ರಾಷ್ಟ್ರೀಯ ಮಹಿಳಾ ಕಬಡ್ಡಿಗೆ ಕಾಣಿಯೂರಿನ ಸೌಮ್ಯ ಪೂಜಾರಿ ಆಯ್ಕೆ

ಪುತ್ತೂರು : ಪಂಜಾಬ್‌ನ ಲ್ಯಾಮ್ರನ್ ಟೆಕ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 70ನೇ ಸೀನಿಯ‌ರ್ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್  ಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಕಾಣಿಯೂರಿನ ಸೌಮ್ಯ ಪೂಜಾರಿ ಆಯ್ಕೆಯಾಗಿದ್ದಾರೆ. ಸೌಮ್ಯ ಪೂಜಾರಿ ಕಾಣಿಯೂರು ಅಬೀರ ರಾಮಣ್ಣ ಪೂಜಾರಿ ಮತ್ತು ಲಲಿತಾ ದಂಪತಿ ಪುತ್ರಿ ಹಾಗೂ ಪುತ್ತೂರಿನ ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಂತೋಷ್ ಕುಮಾರ್ ಅವರ ಸಹೋದರಿ. ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಗತಿ ಆಂಗ್ಲಮಾದ್ಯಮ ಶಾಲೆ ಹಾಗೂ ಆಳ್ವಾಸ್‌ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ಸೌಮ್ಯಾ ಅವರು […]

ರಾಷ್ಟ್ರೀಯ ಮಹಿಳಾ ಕಬಡ್ಡಿಗೆ ಕಾಣಿಯೂರಿನ ಸೌಮ್ಯ ಪೂಜಾರಿ ಆಯ್ಕೆ Read More »

ದೇಹದ ಮುಕ್ಕಾಲು ಭಾಗ ತಿಂದ ನರಭಕ್ಷಕ ಹುಲಿ!!

ಹುಲಿ ದಾಳಿಗೆ ಸಿಲುಕಿದ ವ್ಯಕ್ತಿಯೋರ್ವನ ಮೃತದೇಹ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಆಡಿನ ಕಣಿವೆ ಸಮೀಪದಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ಆಡಿನಕಣಿವೆಯ ಬಸವಯ್ಯ (54) ಮೃತ ವ್ಯಕ್ತಿ. ಬಸವಯ್ಯ ಬುಡಕಟ್ಟು ಜನಾಂಗಕ್ಕೆ ಸೇರಿದವನು. ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ. ನಂತರ ಮನೆಗೆ ವಾಪಾಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅಭಯಾರಣ್ಯದ ಒಳಗೆ ಮೃತದೇಹ ಪತ್ತೆಯಾಗಿದೆ. ಆತನ ಕಾಲು, ಎದೆಯ ಭಾಗವನ್ನು ಹುಲಿ ತಿಂದು ಹಾಕಿದ್ದು, ಕೇವಲ ಹೊಟ್ಟೆ ಭಾಗವನ್ನು ಮಾತ್ರ ಬಿಟ್ಟಿದೆ. ಮುಕ್ಕಾಲು

ದೇಹದ ಮುಕ್ಕಾಲು ಭಾಗ ತಿಂದ ನರಭಕ್ಷಕ ಹುಲಿ!! Read More »

ಮಾಂಗಲ್ಯ ಸರ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಲಾಡ್ಜ್ ಮಾಲಕ!

ಸುಬ್ರಹ್ಮಣ್ಯ: ಕಳೆದು ಹೋಗಿದ್ದ ಮಾಂಗಲ್ಯ ಸರವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಡಿ. 9ರಂದು ವಸತಿ ಗೃಹಕ್ಕೆ ಬಂದಿದ್ದ ಮೈಸೂರಿನ ಯಾತ್ರಾರ್ಥಿಗಳು ಡಿ. 10ರಂದು ತೆರಳಿದ್ದರು. ಬಳಿಕ ರೂಮ್ ಶುಚಿ ಮಾಡುವ ಸಂದರ್ಭದಲ್ಲಿ 5 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ದೊರಕಿದ್ದು, ಅದನ್ನು ಸುಬ್ರಹ್ಮಣ್ಯ ಠಾಣೆಗೆ ಒಪ್ಪಿಸಲಾಯಿತು. ಮಾಂಗಲ್ಯ ಸರ ಮಂಜುನಾಥ್ ಅವರ ಪತ್ನಿಯದ್ದಾಗಿತ್ತು. ಸರದ ವಾರೀಸುದಾರರನ್ನು ಸುಬ್ರಹ್ಮಣ್ಯ ಠಾಣೆಗೆ ಬರಲು ಹೇಳಿ, ಎಸ್.ಐ. ಕಾರ್ತಿಕ್, ನಿವೃತ್ತ ಪ್ರಾಧ್ಯಾಪಕ ತಿಲಕ್ ಎ.ಎ., ಮಹೇಶ್

ಮಾಂಗಲ್ಯ ಸರ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಲಾಡ್ಜ್ ಮಾಲಕ! Read More »

ಜೆಸಿಬಿ ಏರಿದ ನವ ಜೋಡಿ! | ಕೋಳಿ ಅಂಕಕ್ಕೂ ಸಾಕ್ಷಿಯಾಯಿತು ಮದುವೆ!!

ಮದುವೆ ಮುಗಿದ ಮೇಲೆ ನವ ದಂಪತಿ ವರನ ಮನೆಗೆ ಹೋಗಲು ಕಾರು ಬದಲಾಗಿ ಜೆಸಿಬಿ ಅರೇಂಜ್‌ ಮಾಡಲಾಗಿತ್ತು. ಜೆಸಿಬಿಯ ಮುಂಭಾಗಕ್ಕೆ ವಧು – ವರರು ಕೂರುವಂತಹ ಆಸನವನ್ನು ಅಳವಡಿಸಿ, ಜೆಸಿಬಿಯನ್ನು ಹೂಗಳಿಂದ ಅಲಂಕೃತಗೊಳಿಸಿ ಕರೆದೊಯ್ಯಲಾಯಿತು. ರಸ್ತೆಯುದ್ದಕ್ಕೂ ನವ ದಂಪತಿಯ ಸ್ನೇಹಿತರು ಹುಲಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾ ಸಾಥ್‌ ನೀಡಿದರು. ಬ್ರಹ್ಮಾವರದಲ್ಲಿ ನಡೆದ ಮಿಥುನ್‌ ಹಾಗೂ ಪೂಜಾ ಜೋಡಿಯ ವಿವಾಹ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು. ಮದುವೆ ಮಂಟಪದಲ್ಲಿಯೇ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕವೂ ನಡೆಯಿತು. ವಧು

ಜೆಸಿಬಿ ಏರಿದ ನವ ಜೋಡಿ! | ಕೋಳಿ ಅಂಕಕ್ಕೂ ಸಾಕ್ಷಿಯಾಯಿತು ಮದುವೆ!! Read More »

ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆಯಿಂದ ವ್ಯಾಪಾರಿಗಳಿಗೆ ನೋಟೀಸ್!

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಟಿ ಜಾತ್ರೋತ್ಸವ ನಡೆಯುವ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಶುಚಿತ್ವ ವಹಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಆರೋಗ್ಯ  ಹಾಗೂ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ತ್ರಿಮೂರ್ತಿ ಅವರ ಸೂಚನೆಯಂತೆ ಹಿರಿಯ ಆರೋಗ್ಯ ನಿರೀಕ್ಷಕ ಬಸವರಾಜ್ ಹಾಗೂ ಆರೋಗ್ಯ ನಿರೀಕ್ಷಕ ಉಮ್ಮರ್ ಖಾನ್ ನೋಟೀಸ್ ನೀಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜಾತ್ರೋತ್ಸವ ಸಂದರ್ಭದಲ್ಲಿ ಬೇಕರಿ, ಸಣ್ಣ ಚಹಾದ ಅಂಗಡಿ, ಸಣ್ಣ ಪುಟ್ಟ

ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆಯಿಂದ ವ್ಯಾಪಾರಿಗಳಿಗೆ ನೋಟೀಸ್! Read More »

ಮೊದಲ ಬಾರಿ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ರಾಜಸ್ಥಾನ ಸಿಎಂ!

ನಿರೀಕ್ಷೆಯಂತೆಯೇ ಹೊಸ ಮುಖಗಳಿಗೆ ಆದ್ಯತೆ ನೀಡುತ್ತಾ ಬಂದಿರುವ ಬಿಜೆಪಿ, ಇದೀಗ ರಾಜಸ್ಥಾನದಲ್ಲೂ ಹೊಸ ಮುಖಕ್ಕೆ ಆದ್ಯತೆ ನೀಡಿದ್ದಾರೆ. ಇದರೊಂದಿಗೆ ಇಬ್ಬರು ಡಿಸಿಎಂಗಳನ್ನು ನೇಮಕ ಮಾಡಲಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಚ್ಚರಿಯ ಆಯ್ಕೆ ಮಾಡಲಾಗಿದೆ. ರಾಜಕೀಯದಲ್ಲಿ ಹೊಸ ಪರೀಕ್ಷೆ ನಡೆಸುವಂತೆ ಹೊಸ ಮುಖಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಭಜನ್ ಲಾಲ್ ಶರ್ಮಾ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇವರು ಸಂಗಾನೇರ್ ಕ್ಷೇತ್ರದ ಶಾಸಕ. 4 ಬಾರಿ

ಮೊದಲ ಬಾರಿ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ರಾಜಸ್ಥಾನ ಸಿಎಂ! Read More »

ಕಲ್ಲಿನ ಕೋರೆಯಲ್ಲಿ ಕಾರ್ಮಿಕ ಮೃತ್ಯು!

ವಿಟ್ಲ: ಕಾರ್ಮಿಕನೋರ್ವ ಕಲ್ಲಿನ ಕೋರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕುದ್ದುಪದವಿನಲ್ಲಿ ನಡೆದಿದೆ. ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್ (24) ಮೃತಪಟ್ಟ ದುರ್ದೈವಿ. ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮತ್ತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರಿಗೆ ಈಜು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ.

ಕಲ್ಲಿನ ಕೋರೆಯಲ್ಲಿ ಕಾರ್ಮಿಕ ಮೃತ್ಯು! Read More »

ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಯ ಹತ್ಯೆಗೈದನೇ ಪತಿ?

ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಗೃಹಿಣಿ ಶ್ವೇತಾ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ದೈವಿ. ಮೃತ ಗೃಹಿಣಿ ಪೋಷಕರಿಂದ ಪತಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಪತ್ನಿ ಶ್ವೇತಾ ಮೃತಪಟ್ಟ ಬಳಿಕ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದ ಪತಿ. ಆದರೆ ಮನೆಯವರಿಗೆ ಮಗಳ ಸಾವಿನ ಬಗ್ಗೆ ಅನುಮಾನಗೊಂಡು ಅಂತ್ಯಕ್ರಿಯೆ ತಡೆದು ಶವ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದರು. ಆರೋಗ್ಯವಾಗಿ ಮಗಳು ಸುಖಾಸುಮ್ಮನೆ ಸಾವಿಗೀಡಾಗಲು ಸಾಧ್ಯವಿಲ್ಲ. ನಮ್ಮ ಮಗಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಯ ಹತ್ಯೆಗೈದನೇ ಪತಿ? Read More »

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆ ಆರಂಭ

ಪುತ್ತೂರು: ತೆಂಗಿನ ಮರದ ಮೌಲ್ಯವರ್ಧನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ‘ಕಲ್ಪವಿಕಾಸ’ ಯೋಜನೆಯನ್ನು ಆರಂಭಿಸಿದೆ ಎಂದು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ಪುತ್ತೂರು ಶಾಖಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೆಂಗು ಬೆಳೆ ಪ್ರಮುಖ ಸ್ಥಾನಗಳನ್ನು ಪಡೆದಿದ್ದರೂ ಪ್ರಾಕೃತಿಕ ವಿಕೋಪ, ರೋಗಗಳು ಮುಂತಾದವುಗಳಿಗೆ ತುತ್ತಾಗಿ ಹಾನಿಗೊಳಗಾದ ತೆಂಗಿನ ಮರಗಳಿಗೆ ನ್ಯಾಯಯುತ ಪರಿಹಾರ ಸಿಗದೆ ರೈತ ಕಂಗೆಟ್ಟಿದ್ದಾನೆ.

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆ ಆರಂಭ Read More »

ದಶಮಾನೋತ್ಸವ ಹೊಸ್ತಿಲಲ್ಲಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ | ಡಿ. 16: ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ

ಪುತ್ತೂರು: ದಶಮಾನೋತ್ಸವ ಹೊಸ್ತಿಲಲ್ಲಿರುವ ಬಪ್ಪಳಿಗೆ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ‘ದಶಾಂಬಿಕೋತ್ಸವ’ ಕಾರ್ಯಕ್ರಮದ ಅಂಗವಾಗಿ ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ ಡಿ. 16 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಇಂತಹಾ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು. ಡಾ. ರಾಮಚಂದ್ರ ಗುರೂಜಿಯವರು ಅಂತರಾಷ್ಟ್ರೀಯ

ದಶಮಾನೋತ್ಸವ ಹೊಸ್ತಿಲಲ್ಲಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ | ಡಿ. 16: ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ Read More »

error: Content is protected !!
Scroll to Top