ಸುದ್ದಿ

ಪೆಟ್ರೋಲು, ಡೀಸೆಲ್‌ ಬೆಲೆ ಮತ್ತೆ ಏರಿಕೆ

ಮೂರೇ ದಿನದ ಅಂತರದಲ್ಲಿ ಮತ್ತೆ ಹೆಚ್ಚಳವಾದ ಇಂಧನ ಬೆಲೆ; ಇನ್ನಷ್ಟು ಏರುವ ಸಾಧ್ಯತೆ ನವದೆಹಲಿ : ಪೆಟ್ರೋಲು ಮತ್ತು ಡೀಸೆಲ್‌ ಬೆಲೆಯನ್ನು ಮತ್ತೆ ಏರಿಸಲಾಗಿದೆ. ಮಂಗಳವಾರ ಪೆಟ್ರೋಲು ಮತ್ತು ಡೀಸೆಲ್‌ ಬೆಲೆಯಲ್ಲಿ ಸುಮಾರು ೯೦ ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಈ ಮೂಲಕ ಮತ್ತೊಮ್ಮೆ ಜನರಿಗೆ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ. ಕಳೆದ ಶುಕ್ರವಾರವಷ್ಟೇ ಇಂಧನ ದರ 3 ರೂ.ನಷ್ಟು ಏರಿಕೆಯಾಗಿತ್ತು. ಇಂದು ಬೆಳ್ಳಂಬೆಳಗ್ಗೆ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರದಲ್ಲಿ 90 ಪೈಸೆ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ […]

ಪೆಟ್ರೋಲು, ಡೀಸೆಲ್‌ ಬೆಲೆ ಮತ್ತೆ ಏರಿಕೆ Read More »

ದುಬಾರೆ ದುರಂತ : ಇನ್ನು ಆನೆಗಳ ಬಳಿಗೆ ಹೋಗಲು ಇಲ್ಲ ಅವಕಾಶ

ಆನೆಯಡಿಗೆ ಬಿದ್ದು ಮಹಿಳೆ ಮೃತಪಟ್ಟ ಬಳಿಕ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಅರಣ್ಯ ಇಲಾಖೆ ಬೆಂಗಳೂರು: ಮಡಿಕೇರಿಯ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಎರಡು ಆನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ ಆನೆ ವೀಕ್ಷಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ

ದುಬಾರೆ ದುರಂತ : ಇನ್ನು ಆನೆಗಳ ಬಳಿಗೆ ಹೋಗಲು ಇಲ್ಲ ಅವಕಾಶ Read More »

ಉಪ್ಪಿನಂಗಡಿಯಲ್ಲಿಪಟ್ಲ ಫೌಂಡೇಶನ್ ಹವ್ಯಾಸಿ ಘಟಕದಿಂದ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಸಹಯೋಗದಲ್ಲಿ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ ಮಂಗಳೂರು ಇದರ ಹತ್ತನೇ ಕಾರ್ಯಕ್ರಮವಾಗಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತರನ ಪೌರುಷ ತಾಳಮದ್ದಳೆ ಜರಗಿತು.ಯಕ್ಷದ್ರುವ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ ಶೆಟ್ಟಿ .ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು . ಕಳೆದ 11 ವರ್ಷಗಳಿಂದ ಯಕ್ಷಗಾನದ ಸಮಗ್ರ ಬೆಳವಣಿಗೆಗೆ ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳು ಅಪೂರ್ವವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.. ಹವ್ಯಾಸಿ ಘಟಕದ ಅಧ್ಯಕ್ಷ

ಉಪ್ಪಿನಂಗಡಿಯಲ್ಲಿಪಟ್ಲ ಫೌಂಡೇಶನ್ ಹವ್ಯಾಸಿ ಘಟಕದಿಂದ ತಾಳಮದ್ದಳೆ Read More »

ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್‌ ಪ್ರಮಾಣ ವಚನ ಸ್ವೀಕಾರ

20 ಸಚಿವರ ಮಂತ್ರಿಮಂಡಲ ರಚನೆ ತಿರುವನಂತಪುರಂ : ಕೇರಳಂ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕಾಂಗ್ರೆಸ್‌ನ ವಿ.ಡಿ.ಸತೀಶನ್ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು. ಜೊತೆಗೆ 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್​​ ನೇತೃತ್ವದ ಯುಡಿಎಫ್, ನೂತನ ಸಿಎಂ ಆಗಿ ವಿಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ.

ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್‌ ಪ್ರಮಾಣ ವಚನ ಸ್ವೀಕಾರ Read More »

ಹಗ್ಗ ತುಂಡಾಗಿ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರ ರಕ್ಷಣೆ

ಬಂಟ್ವಾಳ : ಬಾವಿಯೊಂದರ ಹೂಳೆತ್ತುವ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಹಗ್ಗ ಜಾರಿ ಬಿದ್ದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳದ ಕುಕ್ಕಾಜೆ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಕುರಿಯಾಳ ಗ್ರಾಮದ ಕುಕ್ಕಾಜೆ ಕೇಶವ ಪೂಜಾರಿ ಎಂಬವರ ಬಾವಿಯ ಹೂಳೆತ್ತುವುದಕ್ಕೆ ಬಂದ ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಎಂಬವರು ಬಾವಿಗೆ ಬಿದ್ದಿದ್ದು, ಅದರಲ್ಲಿ ಓರ್ವರ ಕಾಲಿಗೆ ಗಾಯವಾಗಿದೆ. ಇವರು ಬಾವಿಯ ಹೂಳೆತ್ತುವ ಕೆಲಸ ಮುಗಿಸಿ, ಬಾವಿಯೊಳಗಿನಿಂದ ಹಗ್ಗ ಹಿಡಿದು ಮೇಲೆಕ್ಕೆ

ಹಗ್ಗ ತುಂಡಾಗಿ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರ ರಕ್ಷಣೆ Read More »

ಸಿದ್ದರಾಮಯ್ಯ ಕಿರೀಟಕ್ಕೆ ಇನ್ನೊಂದು ಗರಿ

ಎಂಟು ವರ್ಷ ಆಳ್ವಿಕೆ ಮಾಡಿದ ಮುಖ್ಯಮಂತ್ರಿ ಎಂಬ ದಾಖಲೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ಕ್ಕೆ 3 ವರ್ಷ ಪೂರ್ಣಗೊಳ್ಳಲಿದೆ. ಅದಕ್ಕೂ 4 ದಿನ ಮೊದಲೇ ಸಿದ್ದರಾಮಯ್ಯ ಅವರ ಹಲವು ದಾಖಲೆಗಳ ಸಾಲಿನಲ್ಲಿ ಮತ್ತೊಂದು ಸಾಧನೆ ಸೇರಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ಸಿಎಂ ಆಗಿ ಅವರು ಹೊರಹೊಮ್ಮಿದ್ದಾರೆ. ಮೈಸೂರು ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸುವ ಮೂಲಕ 1977ರಲ್ಲಿ ಸಾರ್ವಜನಿಕ ಸೇವೆಗೆ ಪಾದಾರ್ಪಣೆ ಮಾಡಿದ್ದ ಸಿದ್ದರಾಮಯ್ಯ ತಮ್ಮ ರಾಜಕೀಯ ಬದುಕಿನ

ಸಿದ್ದರಾಮಯ್ಯ ಕಿರೀಟಕ್ಕೆ ಇನ್ನೊಂದು ಗರಿ Read More »

ಬಂಟ್ವಾಳ : ಗುಜರಿ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

ಬಂಟ್ವಾಳ: ಚಲಿಸುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಮೆಲ್ಕಾರಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಬೆಂಗಳೂರು ಮೂಲದ ಲಾರಿ ಇದಾಗಿದ್ದು, ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಮೆಲ್ಕಾರ್‌ನಲ್ಲಿ ಬೆಂಕಿ ಹತ್ತಿಕೊಂಡಿದೆ. ಗುಜರಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯ ಒಳಗಿದ್ದ ಬ್ಯಾಟರಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಲಾರಿಯಲ್ಲಿ ತುಂಬಿಸಿದ್ದ ಗುಜರಿ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಬಂಟ್ವಾಳ : ಗುಜರಿ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ Read More »

ಬೆಳ್ತಂಗಡಿ : ಬೈಕ್‌ಗೆ ಕಾರು ಗುದ್ದಿ ಮಹಿಳೆ ಸಾವು

ಬೆಳ್ತಂಗಡಿ : ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ದುರ್ಮರಣ ಹೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಕನ್ನಡಿಕಟ್ಟೆ ಬಳಿ ಭಾನುವಾರ ರಾತ್ರಿ ನಡೆದಿದೆ. ಬಳಂಜದ ಪ್ರಸಿದ್ಧ ಅನಿಲ್ ಫಾರ್ಮ್‌ನ ಅನಿಲ್ ಭಟ್ ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಸಾವೀಗೀಡಾದ ಮಹಿಳೆ. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ಫಾರ್ಮ್‌ನ ಮಾಲಕ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅನಿಲ್ ಭಟ್ ಅವರು ಗಾಯಗೊಂಡಿದ್ದಾರೆ.

ಬೆಳ್ತಂಗಡಿ : ಬೈಕ್‌ಗೆ ಕಾರು ಗುದ್ದಿ ಮಹಿಳೆ ಸಾವು Read More »

ಅಪಘಾತದಲ್ಲಿ ಕೊಲ್ಲೂರಿಗೆ ಬಂದ ಭಕ್ತರಿಬ್ಬರು ಸಾವು

ಜೀಪಿಗೆ ಮೀನು ಸಾಗಿಸುವ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತ ಉಡುಪಿ: ಮೀನು ಸಾಗಾಟದ ಲಾರಿ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ನಡೆದಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ(35) ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆರ್ಯ ಅನೂಪ್ (28) ಮೃತಪಟ್ಟಿದ್ದಾರೆ. ಜೀಪಿನಲ್ಲಿದ್ದ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕೊಲ್ಲೂರಿಗೆ

ಅಪಘಾತದಲ್ಲಿ ಕೊಲ್ಲೂರಿಗೆ ಬಂದ ಭಕ್ತರಿಬ್ಬರು ಸಾವು Read More »

ಯುವ ಕಾಂಗ್ರೆಸ್‌ ಪದಾಧಿಕಾರಿಗಳ ದಿಢೀರ್‌ ವಜಾ

​ಕರ್ತವ್ಯ ಲೋಪದ ಕಾರಣಕ್ಕೆ ವಜಾ ಮಾಡಿದ ಹೈಕಮಾಂಡ್‌ ಬೆಂಗಳೂರು : ಕರ್ನಾಟಕ ಯುವ ಕಾಂಗ್ರೆಸ್‌ನ 15 ಪದಾಧಿಕಾರಿಗಳನ್ನು ಏಕಾಏಕಿ ವಜಾ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹಾಗೂ ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವರ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ. ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸದ ಮತ್ತು ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಕಠಿಣ ನಿರ್ಧಾರ ಕೈಗೊಂಡಿದೆ. ​ಕರ್ತವ್ಯ ಲೋಪ ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾಗಿದ್ದ ಕಾರಣಕ್ಕಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳನ್ನು

ಯುವ ಕಾಂಗ್ರೆಸ್‌ ಪದಾಧಿಕಾರಿಗಳ ದಿಢೀರ್‌ ವಜಾ Read More »

error: Content is protected !!
Scroll to Top