ಸುದ್ದಿ

ನಿಯಂತ್ರಣಕ್ಕೆ ಸಿಗದ ಬೈಕ್: ಗುಂಡಿಗೆ ಬಿದ್ದು ಸವಾರ ಸಾವು

ಉಪ್ಪಿನಂಗಡಿ: ಬೈಕ್ ನಿಯಂತ್ರಣಕ್ಕೆ ಸಿಗದ ಪರಿಣಾಮ ಸವಾರನೊಬ್ಬ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಹಿರೇಬಂಡಾಡಿ ನಿವಾಸಿ ಲಿಖಿತ್ ಎಂಬವರೇ ‌ಮೃತ ದುರ್ದೈವಿ. ಲಿಖಿತ್ ಅವರು ಬೈಕ್‌ನ ನಿಯಂತ್ರಣ ಕಳೆದುಕೊಂಡು ಗುಂಡಿಗೆ ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿದೆ.

ನಿಯಂತ್ರಣಕ್ಕೆ ಸಿಗದ ಬೈಕ್: ಗುಂಡಿಗೆ ಬಿದ್ದು ಸವಾರ ಸಾವು Read More »

ವಿಚಾರಣಾಧೀನ ಖೈದಿ ಆಸ್ಪತ್ರೆಯ ಬಾತ್‌ರೂಮ್ ಗಾಜು ಒಡೆದು ಪರಾರಿ

ಬಳ್ಳಾರಿ: ವಿಚಾರಣಾಧೀನ ಖೈದಿಯೊಬ್ಬನನ್ನು ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಸ್ನಾನದ ಕೋಣೆಯ ಕಿಟಕಿಯ ಗಾಜು ಹುಡಿ ಮಾಡಿ ತಪ್ಪಿಸಿಕೊಂಡ ಘಟನೆ ನಡೆದಿದೆ. ಚಲನಚಿತ್ರಗಳಲ್ಲಿ ಬರುವಂತೆ ಆರೋಪಿ ಬಾತ್‌ರೂಮ್‌ಗೆ ಹೋಗುವುದಾಗಿ ‌ತಿಳಿಸಿದ್ದು, ಅಲ್ಲಿಗೆ ಹೋದ ಆತ ಬಾತ್‌ರೂಮ್‌ನ ಗಾಜು ಪುಡಿ ಮಾಡಿ ಅಲ್ಲಿಂದ ಪರಾರಿಯಾಗಿರುವುದಾಗಿದೆ. ಪರಾರಿಯಾದ ಆರೋಪಿಯನ್ನು ಹರಪ್ಪನಹಳ್ಳಿಯ ಅಣ್ಣಪ್ಪ ಎಂದು ಗುರುತಿಸಲಾಗಿದೆ. ಈತ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ. ಮರದಿಂದ ಬಿದ್ದ ಪರಿಣಾಮ ಈತನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆತನನ್ನು ವಿಮ್ಸ್‌ಗೆ

ವಿಚಾರಣಾಧೀನ ಖೈದಿ ಆಸ್ಪತ್ರೆಯ ಬಾತ್‌ರೂಮ್ ಗಾಜು ಒಡೆದು ಪರಾರಿ Read More »

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯ ಆರೋಗ್ಯದ ಹೊಸ ರಹಸ್ಯಗಳು ಬಹಿರಂಗ

ಸುಟ್ಟು ಹೋದ ಮುಖ, ಊನಗೊಂಡ ಕಾಲು- ಮಾತನಾಡಲು, ನಡೆದಾಡಲು ಆಗದ ಸ್ಥಿತಿಯಲ್ಲಿ ಖಮೇನಿ ಟೆಹ್ರಾನ್: ಇಸ್ರೇಲ್‌ನ ಕ್ಷಿಪಣಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಈಗಲೂ ಜೀವಂತವಾಗಿದ್ದಾರೆ. ಆದರೆ ಅವರು ನಡೆದಾಡುವ ಮತ್ತು ಮಾತನಾಡುವ ಸ್ಥಿತಯಲ್ಲಿಲ್ಲ. ಅವರ ಮುಖದ ಒಂದು ಭಾಗ ತುಟಿಯ ಸಮೇತ ಸುಟ್ಟು ಹೋಗಿದೆ. ಒಂದು ಕಾಲು ಊನಗೊಂಡಿದ್ದು ಅದಕ್ಕೆ ಈಗಾಗಲೇ ಮೂರು ಸರ್ಜರಿಗಳನ್ನು ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ಅವರು ಅಧಿಕಾರ ನಡೆಸುತ್ತಿರುವ ರೀತಿ ಮತ್ತು ಅವರ ಪ್ರಸ್ತುತ

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯ ಆರೋಗ್ಯದ ಹೊಸ ರಹಸ್ಯಗಳು ಬಹಿರಂಗ Read More »

ರೌಡಿಶೀಟರ್‌ ಆರಿಫ್‌ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಬಂಧನ

ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಆರಿಫ್‌ ಮಂಗಳೂರು: ತೊಕ್ಕೊಟ್ಟು ಫ್ಲೈ ಓವರ್‌ನಲ್ಲಿ ಇತ್ತೀಚೆಗೆ ನಡೆದ ರೌಡಿಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಸುಹೈಲ್ ಅಲಿಯಾಸ್ ಚಿಯಾ(24) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಆರಿಫ್ ಮೇಲೆ ನಡೆದ ಮೊದಲ ದಾಳಿಗೆ ಮುಹಮ್ಮದ್ ಸುಹೈಲ್ ಸಹಕಾರ ನೀಡಿದ್ದಾನೆ. ಪೊಲೀಸರು ವಿವರವಾದ ತನಿಖೆಯ ನಂತರ ಸುಹೈಲ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,

ರೌಡಿಶೀಟರ್‌ ಆರಿಫ್‌ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಬಂಧನ Read More »

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಮತದಾನ ದಾಖಲೆಗಳೆಲ್ಲ ಧೂಳೀಪಟ

ಸ್ವಾತಂತ್ರ್ಯ ನಂತರ ಇಷ್ಟು ಮತದಾನ ಇದೇ ಮೊದಲು ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮತದಾರರಿಗೆ ಧನ್ಯವಾದ ಹೇಳಿದೆ. ವಿಧಾನಸಭಾ ಚುನಾವಣೆಯ ಮತದಾನ ಗುರುವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಎರಡೂ ರಾಜ್ಯಗಳಲ್ಲಿ ದಾಖಲೆಯ ಮತದಾನ ನಡೆದಿದೆ. ಸಂಜೆ 6 ಗಂಟೆಯವರೆಗೆ ತಮಿಳುನಾಡಿನಲ್ಲಿ ಸುಮಾರು ಶೇ. 84.51 ರಷ್ಟು ಮತದಾನವಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇ.91.78ರಷ್ಟು ಮತದಾನವಾಗಿದೆ. ಸ್ವಾತಂತ್ರ್ಯದ ನಂತರ ಪಶ್ಚಿಮ ಬಂಗಾಳ ಮತ್ತು

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಮತದಾನ ದಾಖಲೆಗಳೆಲ್ಲ ಧೂಳೀಪಟ Read More »

ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಮೂರ್ತಿಯನ್ನು ಭಗ್ನಗೊಳಿಸಿದ ಯುವಕ

ಬೆಳ್ತಂಗಡಿ: ಬೆಳ್ತಂಗ ತಾಲೂಕಿನ ಪ್ರಸಿದ್ಧ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ಎಸಗಿ ದೈವದ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಅಜೇಯ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ತಡರಾತ್ರಿ ಸುಬ್ರಹ್ಮಣ್ಯ ಭಟ್‌ ಎಂಬವರ ಮನೆಗೆ ಥಾರ್‌ ಕಾರಿನಲ್ಲಿ ಬಂದ ಅಜೇಯ್‌ ಎನನ್‌ ಬಚಾವು ಮಲ್ಪಿ ಎಂದು ತುಳುವಿನಲ್ಲಿ

ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಮೂರ್ತಿಯನ್ನು ಭಗ್ನಗೊಳಿಸಿದ ಯುವಕ Read More »

ಹದಗೆಟ್ಟ ಸಚಿವ ಡಿ.ಸುಧಾಕರ್‌ ಆರೋಗ್ಯ : ಐಸಿಯುನಲ್ಲಿ ಚಿಕಿತ್ಸೆ

ಶಸ್ತ್ರಚಿಕಿತ್ಸೆ ಬಳಿಕ ಶ್ವಾಸಕೋಶದ ಸೋಂಕಿಗೊಳಗಾಗಿರುವ ಸಚಿವ ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಹದಗೆಟ್ಟಿದ್ದು, ಇಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಸಚಿವ ಸುಧಾಕರ್ ಅವರು ಸಾಮಾನ್ಯ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಯಶಸ್ವಿಯಾದ ನಂತರದ ದಿನಗಳಲ್ಲಿ ಅವರಿಗೆ ಹಠಾತ್ತನೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತು. ಮಣಿಪಾಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲಾಯಿತಾದರೂ, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ.

ಹದಗೆಟ್ಟ ಸಚಿವ ಡಿ.ಸುಧಾಕರ್‌ ಆರೋಗ್ಯ : ಐಸಿಯುನಲ್ಲಿ ಚಿಕಿತ್ಸೆ Read More »

ಬೋಳಾರ ಬೇಸಿಗೆ ಶಿಬಿರದಲ್ಲಿ ಮಹಾಭಾರತ ರಸಪ್ರಶ್ನೆ

ಮಂಗಳೂರು: ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ, ಮಂಗಳೂರು ಮತ್ತು ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ರಿ. ಆಶ್ರಯದಲ್ಲಿ ದೇವಳದ ಪಠಾರದಲ್ಲಿ ಜರಗುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಮಹಾಭಾರತ ವಿಷಯಧಾರಿತ ಲಿಖಿತ ರಸಪ್ರಶ್ನೆ ನಡೆಸಲಾಯಿತು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ ಈ ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ನಡೆಸಿಕೊಟ್ಟರು. ಟ್ರಸ್ಟ್ ಸದಸ್ಯ ಶ್ರೀಧರ ಎಸ್. ಪಿ. ಕೃಷ್ಣಾಪುರ, ಶಿಬಿರದ ಸಂಯೋಜಕ

ಬೋಳಾರ ಬೇಸಿಗೆ ಶಿಬಿರದಲ್ಲಿ ಮಹಾಭಾರತ ರಸಪ್ರಶ್ನೆ Read More »

ಬಿಸಿಲು ಹೆಚ್ಚಳ: ಕರಾವಳಿಯ ಜಿಲ್ಲೆಗಳಿಗೆ ಐದು ದಿನ ಎಲ್ಲೋ ಅಲರ್ಟ್

ಮಂಗಳೂರು: ಬಿಸಿಲ ಬೇಗೆಗೆ ರಾಜ್ಯದ ಕರಾವಳಿ ಭಾಗ ಈಗಾಗಲೇ ಕಂಗೆಟ್ಟಿದೆ. ಮುಂದಿನ ಐದು ದಿನಗ‌ಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಲಿದ್ದು, ತೇವಾಂಶಭರಿತ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿಯ ಮೂರೂ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆಯೂ ಸೂಚಿಸಲಾಗಿದೆ.

ಬಿಸಿಲು ಹೆಚ್ಚಳ: ಕರಾವಳಿಯ ಜಿಲ್ಲೆಗಳಿಗೆ ಐದು ದಿನ ಎಲ್ಲೋ ಅಲರ್ಟ್ Read More »

ತಾಯಿಗೆ ಬೈಕ್‌ನಿಂದ ಗುದ್ದಿದ ಪಾಪಿ ಮಗ: ದೂರು ದಾಖಲು

ಕಡಬ: ಮಗನೇ ತಾಯಿಗೆ ಬೈಕ್ ಢಿಕ್ಕಿ ಹೊಡೆಸಿ ಗಾಯಗೊಳಿಸಿದ್ದು, ಆರೋಪಿ ಮಗ ದಯಾನಂದನ ‌ವಿರುದ್ಧ ಕಡಬ ‌ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ಮಹಿಳೆಯನ್ನು ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿ ಪುಷ್ಪಾವತಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಪುಷ್ಪಾವತಿ ಅವರ ಪುತ್ರಿ ಬಂಟ್ವಾಳದ ಇರ್ವತ್ತೂರು ನಿವಾಸಿ ಚೇತನಾ ಬಿ. ಅವರು ಪೊಲೀಸರಿಗೆ ದೂರು ನೀಡಿರುವುದಾಗಿದೆ. ದೂರಿನಲ್ಲಿ ಎ. 4 ರಂದು ದಯಾನಂದ್ ಅವರು ತಮ್ಮ ತಾಯಿ ಪುಷ್ಪಾವತಿ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜ್ಜಿ ಮನೆಗೆ ಹೋಗುವುದಾಗಿ ಕರೆದುಕೊಂಡು

ತಾಯಿಗೆ ಬೈಕ್‌ನಿಂದ ಗುದ್ದಿದ ಪಾಪಿ ಮಗ: ದೂರು ದಾಖಲು Read More »

error: Content is protected !!
Scroll to Top