ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡು ಸಂಭ್ರಮಿಸಿದ ಕಾಂಗ್ರೆಸ್‌ : ಮೋದಿ ವಾಗ್ದಾಳಿ

ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿರುವುದಕ್ಕೆ ಮಹಿಳೆಯರ ಕ್ಷಮೆ ಕೇಳಿದ ಪ್ರಧಾನಿ ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಕೇಳಿದ್ದಾರೆ. ಶನಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳ ಸ್ವಾರ್ಥ ರಾಜಕಾರಣದಿಂದ ಸೋಲಾಗಿದೆ. ದೇಶದ ಮಾತೆಯರಿಗೆ ವಿಪಕ್ಷಗಳು ಅಪಮಾನ ಮಾಡಿವೆ. ಮಸೂದೆ ವಿಫಲವಾದ ಬೆನ್ನಲ್ಲೇ ಎಲ್ಲ ವಿಪಕ್ಷ ಸದಸ್ಯರು ಖುಷಿಯಿಂದ ಚಪ್ಪಾಳೆ ತಟ್ಟಿದರು ಎಂದು ಬೇಸರ ವ್ಯಕ್ತಪಡಿಸಿದರು. ಈ ಮಸೂದೆಯನ್ನು ಸೋಲಿಸುವ ಮೂಲಕ […]

ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡು ಸಂಭ್ರಮಿಸಿದ ಕಾಂಗ್ರೆಸ್‌ : ಮೋದಿ ವಾಗ್ದಾಳಿ Read More »

ಬಯಲಾಟ ನೋಡುತ್ತಿದ್ದವರ ಮೇಲೆ ಸಿಮೆಂಟ್ ಬೋರ್ಡ್ ಬಿದ್ದು ಎರಡು ಸಾವು, ನಾಲ್ವರಿಗೆ ಗಾಯ

ರಾಯಚೂರು: ಬಯಲಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಚ ಘಟನೆ ನಡೆದಿದ್ದು, ಇದರಿಂದಾಗಿ ಇನ್ನಿಬ್ಬರು ಕಾಲುಗಳನ್ನೇ ಕಳೆದುಕೊಂಡಿದ್ದಾರೆ. ಬೈಲ್ ಮರ್ಚಡ್ ಗ್ರಾಮದಲ್ಲಿ ಹಳೆಯ ಕಟ್ಟಡ ಒಂದರ ಸಿಮೆಂಟ್ ಬೋರ್ಡ್ ಕುಸಿದು ಈ ದುರಂತ ಸಂಭವಿಸಿದೆ. ಇಬ್ಬರು ಮಕ್ಕಳ ಪ್ರಾಣವೇ ಹೋಗಿದ್ದು, ನಾಲ್ಕು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಯಲಾಟವನ್ನು ಗ್ರಾಮಸ್ಥರು ಗ್ರಾಮದ ಚಾವಡಿ ಕಟ್ಟೆಯ ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಹಳೆಯದಾಗಿದ್ದ ಚಾವಡಿ ಕಟ್ಟಡದ ಮೇಲ್ಬಾಗದಲ್ಲಿದ್ದ ಸಿಮೆಂಟ್‌ನ ನಾಮಫಲಕದ ಬೋರ್ಡ್

ಬಯಲಾಟ ನೋಡುತ್ತಿದ್ದವರ ಮೇಲೆ ಸಿಮೆಂಟ್ ಬೋರ್ಡ್ ಬಿದ್ದು ಎರಡು ಸಾವು, ನಾಲ್ವರಿಗೆ ಗಾಯ Read More »

ಕಾಡುಕೋಣ ದಾಳಿಗೆ ಯುವಕ ಸಾವು

ಕಳಸ: ಕಾಡುಕೋಣ ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಕಳಸದ ‌ಮೈದಾಡಿ ಎಸ್ಟೇಟ್‌ನಲ್ಲಿ ನಡೆದಿದೆ. ಚೇತನ್ (30) ಎಂಬ ಯುವಕನೇ ಮೃತ ದುರ್ದೈವಿ. ದಾಳಿಯಲ್ಲಿ ಕಾಡುಕೋಣದ ಕೊಂಬು ಚೇತನ್ ಅವರ ಎದೆಗೆ ಗಂಭೀರ ಪ್ರಮಾಣದಲ್ಲಿ ತಾಗಿದೆ. ಅವರನ್ನು ಕಳಸದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿದೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಇದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಕಾಡುಕೋಣ ದಾಳಿಗೆ ಯುವಕ ಸಾವು Read More »

ಬೈಕುಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು

ಪುತ್ತೂರು: ಬೈಕುಗಳೆರಡರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಚ ಘಟನೆ ಪಡೀಲ್‌ನ ಯಾಸಿನ್ ಚಿಕನ್ ಸೆಂಟರ್ ಸಮೀಪ ನಡೆದಿದೆ. ಒಂದು ಬೈಕ್ ರಾಂಗ್ ‌ಸೈಡಿನಲ್ಲಿ ಬರುತ್ತಿದ್ದು, ಈ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ನ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸವಾರ ಮೃತಪಟ್ಟಿದ್ದು, ಇನ್ನೊಂದು ಬೈಕ್‌ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ‌ಲಭ್ಯವಾಗಬೇಕಿದೆ.

ಬೈಕುಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು Read More »

ಗಂಡನ ಬ್ಯಾಂಕ್ ಲಾಕರಿನಿಂದ ಚಿನ್ನ ಎಗರಿಸಿದ ಪತ್ನಿ: ದೂರು ದಾಖಲು

ಉಡುಪಿ: ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಪತಿ ತನ್ನ ಪತ್ನಿಯ ವಿರುದ್ಧ ಚಿನ್ನ ಕದ್ದ ಆರೋಪ ಹೊರಿಸಿದ್ದಾರೆ. ಪತ್ನಿ ವನಿತಾ ಅವರು ಮನೆಯ ಕಪಾಟಿನಲ್ಲಿದ್ದ ಬ್ಯಾಂಕ್ ಲಾಕರ್ ‌ಕೀ ಕದ್ದು ಚಿನ್ನ ಎಗರಿಸಿದ್ದಾಗಿ ಪತಿ ಉಚ್ಚಿಲದ ಕಿರಣ್ ಕುಮಾರ್ ಅವರು ಆರೋಪಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲೆಕ್ಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುವ ಕಿರಣ್ ಕುಮಾ‌ರ್ ಅವರು ವನಿತಾ ಎಂಬುವವರೊಂದಿಗೆ 2016 ರಲ್ಲಿ

ಗಂಡನ ಬ್ಯಾಂಕ್ ಲಾಕರಿನಿಂದ ಚಿನ್ನ ಎಗರಿಸಿದ ಪತ್ನಿ: ದೂರು ದಾಖಲು Read More »

ಭದ್ರತಾ ಪಡೆಗಳ ಕಾರ್ಯಾಚರಣೆ: ಮಹಿಳಾ ನಕ್ಸಲ್ ಕಮಾಂಡರ್ ಸೇರಿ ನಾಲ್ವರು ನಕ್ಸಲರ ಹತ್ಯೆ

ನವದೆಹಲಿ: ಜಾರ್ಖಂಡ್‌ನ ಪಿಪರ್ವಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಹಿಳಾ ನಕ್ಸಲ್ ಕಮಾಂಡರ್ ಸೇರಿದಂತೆ ನಾಲ್ಕು ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ತಲೆೆಗ 15 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ ಶಹದಿಯೋ ಮಹ್ತೋ ಮತ್ತು ಮಹಿಳಾ ನಕ್ಸಲ್ ನತಾಶಾ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರದೇಶದಲ್ಲಿ ನಕ್ಸಲರಿರುವ ಬಗ್ಗೆ ಖಚಿತ ಮಾಹಿತಿಯನ್ವಯ ಈ ದಾಳಿ ನಡೆಸಲಾಗಿದೆ. ಕೋಬ್ರಾ ಬೆಟಾಲಿಯನ್‌ನ ಸೈನಿಕರು ಛತ್ರ-ಹಜಾರಿಬಾಗ್ ಗಡಿಯಲ್ಲಿ ಶೋಧ

ಭದ್ರತಾ ಪಡೆಗಳ ಕಾರ್ಯಾಚರಣೆ: ಮಹಿಳಾ ನಕ್ಸಲ್ ಕಮಾಂಡರ್ ಸೇರಿ ನಾಲ್ವರು ನಕ್ಸಲರ ಹತ್ಯೆ Read More »

10 ಸಾವಿರ ರೂ. ಮೇಲ್ಪಟ್ಟ ಯುಪಿಐ ಪಾವತಿಗೆ ಹೊಸ ನಿಯಮ : ಆರ್‌ಬಿಐ ಚಿಂತನೆ

ಡಿಜಿಟಲ್‌ ವಂಚನೆ ತಡೆಯುವ ಸಲುವಾಗಿ ನಿಯಮ ಬದಲಾವಣೆಗೆ ಮುಂದಾದ ಆರ್‌ಬಿಐ ನವದೆಹಲಿ: ಯುಪಿಐ ಮೂಲಕ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ಹಣ ತಕ್ಷಣ ಕಡಿತವಾಗದೆ ಒಂದು ಗಂಟೆ ಬಳಿಕ ಕಡಿತವಾಗುವಂತೆ ಮಾಡಲು ಆರ್‌ಬಿಐ ಮುಂದಾಗಿದೆ. ಡಿಜಿಟಲ್ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ತಕ್ಷಣ ದುಡ್ಡು ಕಡಿತವಾಗುವುದಿಲ್ಲ. ಬದಲಿಗೆ ಆ ಹಣವನ್ನು

10 ಸಾವಿರ ರೂ. ಮೇಲ್ಪಟ್ಟ ಯುಪಿಐ ಪಾವತಿಗೆ ಹೊಸ ನಿಯಮ : ಆರ್‌ಬಿಐ ಚಿಂತನೆ Read More »

ಇನ್ನೆರಡು ದಿನ ಸೂರ್ಯನ ತಾಪ ಹೆಚ್ಚಳ: ಬಿಸಿಲಿಗೆ ಅನಗತ್ಯ ಹೊರ ಹೋಗದಂತೆ ಜನರಿಗೆ ತಜ್ಞರ ಸಲಹೆ

ಬೆಂಗಳೂರು: ಬೇಸಿಗೆಯ ಬಿಸಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ದಿನೇ ದಿನೇ ಸೂರ್ಯನ ತಾಪ ಹೆಚ್ಚಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇನ್ನೂ ಹಲವು ಪ್ರದೇಶಗಳಲ್ಲಿ ತಾಪಮಾನ ಏರಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಬಿಸಿಗಾಳಿ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದ್ದು ಜನರು ಎಚ್ಚರದಿಂದ ಇದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಕರ್ನಾಟಕದ ಕರಾವಳಿ ಭಾಗ ಮತ್ತು ಕಲ್ಯಾಣ ಕರ್ನಾಟಕ ಈಗಾಗಲೇ ಕಾದ ಕಾವಲಿಯಂತಾಗಿವೆ. ಕೆಲವು ಪ್ರದೇಶಗಳಲ್ಲಿ ತಾಪಮಾನ 45% ಗಿಂತ ಅಧಿಕವಾಗುವ‌‌ ಸಾಧ್ಯತೆ ಸಹ ಇದೆ

ಇನ್ನೆರಡು ದಿನ ಸೂರ್ಯನ ತಾಪ ಹೆಚ್ಚಳ: ಬಿಸಿಲಿಗೆ ಅನಗತ್ಯ ಹೊರ ಹೋಗದಂತೆ ಜನರಿಗೆ ತಜ್ಞರ ಸಲಹೆ Read More »

ಮಹಿಳೆಯರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ : ವಿಪಕ್ಷಗಳಿಗೆ ಅಮಿತ್‌ ಶಾ ಎಚ್ಚರಿಕೆ

ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ವಿಪಕ್ಷಗಳಿಗೆ ತರಾಟೆ ನವದೆಹಲಿ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಇದು ವಿರೋಧ ಪಕ್ಷದ ವಿರುದ್ಧ ಬಿಜೆಪಿ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಸೂದೆಯೊಂದಿಗೆ ಮಹಿಳಾ ಸಬಲೀಕರಣವನ್ನು ಬಲವಾಗಿ ಪ್ರತಿಪಾದಿಸಿದ ಗೃಹ ಸಚಿವ ಅಮಿತ್ ಶಾ, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ

ಮಹಿಳೆಯರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ : ವಿಪಕ್ಷಗಳಿಗೆ ಅಮಿತ್‌ ಶಾ ಎಚ್ಚರಿಕೆ Read More »

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ವಿಟ್ಲ : ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ 36 ಸಲ ಬಂಧನ ವಾರಂಟ್‌ ಜಾರಿಯಾಗಿತ್ತು ಎನ್ನಲಾಗಿದೆ. ಏ.16ರಂದು ಅಬ್ಬಾಸ್ ವಿದೇಶದಿಂದ ಹಿಂತಿರುಗುವಾಗ ಇಮಿಗ್ರೇಶನ್ ವಿಭಾಗದ ಸಹಕಾರದಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಮೋಹನ ಮತ್ತು ವೆಂಕಪ್ಪ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

error: Content is protected !!
Scroll to Top