ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ನಿಧನ

ಉಡುಪಿ: ಕಾಂತಾರ ‌ಚಿತ್ರದಲ್ಲಿ ನಟಿಸಿದ್ದ ಹಿರಿಯ ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಹೆಬ್ರಿ ತಾಲೂಕಿನ ಪೆರ್ಡೂರಿನವರಾದ ಪ್ರಭಾಕರ್ ಅವರು ಬ್ಯಾಂಕ್ ಆಫ್ ಬರೋಡಾ‌ದಲ್ಲಿ ‌ಕಾರ್ಯ ನಿರ್ವಹಿಸಿ ನಿವೃತ್ತರಾದವರು. ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ನಾಟಕಗಳಲ್ಲಿಯೂ ಅಭಿನಯಿಸಿದವರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ನಿಧನ Read More »

ಬಿಜೆಪಿ ಮಾತು ಕೇಳುವವರೇ ಚುನಾವಣಾ ಆಯೋಗದಲ್ಲಿರುವುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾರತೀಯ ಜನತಾ ಪಕ್ಷದ ಮಾತನ್ನು ಕೇಳುವವರೇ ಚುನಾವಣಾ ಆಯೋಗದಲ್ಲಿದ್ದಾರೆ. ಚು. ಆಯೋಗ ಬಿಜೆಪಿಯ ಬ್ರಾಂಚ್ ಆಫೀಸ್ ಎಂದು ಸಿಎಂ ‌ಸಿದ್ದರಾಮಯ್ಯ ಆರೋಪಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ದೇಶದಲ್ಲಿ ಹೋರಾಟ ಮಾಡುತ್ತಿರುವವರು ರಾಹುಲ್ ಗಾಂಧಿ ಒಬ್ಬರೇ. ಬಿಜೆಪಿ ಅಧಿಕಾರಕ್ಕಾಗಿ ಆಸೆ ಪಡುವ ಪಕ್ಷ. ಅದು ತನಿಖಾ ಸಂಸ್ಥೆಗಳನ್ನು, ಹಿಂದುಳಿದವರನ್ನು ಬೆದರಿಸಿ ಅಧಿಕಾರ ಪಡೆಯುತ್ತದೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಉಳಿಯಬೇಕಾದರೆ ಬಿಜೆಪಿ ಅಧಿಕಾರದಲ್ಲಿ ಇರಬಾರದು. ಸಂವಿಧಾನ ರಕ್ಷಣೆ ಮಾಡಿದರೆ ನಮ್ಮನ್ನು

ಬಿಜೆಪಿ ಮಾತು ಕೇಳುವವರೇ ಚುನಾವಣಾ ಆಯೋಗದಲ್ಲಿರುವುದು: ಸಿಎಂ ಸಿದ್ದರಾಮಯ್ಯ Read More »

ಆ.10 : ಮಂಡ್ಯದಲ್ಲಿ ಕೆ.ಆರ್ದ.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ

ಪುತ್ತೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 6ನೇ ಸಂಸ್ಥಾಪನಾ ದಿನ ಮತ್ತು ಮಹಾ ಅಧಿವೇಶನ ಆ.10ರಂದು ಮಂಡ್ಯದ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 300 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೆಆರ್‌ಎಸ್ ಪಾರ್ಟಿಯ ದ.ಕ.ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಹೇಳಿದ್ದಾರೆ. ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019ರ ಆ.10ರಂದು ಬೆಂಗಳೂರಿನಲ್ಲಿ ಪಕ್ಷವು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮತ್ತು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಅವರಿಂದ ಉದ್ಘಾಟನೆಗೊಂಡು ಕಳೆದ ಆರು ವರ್ಷಗಳಿಂದ

ಆ.10 : ಮಂಡ್ಯದಲ್ಲಿ ಕೆ.ಆರ್ದ.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ Read More »

ಆ.10 : ಚೆನ್ನಾವರದಲ್ಲಿ 4ನೇ ವರ್ಷದ ಆಟಿದ ಕೂಟ ಕೆಸರ್‌ಡ್ ಒಂಜಿ ದಿನ |ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು

ಸವಣೂರು : ಅಭ್ಯುದಯ ಯುವಕ ಮಂಡಲ (ರಿ.) ಚೆನ್ನಾವರ ಪಾಲ್ತಾಡಿ ಇದರ ವತಿಯಿಂದ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದಲ್ಲಿ 4ನೇ ವರ್ಷದ ಆಟಿದ ಕೂಟ-ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಆ.10ರಂದು ಚೆನ್ನಾವರ ಗುತ್ತಿನ ಗದ್ದೆಯಲ್ಲಿ ನಡೆಯಲಿದೆ. ಚೆನ್ನಾವರ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಚೆನ್ನಾವರಗುತ್ತು ಕಾರ್ಯಕ್ರಮ ಉದ್ಘಾಟಿಸುವರು. ಕ್ರೀಡಾಂಗಣ ಉದ್ಘಾಟನೆಯನ್ನು ಅಬುದಾಭಿ ಇಂಡಿಯನ್ ಸ್ಕೂಲ್, ಅಬುದಾಭಿಯ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಎನ್.ಸುವರ್ಣ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್

ಆ.10 : ಚೆನ್ನಾವರದಲ್ಲಿ 4ನೇ ವರ್ಷದ ಆಟಿದ ಕೂಟ ಕೆಸರ್‌ಡ್ ಒಂಜಿ ದಿನ |ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು Read More »

ಧರ್ಮಸ್ಥಳ ಕೇಸ್: SIT ಗೆ ವಿಶೇಷ ಅಧಿಕಾರ ನೀಡಿದ ರಾಜ್ಯ ಸರ್ಕಾರ

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ಗೆ ರಾಜ್ಯ ಸರ್ಕಾರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಗಳನ್ನು ನೀಡಿದೆ. FIR ದಾಖಲಿಸುವುದು, ವಶಕ್ಕೆ ಪಡೆಯುವುದು, ಬಂಧನ, ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ, ಚಾರ್ಜ್‌ಶೀಟ್ ‌ಸಲ್ಲಿಕೆ ಸೇರಿದಂತೆ ಎಲ್ಲಾ ರೀತಿಯ ಸಂಪೂರ್ಣ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ನೀಡಲಾಗಿದ್ದು, SIT ಕಚೇರಿಯನ್ನು ಪೊಲೀಸ್ ಠಾಣೆ ಎಂದು ಗುರುತಿಸಲಾಗಿದೆ. ಈ ತಂಡದಲ್ಲಿರುವ ಎಸ್‌ಐ ಅಥವಾ ಅದಕ್ಕಿಂತ ಮೇಲ್ದರ್ಜೆಯ ಅಧಿಕಾರಿಯನ್ನು ಠಾಣಾಧಿಕಾರಿ

ಧರ್ಮಸ್ಥಳ ಕೇಸ್: SIT ಗೆ ವಿಶೇಷ ಅಧಿಕಾರ ನೀಡಿದ ರಾಜ್ಯ ಸರ್ಕಾರ Read More »

ಕಲ್ಲಾರೆ ಮಠದಲ್ಲಿ 51ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಾಗೂ ವಿಶ್ವಹಿಂದೂ ಪರಿಷದ್ ಮಾತೃ ಮಂಡಳಿ ಜಂಟಿ ಆಶ್ರಯದಲ್ಲಿ 51ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮೀ ಮಠದ ಸಭಾಭವನದಲ್ಲಿ ಜರಗಿತು. ಪೂಜೆಯ ಅಂಗವಾಗಿ ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.30 ಕ್ಕೆ ಕಲಶ ಪ್ರತಿಷ್ಠೆ ನಡೆದು ಭಕ್ತಾದಿಗಳಿಂದ ಸಂಕಲ್ಪ ನಡೆಯಿತು. 11 ಕ್ಕೆ ಲಲಿತ ಸಹಸ್ರನಾಮ ನಡೆದ ಬಳಿಕ ಬೊಳುವಾರು ತಿರುಪತಿ

ಕಲ್ಲಾರೆ ಮಠದಲ್ಲಿ 51ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟಕ್ಕೆ ಚಾಲನೆ

ಪುತ್ತೂರು: ಸಮಾಜಮುಖಿ ಚಿಂತನೆಯೊಂದಿಗೆ ಸ್ಪಂದನೆ ನೀಡುವ ಮುಳಿಯ ಸಂಸ್ಥೆಯು ಗ್ರಾಹಕರ ನಂಬಿಕೆ, ವಿಶ್ವಾಸದ ನೆಲೆ ಎಂದು ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು. ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಭರಣ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಮುಳಿಯ ಸಂಸ್ಥೆ ಇನ್ನಿತರ ಕ್ಷೇತ್ರಗಳಲ್ಲಿಯು ತನ್ನಭಾಪು ತೋರಿಸಿದೆ. ಧಾರ್ಮಿಕ, ರಿಯಲ್ ಎಸ್ಟೇಟ್ ಹೀಗೆ ತನ್ನ ಇರುವಿಕೆಯ ಕ್ಷೇತ್ರಗಳಲ್ಲಿ ಜನರ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟಕ್ಕೆ ಚಾಲನೆ Read More »

ಕೊಯಿಲ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಕೂಡಲೇ ಪೂರ್ಣಗೊಳಿಸುವಂತೆ ಮತ್ತು ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಮನವಿ

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರಿಂದ ಮನವಿ ಸಲ್ಲಿಕೆ ಕಡಬ: ತಾಲೂಕು ವ್ಯಾಪ್ತಿಯ ಕೊಯಿಲ, ರಾಮಕುಂಜ, ಆಲಂತಾಯ, ಹಳೆನೇರಂಕಿ, ಗೋಳಿತೊಟ್ಟು ಮತ್ತು ಪುತ್ತೂರು ತಾಲೂಕಿನ ಬಜತ್ತೂರು ಹಿರೇಬಂಡಾಡಿ ಗ್ರಾಮಗಳಿಗೆ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ಇದ್ದ ಕಾರಣ ಕೊಯ್ಲದಲ್ಲಿ ಹೊಸದಾಗಿ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದ್ದು, ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು

ಕೊಯಿಲ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಕೂಡಲೇ ಪೂರ್ಣಗೊಳಿಸುವಂತೆ ಮತ್ತು ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಮನವಿ Read More »

ಮತಗಳ್ಳತನ ಆರೋಪಿಸಿ ಚು. ಆಯೋಗವನ್ನು ತರಾಟೆಗೆ ತೆಗೆದುಕೊಂಡ ರಾಗಾ

ಬೆಂಗಳೂರು: ಬಿಜೆಪಿ ಜೊತೆ ಸೇರಿ ಚುನಾವಣಾ ಆಯೋಗ ಮತದಾರರಿಗೆ ವಂಚಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದ ಮೇಲೆ ದಾಳಿ ಮಾಡುವ ಮುನ್ನ ಎರಡು ಬಾರಿ ಆಲೋಚಿಸಿ ಎಂದು ಚು. ಆಯೋಗಕ್ಕೆ ಎಚ್ಚರಿಸಿದ್ದಾರೆ. ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಮತ ಕಳ್ಳತನದ ಬಗ್ಗೆ ಮಾತನಾಡಿದ ಅವರು, ಸಂವಿಧಾದ ಮೇಲೆ ದಾಳಿ

ಮತಗಳ್ಳತನ ಆರೋಪಿಸಿ ಚು. ಆಯೋಗವನ್ನು ತರಾಟೆಗೆ ತೆಗೆದುಕೊಂಡ ರಾಗಾ Read More »

ಧರ್ಮಸ್ಥಳ ಪ್ರಕರಣ: ಹೊಸ ಸ್ಥಳದಲ್ಲಿ ದೂರುದಾರನ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ SIT

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ಇಂದು ಅನಾಮಿಕ ದೂರುದಾರ ‌ತಿಳಿಸಿದ ಹೊಸ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಧರ್ಮಸ್ಥಳದ ಬೊಳಿಯಾರ್‌ ಗೋಂಕ್ರತಾರ್ ಬಳಿ ಇಂದು ಶೋಧ ಕಾರ್ಯ ನಡೆದಿದೆ. ಮುಸುಕುಧಾರಿ ದೂರುದಾರನ ಜೊತೆಗೆ ಅಧಿಕಾರಿಗಳು ಇಂದು ಶೋಧ ಕಾರ್ಯ ನಡೆಸಿರುವುದಾಗಿದೆ. ಈ ವರೆಗೆ ದೂರುದಾರ ಗುರುತಿಸಿದ್ದ ಪಾಯಿಂಟ್‌ಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸದ್ಯ ಹೊಸ ಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಶವದ ಅವಶೇಷ ಸಿಗುವುದೋ ಎಂದು ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ದೂರುದಾರ

ಧರ್ಮಸ್ಥಳ ಪ್ರಕರಣ: ಹೊಸ ಸ್ಥಳದಲ್ಲಿ ದೂರುದಾರನ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ SIT Read More »

error: Content is protected !!
Scroll to Top