ಸುದ್ದಿ

ಪತಿಯನ್ನು ‌ಚಾಕು ಇರಿದು ಕೊಂದ ಪತ್ನಿ

ಬೆಂಗಳೂರು: ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ‌ಕೊಲೆಗೈದ ಘಟನೆ ಅನ್ನಪೂರ್ಣೇಶ್ವರಿ ನಗರದ ಮಲ್ಲತಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತೌಹಿಬ್ ಪಾಷ ಎಂದು ಗುರುತಿಸಲಾಗಿದೆ. ತೌಹಿಬ್ ಪತ್ನಿ ಸೋಹಾನಾ ಕೊಲೆಗೈದ ಆರೋಪಿ. ಕೌಟುಂಬಿಕ ಕಲಹದ ಕಾರಣಕ್ಕೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪತ್ನಿ, ಆಕೆಯ ತಂದೆ ಮತ್ತು ತಾಯಿ ಸೇರಿ ಈ ಹತ್ಯೆ ಮಾಡಿದ್ದಾರೆ ಎಂದು ಕೊಲೆಯಾದ ತೌಹಿಬ್‌ನ ಮನೆಯವರು ಆರೋಪಿಸಿದ್ದಾರೆ. ಆರೋಪಿ ಸೋಹಾನಾ ಮತ್ತು ಆಕೆಯ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಪತಿಯನ್ನು ‌ಚಾಕು ಇರಿದು ಕೊಂದ ಪತ್ನಿ Read More »

ಪೊನ್ನಂಪೇಟೆಯ ಶ್ರೀಮಂಗಲದಲ್ಲಿ ಕಾಡಾನೆ ಅಟ್ಟಹಾಸಕ್ಕೆ ಬಲಿಯಾದ ಕಾಫಿ ಬೆಳೆಗಾರ

ಮಡಿಕೇರಿ: ಪೊನ್ನಂಪೇಟೆಯ ಶ್ರೀಮಂಗಲ ಹೋಬಳಿಯಲ್ಲಿ ಕಾಡಾನೆಯೊಂದು ನಡೆಸಿದ ದಾಂಧಲೆಗೆ ಕೃಷಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕಾಯಿಮಾನಿ ‌ನಿವಾಸಿ ಮೂಕಳಮಾಡ ರತ್ತು ಎಂದು ಗುರುತಿಸಲಾಗಿದೆ. ಅವರು ಇಂದು ಮುಂಜಾನೆ ಎಂದಿನಂತೆ ತಮ್ಮ ಕಾಫಿ ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದು, ಈ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿರುವುದಾಗಿದೆ. ಅವರ ಮೃತದೇಹವನ್ನು ‌ಮರಣೋತ್ತರ ಪರೀಕ್ಷಾ ಹಿನ್ನೆಲೆ ಕುಟ್ಟದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು ಎಂಟರಿಂದ ಹತ್ತು ಕಾಡಾನೆಗಳು ಬೀಡು ಬಿಟ್ಟಿದ್ದು, ಇದು ಸ್ಥಳೀಯರಲ್ಲಿ ಆತಂಕ

ಪೊನ್ನಂಪೇಟೆಯ ಶ್ರೀಮಂಗಲದಲ್ಲಿ ಕಾಡಾನೆ ಅಟ್ಟಹಾಸಕ್ಕೆ ಬಲಿಯಾದ ಕಾಫಿ ಬೆಳೆಗಾರ Read More »

ಕದನ ವಿರಾಮ ಬೆನ್ನಿಗೆ ಚಿನ್ನದ ಬೆಲೆ ಏರಿಕೆ

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಕದನ ವಿರಾಮ ಬೆಂಗಳೂರು: ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿದೆ. ತೈಲ ಬೆಲೆಗಳು ಇಳಿಕೆಯಾಗಿದ್ದು, ಲೋಹಗಳ ಮೇಲಿನ ಹೂಡಿಕೆ ಹೆಚ್ಚಳವಾದ ಹಿನ್ನೆಲೆ ಭಾರಿ ಬೇಡಿಕೆ ಸೃಷ್ಟಿಯಾಗಿ, ಚಿನ್ನ ಬೆಳ್ಳಿ ದರಗಳು ಭಾರಿ ಏರಿಕೆ ಕಂಡಿವೆ. ಯುದ್ಧದ ಸಂದರ್ಭದಲ್ಲಿ ಚಿನ್ನದ ಬೆಲೆ ತುಸು ಇಳಿಕೆ ಕಂಡಿತ್ತು. ಏಪ್ರಿಲ್ 8ರಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3,980 ರೂ ಏರಿಕೆ ಆಗಿ 1,53,820 ರೂಪಾಯಿ ಬೆಲೆ ದಾಖಲಾಗಿದೆ.

ಕದನ ವಿರಾಮ ಬೆನ್ನಿಗೆ ಚಿನ್ನದ ಬೆಲೆ ಏರಿಕೆ Read More »

ಚಂದ್ರದ್ರೋಣ ಪರ್ವತಕ್ಕೆ ಟ್ರೆಕ್ಕಿಂಗ್‌ಗೆ ಬಂದ ಕೇರಳದ ಬಾಲಕಿ ನಾಪತ್ತೆ

40 ಮಂದಿಯ ತಂಡದೊಂದಿಗಿದ್ದ ಬಾಲಕಿ ನಿಗೂಢವಾಗಿ ಕಣ್ಮರೆ ಚಿಕ್ಕಮಗಳೂರು: ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ಶ್ರೀನಂದಾ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ ಕಾಣೆಯಾಗಿದ್ದಾಳೆ. ಕೇರಳದ ಪಾಲಕ್ಕಾಡ್ ಮೂಲದ 14 ವರ್ಷದ ಈ ಬಾಲಕಿ ಪೋಷಕರು ಸೇರಿದಂತೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ

ಚಂದ್ರದ್ರೋಣ ಪರ್ವತಕ್ಕೆ ಟ್ರೆಕ್ಕಿಂಗ್‌ಗೆ ಬಂದ ಕೇರಳದ ಬಾಲಕಿ ನಾಪತ್ತೆ Read More »

ಕದನ ವಿರಾಮ ಎಫೆಕ್ಟ್‌ : ಕಚ್ಚಾತೈಲ ಬೆಲೆ ದಾಖಲೆ ಕುಸಿತ

ಇಂಧನ ಬೆಲೆ ಕಡಿಮೆಯಾಗುವ ನಿರೀಕ್ಷೆ ಲಂಡನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಭಾರಿ ಕುಸಿತವಾಗಿದೆ. ಕದನ ವಿರಾಮದ ಸುದ್ದಿಯಿಂದಾಗಿ ಕಚ್ಚಾತೈಲದ ಬೆಲೆಗಳು ಒಂದೇ ದಿನದಲ್ಲಿ ಸುಮಾರು 13%ರಿಂದ 17% ರಷ್ಟು ಕುಸಿದಿವೆ. ಇದು ಕಳೆದ ಆರು ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ದೊಡ್ಡ ಕುಸಿತ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾತೈಲದ ಬೆಲೆ ಸುಮಾರು 16.13 ಡಾಲರ್ (14.3%)

ಕದನ ವಿರಾಮ ಎಫೆಕ್ಟ್‌ : ಕಚ್ಚಾತೈಲ ಬೆಲೆ ದಾಖಲೆ ಕುಸಿತ Read More »

ಸಹಾಯಕ ಔಷಧ ನಿಯಂತ್ರಕನ ಬಳಿ 3.37 ಕೋಟಿ ರೂ. ಅಕ್ರಮ ಸಂಪತ್ತು

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಯಿತು ಅಪಾರ ಪ್ರಮಾಣದ ಆಸ್ತಿ ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಮಂಗಳೂರಿನ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್‌ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ಪೊಲೀಸ್‌ ನಿರೀಕ್ಷಕ ಚಂದ್ರಶೇಖರ್‌ ಕೆ.ಎನ್‌ ನೀಡಿದ ಸೋರ್ಸ್‌ ವರದಿ ಆಧರಿಸಿ ಏಪ್ರಿಲ್‌ 8ರಂದು ಮಂಗೂರು ಲೋಕಾಯುಕ್ತ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಲೋಕಾಯುಕ್ತ ಎಸ್ಪಿ ಬಿ.ಪಿ ದಿನೇಶ್‌ ಕುಮಾರ್‌ ಮಾರ್ಗದರ್ಶದಲ್ಲಿ ಡಿವೈಎಸ್ಪಿಗಳಾದ ಡಾ.ಗಾನ ಪಿ.ಕುಮಾರ್‌, ಸುರೇಶ್‌ ಕುಮಾರ್‌ ಮತ್ತು ತಂಡದ 9

ಸಹಾಯಕ ಔಷಧ ನಿಯಂತ್ರಕನ ಬಳಿ 3.37 ಕೋಟಿ ರೂ. ಅಕ್ರಮ ಸಂಪತ್ತು Read More »

ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರನ್ನು ಸಾಯಿಸಲು ಮುಸ್ಲಿಮರಿಗೆ ಕರೆ : ಖರ್ಗೆ ವಿರುದ್ಧ ದೂರು ದಾಖಲು

ಅಸ್ಸಾಂ ಚುನಾವಣೆ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಖರ್ಗೆ ದಿಸ್ಪುರ್: ಅಸ್ಸಾಂನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುವಂತೆ ಮುಸ್ಲಿಮರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ರಾಜ್ಯ ಬಿಜೆಪಿ ಶಾಸಕರಾದ ಮುನಿರಾಜು, ಸಿ.ಕೆ ರಾಮಮೂರ್ತಿ ನಿಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಅವರಿಗೆ ದೂರು ಕೊಟ್ಟಿದ್ದಾರೆ. ಹತ್ಯೆಗೆ ಪ್ರಚೋದನಾಕಾರಿ ಭಾಷಣ ಮಾಡಿರುವ ಖರ್ಗೆ ಅವರನ್ನು ಕೂಡಲೇ ಬಂಧಿಸುವಂತೆ ಬಿಜೆಪಿಗರು ಒತ್ತಾಯಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ

ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರನ್ನು ಸಾಯಿಸಲು ಮುಸ್ಲಿಮರಿಗೆ ಕರೆ : ಖರ್ಗೆ ವಿರುದ್ಧ ದೂರು ದಾಖಲು Read More »

ಶಬರಿಮಲೆ ವಿವಾದ : 9 ನ್ಯಾಯಾಧೀಶರ ಸಂವಿಧಾನದ ಪೀಠದಲ್ಲಿ ವಿಚಾರಣೆ ಆರಂಭ

ಮಹಿಳೆಯರಿಗೆ ದೇವಳ ಪ್ರವೇಶ ನೀಡುವ ವಿಚಾರವಾಗಿ ವಾದ-ಪ್ರತಿವಾದ ಮಂಡನೆ ನವದೆಹಲಿ: ಕೇರಳಂನ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಿದ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆಯಲ್ಲಿ ಪೀಠವು 7 ಪ್ರಶ್ನೆಗಳನ್ನು ಎತ್ತಿದೆ. ಪ್ರಕರಣದಲ್ಲಿ ವಾದ ಮಂಡಿಸುವ ವಕೀಲರು ನಿಗದಿತ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನೂ ಅನೇಕ ಸೂಕ್ಷ್ಮ ಪ್ರಕರಣಗಳು ಬಾಕಿ ಉಳಿದಿವೆ. ಆದ್ದರಿಂದ ಹೆಚ್ಚುವರಿ ಸಮಯ ನೀಡಲಾಗುವುದಿಲ್ಲ.

ಶಬರಿಮಲೆ ವಿವಾದ : 9 ನ್ಯಾಯಾಧೀಶರ ಸಂವಿಧಾನದ ಪೀಠದಲ್ಲಿ ವಿಚಾರಣೆ ಆರಂಭ Read More »

ಇರಾನ್‌-ಅಮೆರಿಕ ತಾತ್ಕಾಲಿಕ ಕದನ ವಿರಾಮ

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಇರಾನ್‌ಗೆ ನೀಡಿದ್ದ 48 ಗಂಟೆಗಳ ಡೆಡ್‌ಲೈನ್‌ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್‌ ತಮ್ಮ ಟ್ರೂಥ್‌ ಸೋಷಿಯಲ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಯುದ್ಧದ ಕಿಚ್ಚು ಸದ್ಯಕ್ಕೆ ತಣ್ಣಗಾಗಿದ್ದು, ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು

ಇರಾನ್‌-ಅಮೆರಿಕ ತಾತ್ಕಾಲಿಕ ಕದನ ವಿರಾಮ Read More »

ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಪುತ್ತೂರು: ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಎಲೈಟ್ ಅಸೋಸಿಯೇಷನ್ ಹಾಗೂ ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ( ಬೇಸ್), ಮಂಗಳೂರು ಜಂಟಿಯಾಗಿ ಆರಂಭಿಸಿದ ತ್ರೀಡಿಎಸ್ ಮ್ಯಾಕ್ಸ್ ಮತ್ತು ತ್ರೀಡಿ ರೆಂಡರಿಂಗ್ ಎಂಬ ವಿಷಯದಲ್ಲಿ ನಡೆದ ಕಾರ‍್ಯಗಾರದ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಬೇಸ್ ನ ಸ್ಥಾಪಕ ನವೀನ್ ಗುರುರಾಜ್ ಶಿಕ್ಷಣದ ಜೊತೆಗೆ ಸ್ವಯಂ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿ ಸಲಹೆ ನೀಡಿ ವಿದ್ಯರ‍್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ

ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ Read More »

error: Content is protected !!
Scroll to Top