ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ಗೇರುಕಟ್ಟೆ: ಕೀರ್ತಿಶೇಷ ಆರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಹಯೋಗದಿಂದಎಂ. ವಿ. ಪ್ರತಿಷ್ಠಾನ ಗೇರುಕಟ್ಟೆ ಆಯೋಜಿಸಿದ ಭಾರವಿ ಬೇಸಿಗೆ ಶಿಬಿರದ ಸಮಾರೋಪವು ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಜರಗಿತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುಮಾರು 37 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಎ. 30 ರಂದು ನಿವೃತ್ತರಾದ ಗುಣರತ್ನ ಆಚಾರ್ಯ ಕಾವೂರು ಇವರನ್ನು ಗೌರವಿಸಲಾಯಿತು. ಮುಖ್ಯಅತಿಥಿ ಯೋಗಪಟು ಸತೀಶ್ ಭಂಡಾರಿ ಶಿಬಿರದಲ್ಲಿ ನಡೆಸಲಾದ ವಿವಿಧ ಚಟುವಟಿಕೆ ವಿಭಿನ್ನವಾಗಿದ್ದು ಉಪಯುಕ್ತವಾಗಿದೆ […]

ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ Read More »

ಅಕ್ರಮವಾಗಿ 4 ಜಾನುವಾರುಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಹಿರಿಯಡ್ಕ: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ‌ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಪಕ್ಕಾಲು ಹೆಬ್ಬಾರು ಸೇತುವೆ ಬಳಿಯಲ್ಲಿ ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುರ್ಕಾಲುವಿನ ‌ಸುಹಾಸ್(21) ಮತ್ತು ಕಾಪು ಭರತ್ ನಗರದ ಲವ ಶೆಟ್ಟಿ(64) ಎಂದು ಗುರುತಿಸಲಾಗಿದೆ. ಆರೋಪಿಗಳು ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಪೆರ್ಡೂರು ಕಡೆಯಿಂದ ಹಿರಿಯಡ್ಕದತ್ತ ನಾಲ್ಕು ದನಗಳನ್ನು ಪಾಪಿಗಳು ಬೊಲೆರೋ ಗೂಡ್ಸ್ ‌ಟೆಂಪೋದಲ್ಲಿ ಸಾಗಾಟ ಮಾಡುತ್ತಿದ್ದರು. ಈ ವಾಹನ ಪಕ್ಕಾಲು ‌ಹೆಬ್ಬಾರು ಸೇತುವೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಆರೋಪಿಗಳಿಬ್ಬರನ್ನು

ಅಕ್ರಮವಾಗಿ 4 ಜಾನುವಾರುಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ Read More »

ರಾಜೀನಾಮೆ ಕೊಡಲಾರೆ, ವಜಾ ಮಾಡಿ : ಮಮತಾ ಬ್ಯಾನರ್ಜಿ ಸವಾಲು

ಸೋತು ಸುಣ್ಣವಾಗಿದ್ದರೂ ಅಧಿಕಾರ ಬಿಡಲೊಪ್ಪದ ದೀದಿ ಕೋಲ್ಕತ್ತ: ಪಶ್ಚಿಮ ಬಂಗಾಳದ ಪರಾಜಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಪಕ್ಷ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ಅಧಿಕಾರ ಬಿಟ್ಟುಕೊಡಲಾರೆ ಎಂದು ಪಟ್ಟುಹಿಡಿದು ಕುಳಿತಿದ್ದಾರೆ. ಅವರ ಪಕ್ಷಕ್ಕಿರುವ ಐದು ವರ್ಷದ ಜನಾದೇಶವೂ ಇಂದಿಗೆ ಮುಕ್ತಾಯವಾಗುತ್ತದೆ. ಆದರೂ ಬಂಗಾಳದ ದೀದಿ ರಾಜೀನಾಮೆ ಕೊಡಲಾರೆ ಎನ್ನುತ್ತಿದ್ದಾರೆ. ತನ್ನ ಪಕ್ಷದ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯನ್ನುದ್ದೇಶಿಸಿ ನಿನ್ನೆ ಮಾತನಾಡಿದ ಅವರು ಮತ್ತೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ವಿಧಾನಸಭೆ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ

ರಾಜೀನಾಮೆ ಕೊಡಲಾರೆ, ವಜಾ ಮಾಡಿ : ಮಮತಾ ಬ್ಯಾನರ್ಜಿ ಸವಾಲು Read More »

ದೇಶದ ಅತಿ ಹಿರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ

ಪಿಣರಾಯಿ ವಿಜಯನ್‌ ನಿರ್ಗಮನದಿಂದ ಸಿದ್ದರಾಮಯ್ಯನವರಿಗೊಲಿದ ವಿಶೇಷ ದಾಖಲೆ ಬೆಂಗಳೂರು : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಪರಾಜಯಗೊಂಡು 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಒಂದು ದಾಖಲೆ ಆಯಾಚಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ವರ್ಗಾವಣೆಯಾಗಿದೆ. ಪಿಣರಾಯಿ ವಿಜಯನ್ ನಿರ್ಗಮನದೊಂದಿಗೆ 78 ವರ್ಷ ವಯಸ್ಸಿನ ಸಿದ್ದರಾಮಯ್ಯ ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಜೀವನದ ಮತ್ತೊಂದು ಮೈಲಿಗಲ್ಲು. ಪ್ರಸ್ತುತ ದೇಶದ

ದೇಶದ ಅತಿ ಹಿರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ Read More »

ಆಪರೇಷನ್‌ ಸಿಂದೂರಕ್ಕೆ ವರ್ಷ ಪೂರ್ಣ: ವಿಡಿಯೋ ಮೂಲಕ ಕಠಿಣ ಸಂದೇಶ ನೀಡಿದ ಸೇನೆ

ಭಾರತ ಯಾರನ್ನೂ ಕ್ಷಮಿಸುವುದಿಲ್ಲ, ಯಾವುದನ್ನೂ ಮರೆಯುವುದಿಲ್ಲ ಎಂಬ ಕಠಿಣ ಸಂದೇಶ ನವದೆಹಲಿ: ಪಾಕಿಸ್ತಾನ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆ ಆಪರೇಷನ್ ಸಿಂದೂರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶತ್ರು ರಾಷ್ಟ್ರಕ್ಕೆ ಭಾರತೀಯ ಸೇನೆ ಕಠಿಣ ಸಂದೇಶವನ್ನು ರವಾನಿಸಿದೆ. ಕಠಿಣ ಸಂದೇಶವಿರುವ ವಿಶೇಷ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. “India Forgives Nothing” ಎಂಬ ಸಾಲುಗಳೊಂದಿಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೇಶದ ಭದ್ರತೆ ಮತ್ತು ಉಗ್ರವಾದದ ವಿರುದ್ಧ ಭಾರತದ ನಿಲುವನ್ನು

ಆಪರೇಷನ್‌ ಸಿಂದೂರಕ್ಕೆ ವರ್ಷ ಪೂರ್ಣ: ವಿಡಿಯೋ ಮೂಲಕ ಕಠಿಣ ಸಂದೇಶ ನೀಡಿದ ಸೇನೆ Read More »

ಕಡಬ: ಪೆಟ್ರೋಲು ಸುರಿದು ಹತ್ಯೆಗೆ ಯತ್ನ

ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತಿಗೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಐತ್ತೂರು ನಿವಾಸಿ ಬೇಬಿ ಕೆ.ಎಸ್. ಎಂಬವರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು, ತನ್ನ ಮನೆಯ ಸಮೀಪ ಬೋರ್‌ವೆಲ್‌ನಲ್ಲಿ ನೀರು ಸಿಕ್ಕಿದ್ದರಿಂದ ಅಸೂಯೆಗೊಂಡ ಗಂಡನ ಸಹೋದರ ಕುಸುಮಾಧರ(37) ಎಂಬಾತ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ್ದು, ಈ ವೇಳೆ ತಾನು ಬೊಬ್ಬೆ ಹಾಕಿದಾಗ ಪೆಟ್ರೋಲ್ ಕ್ಯಾನ್ ಮತ್ತು

ಕಡಬ: ಪೆಟ್ರೋಲು ಸುರಿದು ಹತ್ಯೆಗೆ ಯತ್ನ Read More »

ರೈಲಿನಲ್ಲಿ ಸೀಟು ಜಗಳ : ರೈಲ್ವೆ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತದಿಂದ ಗಂಭೀರ ಗಾಯ

ಸೀಟಿಗಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪ್ರಯಾಣಿಕನಿಗೆ ಇರಿದ ದುಷ್ಕರ್ಮಿಗಳು ಬೆಂಗಳೂರು : ರೈಲಿನಲ್ಲಿ ಸೀಟಿನ ವಿಚಾರದಲ್ಲಿ ಜಗಳವಾಗಿ ಚಾಕುವಿನಿಂದ ಇರಿದಿದ್ದು, ಓರ್ವ ಪ್ರಯಾಣಿಕ ಹಾಗೂ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ರೈಲ್ವೆ ನಿಲ್ದಾಣದ ಸ್ವಲ್ಪ ದೂರದಲ್ಲಿ ಬುಧವಾರ ನಡೆದಿದೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಮೂವರು ಪ್ರಯಾಣಿಕರನ್ನು ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿರುವ ತುಮಕೂರು ಮೂಲದ ಶಿವಕುಮಾ‌ರ್ ಹಾಗೂ ರೈಲ್ವೆ ಸಿಬ್ಬಂದಿ ಕುಮಾರ್

ರೈಲಿನಲ್ಲಿ ಸೀಟು ಜಗಳ : ರೈಲ್ವೆ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತದಿಂದ ಗಂಭೀರ ಗಾಯ Read More »

ತಮಿಳುನಾಡಲ್ಲಿ ಡಿಎಂಕೆ-ಎಐಡಿಎಂಕೆ ಮೈತ್ರಿ?

ಬದ್ಧವೈರಿಗಳೇ ಸೇರಿಕೊಂಡು ಸರ್ಕಾರ ರಚಿಸುವ ಕುರಿತು ಮಾತುಕತೆ ಚೆನ್ನೈ: ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಸಿಗದಿರುವ ಕಾರಣ ತಮಿಳುನಾಡಿನ ರಾಜಕಾರಣ ಅತಂತ್ರ ಸ್ಥಿತಿಯಲ್ಲಿದೆ. 108 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್‌ ನೇತೃತ್ವ ಟಿವಿಕೆ ಸರ್ಕಾರ ರಚಿಸುವ ಇರಾದೆಯಲ್ಲಿದ್ದರೂ ಸರಳ ಬಹುಮತಕ್ಕೆ ಅಗತ್ಯವಿರುವ 10 ಸ್ಥಾನಗಳನ್ನು ಎಲ್ಲಿಂದ ಭರ್ತಿ ಮಾಡಿಕೊಳ್ಳುವುದು ಎಂದು ತಿಳಿಯದೆ ಗೊಂದಲದಲ್ಲಿದೆ. ಕಾಂಗ್ರೆಸ್‌ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದರೂ ಕಾಂಗ್ರೆಸ್‌ ಬಳಿ ಇರುವುದು ಐದು ಸ್ಥಾನಗಳು ಮಾತ್ರ. ಹೀಗಾಗಿ ತಮಿಳುನಾಡಿನ ರಾಜಕೀಯದಲ್ಲಿ ಕ್ಷಣಕ್ಕೊಂದು ಅಚ್ಚರಿಯ

ತಮಿಳುನಾಡಲ್ಲಿ ಡಿಎಂಕೆ-ಎಐಡಿಎಂಕೆ ಮೈತ್ರಿ? Read More »

ಪಶ್ಚಿಮ ಬಂಗಾಳ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ

ರಾತ್ರಿ ಕಾರು ತಡೆದು ಗುಂಡಿಕ್ಕಿ ಸಾಯಿಸಿದ ದುಷ್ಕರ್ಮಿಗಳು ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮ ಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಎನ್ನಲಾದ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಶ್ಚಿಮ ಬಂಗಾಳ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ Read More »

ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್‌ ಅಮಾನತು ರದ್ದು

ಕಚೇರಿಯಲ್ಲಿ ರಾಸಲೀಲೆಯಾಡಿದ ವಿಡಿಯೋ ವೈರಲ್‌ ಆದ ಬಳಿಕ ಅಮಾನತುಗೊಂಡಿದ್ದ ಉನ್ನತ ಅಧಿಕಾರಿ ಬೆಂಗಳೂರು: ಮಹಿಳೆಯರೊಂದಿಗೆ ಕಚೇರಿಯಲ್ಲೇ ರಾಸಲೀಲೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತಿನಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮರು ನೇಮಕ ಮಾಡಲಾಗಿದೆ. ಅವರಿಗಾಗಿಯೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿದೆ. ಆಲ್ ಇಂಡಿಯಾ ಸರ್ವಿಸ್ ನಿಯಮಗಳ ಅಡಿ ಈಗ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್‌ ಅಮಾನತು ರದ್ದು Read More »

error: Content is protected !!
Scroll to Top