ಸುದ್ದಿ

ಇನ್‌ಸ್ಟಾಗ್ರಾಂನಲ್ಲಿ ಖಮೇನಿ ಹತ್ಯೆ ಕುರಿತು ಪೋಸ್ಟ್‌ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ

ಅಂಗಡಿಗೆ ನುಗ್ಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ತಂಡ ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್​ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ಕಾರಣಕ್ಕೆ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ಚಂದ್ರಶೇಖರ ಎಂಬವರ ಮೇಲೆ ಐದಾರು ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ. ಚಂದ್ರಶೇಖರ ಖರ್ಜೂರ ವ್ಯಾಪಾರಿಯಾಗಿದ್ದು, ವ್ಯಾಪಾರ ಮಾಡುತ್ತಿದ್ದ ವೇಳೆ ಏಕಾಏಕಿ‌ ಬಂದ […]

ಇನ್‌ಸ್ಟಾಗ್ರಾಂನಲ್ಲಿ ಖಮೇನಿ ಹತ್ಯೆ ಕುರಿತು ಪೋಸ್ಟ್‌ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ Read More »

ಪುತ್ತೂರು : ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಯುವಕ ಸಾವು

ಪುತ್ತೂರು: ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಯುವಕ ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಸಂಭವಿಸಿದೆ. ಕುಂಬ್ರ ಶಾಲೆಯ ಬಳಿಯ ನಿವಾಸಿ ಭುವನ್‌ (33) ಮೃತಪಟ್ಟಿರುವ ಯುವಕ. ನಿಂತಿಕಲ್ಲಿನ ಬಾರ್‌ ಒಂದರಲ್ಲಿ ಉದ್ಯೋಗಿಯಾಗಿರುವ ಭುವನ್‌ ಮಂಗಳವಾರ ಕೆಲಸಕ್ಕೆ ರಜೆ ಹಾಕಿದ್ದರು. ಕೆಯ್ಯೂರು ಕಡೆಗೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದಾಗ ಅವರ ಬೈಕ್‌ ಅಪಘಾತಕ್ಕೀಡಾಗಿದೆ. ಬೈಕ್‌ ವೇಗವಾಗಿ ಬಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಭುವನ್‌ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು

ಪುತ್ತೂರು : ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಯುವಕ ಸಾವು Read More »

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಸ್ಥಳೀಯ ಮೀನುಗಾರರ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಉಡುಪಿ ಸಮೀಪ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ. ಮಲ್ಪೆಯ ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರು ಮೀನುಗಾರ ಮುಖಂಡನಿಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಇರಿದ ಆರೋಪಿಗಳನ್ನು

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ Read More »

ತೈಲ ಸಾಗಿಸುವ 700ಕ್ಕೂ ಅಧಿಕ ಹಡಗುಗಳು ಹೊರ್ಮುಜ್‌ ಜಲಸಂಧಿಯಲ್ಲಿ ಬಾಕಿ

ಪೂರೈಕೆ ವ್ಯತ್ಯಯ ; ಜಗತ್ತಿನಲ್ಲಿ ತೈಲಕ್ಕೆ ಹಾಹಾಕಾರ ಸಾಧ್ಯತೆ ಟೆಹ್ರಾನ್‌: ಯುದ್ಧ ತೀವ್ರಗೊಂಡಿರುವಂತೆಯೇ ಜಗತ್ತಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ತೈಲ ಪೂರೈಕೆಯಾಗುವ ಹೊರ್ಮುಜ್‌ ಜಲಸಂಧಿಯನ್ನು ಪ್ರತಿತಂತ್ರದ ಭಾಗವಾಗಿ ಇರಾನ್ ಮುಚ್ಚಿದೆ. ಇರಾನ್‌ನ ಈ ಕ್ರಮದಿಂದ ಭಾರತ ಸೇರಿ ಹಲವು ದೇಶಗಳಿಗೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತಯವಾಗಿದ್ದು, ಪೆಟ್ರೋಲ್, ಡೀಸೆಲ್ ಕೊರತೆ ಹಾಗೂ ಎಲ್‌ಪಿಜಿ ಗ್ಯಾಸ್‌ಗೂ ಬರಗಾಲ ಎದುರಾಗುವ ಆತಂಕ ಉಂಟಾಗಿದೆ. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯಕ್ಕಂತೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ತೈಲ ಸಾಗಿಸುವ 700ಕ್ಕೂ ಅಧಿಕ ಹಡಗುಗಳು ಹೊರ್ಮುಜ್‌ ಜಲಸಂಧಿಯಲ್ಲಿ ಬಾಕಿ Read More »

ಲಂಚ ಸ್ವೀಕಾರ : ಎಎಸ್‌ಐ, ಪಿಎಸ್‌ಐ ಲೋಕಾಯುಕ್ತ ಬಲೆಗೆ

ಬಿ ರಿಪೋರ್ಟ್‌ ಸಲ್ಲಿಸಲು 1 ಲ.ರೂ. ಕೇಳಿದ್ದ ಪೊಲೀಸರು ಬೆಂಗಳೂರು: ಪ್ರಕರಣವೊಂದರ ಬಿ ರಿಪೋರ್ಟ್ ಸಲ್ಲಿಕೆಗೆ 70 ಸಾವಿರ ಲಂಚ ಪಡೆದ ಪ್ರಕರಣದಲ್ಲಿ ಎಎಸ್‌ಐ ಮತ್ತು ಪಿಎಸ್‌ಐಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶ್ ಅವರನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ಬಂಧಸಿ ವಿಚಾರಣೆ ಮುಂದುವರಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮೋಟಲೂರು ಗ್ರಾಮದ ರಘು ಎಂಬವರ ಬಳಿ ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆಗಾಗಿ 1

ಲಂಚ ಸ್ವೀಕಾರ : ಎಎಸ್‌ಐ, ಪಿಎಸ್‌ಐ ಲೋಕಾಯುಕ್ತ ಬಲೆಗೆ Read More »

ಇರಾನ್‌ನ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಆಯ್ಕೆ

ದೇವ ಪ್ರಭುತ್ವ ಪರಂಪರೆಯ ಮುಂದುವರಿಕೆಯಾಗಿ ಮೊಜ್ತಬಾ ಖಮೇನಿಗೆ ಪರಮಾಧಿಕಾರ ಟೆಹ್ರಾನ್‌: ಇಸ್ರೇಲ್‌-ಅಮೆರಿಕದ ಪ್ರತೀಕಾರದ ದಾಳಿಯ ನಡುವೆ ಇರಾನ್‌ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ತಜ್ಞರ ಸಭೆಯು ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಇರಾನ್‌ನ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 56 ವರ್ಷದ ಮೊಜ್ತಬಾ ಅವರನ್ನು ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ದೀರ್ಘಕಾಲದ ನಾಯಕನಾಗಿ ಮುಂದುವರಿಯಲು ಎದುರು ನೋಡುತ್ತಿದ್ದಾರೆ. ಇದಕ್ಕೂ

ಇರಾನ್‌ನ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಆಯ್ಕೆ Read More »

ಪುತ್ತೂರಿನಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ‌ಜೆಟ್ ವಿಮಾನ

ಪುತ್ತೂರು: ಭೂಮಿಯಿಂದ ಕೆಲವೇ ಮಟ್ಟಗಳ ದೂರದಲ್ಲಿ ಜೆಟ್ ವಿಮಾನವೊಂದು ಹಾರಾಟ ನಡೆಸಿದ್ದು, ಪುತ್ತೂರಿಗರಲ್ಲಿ ‌ಕೆಲಕಾಲ ಆಂತಕ ಸೃಷ್ಟಿಸಿದ ಘಟನೆ ನಡೆಯಿತು. ಮಂಗಳವಾರ ಮಧ್ಯಾಹ್ನ ಮಹಾಲಿಂಗೇಶ್ವರ ದೇಗುಲದ ಸಮೀಪದಲ್ಲಿ ಜೆಟ್ ವಿಮಾನ ಹಾರಾಟ ನಡೆಸಿದ್ದು, ಏನಿದು? ಯಾತಕ್ಕಾಗಿ ವಿಮಾನ ಹಾರಾಟ ನಡೆಸುತ್ತಿದೆ ಎಂಬ ಗೊಂದಲ ಕೆಲಕಾಲ ಸೃಷ್ಟಿಯಾಯಿತು. ಆ ಬಳಿಕ ಇದು ಭೂಮಿಯ ರಚನೆ, ಅಧ್ಯಯನಕ್ಕೆ ನಡೆದ ಜೆಟ್ ವಿಮಾನ ಸರ್ವೇ ಕಾರ್ಯ. ಭೂ ವಿಜ್ಞಾನಕ್ಕೆ ನಡೆದ ವೈಮಾನಿಕ ಸರ್ವೇ ಎಂದು ತಿಳಿದ ಬಳಿಕ ಜನರು ನಿರಾಳರಾದರು ಎಂದು

ಪುತ್ತೂರಿನಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ‌ಜೆಟ್ ವಿಮಾನ Read More »

ಪ್ರೇಮ ವೈಫಲ್ಯ: ಸೋಮೇಶ್ವರದ ಯುವಕ ಒಮಾನಿನಲ್ಲಿ ಆತ್ಮಹತ್ಯೆ

ಉಳ್ಳಾಲ: ಪ್ರೇಮ ವೈಫಲ್ಯದ ಕಾರಣಕ್ಕ. ಒಮಾನ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಸೋಮೇಶ್ವರದ ಯುವಕನೊಬ್ಬ ತನ್ನ ಕೊಠಡಿಯಲ್ಲೇ ‌ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ಪುನೀತ್ ಪೂಜಾರಿ(32) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಒಮಾನ್‌ನ ಲಿಫ್ಟ್ ಕಂಪನಿಯೊಂದರಲ್ಲಿ ಪುನೀತ್ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ಮತ್ತೆ ಒಮಾನ್‌ಗೆ ತೆರಳಿದ್ದರು. ಪುನೀತ್ ಉರ್ವಾ ಮೂಲದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಯುವತಿ ಪುನೀತ್ ಅವರ ಕರೆ, ಸಂದೇಶಗಳಿಗೆ ‌ಸ್ಪಂದನೆ ನೀಡುತ್ತಿರಲಿಲ್ಲ.

ಪ್ರೇಮ ವೈಫಲ್ಯ: ಸೋಮೇಶ್ವರದ ಯುವಕ ಒಮಾನಿನಲ್ಲಿ ಆತ್ಮಹತ್ಯೆ Read More »

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ

ತೆಹ್ರಾನ್: ಇರಾನ್ ಮತ್ತು ಅಮೆರಿಕಾ, ಇಸ್ರೇಲ್ ನಡುವಿನ ಜಟಾಪಟಿಯಲ್ಲಿ ಇರಾನಿನ ಪರಿಸ್ಥಿತಿ ಹದೆಗೆಟ್ಟಿದೆ. ಭದ್ರತಾ ಪರಿಸ್ಥಿತಿ ಬಿಗುವಾಗಿದೆ. ಯುದ್ಧದ ಭೀತಿಯ ಕಾರಣಕ್ಕಾಗಿ ಅಲ್ಲಿನ ಭಾರತೀಯರಿಗೆ ಸಂಬಂಧಿಸಿದ ಹಾಗೆ ಭಾರತೀಯ ರಾಯಭಾರ ಕಚೇರಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇರಾನಿನಲ್ಲಿರುವ ಎಲ್ಲಾ ಭಾರತೀಯರು ಅನಗತ್ಯ ಓಡಾಟ ತಪ್ಪಿಸಿ, ಆದಷ್ಟು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಸ್ಥಳೀಯ ಸುದ್ದಿಗಳು, ರಾಯಭಾರ ಕಚೇರಿಯ ಪ್ರಕಟಣೆಗಳನ್ನು ಗಮನಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಪ್ರತಿಭಟನೆ ನಡೆವ ಸ್ಥಳಗಳಿಂದ ದೂರವಿರುವಂತೆಯೂ ಎಚ್ಚರಿಕೆ

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ Read More »

ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಪತಿ

ಬೀದರ್: ಪತ್ನಿಗೆ ಅನೈತಿಕ ಸಂಬಂಧ ಇರುವ ಸಂದೇಹದಲ್ಲಿ ಗಂಡನೊಬ್ಬ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ‌ಹತ್ಯೆ ಮಾಡಿದ ಘಟನೆ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಶ್ವಿನಿ(28) ಎಂದು ಗುರುತಿಸಲಾಗಿದೆ. ಕಿಶನ್ ಎಂಬವನೇ ಆರೋಪಿ. ಕಿಶನ್ ಮಹಾರಾಷ್ಟ್ರದ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಶ್ವಿನಿ ಮೂವರು ಮಕ್ಕಳ ಜೊತೆಗೆ ಮನ್ನಳ್ಳಿಯಲ್ಲೇ ವಾಸವಿದ್ದಳು. ಕಿಶನ್ ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿ ಪ್ರತಿನಿತ್ಯ ಆಕೆಯ ಜೊತೆಗೆ ಜಗಳವಾಡುತ್ತಿದ್ದ. ಬೇರೊಬ್ಬ ವ್ಯಕ್ತಿಯ ಜೊತೆ ಆಕೆ

ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಪತಿ Read More »

error: Content is protected !!
Scroll to Top