ಅಪಾಯದ ಸ್ಥಿತಿಯಲ್ಲಿರುವ ನಗರ ರಸ್ತೆಗಳನ್ನು ಶೀಘ್ರ ಸರಿಪಡಿಸಬೇಕು | ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ನಗರಸಭೆಗೆ ಮನವಿ

ಪುತ್ತೂರು: ಪುತ್ತೂರು ಪೇಟೆಯ ಹಲವು ಭಾಗದಲ್ಲಿ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಅಪಾಯದ ಸ್ಥಿತಿಯಲ್ಲಿದೆ. ಇದನ್ನು ತಕ್ಷಣ ಸರಿಪಡಿಸುವಂತೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪುತ್ತೂರು ನಗರಸಭೆಗೆ ಮನವಿ ಮಾಡಿದೆ. ಈಗಾಗಲೇ ದ್ವಿಚಕ್ರ ವಾಹನ ಸವಾರರು ಅಪಘಾತ ಸಂಭವಿಸಿ ಬಿದ್ದಿರುತ್ತಾರೆ. ಅಲ್ಲದೆ ಜನರಿಗೆ ನಡೆದಾಡಲು ಪುಟ್‍ ಪಾತ್‍ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಅಪಾಯ ಸ್ಥಿತಿಯಲ್ಲಿರುವ ಫುಟ್ ಪಾತ್ ಗಳನ್ನು ಸರಿಪಡಿಸಬೇಕಾಗಿದೆ ಎಂದು ನಗರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮನವಿ ಮಾಡಲಾಯಿತು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ […]

ಅಪಾಯದ ಸ್ಥಿತಿಯಲ್ಲಿರುವ ನಗರ ರಸ್ತೆಗಳನ್ನು ಶೀಘ್ರ ಸರಿಪಡಿಸಬೇಕು | ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ನಗರಸಭೆಗೆ ಮನವಿ Read More »

ಗುಂಡು ಹಾರಿಸಿ ಬಿಜೆಪಿ ನಾಯಕನ ಹತ್ಯೆ

ಬಿಜೆಪಿ ನಾಯಕರೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಬಿಹಾರದ ಪಾಟ್ನಾದಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಬಿಜೆಪಿ ಮುಖಂಡ ಶ್ಯಾಮ್ ಸುಂದ‌ರ್ ಅಲಿಯಾಸ್ ಮುನ್ನಾ ಶರ್ಮಾ ಗುಂಡೇಟಿನಿಂದ ಮೃತಪಟ್ಟವರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ನಲ್ಲಿ ನಡೆದಿದೆ. ಶ್ಯಾಮ್ ಸುಂದ‌ರ್ ಅವರು ದೇವಸ್ಥಾನದಿಂದ ಹೊರಗೆ ಬಂದು ಮನೋಜ್ ಕಮಾಲಿಯಾ ಗೇಟ್ ಬಳಿ ಬಂದು, ಯಾರೊಂದಿಗೋ ಮಾತನಾಡುತ್ತಿದ್ದರು. ಅಷ್ಟರಲ್ಲಿ ಬೈಕಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು

ಗುಂಡು ಹಾರಿಸಿ ಬಿಜೆಪಿ ನಾಯಕನ ಹತ್ಯೆ Read More »

ಗೇರುಕಟ್ಟೆ 52ನೇ ವರ್ಷದ ಶ್ರೀ ಗಣೇಶೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಳಮದ್ದಳೆ

ಗೇರುಕಟ್ಟೆ : ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ 52ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ‘ಶಿವಭಕ್ತ ಪುರುಷಮೃಗ’ ತಾಳಮದ್ದಳೆ ಗೇರುಕಟ್ಟೆ ಮಂಜಲಡ್ಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಸಭಾಭಾವನ ದಲ್ಲಿ ಜರಗಿತು. ಭಾಗವತರಾಗಿ ಮಧೂರು ವಿಷ್ಣು ಪ್ರಸಾದ್ ಕಲ್ಲೂರಾಯ ಗೇರುಕಟ್ಟೆ. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ಪುರುಷಮೃಗ), ರಾಘವೇಂದ್ರ ಆಸ್ರಣ್ಣ ನಾಳ (ಹನುಮಂತ ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀಕೃಷ್ಣ), ರಾಘವ ಪೂಜಾರಿ ಮೆದಿನ (ಧರ್ಮರಾಯ

ಗೇರುಕಟ್ಟೆ 52ನೇ ವರ್ಷದ ಶ್ರೀ ಗಣೇಶೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಳಮದ್ದಳೆ Read More »

ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳುವಿಕೆ ಯತ್ನವನ್ನು ಸೇನಾ ಪಡೆಗಳು ವಿಫಲಗೊಳಿಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.ನೌಶೇರಾದ ಲಾಮ್ ಸೆಕ್ಟರ್‌ನಲ್ಲಿ ಭಾನುವಾರ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ. ಉಗ್ರರಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.ಕತ್ತಲೆಯಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರ ಚಲನವಲನ ಅರಿತು ಗುಂಡಿನ ದಾಳಿ ನಡೆಸಿದ್ದಾರೆ. ಇದು ಎನ್‌ಕೌಂಟರ್‌ಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ Read More »

ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ಸೋಮವಾರ ಮುಂಜಾನೆ ನಿದನರಾದರು. ಬೆಳಗಿನ ಜಾವ 3.13ಕ್ಕೇ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ನಿಧನ Read More »

20 ದಿನ ಹೋಟೆಲ್‌ ಕೋಣೆಯಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ಹೈದರಾಬಾದ್‌: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ 20 ದಿನ ಹೋಟೆಲ್‌ ರೂಮ್‌ನಲ್ಲಿ ಬಂಧನದಲ್ಲಿಟ್ಟ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ಸಂಭವಿಸಿದೆ. ಹೈದರಾಬಾದ್​ನ ಮಹಿಳಾ ಪೊಲೀಸರು ಕೊನೆಗೂ ಯುವತಿಯನ್ನು ಬಂಧನದಿಂದ ರಕ್ಷಿಸಿದ್ದಾರೆ. ಹೈದರಾಬಾದ್​ ಪೊಲೀಸ್​ ವಿಭಾಗದ ‘SHE’ ತಂಡ ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 19 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭೈಂಸಾ ಪಟ್ಟಣದ ವಿದ್ಯಾರ್ಥಿನಿಯ ಪೋಷಕರು ಹೈದರಾಬಾದ್‌ನ ‘SHE’ ಟೀಮ್​ಗೆ ಮಗಳು

20 ದಿನ ಹೋಟೆಲ್‌ ಕೋಣೆಯಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯ ರಕ್ಷಣೆ Read More »

ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ | 4 ಲಕ್ಷ ರೂ. ವೆಚ್ಚದ ತಂಗುದಾಣ

ಪುತ್ತೂರು ಬಲ್ನಾಡು: ಬುಳರಿಕಟ್ಟೆ ಸಾಜ ಕ್ರಾಸ್ ಬಳಿ 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ರಿಕ್ಷಾ ತಂಗುದಾಣದ ಉದ್ಘಾಟನಾ ಸಮಾರಂಭ ಭಾನುವಾರ ಸಂಜೆ ನಡೆಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಂಗುದಾಣವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಾಸಕರ 2023 24ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದ ಮೂಲಕ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಈ ನೂತನ ತಂಗುದಾಣ ನಿರ್ಮಾಣವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಲ್ನಾಡು ಗ್ರಾಮ ಪಂಚಾಯತ್‌

ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ | 4 ಲಕ್ಷ ರೂ. ವೆಚ್ಚದ ತಂಗುದಾಣ Read More »

ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ | ಉದ್ಯಮಿಯನ್ನು ವರಿಸಲಿರುವ ರಮ್ಯಾ

ಬೆಂಗಳೂರು:  ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಇದೇ ನವೆಂಬರ್‍ ನಲ್ಲಿ ಹಸೆಮಣೆ ಏರುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ಶೀಘ್ರ ನಡೆಯಲಿದೆ ಎನ್ನಲಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಅವರನ್ನು ರಮ್ಯಾ ವಿವಾಹ ಆಗಲಿದ್ದಾರೆ ಎನ್ನಲಾಗಿದೆ. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು ತಮಿಳು : ಚಿತ್ರರಂಗದಲ್ಲೂ ಮಿಂಚಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ

ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ | ಉದ್ಯಮಿಯನ್ನು ವರಿಸಲಿರುವ ರಮ್ಯಾ Read More »

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ

ಗೆಲ್ಲುವ ವಿಶ್ವಾಸದಲ್ಲಿ ಸಿದ್ದರಾಮಯ್ಯ ಪಾಳಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸುತ್ತಿಕೊಂಡಿರುವ ಮುಡಾ ಹಗರಣ ಇಂದು ಹೈಕೋರ್ಟಿನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ.ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಈಗಾಗಲೇ ನಾಲ್ಕು ಸಿಟ್ಟಿಂಗ್‌ಗಲ್ಲಿ ಕೋರ್ಟ್‌ ಈ ಕೇಸಿನ ವಿಚಾರಣೆ ನಡೆಸಿದ್ದು, ಇಂದು ವಿಚಾರಣೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಸೆ.9ರಂದು ಮುಕ್ತಾಯಗೊಳಿಸಬೇಕೆಂದು ಸ್ವತಹ ನ್ಯಾಯಾಧೀಶರೇ ಹೇಳಿದ್ದಾರೆ. ಆದರೆ ಇಂದೇ ತೀರ್ಪು ಹೊರಬೀಳಬಹುದಾ ಅಥವಾ

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ Read More »

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ

ಗೆಲ್ಲುವ ವಿಶ್ವಾಸದಲ್ಲಿ ಸಿದ್ದರಾಮಯ್ಯ ಪಾಳಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸುತ್ತಿಕೊಂಡಿರುವ ಮುಡಾ ಹಗರಣ ಇಂದು ಹೈಕೋರ್ಟಿನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ.ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಈಗಾಗಲೇ ನಾಲ್ಕು ಸಿಟ್ಟಿಂಗ್‌ಗಲ್ಲಿ ಕೋರ್ಟ್‌ ಈ ಕೇಸಿನ ವಿಚಾರಣೆ ನಡೆಸಿದ್ದು, ಇಂದು ವಿಚಾರಣೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಸೆ.9ರಂದು ಮುಕ್ತಾಯಗೊಳಿಸಬೇಕೆಂದು ಸ್ವತಹ ನ್ಯಾಯಾಧೀಶರೇ ಹೇಳಿದ್ದಾರೆ. ಆದರೆ ಇಂದೇ ತೀರ್ಪು ಹೊರಬೀಳಬಹುದಾ ಅಥವಾ

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ Read More »

error: Content is protected !!
Scroll to Top