ಸುದ್ದಿ

ದುಬೈಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಕೆಲವು ತಿಂಗಳಿಂದ ಕೋಮಾದಲ್ಲಿದ್ದ ಮಹಿಳೆ ಮಂಗಳೂರು : ದುಬೈಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು ತಿಂಗಳುಗಳಿಂದ ಕೋಮಾದಲ್ಲಿದ್ದ ಕಿನ್ನಿಗೋಳಿಯ ಯುವತಿಯೊಬ್ಬರು ಮೇ 24ರಂದು ನಿಧನರಾಗಿದ್ದಾರೆ. ಪುನರೂರಿನ ವಾಸುದೇವ ಅಗ್ರಹಾರ ನಿವಾಸಿ ಶ್ರೀಲತಾ ತಂತ್ರಿ (26)ಂಋತ ಮಹಿಳೆ. ಇವರು ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆಯಾಗಿದ್ದು, ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು. ದುಬೈನಲ್ಲಿ ಉದ್ಯೋಗದಲ್ಲಿದ್ದ ಶ್ರೀಲತಾ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಪ್ರಾರಂಭದಲ್ಲಿ ಅವರಿಗೆ ದುಬೈನಲ್ಲೇ […]

ದುಬೈಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು Read More »

ರೌಡಿ ಶೀಟರ್‌ ಆರೀಫ್ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ತೊಕ್ಕೊಟ್ಟು ಫ್ಲೈಓವರ್ ಮೇಲೆ ಬರ್ಬರವಾಗಿ ಕೊಲೆಯಾಗಿರುವ ಆರಿಫ್‌ ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ರೌಡಿ ಶೀಟರ್‌ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2026ರ ಮಾರ್ಚ್ 27ರಂದು ಮುಂಜಾನೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದ ಆರೀಫ್‌ನನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಕೆಡವಿದ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಕೃತ್ಯಕ್ಕೆ ಬಳಸಿದ್ದ ಕಾರನ್ನು

ರೌಡಿ ಶೀಟರ್‌ ಆರೀಫ್ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಕಾರಿನೊಳಗೆ ಸಿಲುಕಿಕೊಂಡ ಮಗು : ಕಿಟಿಕಿಯ ಗಾಜು ಒಡೆದು ರಕ್ಷಿಸಿದ ಸಾರ್ವಜನಿಕರು

ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್ ಆನ್ ಆಗಿ ಸಿಲುಕಿದ ಮಗು ಬೆಳ್ತಂಗಡಿ: ಕಾರಿನ ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್ ಆನ್ ಆದ ಕಾರಣ ಮಗುವೊಂದು ಕಾರಿನೊಳಗೆ ಸಿಲುಕಿಕೊಂಡ ಆತಂಕಕಾರಿ ಘಟನೆ ನಡೆದಿದ್ದು, ಸಾರ್ವಜನಿಕರು ಸಮಯಪ್ರಜ್ಞೆಯಿಂದ ಮಗುವನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಡಂತ್ಯಾರಿನ ಮದ್ದಡ್ಕ ಎಂಬಲ್ಲಿ ಭಾನುವಾರ ನಡೆದಿದೆ. ಚಾಲಕ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಸಮೀಪದ ಅಂಗಡಿಯೊಂದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಆಟೋ-ಲಾಕ್ ವ್ಯವಸ್ಥೆಯು ಇದ್ದಕ್ಕಿದ್ದಂತೆ ಸಕ್ರಿಯಗೊಂಡಿದ್ದು, ಮಗು ಕಾರಿನೊಳಗೆ ಸಿಲುಕಿಕೊಂಡಿದೆ. ಮಗು

ಕಾರಿನೊಳಗೆ ಸಿಲುಕಿಕೊಂಡ ಮಗು : ಕಿಟಿಕಿಯ ಗಾಜು ಒಡೆದು ರಕ್ಷಿಸಿದ ಸಾರ್ವಜನಿಕರು Read More »

ಸಿಎನ್‌ಜಿ ದರ ಮತ್ತೆ 2 ರೂ. ಏರಿಕೆ

ಪೆಟ್ರೋಲು, ಡೀಸೆಲ್‌ ಏರಿಕೆ ಬೆನ್ನಲ್ಲೇ ಜನರಿಗೆ ಇನ್ನೊಂದು ಶಾಕ್‌ ನವದೆಹಲಿ: ಜಾಗತಿಕ ಇಂಧನ ಬೆಲೆಗಳ ಏರಿಕೆಯ ನಡುವೆ ಗ್ರಾಹಕರಿಗೆ ಮತ್ತೊಂದು ಭಾರಿ ಆರ್ಥಿಕ ಹೊಡೆತ ನೀಡಲಾಗಿದ್ದು, ಮಂಗಳವಾರ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ಮತ್ತೆ 2 ರೂಪಾಯಿ ಹೆಚ್ಚಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ನಡೆದಿರುವ ನಾಲ್ಕನೇ ಬೆಲೆ ಏರಿಕೆ ಇದಾಗಿದೆ. ಮೇ 26ರ ಬೆಳಿಗ್ಗೆ 8 ಗಂಟೆಯಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾದ ಹೊಸ ದರಗಳ ಪ್ರಕಾರ, ದೆಹಲಿಯಲ್ಲಿ ಈಗ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 83.09 ರೂಪಾಯಿ

ಸಿಎನ್‌ಜಿ ದರ ಮತ್ತೆ 2 ರೂ. ಏರಿಕೆ Read More »

ಕದನ ವಿರಾಮ ಅಂತಿಮ ಹಂತಕ್ಕೆ ತಲುಪುವಾಗಲೇ ಇರಾನ್‌ ಮೇಲೆ ಅಮೆರಿಕ ಭೀಕರ ದಾಳಿ

ಜಲಬಾಂಬ್‌ ಇಡುವ ದೋಣಿಗಳು, ಫೈಟರ್‌ ಜೆಟ್‌ಗಳನ್ನು ಗುರಿ ಮಾಡುತ್ತಿದ್ದ ಬಂದರ್‌ಗೆ ಕ್ಷಿಪಣಿ ದಾಳಿ ಟೆಹ್ರಾನ್‌: ಇರಾನ್‌ ಜೊತೆಗೆ ಕದನ ವಿರಾಮ ಹಾಗೂ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿ ಇರುವಾಗಲೇ ಅಮೆರಿಕ ಪಡೆಗಳು ಮತ್ತೆ ಭೀಕರ ದಾಳಿ ನಡೆಸಿವೆ. ಇರಾನ್‌ನ ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಹಾರ್ಮುಜ್‌ ಜಲಸಂಧಿಯಲ್ಲಿ ಗಣಿಗಳನ್ನು ನಿಯೋಜಿಸುವ ಬೋಟ್‌ಗಳನ್ನು ಗುರಿಯಾಗಿಸಿ ಅಮೆರಿಕದ ಪಡೆಗಳು ದಾಳಿ ನಡೆಸಿವೆ. ಇರಾನ್‌ನ ಬಂದರ್‌ ಅಬ್ಬಾಸ್‌ನಲ್ಲೂ ಸ್ಫೋಟಗಳು ಸಂಭವಿಸಿವೆ. ಭಾರತೀಯ ಕಾಲಮಾನ ಮಂಗಳವಾರ ಮುಂಜಾನೆ ದಕ್ಷಿಣ ಇರಾನ್‌ನಲ್ಲಿರುವ

ಕದನ ವಿರಾಮ ಅಂತಿಮ ಹಂತಕ್ಕೆ ತಲುಪುವಾಗಲೇ ಇರಾನ್‌ ಮೇಲೆ ಅಮೆರಿಕ ಭೀಕರ ದಾಳಿ Read More »

108 ಆಂಬುಲೆನ್ಸ್‌ ಸೇವೆ ನಿರ್ವಹಣೆಗೆ ಕಮಾಂಡ್‌ ಕಂಟ್ರೋಲ್‌ ಸೆಂಟರ್‌

ಸರ್ಕಾರದಿಂದಲೇ ಇನ್ನು ಆಂಬುಲೆನ್ಸ್‌ ಸೇವೆ ನಿರ್ವಹಣೆ ಬೆಂಗಳೂರು: ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ ಎಂಬ ಘೋಷವಾಕ್ಯದಡಿಯಲ್ಲಿ 108 ಆಂಬುಲೆನ್ಸ್ ಸೇವೆ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದ್ದು, ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 108 ಆರೋಗ್ಯ ಕವಚ ಆಂಬುಲೆನ್ಸ್ ಕಮಾಂಡ್ ಕಂಟ್ರೋಲ್ ಸೆಂಟರ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬೆಂಬಲ, ಪ್ರೋತ್ಸಾಹದೊಂದಿಗೆ ಈ ಯೋಜನೆ ಜಾರಿಗೆ ಬಂದಿದೆ.

108 ಆಂಬುಲೆನ್ಸ್‌ ಸೇವೆ ನಿರ್ವಹಣೆಗೆ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ Read More »

ರಾಜ್ಯಸಭೆ ಚುನಾವಣೆ : ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಕಾಂಕ್ಷಿ

ಪಕ್ಷ ಜವಾಬ್ದಾರಿ ಕೊಟ್ಟರೆ ನಿರ್ವಹಿಸಲು ರೆಡಿ ಎಂದ ಸದಾನಂದ ಗೌಡ ಬೆಂಗಳೂರು: ರಾಜ್ಯಸಭೆಗೆ ನಾನು ಕೂಡ ಆಕಾಂಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ಈಗಾಗಲೇ ತಿಳಿಸಿದ್ದೇನೆ. ನಾನು ಈಗಾಗಲೇ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಆದರೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ರಾಜ್ಯಸಭೆಗೆ ಹೋಗುವ ಆಸೆ ಇದೆ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ

ರಾಜ್ಯಸಭೆ ಚುನಾವಣೆ : ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಕಾಂಕ್ಷಿ Read More »

ಮೂರಿನಕಟ್ಟೆ ಧ್ವಂಸ ವಿವಾದ : ಭಟ್ಕಳ ಬೂದಿ ಮುಚ್ಚಿದ ಕೆಂಡ

ನಿಷೇಧಾಜ್ಞೆ, ಪೊಲೀಸರ ಸರ್ಪಗಾವಲಿನ ಮಧ್ಯೆ ಜನಜೀವನ ಕಾರವಾರ: ಕೋಮು ಹಿಂಸಾಚಾರದ ಕರಾಳ ಇತಿಹಾಸ ಹೊಂದಿರುವ ಭಟ್ಕಳ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ. ಹಿಂದುಗಳ ಪವಿತ್ರ ಮೂರಿನಕಟ್ಟೆ ಧ್ವಂಸ ಮಾಡಿದ ಹಿನ್ನೆಲೆ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂದಂತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ಶಹರ ಹಾಗೂ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಮದ್ಯದಂಗಡಿಗಳನ್ನು ಬಂದ್ ಮಾಡಲುಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ. ಗಲಾಟೆ ತಣ್ಣಗಾಗದ ಕಾರಣ 3 ದಿನಗಳ ಕಾಲ ಅಂದರೆ ಮೇ

ಮೂರಿನಕಟ್ಟೆ ಧ್ವಂಸ ವಿವಾದ : ಭಟ್ಕಳ ಬೂದಿ ಮುಚ್ಚಿದ ಕೆಂಡ Read More »

ಧುರಂಧರ್‌ ನಟ ರಣವೀರ್‌ ಸಿಂಗ್‌ಗೆ ಬಾಲಿವುಡ್‌ನಿಂದ ನಿಷೇಧ

ಅವರ ಜೊತೆ ಕೆಲಸ ಮಾಡದಿರಲು ಸಿನಿಮಾದವರ ನಿರ್ಧಾರ ಮುಂಬೈ: ಧುರಂಧರ್‌ ಖ್ಯಾತಿಯ ಬಾಲಿವುಡ್‌ನ ಜನಪ್ರಿಯ ನಟ ರಣವೀರ್‌ ಸಿಂಗ್‌ಗೆ ಹಿಂದಿ ಚಿತ್ರರಂಗದಿಂದ ನಿಷೇಧ ಹೇರಲಾಗಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರನೆ ಹೊರನಡೆದಿರುವ ಹಿನ್ನೆಲೆಯಲ್ಲಿ ಸಿನಿಮಾ ನೌಕರರ ಒಕ್ಕೂಟವು ನಟನ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ. ಈ ಮೂಲಕ ಚಿತ್ರರಂಗದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಯಾರೂ ಸಹಕರಿಸದಂತೆ ಮತ್ತು ಕೆಲಸ ಮಾಡದಂತೆ ಸೂಚಿಸಿ ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ. ಕಳೆದ ವಾರ

ಧುರಂಧರ್‌ ನಟ ರಣವೀರ್‌ ಸಿಂಗ್‌ಗೆ ಬಾಲಿವುಡ್‌ನಿಂದ ನಿಷೇಧ Read More »

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಾಮೆಂಟ್: ದೂರು ದಾಖಲು

ಪುತ್ತೂರು: ಸಾಮಾಜಿಕ ಜಾಲತಾಣ ಇನ್ ಸ್ ಟೀ ಗ್ರಾಂ ‌ಗೆ ಅಪ್‌ಲೋಡ್ ಮಾಡಿದ ಫೋಟೋಗೆ ಮಾನ ಹಾನಿಕರ ಕಾಮೆಂಟ್ ಹಾಕಲಾಗಿದೆ ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಯ್ಯರು ಗ್ರಾಮದ ಮಾಡಾವು ಬಾಲ್ತಿಕುಮೇರು ನಿವಾಸಿ ಅನಿವಾಶ್ ಬಿ.ಡಿ. ಮತ್ತು ಮೇಘಾ ಸಿ.ಕೆ. ದಂಪತಿಯ ಫೋಟೋ ಅವರ ಮೇಘಾ ಸಿ.ಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ ಮಾನಹಾನಿಕರ ‌ಕಾಮೆಂಟ್ ಹಾಕಿರುವುದಾಗಿ ದೂರು ದಾಖಲಾಗಿರುವುದಾಗಿದೆ. ಈ ಫೋಟೋ ಕುರಿತು ‘ದೀಕ್ಷೀಶ್ 405’ ಎಂಬ

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಾಮೆಂಟ್: ದೂರು ದಾಖಲು Read More »

error: Content is protected !!
Scroll to Top