ಸುದ್ದಿ

ಸೋಮವಾರದಿಂದ ಹೊಸ ಅಬಕಾರಿ ನೀತಿ ಜಾರಿ

ಹೆಚ್ಚು ಕಿಕ್‌ ಕೊಡುವ ಕಡಿಮೆ ಬೆಲೆಯ ಮದ್ಯದ ಬೆಲೆ ಏರಿಕೆ ಬೆಂಗಳೂರು: ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದು, “ಆಲ್ಕೋಹಾಲ್ ಇನ್ ಬೇವರೇಜ್” (ಎಐಬಿ) ಆಧಾರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹೊಸ ನೀತಿ ಮೇ 11ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ “ಬಲ್ಕ್ ಲೀಟರ್” ಆಧಾರಿತ ತೆರಿಗೆ ವ್ಯವಸ್ಥೆಗೆ ತೆರೆ ಬೀಳಲಿದೆ. ಕರ್ನಾಟಕ ದೇಶದಲ್ಲೇ ಮೊದಲ […]

ಸೋಮವಾರದಿಂದ ಹೊಸ ಅಬಕಾರಿ ನೀತಿ ಜಾರಿ Read More »

ಲೆ| ಜ| ಎನ್‌.ಎಸ್‌.ಸುಬ್ರಮಣಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ

ನವದೆಹಲಿ: ಭಾರತದ ರಕ್ಷಣಾ ಪಡೆಗಳ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್ ರಾಜಾ ಸುಬ್ರಮಣಿ (ನಿವೃತ್ತ) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದರೊಂದಿಗೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನ ನೇಮಕ ಮಾಡಿದೆ. ಮೇ 30ರಂದು ಸಿಡಿಎಸ್‌ ಆಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಜನರಲ್‌ ಅನಿಲ್‌ ಚೌಹಾಣ್‌ ಅವರ ಸ್ಥಾನವನ್ನು ರಾಜಾ ಸುಬ್ರಮಣಿ ವಹಿಸಿಕೊಳ್ಳಲಿದ್ದಾರೆ. ಲೆಫ್ಟಿನೆಂಟ್ ಜನರಲ್ ಸುಬ್ರಮಣಿ ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಸೇವೆ

ಲೆ| ಜ| ಎನ್‌.ಎಸ್‌.ಸುಬ್ರಮಣಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ Read More »

ತಮಿಳುನಾಡಲ್ಲಿ ಬಹುಮತದ ಕಣ್ಣಾಮುಚ್ಚಾಲೆ : ರಾತ್ರಿಯಿಡೀ ಬಿರುಸಿನ ರಾಜಕೀಯ ಚಟುವಟಿಕೆ

ಸರಳ ಬಹುಮತದ ಸ್ಥಾನಗಳನ್ನು ಒಗ್ಗೂಡಿಸುವಲ್ಲಿ ವಿಜಯ್‌ ವಿಫಲ ಚೆನ್ನೈ: ತಮಿಳುನಾಡಿನಲ್ಲಿ ಬಹುಮತದ ಕಣ್ಣಾಮುಚ್ಚಾಲೆ ಮುಂದುವರಿದಿದ್ದು, ತಡರಾತ್ರಿ ಸಂಭವಿಸಿದ ಬೆಳವಣಿಗೆಯಿಂದಾಗಿ ವಿಜಯ್‌ ನೇತೃತ್ವದ ಟಿವಿಕೆ ಇಂದು ಅಧಿಕಾರ ಗ್ರಹಣ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಬಹುಮತದ ಕೊರತೆ ಎದುರಿಸುತ್ತಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಇಂದು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ನಿನ್ನೆ ಹೇಳಲಾಗಿತ್ತು. ಆದರೆ ಇಷ್ಟರ ತನಕ ರಾಜ್ಯಪಾಲರು ಅವರಿಗೆ ಆಹ್ವಾನ ನೀಡಿಲ್ಲ. ಈ ನಡುವೆ ನಿನ್ನೆ ರಾತ್ರಿಯಿಡೀ ತಮಿಳುನಾಡು ರಾಜಕೀಯದಲ್ಲಿ ನಾನಾ ರೀತಿಯ ಬೆಳವಣೆಗೆಗಳು ನಡೆದಿವೆ. ದಳಪತಿ

ತಮಿಳುನಾಡಲ್ಲಿ ಬಹುಮತದ ಕಣ್ಣಾಮುಚ್ಚಾಲೆ : ರಾತ್ರಿಯಿಡೀ ಬಿರುಸಿನ ರಾಜಕೀಯ ಚಟುವಟಿಕೆ Read More »

ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ : ಓರ್ವ ಸಾವು, ನಾಲ್ವರಿಗೆ ಗಂಭೀರ ಸುಟ್ಟ ಗಾಯ

ತಡರಾತ್ರಿ ಶಾರ್ಟ್‌ ಸರ್ಕ್ಯೂಟ್‌ನಿಂದ ಹತ್ತಿಕೊಂಡ ಬೆಂಕಿ ಬೆಂಗಳೂರು: ನಾಗರಬಾವಿಯ ರಿಂಗ್ ರೋಡ್ ಬಳಿಯ ಸರ್ವೀಸ್ ರೋಡ್‌ನಲ್ಲಿರುವ ಹೋಟೆಲ್‌ಗೆ ಬೆಂಕಿ ತಗುಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಮೃತ ಸಿಬ್ಬಂದಿಯನ್ನು ರಾಜ್‌ಕುಮಾರ್ ಎಂದು ಗುರುತಿಸಲಾಗಿದ್ದು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ತಡರಾತ್ರಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‌ನಲ್ಲಿ ಕೆಲಸ ಮಾಡುವ ಎಂಟು ಜನ ಸಿಬ್ಬಂದಿ ಅದೇ ಹೋಟೆಲ್‌ನ ಮೇಲಿನ ಫ್ಲೋರ್‌ನಲ್ಲಿ ವಾಸವಿದ್ದರು. ಬೆಂಕಿಯ ಕೆನ್ನಾಲಿಗೆ ಮೇಲಿನ ಮಹಡಿಗೂ ಹಬ್ಬಿದ್ದು, ತಕ್ಷಣ ಅಲ್ಲಿದ್ದ

ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ : ಓರ್ವ ಸಾವು, ನಾಲ್ವರಿಗೆ ಗಂಭೀರ ಸುಟ್ಟ ಗಾಯ Read More »

ಪ್ರಾಣಕ್ಕೆ ಎರವಾದ ರಜೆಯ ಮೋಜು : ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಯನಿಯರ ಸಾವು

ಮಂಗಳೂರು: ರಜೆಯ ಮೋಜು ಇಬ್ಬರು ವಿದ್ಯಾರ್ಥಿನಿಯರ ಪ್ರಾಣಕ್ಕೆ ಎರವಾದ ಘಟನೆ ಕಡಬದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಡಬದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಕುಟ್ರುಪ್ಪಾಡಿ ನಿವಾಸಿಗಳಾದ ಸುನೀತಾ (21), ಅರ್ಪಿತಾ (15) ಎಂಬ ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ನಾಲ್ವರು ವಿದ್ಯಾರ್ಥಿನಿಯರು ಶಾಲೆ-ಕಾಲೇಜಿಗೆ ರಜೆ ಇರುವ ಕಾರಣ ಸಂಜೆ ಹೊತ್ತು ಈಜಾಡಲು ನದಿಗಿಳಿದಿದ್ದರು. ಈ ಪೈಕಿ ಸುನೀತಾ

ಪ್ರಾಣಕ್ಕೆ ಎರವಾದ ರಜೆಯ ಮೋಜು : ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಯನಿಯರ ಸಾವು Read More »

ಶೃಂಗೇರಿ : ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಟಿ.ಡಿ ರಾಜೇಗೌಡ

ಮುಗಿಯದ ಅಂಚೆ ಮತಗಳ ಮರು ಎಣಿಕೆ ತಕರಾರು ಚಿಕ್ಕಮಗಳೂರು : ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ವಿವಾದಕ್ಕೆ ಸಂಬಂಧಿಸಿದಂತೆ ಮರು ಎಣಿಕೆಯಲ್ಲಿ ಸೋತ ಕಾಂಗ್ರೆಸ್‌ನ ಟಿ.ಡಿ ರಾಜೇಗೌಡ ಸುಪ್ರೀಂ ಕೋರ್ಟ್​ ಮೆಟ್ಟಿಕೇರಿದ್ದಾರೆ. 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಗೆಲುವು ಸಾಧಿಸಿದ್ದರು. ಆದರೆ ಅಂಚೆ ಮತಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಜೀವರಾಜ್ ಕಾನೂನು ಹೋರಾಟ ಮಾಡಿದ್ದು, ಅಂತಿಮವಾಗಿ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ವೇಳೆ ಜೀವರಾಜ್ ಗೆಲುವು ಸಾಧಿಸಿದ್ದಾರೆ.

ಶೃಂಗೇರಿ : ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಟಿ.ಡಿ ರಾಜೇಗೌಡ Read More »

ಇಂದಿನಿಂದ ತಮಿಳುನಾಡಿನಲ್ಲಿ ವಿಜಯಪಥ

ಕೊನೆಗೂ ಬಹುಮತ ಒಗ್ಗೂಡಿಸುಲ್ಲಿ ಯಶಸ್ವಿಯಾದ ವಿಜಯ್‌ ಚೆನ್ನೈ : ತಮಿಳುನಾಡಿನಲ್ಲಿ ಇಂದಿನಿಂದ ವಿಜಯ್ ದರ್ಬಾರ್ ಆರಂಭವಾಗಲಿದೆ. ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಬಹುಮತ ಸಾಬೀತುಪಡಿಸಲು ಯಶಸ್ವಿಯಾಗಿದ್ದಾರೆ. ಶುಕ್ರವಾರ ಸಂಜೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಅಗತ್ಯವಿರುವ ಬಹುಮತವನ್ನು ವಿಜಯ್ ಸಾಬೀತುಪಡಿಸಿದ್ದರಿಂದ ರಾಜ್ಯಪಾಲರು ಸರ್ಕಾರ ರಚನೆಗೆ ಒಪ್ಪಿಗೆ ನೀಡಿದ್ದಾರೆ. ಶನಿವಾರ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರು ಜೋಸೆಫ್ ವಿಜಯ್ ಅವರಿಗೆ

ಇಂದಿನಿಂದ ತಮಿಳುನಾಡಿನಲ್ಲಿ ವಿಜಯಪಥ Read More »

ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ‌ ನಡೆಸಿದ ಕಾರು ಚಾಲಕ

ಮಂಗಳೂರು: ಸರ್ಕಾರಿ ಬಸ್ ಚಾಲಕರೊಬ್ಬರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಬಸ್ಸು ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿತ್ತು. ಈ ವೇಳೆ ಸೈಡ್ ನೀಡುವ ವಿಚಾರಕ್ಕೆ ಸಂಬಂಧಿಸಿದ ಹಾಗೆ ವಳಚ್ಚಿಲ್ ಜಂಕ್ಷನ್‌ನಲ್ಲಿ ಕಾರು ಚಾಲಕ, ಬಸ್ ಚಾಲಕ ಪಿ. ಜಯರಾಮ್ ಅವರಿಗೆ ನಿಂದಿಸಿ, ಹಲ್ಲೆ ಮಾಡಿರುವುದಾಗಿದೆ.

ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ‌ ನಡೆಸಿದ ಕಾರು ಚಾಲಕ Read More »

ಅಕ್ರಮ ಮರಳು ದಾಸ್ತಾನು ಪತ್ತೆ: ಪ್ರಕರಣ ದಾಖಲು

ಉಪ್ಪಿನಂಗಡಿ: ಬೆಳ್ತಂಗಡಿಯ ‌ಕರಾಯ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಉಪ್ಪಿನಂಗಡಿ ‌ಪೊಲೀಸರು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಸೇನ್ ಎಂಬವರಿಗೆ ‌ಸೇರಿದ ಜಾಗದಲ್ಲಿ ಮರಳು ಅಕ್ರಮ ದಾಸ್ತಾನು ಇರಿಸಲಾಗಿತ್ತು. ಉಪ್ಪಿನಂಗಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕುಪ್ಪೆಟ್ಟಿ ಹೊಳೆಯಿಂದ ಅಕ್ರಮವಾಗಿ ಸುಮಾರು ಎರಡು ಟನ್‌ಗಳಷ್ಟು ಮರಳು ಸಂಗ್ರಹಿಸಿ ಇಡಲಾಗಿತ್ತು. ಮರಳನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಕ್ರಮ ಮರಳು ದಾಸ್ತಾನು ಪತ್ತೆ: ಪ್ರಕರಣ ದಾಖಲು Read More »

ಮಾನಸಿಕ ಸಮಸ್ಯೆ: ಆತ್ಮಹತ್ಯೆಗೆ ಶರಣಾದ ಮಹಿಳೆ

ವಿಟ್ಲ: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕುಳ ಗ್ರಾಮದ ಕಂಪ ಶ್ರೀಧರ ಗೌಡ ಎಂಬವರ ಪತ್ನಿ ರಾಧಾ ಅಲಿಯಾಸ್ ಲತಾ (40) ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತರ ಸಹೋದರ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಲತಾ ಮತ್ತು ಶ್ರೀಧರ ಗೌಡ ಅವರಿಗೆ 13 ವರ್ಷಗಳ ಹಿಂದೆ ವಿವಾಹವಾಗಿ,‌ ಇಬ್ಬರು ಮಕ್ಕಳಿದ್ದಾರೆ. ಕಳೆದ ಸುಮಾರು 10 ವರ್ಷಗಳಿಂದ ಲತಾ‌ಗೆ ಮಾನಸಿಕ ಸಮಸ್ಯೆ ಇದ್ದು ಸೂಕ್ತ ಚಿಕಿತ್ಸೆ

ಮಾನಸಿಕ ಸಮಸ್ಯೆ: ಆತ್ಮಹತ್ಯೆಗೆ ಶರಣಾದ ಮಹಿಳೆ Read More »

error: Content is protected !!
Scroll to Top