ಗಾಂಜಾ ಸೇವಿಸಿ ತೂರಾಡುತ್ತಿದ್ದ ಹನೀಫ್ ಪೊಲೀಸರ ವಶಕ್ಕೆ

ಮಂಗಳೂರು: ಗಾಂಜಾ ಸೇವಿಸಿ ಕುದ್ರೋಳಿಯ ಗ್ರೀನ್ ಪಾರ್ಕ್ ಸಮೀಪ ತೂರಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂದರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಎಂಬಾತನೇ ಬಂಧಿತ ಆರೋಪಿ. ಗಾಂಜಾ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದ ಅವನನ್ನು ಗಸ್ತು ಪೊಲೀಸರು ಗಮನಿಸಿ, ವಶಕ್ಕೆ ಪಡೆದಿರುವುದಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ‌ದೃಢಪಟ್ಟಿದೆ. ಆರೋಪಿಯ ವಿರುದ್ಧ NDPS ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವಿಸಿ ತೂರಾಡುತ್ತಿದ್ದ ಹನೀಫ್ ಪೊಲೀಸರ ವಶಕ್ಕೆ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಪುತ್ತೂರೊಡೆಯನಿಗೆ ಕಾಣಿಕೆ ಸಮರ್ಪಣೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ಬೆಲ್ಲ, ಅಕ್ಕಿ, ಕಡ್ಲೆ ಬೇಳೆ, ತೊಗರಿ ಬೇಳೆ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ ಅವರು ಮಾತನಾಡಿ, ಕೆಲವು ಲೋಪ ದೋಷಗಳು ಕಂಡು ಬಂದಾಗ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಾ ಬಂದೆವು. ಅವೆಲ್ಲವೂ ದೇವರ ಕೃಪೆಯಿಂದ ಸರಿಯಾಗುತ್ತಾ ಬಂತು. ಹಾಗೆಯೇ ಸಮಿತಿಯ ವತಿಯಿಂದ ದೇವರಿಗೆ ಕಾಣಿಕೆ ಸಲ್ಲಿಸುವ ಸಂಕಲ್ಪ ಮಾಡಿದೆವು. ಅದರಂತೆ ಈಗ ಮೂರನೇ ಬಾರಿಗೆ ಕಾಣಿಕೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಪುತ್ತೂರೊಡೆಯನಿಗೆ ಕಾಣಿಕೆ ಸಮರ್ಪಣೆ Read More »

ದೈವಕ್ಕೆ ಅಪಚಾರ : ಕ್ಷಮೆ ಯಾಚಿಸಿದ ನಟ ರಣವೀರ್‌ ಸಿಂಗ್‌

ಕಾಂತಾರ ಹೊಗಳುವ ಭರದಲ್ಲಿ ದೈವವನ್ನು ಅಣಕಿಸಿದ್ದ ಬಾಲಿವುಡ್‌ ನಟ ಮುಂಬೈ : ಕಾಂತಾರ ಚಿತ್ರವನ್ನು ಹೊಗಳುವ ಭರದಲ್ಲಿ ದೈವಕ್ಕೆ ಅಪಚಾರ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನ್ನ ತಪ್ಪಿಗೆ ಬೇಷರತ್‌ ಕ್ಷಮೆ ಯಾಚಿಸಿ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ತಾನು ನಟಿಸಿದ ‘ಧುರಂಧರ್’ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಈ ಅನಪೇಕ್ಷಿತ ವಿವಾದ ಭುಗಿಲೆದದ್ದು ಅವರಿಗೆ ಹಿನ್ನಡೆಯಾಗಿತ್ತು. ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಕಾಂತಾರ’ ಚಿತ್ರ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಅವರು ದೈವವನ್ನು

ದೈವಕ್ಕೆ ಅಪಚಾರ : ಕ್ಷಮೆ ಯಾಚಿಸಿದ ನಟ ರಣವೀರ್‌ ಸಿಂಗ್‌ Read More »

ದಂಪತಿ ಜಗಳ: ಗಂಡ ಆತ್ಮಹತ್ಯೆ

ಕಾರ್ಕಳ: ದಂಪತಿ ಮಧ್ಯೆ ನಡೆದ ಜಗಳ ಪತಿಯ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ನಿಟ್ಟೆಯಲ್ಲಿ ನಡೆದಿದೆ. ಪೋಸ್ಟ್‌ಮ್ಯಾನ್ ಒಬ್ಬರು ದಂಪತಿ ಮನೆಗೆ ಪತ್ರ ನೀಡಲು ಬಂದಿದ್ದಾಗ ಪತ್ನಿ ಶಕುಂತಲಾ ಅವರು ಗಾಯಗೊಂಡು ಕಂಡುಬಂದಿದೆ. ತಕ್ಷಣವೇ ಪೋಸ್ಟ್‌ಮ್ಯಾನ್ ಅವರು ಶಕುಂತಲಾ ಅವರ ಪುತ್ರ ಸಾಯಿಕಿರಣ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪುತ್ರ ಮನೆಗೆ ಬಂದು ತಾಯಿಯನ್ನು ವಿಚಾರಿಸಿದಾಗ ತಂದೆ ಕೋಲಿನಿಂದ ಹಲ್ಲೆ ಮಾಡಿರುವುದು ತಿಳಿದು ಬಂದಿದೆ. ತಂದೆ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಬಾಗಿಲು ಬಡಿದರೂ ತೆರೆದಿಲ್ಲ. ಈ ವೇಳೆ

ದಂಪತಿ ಜಗಳ: ಗಂಡ ಆತ್ಮಹತ್ಯೆ Read More »

ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯಗೆ ನಾಟಿಕೋಳಿ ಸಾರು, ಬಿಸಿಬಿಸಿ ಇಡ್ಲಿ ಬ್ರೇಕ್‌ಫಾಸ್ಟ್‌

ಸಿಎಂಗೆ ನಾನ್‌ವೆಜ್‌ ತಿನ್ನಿಸಿ ತಾನು ವೆಜ್‌ ಮಾತ್ರ ತಿಂದ ಡಿಕೆಶಿ ಬೆಂಗಳೂರು: ಕರ್ನಾಟಕ ಕಾಂಗ್ರೆಸ್​ನಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಚರ್ಚೆಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವಣ ‘ಬ್ರೇಕ್​ಫಾಸ್ಟ್ ಮೀಟಿಂಗ್’ ಮುಂದುವರಿದಿದೆ. ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿದರು. ಜತೆಗೆ ಮಾತುಕತೆಯೂ ನಡೆಯಿತು. ಆದರೆ ಡಿ.ಕೆ ಶಿವಕುಮಾರ್ ಮಾತ್ರ ಉಪಾಹಾರ ಕೂಟದಲ್ಲಿ ನಾನ್‌ವೆಜ್ ಸೇವಿಸಲಿಲ್ಲ. ಕಾವೇರಿ ನಿವಾಸದಿಂದ

ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯಗೆ ನಾಟಿಕೋಳಿ ಸಾರು, ಬಿಸಿಬಿಸಿ ಇಡ್ಲಿ ಬ್ರೇಕ್‌ಫಾಸ್ಟ್‌ Read More »

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬ: ಶೀಘ್ರ ಪರಿಹಾರಕ್ಕೆ ಕ್ಯಾ. ಚೌಟ ಸೂಚನೆ

ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬವಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಶೀಘ್ರ ವಿಮಾ ಮೊತ್ತ ಪಾವತಿಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಕಳೆದ ವಾರ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ವಿಳಂಬಕ್ಕೆ ‌ಕಾರಣ ಏನು ಎಂಬುದರ ಬಗ್ಗೆ ಪರಾಮರ್ಶಿಸಿದ್ದರು. ಹಾಗೆಯೇ ತುರ್ತಾಗಿ ವಿಮಾ

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬ: ಶೀಘ್ರ ಪರಿಹಾರಕ್ಕೆ ಕ್ಯಾ. ಚೌಟ ಸೂಚನೆ Read More »

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ‌ಸಿದ್ದರಾಮಯ್ಯ ಗರಂ: ಯಾಕೆ ಗೊತ್ತಾ?

ಬೆಂಗಳೂರು: ಮಹಿಳೆಯರು ಮತ್ತು ಬಡವರ ಪರ ಕಾಳಜಿ ವಹಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದದ್ದು ‌ನಮ್ಮ ಕಾಂಗ್ರೆಸ್ ಸರ್ಕಾರ. ಆದರೂ ಜನರು ಮೋದಿ ಮೋದಿ ಎಂದೇ ಕೂಗುತ್ತಾರೆ ಎಂದು ಸಿಎಂ ‌ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ‌ಚಾಲನೆ ನೀಡಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ. ನಾವೇ ಹೆಚ್ಚು ಅನುದಾನ ನೀಡಿದವರು. ಸಾರ್ವಜನಿಕರು ಅವರ ಮೇಲೆ ಒತ್ತಡ ಹಾಕುವುದೇ ಇಲ್ಲ. ಕಬ್ಬಿಗೆ ಎಫ್‌ಆರ್‌ಪಿ, ಸಕ್ಕರೆಗೆ ಎಂಎಸ್‌ಪಿ,

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ‌ಸಿದ್ದರಾಮಯ್ಯ ಗರಂ: ಯಾಕೆ ಗೊತ್ತಾ? Read More »

ಮೊಬೈಲ್‌ಗಳಲ್ಲಿ ಸಂಚಾರ್‌ ಸಾಥಿ ಆ್ಯಪ್ ಕಡ್ಡಾಯ

ಮೊಬೈಲ್‌ ಕಳ್ಳತನವಾದರೆ, ಕಳೆದುಹೋದರೆ ಪತ್ತೆಹಚ್ಚಲು ನೆರವಾಗುವ ಆ್ಯಪ್ ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಮೊಬೈಲ್‌ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡುವ ಆಯ್ಕೆ ನೀಡಬಾರದು. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಈ ಆದೇಶವನ್ನು ಸ್ಮಾರ್ಟ್‌ಫೋನ್

ಮೊಬೈಲ್‌ಗಳಲ್ಲಿ ಸಂಚಾರ್‌ ಸಾಥಿ ಆ್ಯಪ್ ಕಡ್ಡಾಯ Read More »

ಇನ್ನು ನೋಂದಣಿ, ಕರಾರುಗಳಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ

ಛಾಪಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಸರ್ಕಾರ ಬೆಂಗಳೂರು : ಆಸ್ತಿ ನೋಂದಣಿ, ಒಪ್ಪಂದದಂಥ ಪ್ರಮುಖ ಕಾರ್ಯಗಳಿಗೆ ಬಳಕೆಯಾಗುವ ಛಾಪಾ ಕಾಗದ ವ್ಯವಸ್ಥೆಗೆ ಸರ್ಕಾರ ಆಮೂಲಾಗ್ರ ಬದಲಾವಣೆ ಮಾಡಿದೆ. ಈಗ ಇ-ಸ್ಟ್ಯಾಂಪಿಂಗ್‌ ವ್ಯವಸ್ಥೆ ಬದಲಾಗಿ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ತಂದಿದೆ. ಕಳೆದ ಅಕ್ಟೋಬರ್‌ನಿಂದಲೇ ಕರ್ನಾಟಕದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ ಜಾರಿಗೆ ಬಂದಿದೆ. ಇ-ಸ್ಟ್ಯಾಂಪ್ ಬದಲು ಇನ್ಮುಂದೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಗೆ ಸೂಚಿಸಲಾಗಿದೆ. ಆದರೆ ಜನರಲ್ಲಿ ಅರಿವು ಮೂಡುವವರೆಗೆ ಹಳೆಯ ಇ-ಸ್ಟ್ಯಾಂಪ್ ಬಳಕೆಯಲ್ಲಿರುತ್ತೆ. ಈ ಬಗ್ಗೆ ಸ್ವತಃ

ಇನ್ನು ನೋಂದಣಿ, ಕರಾರುಗಳಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ Read More »

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮನ

ನಾರಾಯಣ ಗುರು-ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 3ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ಡಿ.3ರಂದು ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ 11.40ಕ್ಕೆ ಕೊಣಾಜೆ ಮಂಗಳಗಂಗೋತ್ರಿಯಲ್ಲಿ ಶಿವಗಿರಿ ಮಠ ವರ್ಕಲ ಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿರುವ ಶತಮಾನದ ಪ್ರಸ್ತಾನ ಶ್ರೀ ನಾರಾಯಣ ಗುರು-ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ,

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮನ Read More »

error: Content is protected !!
Scroll to Top