ನಾರಾಯಣ ಗುರುಗಳ ಅನುಯಾಯಿಗಳಿಗೆ ಅವಮಾನ: ಅಮಳ ರಾಮಚಂದ್ರ

ಪುತ್ತೂರು: ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ನಾರಾಯಣ ಗುರುಗಳ ಕುರಿತು ವಿಚಾರವನ್ನು ಕಿತ್ತು ಹಾಕಿರುವುದು ದ.ಕ. ಜಿಲ್ಲೆಯ ನಾರಾಯಣ ಗುರುಗಳ ಅನುಯಾಯಿಗಳಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಆರೋಪಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ರಚಿಸಿ, ಸಮಿತಿಗೆ ತೃತೀಯ ದರ್ಜೆ ಲೇಖಕ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವರ ವಿಚಾರಗಳನ್ನೇ ಸಮರ್ಥನೆ ಮಾಡಿ ನಾರಾಯಣ ಗುರುಗಳಿಗೆ ಅವಮಾನ ಮಾಡಿರುವುದು ಇಡೀ ಸಮಾಜಕ್ಕೆ ಮಾಡಿದ ಅವಮಾನ. ಸಂವಿಧಾನದ ಮೂಲ ತಿರುಳನ್ನು ತಿರುಚುವ ಮೂಲಕ […]

ನಾರಾಯಣ ಗುರುಗಳ ಅನುಯಾಯಿಗಳಿಗೆ ಅವಮಾನ: ಅಮಳ ರಾಮಚಂದ್ರ Read More »

ಅಡುಗೆ ಅನಿಲ ಬೆಲೆ 50 ರೂ. ಏರಿಕೆ | ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಳ

ಹೊಸದಿಲ್ಲಿ : ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ 350 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಜನರಿಗೆ ಶಾಕ್‌ ನೀಡಿವೆ. ಅದರಲ್ಲೂ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ವಿಪಕ್ಷಗಳ ಪಾಲಿಗೆ ಸರಕಾರವನ್ನು ಟೀಕಿಸಲು ಅತ್ಯುತ್ತಮ ಅಸ್ತ್ರ ಸಿಕ್ಕಿದಂತಾಗಿದೆ. ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬರಲಿದೆ. ಹಲವು ತಿಂಗಳುಗಳ ಕಾಲ ಗೃಹಬಳಕೆಯ ಸಿಲಿಂಡರ್‌ ದರ ಪರಿಷ್ಕರಣೆಯಾಗಿರಲಿಲ್ಲ. ಆದರೆ

ಅಡುಗೆ ಅನಿಲ ಬೆಲೆ 50 ರೂ. ಏರಿಕೆ | ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಳ Read More »

ಸರಕಾರಿ ನೌಕರರ ಮುಷ್ಕರ ವಾಪಾಸ್: ತಕ್ಷಣ ಕಚೇರಿಗೆ ಹಾಜರಾಗಲೂ ಸರ್ಕಾರಿ ನೌಕರರಿಗೆ ಸೂಚನೆ

ಬೆಂಗಳೂರು: ಸರ್ಕಾರಿ ನೌಕರರಿಗೆ ಶೇ. 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ ಮಾಡಿದ ಹಿನ್ನೆಲೆಯಲ್ಲಿ ತಕ್ಷಣವೇ ಎಲ್ಲಾ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸೂಚಿಸಿದ್ದಾರೆ. ನೌಕರರ ಸಂಘದ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶೇ. 17ರಷ್ಟು ವೇತನ ಹೆಚ್ಚಳ ಮಾಡಲು ಸೂಚಿಸಿದ್ದಾರೆ. ಈ ಬಗ್ಗೆ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರ ಕೈಬಿಡಲು ನಿರ್ಧಾರ ಮಾಡಿದೆ ಎಂದು

ಸರಕಾರಿ ನೌಕರರ ಮುಷ್ಕರ ವಾಪಾಸ್: ತಕ್ಷಣ ಕಚೇರಿಗೆ ಹಾಜರಾಗಲೂ ಸರ್ಕಾರಿ ನೌಕರರಿಗೆ ಸೂಚನೆ Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರಿಂದ ಮುಷ್ಕರ | ಪುತ್ತೂರಿನಲ್ಲೂ ಎಲ್ಲಾ ಸರಕಾರಿ ನೌಕರರಿಂದ ಬೆಂಬಲ

ಪುತ್ತೂರು : ರಾಜ್ಯ ಸರಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನೌಕರರು ಹಮ್ಮಿಕೊಂಡ ಪ್ರತಿಭಟನೆಗೆ ಪುತ್ತೂರಿನಲ್ಲೂ ಸಂಪೂರ್ಣ ಬೆಂಬಲ ಸಿಕ್ಕಿದೆ. ಬುಧವಾರ ಬೆಳಗ್ಗೆಯಿಂದಲೇ ಎಲ್ಲಾ ಸರಕಾರಿ ಇಲಾಖೆಯ  ಎ ಯಿಂದ ಡಿ ದರ್ಜೆ ತನಕ್ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮೌನ ಮುಷ್ಕರದಲ್ಲಿ ತೊಡಗಿಕೊಂಡರು. ಪ್ರತೀ ಸರಕಾರಿ ಇಲಾಖೆಯಲ್ಲಿ ಕೇವಲ ಹೊರಗುತ್ತಿಗೆ ನೌಕರರನ್ನು ಬಿಟ್ಟರೆ ಖಾಯಂ ನೌಕರರು ಕಾಣ ಸಿಗಲಿಲ್ಲ. ಎಲ್ಲರೂ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಮುಷ್ಕರದ ಪರಿಣಾಮ ಸಾರ್ವಜನಿಕರು ಸರಕಾರಿ ಕಚೇರಿ ಎದುರು ಕಾಯುತ್ತಿರುವ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರಿಂದ ಮುಷ್ಕರ | ಪುತ್ತೂರಿನಲ್ಲೂ ಎಲ್ಲಾ ಸರಕಾರಿ ನೌಕರರಿಂದ ಬೆಂಬಲ Read More »

ಇಂದಿನಿಂದ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ : ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಚಾಲನೆ

ಬೆಂಗಳೂರು : ಇಂದಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಿಂದ ಆರಂಭವಾಗುವ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಮಾ.1ರಂದು ಬೆಳಗ್ಗೆ 11ಕ್ಕೆ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಸೋಲಿಗ

ಇಂದಿನಿಂದ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ : ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಚಾಲನೆ Read More »

ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ!

ಬೆಂಗಳೂರು : ಈ ಸಲದ ವಿಧಾನಸಭೆ ಚುನಾವಣೆ ಹಲವು ಹಿರಿಯ ನಾಯಕರ ಪಾಲಿಗೆ ಕೊನೇ ಚುನಾವಣೆ ಆಗಲಿದೆ. ಯಡಿಯೂರಪ್ಪ ಈಗಾಗಲೇ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಸಿದ್ದರಾಮಯ್ಯ ಕೂಡ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಈ ಸಲ ಸ್ಪರ್ಧಿಸುತ್ತಿದ್ದೇನೆ. ಇನ್ನು ಚುನಾವಣೆ ಕಣಕ್ಕಿಳಿಯುವುದಿಲ್ಲ ಎನ್ನುತ್ತಿದ್ದಾರೆ. ಇದರ ಬೆನ್ನಿಗೆ ಇದೀಗ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರೂ ಇದೇ ನನ್ನ ಕೊನೇ ಚುನಾವಣೆ ಎಂಭ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ.“ನಾನು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಏಕೆಂದರೆ

ಕುಮಾರಸ್ವಾಮಿ ಪಾಲಿಗಿದು ಕೊನೆಯ ಚುನಾವಣೆ! Read More »

ಮಾ.7-8 : ಮಠಂತಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಪುತ್ತೂರು : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಜಾತ್ರಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವ ಮಾ.7 ಹಾಗೂ 8 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ುತ್ಸವದ ಅಂಗವಾಗಿ ಮಾ.7 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಕಲಶಾಭಿಷೇಕ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಲಲಿತಾ ಸಹಸ್ರನಾಮ ಪಾರಾಯಣ, ಸಂಜೆ ದೈವಗಳಿಗೆ ತಂಬಿಲ, ಭಜನೆ, ರಂಗಪೂಜೆ, ಉತ್ಸವ ಬಲಿ,

ಮಾ.7-8 : ಮಠಂತಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ Read More »

ಸಾವರ್ಕರ್, ಆಝಾದ್ ಯುವಪೀಳಿಗೆಗೆ ಮಾದರಿ :  ಆದರ್ಶ ಗೋಖಲೆ | ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ದೇಶಭಕ್ತರ ಪುಣ್ಯಸ್ಮರಣೆ

ಪುತ್ತೂರು : ಬಾಲ್ಯದಲ್ಲಿರುವಾಗಲೇ ವೀರ ಸಾವರ್ಕರ್ ದೇಶದ ಪರ ಹೋರಾಡಿದ ನಾಯಕ. ಅವರು ಝಾನ್ಸಿ ರಾಣಿಯ ಸಾಹಸದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಜನರಲ್ಲಿ ದೇಶಪ್ರೇಮ, ದೇಶ ಭಕ್ತಿ ಬಿತ್ತಿದವರು.  ಮಹಾರಾಷ್ಟ್ರದಲ್ಲಿ ಪತಿತ ಪಾವನ ಎಂಬ ಮಂದಿರವನ್ನು ಸ್ಥಾಪಿಸಿ ದೇಶದಲ್ಲಿ ಎಲ್ಲರೂ ಒಂದೇ ಎಂಬ ಘೋಷಣೆಯನ್ನು ಸಾರಿದ ದೇಶದ ಹೆಮ್ಮೆಯ ಪುತ್ರ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು. ಅವರು ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವೀರ ಸಾವರ್ಕರ್ ಹಾಗೂ ಚಂದ್ರಶೇಖರ್

ಸಾವರ್ಕರ್, ಆಝಾದ್ ಯುವಪೀಳಿಗೆಗೆ ಮಾದರಿ :  ಆದರ್ಶ ಗೋಖಲೆ | ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ದೇಶಭಕ್ತರ ಪುಣ್ಯಸ್ಮರಣೆ Read More »

ನಾಳೆ (ಮಾ.2) : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ

ಪುತ್ತೂರು : ಬಲ್ನಾಡು ಗ್ರಾಮದ ಉಜಿರೆಪಾದೆ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಶ್ರೀ ದೈವಗಳ ಪ್ರತಿಷ್ಠಾ ವರ್ಧಂತಿ ಉತ್ಸವ ಮಾ.2 ಗುರುವಾರ ನಡೆಯಲಿದೆ. ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆಯಲಿದ್ದು, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ಶ್ರೀ ದೈವಗಳ ಭಂಡಾರ ತೆಗೆದು ದೈವಸ್ಥಾನಕ್ಕೆ ತೆರಳಿ ರಾತ್ರಿ ತಂಬಿಲಾದಿಗಳು ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮಾಧವ ಗೌಡ ಕಾಂತಿಲ ತಿಳಿಸಿದ್ದಾರೆ.

ನಾಳೆ (ಮಾ.2) : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ Read More »

The Secret Sauce: Ideal Roulette Strategy To Be Able To Wi

The Secret Sauce: Ideal Roulette Strategy To Be Able To Win How To Earn At Roulette 10 Top Tips In Order To Beat The Casino Content Super Slots – Ideal Roulette Site Regarding American Roulette #1: Look For The Best Rules And Bets How We Picked The Best British Roulette Casinos Online? Non-progressive Roulette Strategy

The Secret Sauce: Ideal Roulette Strategy To Be Able To Wi Read More »

error: Content is protected !!
Scroll to Top