆ. ಸಾವಿರಾರು ವರ್ಷಗಳಿಂದ ಮಹನೀಯರ ಶ್ರಮದ ಫಲವಾಗಿ ನಾವು ಇಂದು ಉತ್ತಮ ಜೀವನವನ್ನು ಗಳಿಸಿದ್ದು, ದೇಶದ ಪರಿಕಲ್ಪನೆ ಅರಿತುಕೊಂಡು ದೇಶವನ್ನು ಉನ್ನತ ಮಟ್ಟಕ್ಕೆ ಏರಿಸಲು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ಹಳ್ಳಿಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊAಡರು. ಅನ್ವೇಷಣಾ-೨೦೨೨ರ ಸಂಯೋಜಕ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ವಂದಿಸಿದರು.



































 
 

ಬಹುಮಾನ ವಿತರಣೆ:

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಮನೀಷ್ ಬೈಲಾಡಿ ಹಾಗೂ ಅದ್ವೀಶ್ ರೈ ಮುಖ ವರ್ಣನೆಯಲ್ಲಿ ಪ್ರಥಮ, ನವ್ಯೋತ್ಪನ್ನ ಅನಾವರಣದಲ್ಲಿ ನಾಗರತ್ನ ಎ. ಕಿಣಿ ಹಾಗೂ ಸಿಂಧೂರ್ ಡಿ.ಕೆ. ಪ್ರಥಮ, ಭಿತ್ತಿ ಪತ್ರಿಕೆ ತಯಾರಿಯಲ್ಲಿ ಶರಣ್ಯಾ ತೋಳ್ಪಾಡಿ ಹಾಗೂ ಶ್ರಿಯಾ ಭೋಜಮ್ಮ ಪ್ರಥಮ, ಸುಗಮ ಸಂಗೀತದಲ್ಲಿ ವೈಷ್ಣವಿ ಪಿ.ವಿ. ಪ್ರಥಮ, ಸೈ-ಫೈನಲ್ಲಿ ಶಿವಸ್ಕಂದ ಪ್ರಥಮ ಸ್ಥಾನ ಪಡೆದರು. ಬೆಂಕಿ ರಹಿತ ಅಡುಗೆಯಲ್ಲಿ ಅನನ್ಯಾ, ಅನುಶ್ರೀ ಡಿ.ಎಲ್. ಹಾಗೂ ಸಂಜನಾ ತಂಡ ದ್ವಿತೀಯ, ಟಿ.ವಿ ರಿಪೋರ್ಟಿಂಗ್‌ನಲ್ಲಿ ಸೇವಂತಿ ಕೆ.ಎ. ಹಾಗೂ ಚಂದು ಗೌಡ ಎಂ. ತಂಡ ದ್ವಿತೀಯ, ಸೈ-ಫೈನಲ್ಲಿ ರಿಷಿತಾ ಕೆ. ದ್ವಿತೀಯ ಸ್ಥಾನ ಗಳಿಸಿದರು.

ನಿಂತಿಕಲ್ಲು ಕೆ.ಎಸ್. ಗೌಡ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಟಿ.ವಿ. ವರದಿಗಾರಿಕೆಯಲ್ಲಿ ಅಬ್ದುಲ್ ರೆಹಮಾನ್ ಹಪೀಝ್ ಹಾಗೂ ಮೆಹರೂಫ್ ಬಿ. ತಂಡ ಪ್ರಥಮ, ನಿಧಿ ಶೋಧದಲ್ಲಿ ಜೀವನ್ ಹಾಗೂ ಶೋಭಿತ್ ಕುಮಾರ್ ಪ್ರಥಮ, ಗೀತ ಪ್ರಸ್ತುತಿಯಲ್ಲಿ ಪಿ. ಸಾಧನಾ ಶೆಟ್ಟಿ ದ್ವಿತೀಯ, ಮುಖ ವರ್ಣನೆಯಲ್ಲಿ ವರ್ಷಿಣಿ ಎಸ್. ಹಾಗೂ ವರ್ಷಾ ಬಿ. ತಂಡ ದ್ವಿತೀಯ, ನವ್ಯೋತ್ಪನ್ನ ಅನಾವರಣದಲ್ಲಿ ಪಾರಿತೋಷ್ ರೈ ಹಾಗೂ ರಿಫಾಸ್ ಶೇಕ್ ತಂಡ ದ್ವಿತೀಯ, ಭಾಷಣದಲ್ಲಿ ರಕ್ಷಾ ದ್ವಿತೀಯ ಸ್ಥಾನ ಪಡೆದರು.

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಯಶಸ್ ಎಂ. ಗೀತ ಪ್ರಸ್ತುತಿಯಲ್ಲಿ ಪ್ರಥಮ, ಭಿತ್ತಿ ಪತ್ರಿಕಾ ತಯಾರಿಯಲ್ಲಿ ಜಿ.ಎಂ. ಸೋಹನ್ ಹಾಗೂ ಅಖಿಲೇಶ್ ಕೆ. ತಂಡ ದ್ವಿತೀಯ, ಸುಗಮ ಸಂಗೀತದಲ್ಲಿ ನಿಶ್ವಿತಾ ಕೆ. ದ್ವಿತೀಯ ಸ್ಥಾನ ಗಳಿಸಿದರು.

ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಅವಾಬಿ ಶಬ್ನ ಭಾಷಣದಲ್ಲಿ ಪ್ರಥಮ, ಬೆಂಕಿ ರಹಿತ ಅಡುಗೆಯಲ್ಲಿ ಎ.ಎಲ್. ಅಬಿನಾ, ಮಲ್ಲಿಕಾ ಹಾಗೂ ಸ್ಮಿತಾ ಕೆ. ತಂಡ ಪ್ರಥಮ ಸ್ಥಾನ ಗಳಿಸಿದರು. 

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕಿಶೋರ್ ಗೌಡ ಹಾಗೂ ಶ್ರೀಶಾಂತ್ ಜಿ. ತಂಡ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದರು.

ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಶ್ರೀನಿಧಿ ಎ. ಹಾಗೂ ಸಚಿನ್ ಯು.ಆರ್. ತಂಡ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು.

ಹೈಸ್ಕೂಲ್ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸೈ-ಫೈ ಐಕ್ಯೂ ಟೆಸ್ಟ್ನಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಿಯಾಂಶು ರಾವ್ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅನ್ವಿತಾ ಎನ್. ಜಂಟಿ ಪ್ರಥಮ ಸ್ಥಾನ ಪಡೆದರು. ಅಂಬಿಕಾ ಸಿಬಿಎಸ್‌ಇಯ ಇಶಾನ್ ಎಸ್. ಭಟ್ ದ್ವಿತೀಯ ಸ್ಥಾನ ಗಳಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top