ಚಾರ್ಮಾಡಿಯಲ್ಲಿ ಒಂಟಿ ಸಲಗ ಓಡಾಟ | ವಾಹನ ಸವಾರರಲ್ಲಿ ಆತಂಕ

ಉಜಿರೆ : ಒಂಟಿ ಸಲಗವೊಂದು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಕಾಣಿಸಿಕೊಂಡಿದೆ. ಘಾಟಿ ಭಾಗದ ಅಣ್ಣಪ್ಪ ಬೆಟ್ಟದಿಂದ ಸೋಮನ ಕಾಡು ಅರಣ್ಯಭಾಗದ ತನಕ ರಸ್ತೆಯಲ್ಲಿ ಸವಾರಿ ನಡೆಸಿದ ಕಾಡಾನೆ ಬಳಿಕ ಸೋಮನ ಕಾಡು ಪರಿಸರದ ಅರಣ್ಯ ಪ್ರದೇಶದತ್ತ ತೆರಳಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ. ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದ ವೇಳೆ ಹಲವು ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬಂತು. ಮಂಜಿನ ವಾತಾವರಣ, ನಿರಂತರ ಸುರಿಯುವ ಮಳೆ, ಜೊತೆಗೆ ಕಾಡಾನೆಯ ತಿರುಗಾಟ ಘಾಟಿ ಪ್ರದೇಶದಲ್ಲಿ […]

ಚಾರ್ಮಾಡಿಯಲ್ಲಿ ಒಂಟಿ ಸಲಗ ಓಡಾಟ | ವಾಹನ ಸವಾರರಲ್ಲಿ ಆತಂಕ Read More »

ಜೂನ್‌ ತಿಂಗಳ ಗೃಹಲಕ್ಷ್ಮೀ ಹಣ ಕೊನೆಗೂ ಖಾತೆಗೆ ಜಮೆ | ಜುಲೈ, ಆಗಸ್ಟ್‌ ತಿಂಗಳ ಕಂತು ಇನ್ನಷ್ಟು ವಿಳಂಬ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಕಂತಿನ ಹಣ ಇಂದು ಮಹಿಳೆಯರ ಖಾತೆಗಳಿಗೆ ಕೊನೆಗೂ ವರ್ಗಾವಣೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗದ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಟೀಕಿಸಿದ್ದವು. ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಸ್ವಲ್ಪ ವಿಳಂಬವಾಗುತ್ತಿದೆ. ಖಂಡಿತವಾಗಿ ಸರ್ಕಾರ 2000 ರೂ. ವರ್ಗಾವಣೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಜೂನ್‌ ತಿಂಗಳ ಗೃಹಲಕ್ಷ್ಮೀ ಹಣ ಕೊನೆಗೂ ಖಾತೆಗೆ ಜಮೆ | ಜುಲೈ, ಆಗಸ್ಟ್‌ ತಿಂಗಳ ಕಂತು ಇನ್ನಷ್ಟು ವಿಳಂಬ Read More »

ಅ.3-12 : ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು; ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.3 ರಿಂದ 12 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿರುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮಧ್ಯಾಹ್ನ ದೇವಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರು, ಸದಸ್ಯರುಗಳು, ವಿಶ್ವ ಯುವಕ ವೃಂದದ ಸದಸ್ಯರುಗಳು, ಶ್ರೀಕ್ಷೇತ್ರ ಧರ್ಮಸ್ಥಳದ

ಅ.3-12 : ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ತ್ರೋಬಾಲ್ ಪಂದ್ಯಾಟ : ಬಾಲಕಿಯರ ವಿಭಾಗದಲ್ಲಿ ಪಾಂಗ್ಲಾಯಿ ಬೆಥನಿ ಆಂಗ್ಲ ಮಾದ್ಯಮ ಪ್ರಾಥಮಿಕ  ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪುತ್ತೂರು: ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿ .ಪ್ರಾ ಶಾಲೆ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ/ಬಾಲಕಿಯರ ತ್ರೋಬಾಲ್ ಪಂದ್ಯಾಟ ಸುಳ್ಯಪದವು ಸರ್ವೋದಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಪಾಂಗ್ಲಯಿ ಬೆಥನಿ ಆಂಗ್ಲ ಮಾದ್ಯಮ  ಶಾಲೆ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಪಂದ್ಯಾಟದಲ್ಲಿ ಉತ್ತಮ ಆಲ್ರೌಂಡರ್ ಆಗಿ ಬೆಥನಿಯ ಆದ್ಯಾ ಕೆ. ಪ್ರಶಸ್ತಿಯನ್ನು ಪಡೆದಿರುತ್ತಾರೆ. ತಂಡದ ಆಟಗಾರರಾದ

ತ್ರೋಬಾಲ್ ಪಂದ್ಯಾಟ : ಬಾಲಕಿಯರ ವಿಭಾಗದಲ್ಲಿ ಪಾಂಗ್ಲಾಯಿ ಬೆಥನಿ ಆಂಗ್ಲ ಮಾದ್ಯಮ ಪ್ರಾಥಮಿಕ  ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ವಿವೇಕಾನಂದ ಕಾಲೇಜಿನಲ್ಲಿ  43ನೇ ವರ್ಷದ ಶ್ರೀಗಣೇಶೋತ್ಸವ | ಮಣ್ಣು ಸೃಷ್ಟಿಯ ಕೊಡುಗೆ : ಡಾ. ಎಚ್. ಎನ್.ಉದಯಶಂಕರ

ಪುತ್ತೂರು: ಸಂಶೋಧನೆ ಮತ್ತು ಕೈಗಾರಿಕೆಗಳಿಂದ ಉತ್ಪತ್ತಿ ಮಾಡಲಾಗದ ನಿಧಿ ಎಂದರೆ ಅದು ಮಣ್ಣು. ತಂತ್ರಜ್ಞಾನ ಮುಂದುವರೆದರೂ ಮಣ್ಣನ್ನು ಯಾರು ಉತ್ಪದಿಸಲಾರರು. ಮಣ್ಣಿಗೆ ಅದರದೇ ಆದ ಮಹತ್ವವಿದೆ. ನಮ್ಮ ಸ್ವಾರ್ಥಕ್ಕಾಗಿ  ಪಶ್ಚಿಮ ಘಟ್ಟವನ್ನು ಹಾಳುಮಾಡುತ್ತಿದ್ದೇವೆ. ಅಭಿವೃದ್ಧಿ ಹೆಸರಿನಲ್ಲಿ ಭೂಮಿಯನ್ನು ಕೆಡಿಸುತ್ತಿದ್ದೇವೆ. ಪ್ರಕೃತಿಯ ಮುಂದೆ ಯಾರು ದೊಡ್ಡವರಲ್ಲ, ಮಣ್ಣುಇಲ್ಲದೆ ಜೀವ ಇಲ್ಲಎಂದು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಭೂ ವಿಜ್ಞಾನಿ ಡಾ. ಎಚ್.ಎನ್‌. ಉದಯಶಂಕರ  ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )

ವಿವೇಕಾನಂದ ಕಾಲೇಜಿನಲ್ಲಿ  43ನೇ ವರ್ಷದ ಶ್ರೀಗಣೇಶೋತ್ಸವ | ಮಣ್ಣು ಸೃಷ್ಟಿಯ ಕೊಡುಗೆ : ಡಾ. ಎಚ್. ಎನ್.ಉದಯಶಂಕರ Read More »

ಎಚ್‌ಎಸ್‌ಆರ್‌ಪಿ ಡೆಡ್‌ಲೈನ್‌ ಸೆ.15ಕ್ಕೆ ಮುಕ್ತಾಯ | ಸೆ.16ರಿಂದ ಬೀಳಲಿದೆ 500 ರೂ. ದಂಡ

ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಲು ಸರ್ಕಾರ ಮತ್ತು ಕೋರ್ಟ್ ನೀಡಿರುವ ಗಡುವು ಮುಗಿಯಲು ಇನ್ನು ಆರು ದಿನ ಮಾತ್ರ ಬಾಕಿ ಇದೆ. ಅಧಿಕ ಸುರಕ್ಷತೆ ಖಾತರಿಪಡಿಸುವ ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆ ಶುರುವಾಗಿ ಒಂದೂವರೆ ವರ್ಷವಾಗಿದ್ದು, ಪದೇಪದೆ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇನ್ನು ಸೆ.16 ಕೊನೆಯ ಗಡುವು ಎಂದು ಸರ್ಕಾರ ಹೇಳಿದೆ.ಸೆಪ್ಟೆಂಬರ್ 15ರ ಮಧ್ಯರಾತ್ರಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ. ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ

ಎಚ್‌ಎಸ್‌ಆರ್‌ಪಿ ಡೆಡ್‌ಲೈನ್‌ ಸೆ.15ಕ್ಕೆ ಮುಕ್ತಾಯ | ಸೆ.16ರಿಂದ ಬೀಳಲಿದೆ 500 ರೂ. ದಂಡ Read More »

ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆಗೆ ಆನ್‌ಲೈನ್‌ ಪ್ರಶ್ನೆಪತ್ರಿಕೆ: ವ್ಯಾಪಕ ವಿರೋಧ | ಶಿಕ್ಷಕರೇ ಪ್ರಶ್ನೆ ಪತ್ರಿಕೆ ಮುದ್ರಿಸಬೇಕಾದ ಪರಿಸ್ಥಿತಿ

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಪೂರ್ವಸಿದ್ಧತಾ ಮತ್ತು ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ರೂಪಿಸಿ ಕೊಡಲಾಗುತ್ತಿತ್ತು. ಈ ವರ್ಷದಿಂದ ಮಧ್ಯವಾರ್ಷಿಕ ಪರೀಕ್ಷೆಗೂ ಪ್ರಶ್ನೆ ಪತ್ರಿಕೆ ರೂಪಿಸಿ ಆನ್​ಲೈನ್​ ಮೂಲಕ ರವಾನಿಸುವ ಮಹತ್ವದ ನಿರ್ಧಾರ ಮಾಡಿದೆ. ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಇೃವಾಗ ಇಲಾಖೆ ಈ ನಿರ್ಧಾರಕ್ಕೆ ಕೈಗೊಂಡಿರುವುದು ವಿರೋಧಕ್ಕೆ ಕಾರಣವಾಗಿದೆ.

ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆಗೆ ಆನ್‌ಲೈನ್‌ ಪ್ರಶ್ನೆಪತ್ರಿಕೆ: ವ್ಯಾಪಕ ವಿರೋಧ | ಶಿಕ್ಷಕರೇ ಪ್ರಶ್ನೆ ಪತ್ರಿಕೆ ಮುದ್ರಿಸಬೇಕಾದ ಪರಿಸ್ಥಿತಿ Read More »

ಅಮ್ಮನನ್ನು ಉಳಿಸಲು ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಪ್ರಶಂಸೆ | ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ಎಂದ ಮುಖ್ಯಮಂತ್ರಿ

ಬೆಂಗಳೂರು : ಮುಲ್ಕಿ ಸಮೀಪ ಕಿನ್ನಿಗೋಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದಾಗ ತಾಯಿಯನ್ನು ಉಳಿಸಲು ಮಗಳು ಆಟೋರಿಕ್ಷಾವನ್ನೇ ಎತ್ತಿದ ವಿಡಿಯೋ ಬಹಳ ವೈರಲ್‌ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಬಂದಿದೆ. ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಸಿದ್ದರಾಮಯ್ಯ ಹೊಗಳಿದ್ದಾರೆ.ತಾಯಿ ಮತ್ತು ಮಗಳು ರಸ್ತೆ ದಾಟುತ್ತಿದ್ದಾಗ ತಾಯಿ ಎದುರಿನಿಂದ ಬರುತ್ತಿದ್ದ ರಿಕ್ಷಾ ಗಮನಿಸದೆ ಮುಂದೆ ಹೋಗಿದ್ದಾರೆ. ಮಗಳು ಕೆಲವು ಹೆಜ್ಜೆ ಹಿಂದೆ ಉಳಿದಿದ್ದಳು. ವೇಗವಾಗಿ ಬಂದ ರಿಕ್ಷಾವೊಂದು ಮಹಿಳೆಗೆ ಡಿಕ್ಕಿಹೊಡೆದು ಪಲ್ಟಿಯಾಗಿದ್ದು, ಮಹಿಳೆ ಅದರಡಿ ಸಿಕ್ಕಿಬಿದ್ದಿದ್ದರು.

ಅಮ್ಮನನ್ನು ಉಳಿಸಲು ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಪ್ರಶಂಸೆ | ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ಎಂದ ಮುಖ್ಯಮಂತ್ರಿ Read More »

ಬೊಮನ್ ಇರಾನಿ ಬದುಕು ಆತ ನಟಿಸಿದ ಸಿನಿಮಾಗಳಿಗಿಂತ ಹೆಚ್ಚು ರೋಚಕ

ನಡುಹರೆಯ ದಾಟಿ ಬಾಲಿವುಡ್‌ ಪ್ರವೇಶಿಸಿದ ಈತ ಈಗ ಬಹುಬೇಡಿಕೆಯ ನಟ ಬೊಮನ್ ಇರಾನಿ ಯಾರಿಗೆ ಗೊತ್ತಿಲ್ಲ ಹೇಳಿ? 3 ಈಡಿಯಟ್ಸ್ ಸಿನೆಮಾದಲ್ಲಿ ಅವರು ಮಾಡಿದ ಎಡಬಿಡಂಗಿ ಪ್ರೊಫೆಸರ್‌ ವೈರಸ್ (ವೀರೂ ಸಹಸ್ರಬುದ್ಧೆ) ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂತಹ ಸವಾಲಿನ ಪಾತ್ರಗಳನ್ನು ಆಪೋಶನ ಮಾಡಿಕೊಂಡ ಹಾಗೆ ಅಭಿನಯಿಸುವ ಈ ಮಹಾನಟನ ಆರಂಭದ ಬದುಕು ಎಷ್ಟೊಂದು ಹೋರಾಟದಿಂದ ಕೂಡಿತ್ತು ಗೊತ್ತಾ? ಓದುತ್ತಾ ಹೋಗಿ… ಮುಂಬಯಿಯ ಒಂದು ಪಾರ್ಸಿ ಕುಟುಂಬದಲ್ಲಿ (1959) ಹುಟ್ಟಿದ್ದ ಇರಾನಿ ಹುಟ್ಟಿನಲ್ಲಿಯೇ ದುರದೃಷ್ಟವನ್ನು ಹೊದ್ದುಕೊಂಡು ಬಂದಿದ್ದರು

ಬೊಮನ್ ಇರಾನಿ ಬದುಕು ಆತ ನಟಿಸಿದ ಸಿನಿಮಾಗಳಿಗಿಂತ ಹೆಚ್ಚು ರೋಚಕ Read More »

ಸವಣೂರಿನಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ 2ನೇ ದಿನ ನಡೆಯಿತು ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ | ಶ್ರೀ ಗಣೇಶ ಧಾರ್ಮಿಕ ಚೌಕಟ್ಟನ್ನು ಮೀರಿ ಬೆಳೆದವ : ಡಾ.ಹಂದಾಡಿ ಮಾಧವ ಭಟ್

ಸವಣೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 42ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಭಾಗವಾಗಿ ಎರಡನೇ ದಿನ ಧಾರ್ಮಿಕ ಉಪನ್ಯಾಸ, ಮನರಂಜನೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಡಾ.ಹಂದಾಡಿ ಮಾಧವ ಭಟ್, ಎಲ್ಲರಿಗೂ ಸಲ್ಲುವವ ಶ್ರೀ ಗಣೇಶ. ಏಕೆಂದರೆ ಆತ ಧಾರ್ಮಿಕ ಚೌಕಟ್ಟನ್ನು ಮೀರಿ ಬೆಳೆದವ. ಆತನು ಆದಿ ಪೂರ್ವದಲ್ಲಿಯೇ ಸ್ವೀಕೃತವಾದವ. ಸಂಘಟನೆಯಲ್ಲಿ ಮುಖ್ಯವಾದುದು ಎಂದರೆ “Religion is what we do in privacy” ಎಂಬ

ಸವಣೂರಿನಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ 2ನೇ ದಿನ ನಡೆಯಿತು ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ | ಶ್ರೀ ಗಣೇಶ ಧಾರ್ಮಿಕ ಚೌಕಟ್ಟನ್ನು ಮೀರಿ ಬೆಳೆದವ : ಡಾ.ಹಂದಾಡಿ ಮಾಧವ ಭಟ್ Read More »

error: Content is protected !!
Scroll to Top