ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣ: ರೂವಾರಿ ನಿದಾಖಾನ್ ಕೊನೆಗೂ ಅರೆಸ್ಟ್

25 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಕೊಂಡಿದ್ದ ಚಾಲಾಕಿ ಮುಂಬೈ: ನಾಸಿಕದಲ್ಲಿರುವ TCS ಕಚೇರಿಯಲ್ಲಿ ನಡೆದ ಲೈಂಗಿಕ ಕಿರುಕುಳ, ಮತಾಂತರ ಕೃತ್ಯದ ಕಿಂಗ್ ಪಿನ್ ನಿದಾ ‌ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಿದಾ ಖಾನ್ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿತ್ತು‌. ಆಕೆಯ ವಿರುದ್ಧ ಎಫ್‌ಐ‌ಆರ್ ದಾಖಲಾಗುತ್ತಿದ್ದ ಹಾಗೆಯೇ ನಾಪತ್ತೆಯಾಗಿದ್ದಳು. ಆಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಹಾ ಕೋರ್ಟ್ ವಜಾ ಮಾಡಿತ್ತು. ಆಕೆ ಕಳೆದ ನಾಲ್ಕು ದಿನಗಳಿಂದ ನರೇಂಗಾವ್‌ನ ಕೈಸರ್ ‌ಕಾಲನಿಯ ಫ್ಲ್ಯಾಟ್‌ನಲ್ಲಿ […]

ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣ: ರೂವಾರಿ ನಿದಾಖಾನ್ ಕೊನೆಗೂ ಅರೆಸ್ಟ್ Read More »

ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ‌ ನಡೆಸಿದ ಕಾರು ಚಾಲಕ

ಮಂಗಳೂರು: ಸರ್ಕಾರಿ ಬಸ್ ಚಾಲಕರೊಬ್ಬರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಬಸ್ಸು ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿತ್ತು. ಈ ವೇಳೆ ಸೈಡ್ ನೀಡುವ ವಿಚಾರಕ್ಕೆ ಸಂಬಂಧಿಸಿದ ಹಾಗೆ ವಳಚ್ಚಿಲ್ ಜಂಕ್ಷನ್‌ನಲ್ಲಿ ಕಾರು ಚಾಲಕ, ಬಸ್ ಚಾಲಕ ಪಿ. ಜಯರಾಮ್ ಅವರಿಗೆ ನಿಂದಿಸಿ, ಹಲ್ಲೆ ಮಾಡಿರುವುದಾಗಿದೆ.

ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ‌ ನಡೆಸಿದ ಕಾರು ಚಾಲಕ Read More »

ಅಕ್ರಮ ಮರಳು ದಾಸ್ತಾನು ಪತ್ತೆ: ಪ್ರಕರಣ ದಾಖಲು

ಉಪ್ಪಿನಂಗಡಿ: ಬೆಳ್ತಂಗಡಿಯ ‌ಕರಾಯ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಉಪ್ಪಿನಂಗಡಿ ‌ಪೊಲೀಸರು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಸೇನ್ ಎಂಬವರಿಗೆ ‌ಸೇರಿದ ಜಾಗದಲ್ಲಿ ಮರಳು ಅಕ್ರಮ ದಾಸ್ತಾನು ಇರಿಸಲಾಗಿತ್ತು. ಉಪ್ಪಿನಂಗಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕುಪ್ಪೆಟ್ಟಿ ಹೊಳೆಯಿಂದ ಅಕ್ರಮವಾಗಿ ಸುಮಾರು ಎರಡು ಟನ್‌ಗಳಷ್ಟು ಮರಳು ಸಂಗ್ರಹಿಸಿ ಇಡಲಾಗಿತ್ತು. ಮರಳನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಕ್ರಮ ಮರಳು ದಾಸ್ತಾನು ಪತ್ತೆ: ಪ್ರಕರಣ ದಾಖಲು Read More »

ಮನೆಯೊಂದರಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ: ದೂರು ದಾಖಲು

ಕಡಬ: ಹಿಂದೂ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಮತಾಂತರದ ‌ಪ್ರಯತ್ನ ನಡೆಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ನೀಡಿದ ಮಾಹಿತಿಯ ಅನ್ವಯ ಐತ್ತೂರಿನ ಮನೆಯೊಂದರ ಮೇಲೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಐತ್ತೂರಿನ ಜೋಸೆಫ್ ಎಂಬಾತನ ಮನೆಯಲ್ಲಿ ಬೆಂಗಳೂರು ಮೂಲದ ಸುಮಾರು 15 ಕ್ಕೂ ಅಧಿಕ ಜನ‌ ಮಹಿಳೆಯರು, ಪುರುಷರು ಮತ್ತು ಮಕ್ಕಳು ತಂದಿರುವ ಸಂಗತಿ ಪೊಲೀಸ್ ದಾಳಿಯ ವೇಳೆ ಬಯಲಾಗಿದೆ. ಜೋಸೆಫ್ ಮನೆಯಲ್ಲಿ ಮತಾಂತರ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿಂದೂ

ಮನೆಯೊಂದರಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ: ದೂರು ದಾಖಲು Read More »

ಮಾನಸಿಕ ಸಮಸ್ಯೆ: ಆತ್ಮಹತ್ಯೆಗೆ ಶರಣಾದ ಮಹಿಳೆ

ವಿಟ್ಲ: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕುಳ ಗ್ರಾಮದ ಕಂಪ ಶ್ರೀಧರ ಗೌಡ ಎಂಬವರ ಪತ್ನಿ ರಾಧಾ ಅಲಿಯಾಸ್ ಲತಾ (40) ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತರ ಸಹೋದರ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಲತಾ ಮತ್ತು ಶ್ರೀಧರ ಗೌಡ ಅವರಿಗೆ 13 ವರ್ಷಗಳ ಹಿಂದೆ ವಿವಾಹವಾಗಿ,‌ ಇಬ್ಬರು ಮಕ್ಕಳಿದ್ದಾರೆ. ಕಳೆದ ಸುಮಾರು 10 ವರ್ಷಗಳಿಂದ ಲತಾ‌ಗೆ ಮಾನಸಿಕ ಸಮಸ್ಯೆ ಇದ್ದು ಸೂಕ್ತ ಚಿಕಿತ್ಸೆ

ಮಾನಸಿಕ ಸಮಸ್ಯೆ: ಆತ್ಮಹತ್ಯೆಗೆ ಶರಣಾದ ಮಹಿಳೆ Read More »

ಐಪಿಎಲ್‌ ಸ್ಟಾರ್‌ ಆಟಗಾರರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಕೆಡವಲು ಸಂಚು

ಅಲರ್ಟ್‌ ಆದ ಬಿಸಿಸಿಐನಿಂದ ಆಟಗಾರರಿಗೆ ಗಂಭೀರ ಎಚ್ಚರಿಕೆ ಮುಂಬೈ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 19ನೇ ಆವೃತ್ತಿಯಲ್ಲಿ ಆಡುತ್ತಿರುವ ಕೆಲವು ಸ್ಟಾರ್‌ ಆಟಗಾರರನ್ನು ಹನಿಟ್ರ್ಯಾಪ್‌ಗೆ ಕೆಡವಲು ಸಂಚು ನಡೆದಿದೆ ಎನ್ನುವ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಬಿಸಿಸಿಐ ಅಲರ್ಟ್‌ ಅಗಿದೆ. ಟಿ20 ಲೀಗ್‌ನಲ್ಲಿ ಪಾಲ್ಗೊಂಡಿರುವ ಆಟಗಾರರು ಮತ್ತು ಅಧಿಕಾರಿಗಳ ವಿರುದ್ಧ ಲೈಂಗಿಕ ದುರ್ನಡತೆ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸುವ ಯತ್ನ ನಡೆಯುತ್ತಿದೆ. ಈ ಪ್ರಯತ್ನವನ್ನು ತಡೆಯುವುದಕ್ಕಾಗಿ ಬಿಸಿಸಿಐ ಕಠಿಣ ನಿಲುವು ಕೈಗೊಂಡಿದೆ. ಎಲ್ಲ ಆಟಗಾರರ ಮೇಲೆ ಎಚ್ಚರಿಕೆ

ಐಪಿಎಲ್‌ ಸ್ಟಾರ್‌ ಆಟಗಾರರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಕೆಡವಲು ಸಂಚು Read More »

ದಿ ಬೆಂಗಾಲ್ ಫೈಲ್ಸ್ ಕೊನೆಗೂ ಪಶ್ಚಿಮ ಬಂಗಾಲದಲ್ಲಿ ಬಿಡುಗಡೆ

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕರಾಳ ಸತ್ಯವನ್ನು ಬಹಿರಂಗಗೊಳಿಸಿದ ಚಿತ್ರ ತೆರೆಗೆ ಕೋಲ್ಕತ್ತ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ’ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆಯಾಗುತ್ತಿದೆ. 2025ರಲ್ಲಿ ಭಾರತದಲ್ಲಿ ರಿಲೀಸ್ ಆದ ಈ ಸಿನಿಮಾಕ್ಕೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ತೆರೆಗೆ ತರಲು ಸಾಧ್ಯ ಆಗಿರಲಿಲ್ಲ. ಕೊನೆಗೂ ಪಶ್ಚಿಮ ಬಂಗಾಳದ ಚಿತ್ರಮಂದಿರಗಳಲ್ಲಿ ಮೇ 15ರಂದು ತೆರೆಕಾಣಲಿದೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅಧಿಕೃತವಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ

ದಿ ಬೆಂಗಾಲ್ ಫೈಲ್ಸ್ ಕೊನೆಗೂ ಪಶ್ಚಿಮ ಬಂಗಾಲದಲ್ಲಿ ಬಿಡುಗಡೆ Read More »

ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಯಕ್ಷಗಾನ ಕಲಾವಿದರನ್ನು ಅವಮಾನಿಸಿ ಬೆದರಿಕೆಯೊಡ್ಡಿದ ಪ್ರಕರಣ​ಮಂಗಳೂರು : ಯಕ್ಷಗಾನ ಕಲಾವಿದರ ವಿರುದ್ಧ ಅವಹೇಳನಕಾರಿ ಮಾತು ಹಾಗೂ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.​ಯಕ್ಷಗಾನ ರಂಗದ ಪ್ರಮುಖ ಕಲಾವಿದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಮತ್ತು ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದ ಮೇಲೆ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಪಾರಾಗಲು ಅವರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Read More »

ಅನ್ನಭಾಗ್ಯ ಅಕ್ಕಿಯೊಂದಿಗೆ ಸಿಗಲಿದೆ ರಾಗಿ, ಜೋಳ

ಈ ತಿಂಗಳಿಂದ 2 ಕೆಜಿ ರಾಗಿ ಅಥವಾ ಜೋಳ ವಿತರಣೆ ಬೆಂಗಳೂರು: ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಅಕ್ಕಿ ಜತೆಗೆ ರಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ ಪ್ರತಿ ವ್ಯಕ್ತಿಗೆ ರಾಜ್ಯ ಹಾಗೂ ಕೇಂದ್ರದ್ದು ಸೇರಿ ಒಟ್ಟು 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಈ ತಿಂಗಳಿಂದ 2 ಕೆ.ಜಿ. ರಾಗಿ ನೀಡಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಈಗ 1.14 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿದ್ದು,

ಅನ್ನಭಾಗ್ಯ ಅಕ್ಕಿಯೊಂದಿಗೆ ಸಿಗಲಿದೆ ರಾಗಿ, ಜೋಳ Read More »

ಪಶ್ಚಿಮ ಬಂಗಾಳದಲ್ಲಿ ದೀದಿ ಆಡಳಿತ ಅಧಿಕೃತವಾಗಿ ಅಂತ್ಯ

ಅಧಿಕಾರ ಬಿಡಲು ನಿರಾಕರಿಸಿದ್ದ ಸರ್ಕಾರವನ್ನು ವಜಾಗೊಳಿಸಿದ ರಾಜ್ಯಪಾಲರು ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯನ್ನು ರಾಜ್ಯಪಾಲ ಆರ್.ಎನ್. ರವಿ ಗುರುವಾರ ವಿಸರ್ಜಿಸಿದ್ದು, ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಮಮತ ಬ್ಯಾಜರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಆಡಳಿತ ಅಧಿಕೃತವಾಗಿ ಅಂತ್ಯಗೊಂಡಿದೆ. ಚುನಾವಣೆಯಲ್ಲಿ ಸೋತ ಬಳಿಕ ರಾಜೀನಾಮೆ ನೀಡದೆ ಭಾರಿ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್‌.ಎನ್‌ ರವಿ ವಜಾಗೊಳಿಸಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲನ್ನನುಭವಿಸಿದರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ

ಪಶ್ಚಿಮ ಬಂಗಾಳದಲ್ಲಿ ದೀದಿ ಆಡಳಿತ ಅಧಿಕೃತವಾಗಿ ಅಂತ್ಯ Read More »

error: Content is protected !!
Scroll to Top