ಸುದ್ದಿ

ಬೆಳ್ತಂಗಡಿ : ಒಂದೇ ರಾತ್ರಿ 10 ಕಡೆ ಕಳ್ಳತನ

ಅಂಗಡಿ, ಕಚೇರಿಗಳಿಗೆ ನುಗ್ಗಿ ಕಳ್ಳತನ ಮಾಡಿರುವ ಕಳ್ಳರು ಬೆಳ್ತಂಗಡಿ : ಸೋಮವಾರ ತಡರಾತ್ರಿ ಬೆಳ್ತಂಗಡಿ ನಗರದಾದ್ಯಂತ ಹತ್ತು ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ನಗರದ ಕೋರ್ಟ್ ರಸ್ತೆಯಲ್ಲಿರುವ ಧರ್ಮಶ್ರೀ ಕಟ್ಟಡದಲ್ಲಿರುವ ಸಮೃದ್ಧಿ ಎಂಟರ್‌ಪ್ರೈಸಸ್ ಅನ್ನು ಗುರಿಯಾಗಿಸಿಕೊಂಡು ಕಳ್ಳರು ಒಳನುಗ್ಗಿ ಸುಮಾರು 1.50 ಲಕ್ಷ ರೂ. ನಗದನ್ನು ಕದ್ದಿದ್ದಾರೆ. ಸುಳಿವು ಸಿಗಬಾರದೆಂಬ ಕಾರಣಕ್ಕೆ ಕಳ್ಳರು ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ, ಮೆಮೊರಿ ಕಾರ್ಡ್‌ಗಳನ್ನು […]

ಬೆಳ್ತಂಗಡಿ : ಒಂದೇ ರಾತ್ರಿ 10 ಕಡೆ ಕಳ್ಳತನ Read More »

ಒಂದೇ ಕುಟುಂಬದ ನಾಲ್ಕು ಮಂದಿ ನಿಗೂಢವಾಗಿ ನಾಪತ್ತೆ

ತಿಂಗಳಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರ ಮೊರೆ ಹೋದ ಕುಟುಂಬ ಶಿವಮೊಗ್ಗ: ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಬುದ್ಧನಗರ ನಿವಾಸಿಗಳಾದ ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35), ಮೊಹಮ್ಮದ್ ಆದಿಲ್ (32) ಏಪ್ರಿಲ್ 15ರಿಂದ ನಾಪತ್ತೆಯಾಗಿದ್ದಾರೆ. ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಸಂಬಂಧಿಕರು ಕಾದು ಕುಳಿತ್ತಿದ್ದರು. ಆದರೆ ತಿಂಗಳು ಕಳೆದರೂ ಸಹ ಬಾರದಿದ್ದರಿಂದ ಆತಂಕಗೊಂಡ ಸಂಬಂಧಿಕರು ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್​​ ದಾಖಲಿಸಿದ್ದಾರೆ. ಶಿವಮೊಗ್ಗದ

ಒಂದೇ ಕುಟುಂಬದ ನಾಲ್ಕು ಮಂದಿ ನಿಗೂಢವಾಗಿ ನಾಪತ್ತೆ Read More »

ರೇಬಿಸ್ ಪೀಡಿತ ನಾಯಿಗಳ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

ಬೀದಿನಾಯಿ ಹಾವಳಿಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಲು ಅಸಾಧ್ಯ ಎಂದ ನ್ಯಾಯಾಲಯ ನವದೆಹಲಿ: ಸಾರ್ವಜನಿಕ ಸ್ಥಳಗಳು ಮತ್ತು ಜನದಟ್ಟಣೆ ಇರುವ ಪ್ರದೇಶಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸುವಂತೆ 2025ರ ನವೆಂಬರ್‌ನಲ್ಲಿ ನೀಡಿದ್ದ ತನ್ನ ನಿರ್ದೇಶನವನ್ನು ಬದಲಿಸಲು ಅಥವಾ ಸಡಿಲಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ ಅಗತ್ಯವಿದ್ದಲ್ಲಿ ರೇಬಿಸ್ ಪೀಡಿತ ಅಥವಾ ಗುಣಪಡಿಸಲಾಗದ ಕಾಯಿಲೆ ಇರುವ ಬೀದಿನಾಯಿಗಳಿಗೆ ದಯಾಮರಣ ನೀಡಲು ರಾಜ್ಯ ಸರ್ಕಾರಗಳು ಹಿಂಜರಿಯಬಾರದು ಎಂದು ಆದೇಶಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್

ರೇಬಿಸ್ ಪೀಡಿತ ನಾಯಿಗಳ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ Read More »

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್‌ ತಡೆ

ಸರ್ಕಾರದ ಜೊತೆ ಮಾತುಕತೆ ನಡೆಸಲು ಸೂಚನೆ ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಮೇ 20ರಂದು (ನಾಳೆ) ಕರೆ ನೀಡಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಮುಷ್ಕರ ನಡೆಸದಂತೆ ಸೂಚನೆ ನೀಡಿರುವ ಹೈಕೋರ್ಟ್‌ ಸರ್ಕಾರದ ಜೊತೆಗೆ ಮಾತುಕತೆ ನಡೆಸುವಂತೆ ಸೂಚನೆ ನೀಡಿ, ಗುರುವಾರಕ್ಕೆ (ಮೇ 21) ವಿಚಾರಣೆ ಮುಂದೂಡಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೂ ನೋಟಿಸ್‌ ಜಾರಿಗೊಳಿಸಿದೆ. ವಿವಿಧ ಬೇಡಿಕರಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮೇ 20

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್‌ ತಡೆ Read More »

ನಾಳೆ ದೇಶಾದ್ಯಂತ ಮೆಡಿಕಲ್‌ ಶಾಪ್‌ಗಳು ಬಂದ್‌

ಆನ್‌ಲೈನ್‌ನಲ್ಲಿ ಔಷಧ ಮಾರಾಟ ವಿರೋಧಿಸಿ ಪ್ರತಿಭಟನೆ ಬೆಂಗಳೂರು : ರಾಜ್ಯಾದ್ಯಂತ ನಾಳೆಯಿಂದ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿರುವ ಬೆನ್ನಲ್ಲೇ, ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆಘಾತ ಕಾದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ದೇಶವ್ಯಾಪಿ ಖಾಸಗಿ ಔಷಧ ಮಳಿಗೆ ಬಂದ್‌ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದರಿಂದಾಗಿ ನಾಳೆ ಬಸ್ ಸೌಲಭ್ಯ ಮಾತ್ರವಲ್ಲದೆ, ತುರ್ತು ಸಂದರ್ಭಗಳಲ್ಲಿ ಔಷಧಗಳು ಸಿಗುವುದೂ ಸಹ ದುಸ್ತರವಾಗುವ ಸಾಧ್ಯತೆಯಿದೆ. ಕರ್ನಾಟಕ ಫಾರ್ಮಾ ರಿಟೇಲರ್ಸ್

ನಾಳೆ ದೇಶಾದ್ಯಂತ ಮೆಡಿಕಲ್‌ ಶಾಪ್‌ಗಳು ಬಂದ್‌ Read More »

ಜನರನ್ನು ಕಂಗಾಲಾಗಿಸಿದ ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆ

ಕರ್ನಾಟಕದಲ್ಲಿ ಪೆಟ್ರೋಲ್‌ 107.16 ರೂ, ಡೀಸೆಲ್‌ 95.03 ರೂ. ಬೆಂಗಳೂರು: ತೈಲ ಕಂಪನಿಗಳು ಇಂದು ಮತ್ತೊಮ್ಮೆ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 94 ಪೈಸೆ ಏರಿಕೆಯಾಗಿದೆ. ಇದರಿಂದ 4 ದಿನಗಳ ಹಿಂದೆ 106.17 ರೂ.ಇದ್ದ ರೂಪೆಟ್ರೋಲ್ ಬೆಲೆ 107.16 ರೂ. ಹಾಗೂ 94.10 ರೂ. ಇದ್ದ ಡೀಸೆಲ್ 95.03 ರೂ. ಗೆ ತಲುಪಿದೆ. ಪದೇ ಪದೆ ಆಗುತ್ತಿರುವ ಈ ದರ ಏರಿಕೆಯಿಂದ ತೀವ್ರ

ಜನರನ್ನು ಕಂಗಾಲಾಗಿಸಿದ ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆ Read More »

ಮಸೀದಿಯೊಳಗೆ ಯದ್ವಾತದ್ವಾ ಗುಂಡು ಹಾರಿಸಿದ ಬಂದೂಕುಧಾರಿಗಳು : 3 ಮಂದಿ ಸಾವು

ಪೊಲೀಸರ ಪ್ರತಿದಾಳಿಗೆ ಆಕ್ರಮಣಕಾರರಿಬ್ಬರು ಬಲಿ ವಾಷಿಂಗ್ಟನ್‌ : ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ಇಸ್ಲಾಮಿಕ್ ಸೆಂಟರ್ ಮಸೀದಿಯೊಳಗೆ ಭೀಕರ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಸೀದಿಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಮಸೀದಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರು ನಡೆಸಿದ ತಕ್ಷಣದ ಪ್ರತಿದಾಳಿಯಲ್ಲಿ ಇಬ್ಬರು ಶೂಟರ್‌ಗಳೂ ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ. ಈ ಇಸ್ಲಾಮಿಕ್ ಕೇಂದ್ರವು ಸ್ಯಾನ್ ಡಿಯಾಗೋ ಕೌಂಟಿಯಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದ್ದು,

ಮಸೀದಿಯೊಳಗೆ ಯದ್ವಾತದ್ವಾ ಗುಂಡು ಹಾರಿಸಿದ ಬಂದೂಕುಧಾರಿಗಳು : 3 ಮಂದಿ ಸಾವು Read More »

ಬಾಲಕರಿಗೆ ವಾಹನ ನೀಡಿದ ಮಾಲಕರಿಗೆ ದಂಡ

ಬಂಟ್ವಾಳ : ಅಪ್ರಾಪ್ತ ವಯಸ್ಸಿನ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ 2 ಪ್ರತ್ಯೇಕ ಪ್ರಕರಣದಲ್ಲಿ ವಾಹನಗಳ ಮಾಲೀಕರಿಗೆ ತಲಾ ರೂ 25,000 ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ. ಏಪ್ರಿಲ್‌ 6ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ನಲ್ಲಿ KA-19-HT-9694 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ಏಪ್ರಿಲ್‌ 28 ರಂದು ಬಿ.ಸಿ ರೋಡ್‌ ಬಳಿ KA05KG6785 ನೊಂದಣಿಯ ದ್ವಿಚಕ್ರ ವಾಹನವನ್ನು ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರು ವಾಹನ ತಪಾಸಣೆಯ ವೇಳೆ

ಬಾಲಕರಿಗೆ ವಾಹನ ನೀಡಿದ ಮಾಲಕರಿಗೆ ದಂಡ Read More »

ದನಗಳ ಅಕ್ರಮ ಸಾಗಾಟ : ಇಬ್ಬರ ಬಂಧನ

ಉಡುಪಿ : ದನಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪಡುಬಿದ್ರಿ ಪೊಲೀಸರು ಭಾನುವಾರ ಬೆಳಗ್ಗೆ ಪಡುಬಿದ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳನ್ನು ಕಾಪು ತಾಲೂಕಿನ ನಡ್ಸಾಲು ಗ್ರಾಮದ ಅಬ್ಬಾಸ್ ಗುಡ್ಡೆ ನಿವಾಸಿ ಇಸ್ಮಾಯಿಲ್ (42) ಮತ್ತು ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದ ನಿವಾಸಿ ಕರ್ನಿರೆ ಮೊಹಮ್ಮದ್ (62) ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಾಹನ ಮತ್ತು ರಕ್ಷಿಸಲಾದ ಜಾನುವಾರುಗಳ ಒಟ್ಟು ಮೌಲ್ಯ ಸುಮಾರು 4.25 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ 6.40ರ

ದನಗಳ ಅಕ್ರಮ ಸಾಗಾಟ : ಇಬ್ಬರ ಬಂಧನ Read More »

ಪಾಳಿಗಳಲ್ಲಿ ನಮಾಜು ಮಾಡಿ : ಯೋಗಿ ಆದಿತ್ಯನಾಥ್‌ ಸಲಹೆ

ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ಲಖನೌ: ಮಸೀದಿಯಲ್ಲಿ ಜಾಗದ ಕೊರತೆಯಿದ್ದರೆ ಒಂದೇ ಜಾಗದಲ್ಲಿ ಬೇರೆ ಬೇರೆ ಪಾಳಿಯಲ್ಲಿ ನಮಾಜ್ ಮಾಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಸ್ತೆಗಳ ಮೇಲೆ ನಮಾಜ್ ನಡೆಯುತ್ತದೆಯೇ ಎಂದು ಜನರು ನನ್ನನ್ನು ಕೇಳುತ್ತಾರೆ. ನಾನು ಖಂಡಿತ ಇಲ್ಲ ಎಂದೇ ಹೇಳುತ್ತೇನೆ. ಕೆಲವರು ನನ್ನ ಬಳಿ ಬಂದು, ನಮ್ಮ ಸಂಖ್ಯೆ (ಜನಸಂಖ್ಯೆ) ಹೆಚ್ಚಿದೆ, ಮಸೀದಿಯಲ್ಲಿ ಜಾಗ ಸಾಲುವುದಿಲ್ಲ, ಹೇಗೆ ಮಾಡುವುದು? ಎಂದು

ಪಾಳಿಗಳಲ್ಲಿ ನಮಾಜು ಮಾಡಿ : ಯೋಗಿ ಆದಿತ್ಯನಾಥ್‌ ಸಲಹೆ Read More »

error: Content is protected !!
Scroll to Top