ರಿವಾಲ್ವರ್ ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು | ವ್ಯಕ್ತಿಯೋರ್ವರಿಗೆ ಗಾಯ
ಮಂಗಳೂರು : ವಾಮಂಜೂರಿನಲ್ಲಿ ವ್ಯಕ್ತಿಯೋರ್ವರಿಗೆ ಆಕಸ್ಮಿಕ ಗುಂಡು ತಗುಲಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಸಫ್ಘಾನ್ ಎಂಬುವರು ಗುಂಡು ತಗುಲಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಸಫ್ಘಾನ್ ಎಂಬವರು ವಾಮಂಜೂರಿನ ಅಂಗಡಿಯೊಂದಕ್ಕೆ ಬಂದ ವೇಳೆ ಗ್ರಾಹಕರೊಬ್ಬರು ಇಟ್ಟಿದ್ದ ರಿವಾಲ್ವರ ನ್ನು ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಈ ಪರಿಣಾಮ ಸಫ್ಘಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಇದನ್ನು ಆಕಸ್ಮಿಕ ಘಟನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ರಿವಾಲ್ವರ್ ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು | ವ್ಯಕ್ತಿಯೋರ್ವರಿಗೆ ಗಾಯ Read More »