ವಿಷ ಸೇವಿಸಿ ಆತ್ಮಹತ್ಯೆ!

ಕಡಬ: ಹಿರಿಯ ನಾಗರಿಕೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಬೈದ್ರಿಜಾಲ್ ನಲ್ಲಿ ನಡೆದಿದೆ. ಬೈದ್ರಿಜಾಲ್ ನಿವಾಸಿ ಬಾಬು ಗೌಡರ ಪತ್ನಿ ಶಿವಮ್ಮ (78) ಆತ್ಮಹತ್ಯೆ ಮಾಡಿಕೊಂಡವರು. ಮಂಗಳವಾರ ಸಂಜೆ ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು.  ಅಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ! Read More »

ಕುಂಬ್ರದ ಟಿಪ್ಪರ್ ಚಾಲಕನ ಕೊಲೆ ಪ್ರಕರಣ | ಮೂರನೇ ಆರೋಪಿ ಬಂಧನ!

ಪುತ್ತೂರು: ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22) ಎಂಬವರ ಕೊಲೆ ಪ್ರಕರಣದ ಮೂರನೇ ಆರೋಪಿ ದುರ್ಗಪ್ಪ ಮಾದರ (42) ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಅಪಹರಣಕ್ಕೆ ಬಳಸಿದ್ದ ವಾಹನ ಮತ್ತು ಕೊಲೆ ಮಾಡಲು ಬಳಸಲಾಗಿದ್ದ ರಾಡ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಡಾಣಕಶಿರೂರು ರೇಣವ್ವ ಮತ್ತು ಸುರೇಶರವರ ಮಗ ಹನುಮಂತ ಮಾದರ(22) ಅವರನ್ನು ಕುಂಬ್ರದಿಂದ ಮೂವರು ಸೇರಿ ವಾಹನವೊಂದರಲ್ಲಿ ಕರೆದೊಯ್ದು ಕೊಲೆ ಮಾಡಿ ಆಗುಂಬೆ ಘಾಟ್

ಕುಂಬ್ರದ ಟಿಪ್ಪರ್ ಚಾಲಕನ ಕೊಲೆ ಪ್ರಕರಣ | ಮೂರನೇ ಆರೋಪಿ ಬಂಧನ! Read More »

ಕಂಬಳ ಕೋಣಗಳ ಯಜಮಾನ ಕಟ್ಟಡದಿಂದ ಬಿದ್ದು ಸಾವು !

ಪೂಂಜಾಲಕಟ್ಟೆ: ಹಳೆಯ ಕಟ್ಟಡದ ಮೇಲ್ಚಾವಣಿ ಕೆಡಹುವ ಸಂದರ್ಭದಲ್ಲಿ ಕೆಳಗೆ ಬಿದ್ದು ಕಂಬಳ ಕೋಣಗಳ ಯಜಮಾನ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ನಡೆದಿದೆ. ಬಡಗಕಜೆಕಾರು ಗ್ರಾಮದ ಕುಲೆಂಜಿಕೋಡಿ ನಿವಾಸಿ ಸುಂದರ ಪೂಜಾರಿ (55) ಮೃತಪಟ್ಟವರು. ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸುಂದರ ಪೂಜಾರಿ ತೆಂಕಕಜೆಕಾರಿನ ವಿಜಯಾ ಎಂಬವರ ದೈವಸ್ಥಾನ ಕಟ್ಟಡ ಕೆಡಹುವ ಕೆಲಸಕ್ಕೆ ಹೋಗಿದ್ದು ಗೋಡೆಯ ಮೇಲಿನಿಂದ ಸ್ಲಾಬ್‌ ತೆಗೆಯುವ ವೇಳೆ ಸ್ಲಾಬ್‌ ಸಹಿತ ಕೆಳಕ್ಕೆ ಬಿದ್ದಿದ್ದರು. ಗಂಭೀರ ಗಾಯಗೊಂಡ

ಕಂಬಳ ಕೋಣಗಳ ಯಜಮಾನ ಕಟ್ಟಡದಿಂದ ಬಿದ್ದು ಸಾವು ! Read More »

ಶಬರಿಮಲೆ ಯಾತ್ರೆ ಬುಡಮೇಲುಗೊಳಿಸಲು ಕಮ್ಯುನಿಸ್ಟರ ಸಂಚು: ಕೇಂದ್ರ ಸಚಿವ | ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥ ಕ್ಷೇತ್ರದಲ್ಲಿ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ವಿಫಲವಾಗಿದೆಯೆಂದ ಸಚಿವರು

ಶಬರಿಮಲೆ ಯಾತ್ರೆ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಎಡರಂಗ ಸರಕಾರ ಶ್ರಮಿಸುತ್ತಿದೆ. ನಾಸ್ತಿಕರಾದ ಕಮ್ಯೂನಿಸ್ಟರು ಶಬರಿಮಲೆಗೆ ಭಕ್ತರು ಬರದಂತೆ ಸಂಚು ರೂಪಿಸಿದ್ದಾರೆ. ಇದು ಹಿಂದೂ ಸಂಪ್ರದಾಯದ ಮೇಲಿನ ಅತಿಕ್ರಮಣ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಆರೋಪಿಸಿದ್ದಾರೆ. ಶಬರಿಮಲೆಯಲ್ಲಿ ಭಕ್ತರ ಸಂಕಷ್ಟದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಬರಿಮಲೆಯ ಪಾವಿತ್ರ್ಯವನ್ನು ಹಾಳು ಮಾಡುವುದು ಸಿಪಿಎಂ ಅಜೆಂಡಾ ಹಾಗೂ ಇದರ ಪ್ರಯತ್ನ ನಡೆಯುತ್ತಿದೆ. ಇದು ಸಂಪ್ರದಾಯದ ಉಲ್ಲಂಘನೆ ಎಂದು ವಿ. ಮುರಳೀಧರನ್ ಹೇಳಿದ್ದಾರೆ. ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಕೇರಳ ಸರಕಾರ ಮಾಡುತ್ತಿರುವ

ಶಬರಿಮಲೆ ಯಾತ್ರೆ ಬುಡಮೇಲುಗೊಳಿಸಲು ಕಮ್ಯುನಿಸ್ಟರ ಸಂಚು: ಕೇಂದ್ರ ಸಚಿವ | ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥ ಕ್ಷೇತ್ರದಲ್ಲಿ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ವಿಫಲವಾಗಿದೆಯೆಂದ ಸಚಿವರು Read More »

ವಾರ್ಷಿಕೋತ್ಸವ ಪ್ರಯುಕ್ತ ಪೋಷಕರ, ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ಕಾಣಿಯೂರು: ಚಾರ್ವಾಕ ಸ.ಉ. ಹಿ.ಪ್ರಾ. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಣ್ಣ ಗೌಡ ಪೊನ್ನೆತ್ತಡಿ, ಉಪಾಧ್ಯಕ್ಷೆ ಸಾರಿಕಾ ದೇವರತ್ತಿಮಾರು, ಶಾಲಾ ಮುಖ್ಯಗುರು ಪಾರ್ವತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಎರ್ಕ, ಕಾರ್ಯದರ್ಶಿ ಪರಮೇಶ್ವರ ಗೌಡ ಇಡ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.

ವಾರ್ಷಿಕೋತ್ಸವ ಪ್ರಯುಕ್ತ ಪೋಷಕರ, ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ Read More »

ಬಸ್ಸಿಗೆ ಹತ್ತುವ ವೇಳೆ ಚಿನ್ನದ ಸರ ಕಳವು !

ಬೆಳ್ತಂಗಡಿ: ಬಸ್ಸಿಗೆ ಹತ್ತುವ ವೇಳೆ ಚಿನ್ನ ಕಳವು ಮಾಡಿರುವ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಉಜಿರೆ ಗ್ರಾಮದ ವಾರಿಜ ಟಿ. (53) ಮಂಗಳವಾರ ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆಎಸ್ಸಾಆರ್ಟಿಸಿ ಬಸ್ ಗೆ ಹತ್ತುವ ವೇಳೆ ಘಟನೆ ನಡೆದಿದೆ. ವಾರಿಜ ಅವರು ಕೊರಳಿನಲ್ಲಿ ಧರಿಸಿದ್ದ ಚಿನ್ನದ ಸರವನ್ನು ಯಾರೋ ಅನಾಮಿಕರು ಎಳೆದು ತೆಗೆದಿದ್ದಾರೆ. ಈ ಸಂದರ್ಭ ಅವರು ಬೊಬ್ಬೆ ಹೊಡೆದಿದ್ದಾರೆ. ಆದರೆ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದುದರಿಂದ ಕಳ್ಳ ಯಾರೆಂದು ಪತ್ತೆಯಾಗಿಲ್ಲ ಎಂದು

ಬಸ್ಸಿಗೆ ಹತ್ತುವ ವೇಳೆ ಚಿನ್ನದ ಸರ ಕಳವು ! Read More »

ಕುಕ್ಕೆಯಲ್ಲಿ ಮಳೆಯ ನಡುವೆ ಲಕ್ಷದೀಪೋತ್ಸವ ಸಡಗರ

ಸುಬ್ರಹ್ಮಣ್ಯ: ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಲಕ್ಷದೀಪೋತ್ಸವ ವೈಭವದಿಂದ ಜರಗಿತು. ಇದರ ನಡುವೆ ವರುಣ ಸಿಂಚನ ಶುರುವಾಗಿತ್ತು. ಲಕ್ಷದೀಪೋತ್ಸವದ ಸಡಗರ ಹೆಚ್ಚುತ್ತಿದ್ದಂತೆ, ಮಳೆಯ ಅಬ್ಬರವೂ ಇಮ್ಮಡಿಸಿತು. ದೀಪೋತ್ಸವದ ಸಡಗರಕ್ಕೆ ಸ್ವಲ್ಪ ತಡೆಯಾದರೂ, ಭಕ್ತರ ಉತ್ಸಾಹಕ್ಕೆ ತಡೆಯಾಗಲಿಲ್ಲ. ಲಕ್ಷದೀಪೋತ್ಸವದ ಪ್ರಯುಕ್ತ ಕುಣಿತ ಭಜನೆ ಭಕ್ತರ ಗಮನ ಸೆಳೆಯಿತು. ಕುಕ್ಕೆ ಆಸುಪಾಸಿನ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.

ಕುಕ್ಕೆಯಲ್ಲಿ ಮಳೆಯ ನಡುವೆ ಲಕ್ಷದೀಪೋತ್ಸವ ಸಡಗರ Read More »

ದಂಪತಿ ಆತ್ಮಹತ್ಯೆ!! | ನೇಣಿಗೆ ಕೊರಳೊಡ್ಡಿದ ರಂಗಿತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ!

ಹೆಸರಾಂತ ಸಮಾಜ ಸೇವಕ, ಕಾಪು ರಂಗಿತರಂಗ ನಾಟಕ ಸಂಸ್ಥೆಯ ಸ್ಥಾಪಕ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ದಂಪತಿ ಜೊತೆಯಾಗಿ ಮನೆಯಲ್ಲೇ ಆತ್ಮಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಒಂದೇ ಸೀರೆಯನ್ನು ನೇಣಾಗಿ ಬಳಸಿಕೊಂಡು, ಅದಕ್ಕೆ ದಂಪತಿ ಕೊರಳೊಡ್ಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಅವರು ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಕಾಪು “ರಂಗಿತರಂಗ” ತಂಡದ

ದಂಪತಿ ಆತ್ಮಹತ್ಯೆ!! | ನೇಣಿಗೆ ಕೊರಳೊಡ್ಡಿದ ರಂಗಿತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ! Read More »

ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ

ಉಪ್ಪಿನಂಗಡಿ: ಉಪ್ಪಿನಂಗಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಬಜತ್ತೂರು ಶೌರ್ಯ ವಿಪತ್ತು ನಿರ್ವಹಣೆ ತಂಡದಿಂದ ಗ್ರಾಮ ಪಂಚಾಯಿತಿ ನಿವೇಶನದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಪಂಚಾಯತ್ ನಿವೇಶನ ಜಾಗದಲ್ಲಿ ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಕಾರ್ಯದ ಜತೆಗೆ ಸಾಮಗ್ರಿಗಳನ್ನು ಇಡಲು ಶೆಡ್ ನಿರ್ಮಿಸಲಾಯಿತು. ಶ್ರಮದಾನದಲ್ಲಿ ಶೌರ್ಯ ತಂಡದ ಸದಸ್ಯರು ಭಾಗಿಯಾದರು.

ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ವೈಭವದ ಲಕ್ಷದೀಪೋತ್ಸವ | ಬೆಳಕಿನ ಚಿತ್ತಾರ ಮೂಡಿಸಿದ ಲಕ್ಷಾಂತರ ಹಣತೆ ದೀಪಗಳು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಮಂಗಳವಾರ ರಾತ್ರಿ ವೈಭವದಿಂದ ನಡೆಯಿತು. ದೇವಸ್ಥಾನದ ರಥಬೀದಿಯಲ್ಲಿ ನೂರಾರು  ಭಕ್ತಾದಿಗಳಿಂದ ಬೆಳಗಿದ ಲಕ್ಷಾಂತರ ಹಣತೆ ದೀಪಗಳು ಇದಕ್ಕೆ ಸಾಕ್ಷಿಯಾದವು. ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವಸ್ಥಾನದ ಒಳಾಂಗಣದಲ್ಲಿ ಲಕ್ಷ ಬಿಲ್ವಾರ್ಚನೆ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಭಕ್ತಾದಿಗಳಿಂದ ಭಜನಾ ಸೇವೆ ನಡೆಯಿತು. ಸಂಜೆ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗ ನಡೆಯಿತು. ಸಂಜೆ 7 ಗಂಟೆಗೆ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ವೈಭವದ ಲಕ್ಷದೀಪೋತ್ಸವ | ಬೆಳಕಿನ ಚಿತ್ತಾರ ಮೂಡಿಸಿದ ಲಕ್ಷಾಂತರ ಹಣತೆ ದೀಪಗಳು Read More »

error: Content is protected !!
Scroll to Top