ಟಿ20 ವಿಶ್ವಕಪ್‌ : ಸಂಭ್ರಮಕ್ಕಿಂತ ಕಳವಳ ಹುಟ್ಟಿಸಿದ ನಾಲ್ಕನೇ ಗೆಲುವು

ದುರ್ಬಲ ನೆದರ್ಲ್ಯಾಂಡ್ಸ್ ವಿರುದ್ಧ ಬರೀ 17 ರನ್‌ಗಳಿಂದ ಗೆದ್ದ ಟೀಂ ಇಂಡಿಯಾ ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್​ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೀ 17 ರನ್​ಗಳಿಂದ ಗೆದ್ದಿರುವುದು ಕ್ರಿಕೆಟ್‌ ಪ್ರೇಮಿಗಳಲ್ಲಿ ಆತಂಕವುಂಟು ಮಾಡಿದೆ. ನೆದರ್ಲ್ಯಾಂಡ್ಸ್‌ನಂಥ ದುರ್ಬಲ ತಂಡದ ಎದುರು ಚಾಂಪಿಯನ್‌ ತಂಡವೊಂದು ಆಡುವ ಆಟ ಇದಾಗಿರಲಿಲ್ಲ. ಭಾರತ ಸತತ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಅಜೇಯ ಓಟವನ್ನೇನೋ ಮುಂದವರೆಸಿದೆ. ಇನ್ನಿರುವುದು ಸೂಪರ್‌ 8ರ ಘಟ್ಟದ […]

ಟಿ20 ವಿಶ್ವಕಪ್‌ : ಸಂಭ್ರಮಕ್ಕಿಂತ ಕಳವಳ ಹುಟ್ಟಿಸಿದ ನಾಲ್ಕನೇ ಗೆಲುವು Read More »

ವಿಧಾನಸೌಧದಲ್ಲಿ ಮಾದ್ಯಮಗಳ ನಿರ್ಬಂಧ: ಬಿ.ವೈ. ವಿಜಯೇಂದ್ರ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಕಿಡಿ ಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಇದೊಂದು ಅಯೋಗ್ಯ ಸರ್ಕಾರ ಎಂದು ಹೇಳಿದ್ದಾರೆ. ವಿಧಾನ ಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿದ ಅವರು ಇದೊಂದು ನಾಲಾಯಕ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನದ್ದು ಪ್ರಜಾಪ್ರಭುತ್ವವನ್ನು ಅಣಕಿಸುವ ನಡೆ ಎಂದು ಟೀಕಿಸಿರುವ ಅವರು, ಮಾಧ್ಯಮ ನಿರ್ಬಂಧ ಒಂದು ಪ್ರಜಾಪ್ರಭುತ್ವದ ವಿರೋಧಿ ನಡೆ. ಅಧಿವೇಶನದಲ್ಲಿ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೆ ತಂದ ಕಾಂಗ್ರೆಸ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕ್ ಪರ

ವಿಧಾನಸೌಧದಲ್ಲಿ ಮಾದ್ಯಮಗಳ ನಿರ್ಬಂಧ: ಬಿ.ವೈ. ವಿಜಯೇಂದ್ರ ಆಕ್ರೋಶ Read More »

ಅಡಿಕೆ ಕಳ್ಳತನ: ಓರ್ವ ಆರೋಪಿಗೆ ನ್ಯಾಯಾಂಗ ಬಂಧನ, ಮತ್ತೊಬ್ಬನಿಗೆ ನಿರೀಕ್ಷಣಾ ಜಾಮೀನು

ಕಡಬ: ತಮ್ಮ ತೋಟದಿಂದ ಅಡಿಕೆ ಕಳ್ಳತನ ಮಾಡಿರುವುದಾಗಿ ‌ಅಲಂಕಾರಿನ ಸತೀಶ್ ಎಂಬವರು ಜ. 25ರಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪ್ರಕರಣದ ಆರೋಪಿಗಳಲ್ಲಿ ಓರ್ವನಿಗೆ ನ್ಯಾಯಾಂಗ ಬಂಧನ ಮತ್ತು ಇನ್ನೊಬ್ಬನಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ. ಸತೀಶ್ ಅವರ ತೋಟದಿಂದ ಅಡಿಕೆ ಕಳವು ಮಾಡಿ ಆರೋಪಿಗಳಾದ ಕಾಯಿಕಾಣ ಗ್ರಾಮದ ಜಯಂತ್ ಎಂ. ಮತ್ತು ಕಾಣಿಯೂರು ಗ್ರಾಮದ ಲಿಂಗಪ್ಪ ಎಂಬವರು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಪೈಕಿ ಜಯಂತ್‌ಗೆ ನ್ಯಾಯಾಂಗ

ಅಡಿಕೆ ಕಳ್ಳತನ: ಓರ್ವ ಆರೋಪಿಗೆ ನ್ಯಾಯಾಂಗ ಬಂಧನ, ಮತ್ತೊಬ್ಬನಿಗೆ ನಿರೀಕ್ಷಣಾ ಜಾಮೀನು Read More »

ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು

ಬೆಂಗಳೂರು: ತನ್ನ ಜನ್ಮದಿನದಂದೇ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರು ಉತ್ತರದ ಐವರಕಂಡಪುರದಲ್ಲಿ ನಡೆದಿದೆ. ಪವನ್ (24) ಎಂಬಾತನೇ ಮೃತ ದುರ್ದೈವಿ. ಗೆಳೆಯರ ಜೊತೆಗೆ ಬರ್ತ್‌ಡೇ ಮಾಡಿ ಪವನ್ ಮನೆಗೆ ತೆರಳುತ್ತಿದ್ದು ಈ ವೇಳೆ ಆತನ ಬೈಕ್‌ಗೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ‌ವಾಹನ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ‌ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಾ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು Read More »

ಸಿಗರೇಟ್ ಸೇವನೆ, ಅಸಭ್ಯ ವರ್ತನೆ: ಆರೋಪಿ ಮೊಸಾದ್ ಪೊಲೀಸ್ ಬಲೆಗೆ

ಪುತ್ತೂರು: ಸಾರ್ವಜನಿಕವಾಗಿ ಸಿಗರೇಟ್ ಸೇದುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಜತ್ತೂರು ಗ್ರಾಮದ ಕಾಂಚನ ಮುಕ್ವೆ ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಟ್ಲ ಪಡ್ನೂರಿನ ಮೊಹಮ್ಮದ್ ಮೊಸಾದ್ ಎಸ್ ಎಂದು ಗುರುತಿಸಲಾಗಿದ್ದು, ಆತ ಡ್ರಗ್ಸ್ ಸೇವನೆ ಮಾಡಿರುವ ಸಂಗತಿ ಸಹ ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಗಿದೆ. ಸಾರ್ವಜನಿಕರಿಂದ ಬಂದ ಮಾಹಿತಿಯನ್ವಯ ರೌಂಡ್ಸ್ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಸಿಗರೇಟ್ ಸೇವನೆ, ಅಸಭ್ಯ ವರ್ತನೆ: ಆರೋಪಿ ಮೊಸಾದ್ ಪೊಲೀಸ್ ಬಲೆಗೆ Read More »

ನಂದಿನಿ ಉತ್ಪನ್ನಗಳು ಸುರಕ್ಷಿತವಾಗಿವೆ: KMF ಸ್ಪಷ್ಟನೆ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಅವುಗಳು ಸುರಕ್ಷಿತವಲ್ಲ ಎನ್ನುವ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಸಂಸ್ಥೆಯು ತಮ್ಮ ಉತ್ಪನ್ನಗಳು ಸುರಕ್ಷಿತವಾಗಿವೆ ಎನ್ನುವುದಾಗಿ ಮಾಹಿತಿ ನೀಡಿದೆ. ಹಾಗೆಯೇ ಸುಳ್ಳು ಆರೋಪಗಳನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ಕರ್ನಾಟಕ ಹಾಲು ಒಕ್ಕೂಟ ನೀಡಿದೆ. ನಂದಿನಿ ಉತ್ಪನ್ನಗಳ ವಿಚಾರದಲ್ಲಿ ಸಂಸ್ಥೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಎಲ್ಲಾ ಸೂಚನೆಗಳನ್ನು, ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದೆ. ನಂದಿನಿ ಹಾಲು

ನಂದಿನಿ ಉತ್ಪನ್ನಗಳು ಸುರಕ್ಷಿತವಾಗಿವೆ: KMF ಸ್ಪಷ್ಟನೆ Read More »

ಕಾನೂನುಬಾಹಿರ ಮಟ್ಕಾ ಆಟ ಆಡಿಸುತ್ತಿದ್ದ ಆರೋಪಿಯ ಬಂಧನ

ವಿಟ್ಲ: ಕಾನೂನುಬಾಹಿರವಾಗಿ ನಗರದ ಬೇಕರಿಯೊಂದರಲ್ಲಿ ಅದೃಷ್ಟದ ಮಟ್ಕಾ ಆಡಿಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕೇಪು‌ವಿನ ಅಡ್ಯನಡ್ಕ ಎಂಬಲ್ಲಿರುವ ವಿನಾಯಕ ಬೇಕರಿಯಲ್ಲಿ ಮಟ್ಕಾ ಆಟ ನಡೆಯುತ್ತಿರುವ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿರುವುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬೇಕರಿಯ ಮಾಲೀಕ, ಕುದ್ದುಪದವು ನಿವಾಸಿ ರವೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಮೊಬೈಲ್ ಫೋನ್, ನಗದು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾನೂನುಬಾಹಿರ ಮಟ್ಕಾ ಆಟ ಆಡಿಸುತ್ತಿದ್ದ ಆರೋಪಿಯ ಬಂಧನ Read More »

ಕೆಲಸ ಮಾಡುತ್ತಿದ್ದ ಮನೆಯಿಂದ 200 ಗ್ರಾಂ ಚಿನ್ನ ಕದ್ದು ಸೈಟ್ ಖರೀದಿಸಿದ ಕಳ್ಳಿ

ಬೆಂಗಳೂರು: ಕೆಲಸಕ್ಕಿದ್ದ ಮನೆಯಿಂದ 200 ಗ್ರಾಂ ಚಿನ್ನಾಭರಣ ಎಗರಿಸಿ, ಅದರಿಂದ ಸಿಕ್ಕ ಹಣವನ್ನು ಬಳಸಿ ತಮಿಳುನಾಡಿನಲ್ಲಿ ಜಮೀನು ಖರೀದಿಸಿದ್ದ ಕತರ್ನಾಕ್ ಕಳ್ಳಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೀಪ ಎಂದು ಗುರುತಿಸಲಾಗಿದೆ. ಈಕೆ ತಮಿಳುನಾಡಿನವಳಾಗಿದ್ದು, ಕೋಣನಕುಂಟೆಯ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಳು. ಕಳ್ಳಿ ‌ಚಿನ್ನಾಭರಣಗಳನ್ನು ಒಂದೇ ಬಾರಿಗೆ ಕಳ್ಳತನ ಮಾಡುತ್ತಿರಲಿಲ್ಲ. ಬದಲಾಗಿ ಒಂದೊಂದಾಗಿಯೇ ಕದ್ದು ಅದರಿಂದ ಸೈಟ್ ಖರೀದಿಸಿದ್ದಳು. ಆಕೆಯ ಕೃತ್ಯದ ಬಗ್ಗೆ ಸಂದೇಹಗೊಂಡ ‌ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು

ಕೆಲಸ ಮಾಡುತ್ತಿದ್ದ ಮನೆಯಿಂದ 200 ಗ್ರಾಂ ಚಿನ್ನ ಕದ್ದು ಸೈಟ್ ಖರೀದಿಸಿದ ಕಳ್ಳಿ Read More »

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಗುರುವಾರ ಸಂಜೆ ತನಕ ಸರ್ಕಾರಕ್ಕೆ ಡೆಡ್‌ಲೈನ್‌

ಬೃಹತ್‌ ಮುಷ್ಕರಕ್ಕೆ ಸಜ್ಜಾಗುತ್ತಿರುವ ಕೆಎಸ್‌ಆರ್‌ಟಿಸಿ ನೌಕರರು; ಸಂಚಾರ ವ್ಯತ್ಯಯ ಸಾಧ್ಯತೆ ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬೃಹತ್‌ ಮುಷ್ಕರಕ್ಕೆ ಮುಂದಾಗಿದ್ದು, ಗುರುವಾರ ಸಂಜೆ ಬಳಿಕ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಸಾರಿಗೆ ನೌಕರರು ನಾಳೆ ‘ಬೆಂಗಳೂರು ಚಲೋ’ ಕೈಗೊಂಡು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ನಿಗಮದ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಸಂಜೆ 4 ಗಂಟೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದೆ. ಬೇಡಿಕೆ

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಗುರುವಾರ ಸಂಜೆ ತನಕ ಸರ್ಕಾರಕ್ಕೆ ಡೆಡ್‌ಲೈನ್‌ Read More »

ಕಾಂಗ್ರೆಸ್‌ ಭವನಗಳಿಗೆ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು : ಬಿಜೆಪಿ ಆರೋಪ

ಸಂಪುಟ ಸಭೆಯಲ್ಲೇ ಜಮೀನು ಲೂಟಿಯ ನೀಲಿನಕ್ಷೆ ತಯಾರಿ ಎಂದು ಟೀಕೆ ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್‌ ಪಕ್ಷದ ಕಚೇರಿಗಳನ್ನು ಸ್ಥಾಪಿಸಲು 31 ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಮಾತನಾಡಿರುವ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ಪಡೆದುಕೊಂಡ ಜಾಗಗಳನ್ನು ಸಂಬಂಧಿಸಿದ ಇಲಾಖೆಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಕಾಂಗ್ರೆಸ್ ಭವನಕ್ಕೆ ಹೇಗೆ ಲಭ್ಯ? ಇದು ಜನಕಲ್ಯಾಣ ಸರ್ಕಾರವೋ

ಕಾಂಗ್ರೆಸ್‌ ಭವನಗಳಿಗೆ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು : ಬಿಜೆಪಿ ಆರೋಪ Read More »

error: Content is protected !!
Scroll to Top