ಸುದ್ದಿ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಖಾಜಾಸಾಬ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಧಾರವಾಡ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮುಸ್ಲಿಂ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಖಾಜಾಸಾಬ್(19) ಎಂದು ಗುರುತಿಸಲಾಗಿದೆ. ಆರೋಪಿ 14 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿದೆ. 9 ನೇ ತರಗತಿಯ ಬಾಲಕಿಯನ್ನು ‌ಪ್ರೀತಿ – ಪ್ರೇಮ ಎಂದು ಮರುಳು ಮಾಡಿದ್ದಾನೆ. ಆಗಾಗ ಆಕೆಯ ಮನೆಗೆ ಹೋಗುತ್ತಿದ್ದ ಖಾಜಾಸಾಬ್ ಆಕೆಯ ಜೊತೆಗೆ ಅನುಚಿತವಾಗಿ ‌ವರ್ತಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಕಳೆದ ರವಿವಾರ ಬಾಲಕಿಯನ್ನು ‌ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ಲೈಂಗಿಕ […]

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಖಾಜಾಸಾಬ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು Read More »

ಬೆದ್ರುಪಣೆಯಲ್ಲಿ ಮರಿಯಾನೆಯ ಮೃತದೇಹ ಪತ್ತೆ

ಸುಳ್ಯ: ಅರಂತೋಡಿನ ಬೆದ್ರುಪಣೆ ಎಂಬಲ್ಲಿ ಮರಿಯಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡಾನೆಗಳ ದಾಳಿಯಿಂದಾಗಿ ಈ ಘಟನೆ ನಡೆದಿರುವ ಸಂದೇಹ ವ್ಯಕ್ತವಾಗಿದೆ. ಬೆದ್ರುಪಣೆಯ ಅಶೋಕ್ ಎಂಬವರ ತೋಟದಲ್ಲಿ ಮರಿಯಾನೆಯ ‌ಶವ ಪತ್ತೆಯಾಗಿರುವುದಾಗಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ. ರಾತ್ರಿ ಸಮಯದಲ್ಲಿ ತೋಟಕ್ಕೆ ದಾಳಿಯಿಟ್ಟ ಆನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಓಡಿಸಿದ್ದರು. ಇದಾದ ಬಳಿಕ ಮುಂಜಾನೆ ವೇಳೆ ಮತ್ತೆ ಆನೆಗಳು ತೋಟಕ್ಕೆ ಬಂದಿದ್ದು, ಕಿತ್ತಾಟ ನಡೆಸಿರಬಹುದು, ಈ ವೇಳೆ ಮರಿಯಾನೆ ಮೃತಪಟ್ಟಿರುವ ಸಂದೇಹ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ

ಬೆದ್ರುಪಣೆಯಲ್ಲಿ ಮರಿಯಾನೆಯ ಮೃತದೇಹ ಪತ್ತೆ Read More »

ಕೃಷಿ ಯಂತ್ರೋಪಕರಣ ಮಾರಾಟ – ಸೇವೆ ಮಳಿಗೆಯಿಂದ ‌ಶಬ್ದ ಮಾಲಿನ್ಯ: ದೂರು ದಾಖಲು

ಪುತ್ತೂರು: ಕೃಷಿ ಸಲಕರಣೆಗಳ ವ್ಯಾಪಾರ ಮಳಿಗೆಯೊಂದು ಪರವಾನಗಿ ಪಡೆದು ಕಾರ್ಯ ನಿರ್ವಹಿಸಿದ್ದು, ಇಲ್ಲಿ ಮಾಡುವ ಯಂತ್ರೋಪಕರಣಗಳ ರಿಪೇರಿಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ದೂರು ನೀಡಲಾಗಿದ್ದು, ಕೋರ್ಟ್ ಆದೇಶದ ಅನ್ವಯ ಈ‌ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆಲ್ಲಿಕಟ್ಟೆ ‌ನಿವಾಸಿ ಕಸ್ತೂರಿ ಬಾಳಿಗಾ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ದೂರಿನಲ್ಲಿ, ಎಪಿಎಂಸಿ ರಸ್ತೆಯಲ್ಲಿರುವ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಪರವಾನಗಿಯನ್ನು ಮಾರಾಟ ಮತ್ತು ಸೇವೆಗಾಗಿ ನೀಡಲಾಗಿದೆ. ಆದರೆ ಅವರು ಕೃಷಿ

ಕೃಷಿ ಯಂತ್ರೋಪಕರಣ ಮಾರಾಟ – ಸೇವೆ ಮಳಿಗೆಯಿಂದ ‌ಶಬ್ದ ಮಾಲಿನ್ಯ: ದೂರು ದಾಖಲು Read More »

ಲಾರಿ – ದ್ವಿಚಕ್ರ ವಾಹನ ಡಿಕ್ಕಿ: ಓರ್ವ ಸಾವು

ಪುತ್ತೂರು: ಲಾರಿ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಮೃತಪಟ್ಟ ಘಟನೆ ಮಾಣಿಯಲ್ಲಿ ನಡೆದಿದೆ. ಸ್ಕೂಟರ್ ಕಲ್ಲಡ್ಕದಿಂದ ಪುತ್ತೂರಿನತ್ತ ಬರುತ್ತಿದ್ದು ಲಾರಿಯ ಹಿಂಭಾಗಕ್ಕೆ ಗುದ್ದಿದೆ. ಅಪಘಾತದಲ್ಲಿ ಕಲಂದರ್ ಶಾ‌ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿರುವುದಾಗಿದೆ. ಮೂಲತಃ ಸುಳ್ಯ ನಿವಾಸಿಯಾಗಿರುವ ಅವರು ಕಲ್ಲರ್ಪೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಲಾರಿ – ದ್ವಿಚಕ್ರ ವಾಹನ ಡಿಕ್ಕಿ: ಓರ್ವ ಸಾವು Read More »

ಸಾವಿರ ಅಡಿ ಆಳದ ಕಂದಕಕ್ಕೆ ಉರುಳಿದ ಕಾರು : ಎಂಟು ಯುವಕರು ಸಾವು

ಮಹಾಬಲೇಶ್ವರ ಘಾಟಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತ ಮುಂಬೈ : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಬಲೇಶ್ವರ-ಪೋಲಾದ್​ಪುರ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಕಾರು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 8 ಯುವಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರು ಆಳವಾದ ಕಂದಕಕ್ಕೆ ಉರುಳಿದೆ. ಅಂಬೆನಾಲಿ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಈ ಕಂದಕವು ಸುಮಾರು 1,000 ಅಡಿ ಆಳದಲ್ಲಿದೆ ಎಂದು ಅಂದಾಜಿಸಿದ್ದಾರೆ. ಇಲ್ಲಿಯವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಸೋಮವಾರ ಮುಂಜಾನೆ ಕಂದಕದಲ್ಲಿ ಅಪಘಾತಕ್ಕೀಡಾದ

ಸಾವಿರ ಅಡಿ ಆಳದ ಕಂದಕಕ್ಕೆ ಉರುಳಿದ ಕಾರು : ಎಂಟು ಯುವಕರು ಸಾವು Read More »

ಕಪ್ಪೆಚಿಪ್ಪು ಹೆಕ್ಕುವಾಗ ನೀರುಪಾಲು : ಮೃತರ ಸಂಖ್ಯೆ 11ಕ್ಕೇರಿಕೆ

ಭಟ್ಕಳದ ತಟ್ಟೆಹಕ್ಲು ನದಿಗೆ ಕಪ್ಪೆಚಿಪ್ಪು ಹೆಕ್ಕಲು ಇಳಿದವರು ಜಲಸಮಾಧಿ ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 11 ಜನರ ಪೈಕಿ ನಿನ್ನೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಕೂಡ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11

ಕಪ್ಪೆಚಿಪ್ಪು ಹೆಕ್ಕುವಾಗ ನೀರುಪಾಲು : ಮೃತರ ಸಂಖ್ಯೆ 11ಕ್ಕೇರಿಕೆ Read More »

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

ಹಾಸನದಿಂದ ಬಂದು ಕೂಳೂರಿನಲ್ಲಿ ನದಿಗೆ ಹಾರಲು ಮುಂದಾಗಿದ್ದ ಕೃಷಿಕ ಮಂಗಳೂರು: ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಣಂಬೂರು ಪೊಲೀಸರು ಸಮಯ ಪ್ರಜ್ಞೆಯಿಂದ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಗ್ರಾಮದ ನಿವಾಸಿಯಾಗಿರುವ ಕೃಷಿಕನೊಬ್ಬ ಆರೋಗ್ಯ ಸಮಸ್ಯೆ ಹಾಗೂ ಹಣಕಾಸಿನ ತೊಂದರೆಯಿಂದ ಮನನೊಂದು ಮೇ 22ರಂದು ಬೆಳಗ್ಗೆ ಮನೆಯಿಂದ ಯಾರಿಗೂ ತಿಳಿಸದೇ ಹೊರಟು ಮಂಗಳೂರಿಗೆ ಬಂದಿದ್ದರು. ಮೊಬೈಲ್ ಫೋನ್ ಮಾತ್ರ

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು Read More »

ಖರ್ಜೂರ ವ್ಯಾಪಾರ ಹೆಸರಿನಲ್ಲಿ ಅಳಿಯನಿಂದಲೇ ಮಾವನಿಗೆ 15.81 ಲಕ್ಷ ರೂ. ವಂಚನೆ

ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಮಾವನಿಗೆ ಪಂಗನಾಮ ಹಾಕಿದ ಅಳಿಯ ಉಡುಪಿ: ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 15.81 ಲಕ್ಷ ರೂ. ಪಡೆದು ವಂಚನೆ ಎಸಗಿರುವ ಆರೋಪದಡಿ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್ ಅಜೀಜ್ (50) ನೀಡಿದ ದೂರಿನಂತೆ, ಅವರ ಅಳಿಯನಾದ ಮೊಹಮ್ಮದ್ ಶರ್ಪದ್ದೀನ್ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದು, 2023ರ ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಖರ್ಜೂರ

ಖರ್ಜೂರ ವ್ಯಾಪಾರ ಹೆಸರಿನಲ್ಲಿ ಅಳಿಯನಿಂದಲೇ ಮಾವನಿಗೆ 15.81 ಲಕ್ಷ ರೂ. ವಂಚನೆ Read More »

ಪ್ರಜಾಪ್ರಭುತ್ವ ಗೆದ್ದಿದೆ, ದಬ್ಬಾಳಿಕೆ ಸೋತಿದೆ : ಫಾಲ್ಟಾ ಗೆಲುವಿಗೆ ಮೋದಿ ಶ್ಲಾಘನೆ

ಬಿಜೆಪಿಗೆ 1 ಲಕ್ಷಕ್ಕೂ ಅಧಿಕ ಮತಗಳ ಐತಿಹಾಸಿಕ ಜಯ; ಟಿಎಂಸಿಗೆ ಭಾರಿ ಮುಖಭಂಗ ನವದೆಹಲಿ: ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಭರ್ಜರಿ ಜಯಭೇರಿ ಬಾರಿಸಿದೆ. ಟಿಎಂಸಿಯನ್ನು ಧೂಳೀಪಟ ಮಾಡುವ ಮೂಲಕ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಯಶಸ್ಸನ್ನು ಶ್ಲಾಘಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ 1,49,666

ಪ್ರಜಾಪ್ರಭುತ್ವ ಗೆದ್ದಿದೆ, ದಬ್ಬಾಳಿಕೆ ಸೋತಿದೆ : ಫಾಲ್ಟಾ ಗೆಲುವಿಗೆ ಮೋದಿ ಶ್ಲಾಘನೆ Read More »

ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿಗಳ ಪರಿಷ್ಕರಣೆಗೆ ನಿರ್ಧಾರ

ಯೋಜನೆಯಲ್ಲಿ ಅನರ್ಹ ಫಲಾನುಭವಿಗಳಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೀರ್ಮಾನ ಬೆಂಗಳೂರು: ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಕೆಲವು ಗ್ಯಾರಂಟಿಗಳು ದುರುಪಯೋಗವಾಗುತ್ತಿದೆ ಎಂಬ ಕಾರಣವೊಡ್ಡಿ ಪರಿಷ್ಕರಣೆಗೆ ಮುಂದಾಗಿದೆ. 2 ಮಹತ್ವದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆಗೆ ನಿರ್ಧರಿಸಿದೆ. ಶಾಸಕರು ಹಾಗೂ ಹಿರಿಯ ನಾಯಕರ ಸಭೆಯಲ್ಲಿ ಈ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿತಿಂಗಳು 1 ಕೋಟಿ 64 ಲಕ್ಷ ಮಹಿಳೆಯರು 2,000 ರೂ. ಹಣ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲೂ

ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿಗಳ ಪರಿಷ್ಕರಣೆಗೆ ನಿರ್ಧಾರ Read More »

error: Content is protected !!
Scroll to Top