ತೈಲ ದಾಸ್ತಾನು ಮಾಡಿದರೆ ಜೈಲು!

ತೈಲದ ತೀವ್ರ ಕೊರತೆ ತಲೆದೋರಿದ ಹಿನ್ನೆಲೆಯಲ್ಲಿ ಲೈಸೆನ್ಸ್ ಪಡೆಯದೆ 180 ಲೀಟರಿಗಿಂತ ಅಧಿಕ ಪೆಟ್ರೋಲ್ ಸಂಗ್ರಹಿಸಿಟ್ಟುಕೊಂಡವರಿಗೆ ಜೈಲುಶಿಕ್ಷೆ ವಿಧಿಸುವುದಾಗಿ ವಿಧಿಸುವುದಾಗಿ ಮ್ಯಾನ್ಮಾರ್ ಸೇನಾಡಳಿತ ಘೋಷಿಸಿದೆ. ಲೈಸೆನ್ಸ್ ಪಡೆಯದೆ ಪೆಟ್ರೋಲ್ ಉತ್ಪನ್ನಗಳ ಸಂಗ್ರಹಣೆ ಮತ್ತು ಸಾಗಣೆ ಮಾಡುವುದನ್ನು ಪರಿಶೀಲಿಸುವ ಕಾರ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ ರವಿವಾರ ಚಾಲನೆ ನೀಡಿದೆ. ಲೈಸೆನ್ಸ್ ಇಲ್ಲದೆ 180 ಲೀಟರ್ ಗೂ ಅಧಿಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಸಾಗಿಸುವಾಗ ಸಿಕ್ಕಿಬಿದ್ದವರಿಗೆ 1 ವರ್ಷ ಜೈಲುಶಿಕ್ಷೆ, 2,370 ಡಾಲರ್ ದಂಡ ವಿಧಿಸಲಾಗುವುದು ಎಂದು […]

ತೈಲ ದಾಸ್ತಾನು ಮಾಡಿದರೆ ಜೈಲು! Read More »

ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ: ಆಮಂತ್ರಣ ಬಿಡುಗಡೆ

ಕಾಣಿಯೂರು: ಇಲ್ಲಿನ ಯಕ್ಷಮಿತ್ರ ಬಳಗದ ವತಿಯಿಂದ ನಡೆಯಲಿರುವ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಜ. 2ರ ಮಂಗಳವಾರ ಸಂಜೆ 6.30ರಿಂದ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದಿಂದ `ಶ್ರೀ ದೇವಿ ಲಲಿತೋಪಖ್ಯಾನ’ ಯಕ್ಷಗಾನ ಬಯಲಾಟ ನಡೆಯಲಿದೆ. ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಾಣಿಯೂರು ಮಠದ ಮೆನೇಜರ್ ನಿರಂಜನ ಆಚಾರ್ಯ ಅವರು ಆಮಂತ್ರಣವನ್ನು ಬಿಡುಗಡೆಗೊಳಿಸಿದರು. ಯಕ್ಷಮಿತ್ರ

ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ: ಆಮಂತ್ರಣ ಬಿಡುಗಡೆ Read More »

ರಾಜಭವನಕ್ಕೂ ಬಂದ ಬಾಂಬ್ ಬೆದರಿಕೆ ಕರೆ!!

ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಒಂದಾದ ರಾಜ ಭವನಕ್ಕೂ ಬಾಂಬ್‌ ಬೆದರಿಕೆ ಕರೆ ಬಂದಿದೆ. ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ನಿಗೂಢ ತಾಣದಿಂದ ಈಮೇಲ್‌ ಮಾಡಿ ಭಾರಿ ಆತಂಕಕ್ಕೆ ಕಾರಣವಾದ ಘಟನೆ ಬೆನ್ನಲ್ಲೇ ಇದೀಗ ರಾಜಭವನಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ. ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದಾನೆಂದು ತಿಳಿದುಬಂದಿದೆ. ಬೆದರಿಕೆ ಕರೆ ಬಂದ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ

ರಾಜಭವನಕ್ಕೂ ಬಂದ ಬಾಂಬ್ ಬೆದರಿಕೆ ಕರೆ!! Read More »

ನರ್ಸಿಂಗ್ ಕೋರ್ಸಿಗೆ ಸೇರಿ ಒಂದೇ ವಾರದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ!

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ವಳಚ್ಚಿಲಿನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ಕೇರಳದ ಅಲೆಪ್ಪಿ ನಿವಾಸಿ ಸಚಿನ್ ಸಾಜು (19) ಎಂದು ಗುರುತಿಸಲಾಗಿದೆ. ಡಿ. 8ರಂದು ಕಾಲೇಜಿನ ಹಾಸ್ಟೆಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥೀಯಾಗಿದ್ದ ಈತ, ನ. 30ರಂದು ಕಾಲೇಜು ಪ್ರವೇಶ ಪಡೆದಿದ್ದ. ಡಿ. 8ರಂದು ಬೆಳಿಗ್ಗಿನ ಹೊತ್ತು ಹಾಸ್ಟೆಲ್ ಕೊಠಡಿಯಲ್ಲಿ ಬೆಡ್ ಶೀಟನ್ನೇ ನೇಣಾಗಿ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ನರ್ಸಿಂಗ್ ಕೋರ್ಸಿಗೆ ಸೇರಿ ಒಂದೇ ವಾರದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ! Read More »

ಎನ್‌ಐಟಿಕೆ ಅಕ್ರಮ ಟೋಲ್‌ಗೇಟ್: ಪ್ರತಿಭಟಿಸಿದ್ದ 101 ಮಂದಿ ವಿರುದ್ಧ ಚಾರ್ಜ್ ಶೀಟ್!!

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಟೋಲ್‌ಗೇಟ್ ವಿರುದ್ಧ ಪ್ರತಿಭಟಿಸಿದ್ದ ಸುಮಾರು 101 ಮಂದಿ ಹೋರಾಟಗಾರರ ಮೇಲೆ ಸುರತ್ಕಲ್ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸೋಮವಾರ ಹಲವು ಹೋರಾಟಗಾರರ ಮೊಬೈಲ್‌ಗಳಿಗೆ ಮೆಸೇಜ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 2022ರ ನವೆಂಬರ್‌ನಲ್ಲಿ ಟೋಲ್‌ಗೇಟ್ ತೆರವು ಹೋರಾಟ ಸಮಿತಿ ಟೋಲ್ ಗೇಟ್‌ನ್ನು ತೆರವುಗೊಳಿಸುವ ಕುರಿತು ನೇರ ಕಾರ್ಯಾಚರಣೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಪೊಲೀಸರ ಸರ್ಪಗಾವಲನ್ನು ಹಿಮ್ಮೆಟ್ಟಿಸಿ ಟೋಲ್

ಎನ್‌ಐಟಿಕೆ ಅಕ್ರಮ ಟೋಲ್‌ಗೇಟ್: ಪ್ರತಿಭಟಿಸಿದ್ದ 101 ಮಂದಿ ವಿರುದ್ಧ ಚಾರ್ಜ್ ಶೀಟ್!! Read More »

ಕೆಜಿ ಶುಲ್ಕ – ಪೋಷಕರಿಗೆ ಬರೆ!! | ವೈರಲ್ ಆಯ್ತು ಶುಲ್ಕ ವಿವರದ ಪೋಸ್ಟರ್: ನೆಟ್ಟಿಗರಿಂದ ಭಾರೀ ಟ್ರೋಲ್

ಇವತ್ತಿನ ಉನ್ನತ ಶಿಕ್ಷಣಕ್ಕಿಂತಲೂ ಕೆಜಿ ತರಗತಿಯ ಶುಲ್ಕವೇ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ. ಶುಲ್ಕವಷ್ಟೇ ಅಲ್ಲ, ಅದರ ಜೊತೆಗೆ ಜವಾಬ್ದಾರಿಯನ್ನು ಪೋಷಕರ ಮೇಲೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಖಾಸಗಿ ಶಾಲೆಯೊಂದರ ಕೆಜಿ ತರಗತಿಯ ಶುಲ್ಕದ ವಿವರ ಅದಾಗಿದೆ. 2024-25ನೇ ಶೈಕ್ಷಣಿಕ ವರ್ಷದ ಜೂನಿಯರ್ ಕೆಜಿ ಬ್ಯಾಚ್‌ನ ಫೀಜ್ ಸ್ಟ್ರಕ್ಚರ್ ನೋಡಿ ಶಾಕ್ ಆದ ನೆಟ್ಟಿಗರು, ಅದರ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಶಾಲೆಗಳು ಪೋಷಕರನ್ನು

ಕೆಜಿ ಶುಲ್ಕ – ಪೋಷಕರಿಗೆ ಬರೆ!! | ವೈರಲ್ ಆಯ್ತು ಶುಲ್ಕ ವಿವರದ ಪೋಸ್ಟರ್: ನೆಟ್ಟಿಗರಿಂದ ಭಾರೀ ಟ್ರೋಲ್ Read More »

ಉಚಿತ ಆರೋಗ್ಯ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ

ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಂದಿಕೇಶ್ವರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅರುಣ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಉದಯ ತಂತ್ರಿ ಮಾತನಾಡಿ, ಆರೋಗ್ಯದ ವಿಚಾರವನ್ನು ಯಾರೂ ಕಡೆಗಣಿಸಬಾರದು. ಇಂತಹ ಶಿಬಿರದ ಮುಖಾಂತರ ಇಸಿಜಿ, ರಕ್ತದ ಒತ್ತಡ, ಮಧುಮೇಹ ತಪಾಸಣೆ

ಉಚಿತ ಆರೋಗ್ಯ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ Read More »

ಜೈಲು ಪಾಲಾದ ಅಮಾಯಕ, ತನ್ನ ಕೇಸ್ ತಾನೇ ಗೆದ್ದ!! | ಪೊಲೀಸರ ಹತ್ಯೆ ಪ್ರಕರಣದಲ್ಲಿ ರೈತನ ಮಗನನ್ನು ಮಾಡಲಾಗಿತ್ತು ಫಿಕ್ಸ್!! | ಖಿನ್ನತೆಗೆ ಒಳಗಾಗುವ ನಿರಪರಾಧಿಗಳಿಗೆ ಸ್ಫೂರ್ತಿ ಈ ಯುವಕನ ಜೀವನ ಸಾಹಸಗಾಥೆ!!

ಕೆಲವೊಮ್ಮೆ ಕೆಲವರು ತಾವೂ ಮಾಡದ ತಪ್ಪಿಗೆ ಕೆಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ಸಿಲುಕಿಕೊಳ್ಳುತ್ತಾರೆ. ತನಿಖೆಯ ಭಾಗವಾಗಿ, ಅವರು ಕೆಲವು ತಿಂಗಳು, ಇನ್ನೂ ಕೆಲವರೂ ವರ್ಷಗಳ ವರೆಗೆ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಇದು ನಿಜಕ್ಕೂ ನರಕದ ಜೀವನ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಅಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಗಂಭೀರವಾಗಿ ಖಿನ್ನತೆಗೆ ಒಳಗಾಗುತ್ತಾನೆ. ಅವರು ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಕೊನೆಗೆ ಖಿನ್ನತೆಗೆ ಒಳಗಾಗಿ ಸಾಮಾನ್ಯ ಜೀವನ ನಡೆಸಲಾಗದ ಸ್ಥಿತಿ ತಲುಪುತ್ತಾರೆ. ಆದರೆ, ಉತ್ತರ ಪ್ರದೇಶದ ಅಮಿತ್ ಚೌಧರಿ ಎಂಬ ವ್ಯಕ್ತಿ ಅಂತಹ ನಿರಪರಾಧಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ಜೈಲು ಪಾಲಾದ ಅಮಾಯಕ, ತನ್ನ ಕೇಸ್ ತಾನೇ ಗೆದ್ದ!! | ಪೊಲೀಸರ ಹತ್ಯೆ ಪ್ರಕರಣದಲ್ಲಿ ರೈತನ ಮಗನನ್ನು ಮಾಡಲಾಗಿತ್ತು ಫಿಕ್ಸ್!! | ಖಿನ್ನತೆಗೆ ಒಳಗಾಗುವ ನಿರಪರಾಧಿಗಳಿಗೆ ಸ್ಫೂರ್ತಿ ಈ ಯುವಕನ ಜೀವನ ಸಾಹಸಗಾಥೆ!! Read More »

ಶಬರಿಮಲೆ ಯಾತ್ರಿಕರ ಟೆಂಪೋ ಟ್ರಾವೆಲರ್ ಪಲ್ಟಿ !

ಕೋಟ: ಶಬರಿಮಲೆ ಯಾತ್ರೀಕರ ಟೆಂಪೋ ಟ್ರಾವೆಲರ್ ಪಲ್ಟಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸಮೀಪದ ಬಾಳೆಬೆಟ್ಟು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಮುರ್ಡೇಶ್ವರದಿಂದ ಯಾತ್ರಿಕರು ಹೊರಟಿದ್ದರು ಎನ್ನಲಾಗಿದ್ದು, ಹೆದ್ದಾರಿಯಲ್ಲಿ ಅಡ್ಡ ಬಂದ ದನವೊಂದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡೆದಿದೆ. ವಾಹನದಲ್ಲಿದ್ದ ಎಲ್ಲಾ ಅಯ್ಯಪ್ಪ ಭಕ್ತರು ಸಣ್ಣ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಕೋಟ ಪೊಲೀಸರು ಮತ್ತು ಟೋಲ್ ಸಿಬ್ಬಂದಿಗಳು, ಸಾರ್ವಜನಿಕರು ಸೇರಿ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು

ಶಬರಿಮಲೆ ಯಾತ್ರಿಕರ ಟೆಂಪೋ ಟ್ರಾವೆಲರ್ ಪಲ್ಟಿ ! Read More »

ಒಂದೇ ಮಂಟಪ, ಒಬ್ಬನೇ ವರ ಆದರೆ ವಧು ಮಾತ್ರ ನಾಲ್ವರು!

ಮದುವೆಯ ಪರಿಕಲ್ಪನೆಯನ್ನೇ ಬದಲಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಿದೆ. ವರನೊಬ್ಬ ಒಂದೇ ಬಾರಿಗೆ ನಾಲ್ಕು ಯುವತಿಯರನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವರನು ಬಿಳಿ ಬಟ್ಟೆ ಮತ್ತು ಪೇಟವನ್ನು ಧರಿಸಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಸುಂದರವಾಗಿರುವ ನಾಲ್ವರು ಯುವತಿಯರನ್ನು (ವಧು) ಅಗ್ನಿಸಾಕ್ಷಿಯಾಗಿ ಮದುವೆಯಾಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹೋಮಕುಂಡಕ್ಕೆ ಪ್ರದಕ್ಷಿಣೆ ಹಾಕಿದ ನಂತರ, ಈ ಹುಡುಗಿಯರು ತಮ್ಮ ಪತಿಯ ಪಾದಗಳಿಗೆ ನಮಸ್ಕರಿಸುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಈ ಆಧುನಿಕ

ಒಂದೇ ಮಂಟಪ, ಒಬ್ಬನೇ ವರ ಆದರೆ ವಧು ಮಾತ್ರ ನಾಲ್ವರು! Read More »

error: Content is protected !!
Scroll to Top