ಪುತ್ತೂರು

ಫೆ. 11ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ. 11ರಂದು ಪುತ್ತೂರಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಲಿರುವ ಅಮಿತ್ ಶಾ ಅವರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆಯಲಿರುವ ಕೃಷಿ ಯಂತ್ರ ಮೇಳದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಸಂಕಲ್ಪ ಅಭಿಯಾನ ಪುತ್ತೂರು ತಾಲೂಕಿನಾದ್ಯಂತ ನಡೆಯುತ್ತಿದ್ದು, ಫೆ. 11ರಂದು ಪುತ್ತೂರಿನಲ್ಲಿ ನಡೆಯಲಿರುವ ಅಭಿಯಾನದಲ್ಲಿ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಫೆ. 11ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ Read More »

ಪುತ್ತೂರಿನಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ

ಪುತ್ತೂರು : ಜೆಡಿಎಸ್ ಪಕ್ಷ ಜಾತ್ಯಾತೀತ ನೆಲೆಯಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಪಕ್ಷವಾಗಿದ್ದು, ಮುಂದಿನ ದಿನಗಳಲ್ಲಿ ನಾಯಕರನ್ನು, ಕಾರ್ಯಕರ್ತರನ್ನು ಸೇರಿಸಿಕೊಂಡು ದ.ಕ ಜಿಲ್ಲೆಯಲ್ಲಿ ಪಕ್ಷವನ್ನು ಸಧೃಢವಾಗಿ ಸಂಘಟಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಪಕ್ಷದ ವತಿಯಿಂದ ಪಕ್ಷ ಸಂಘಟನೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಎಂದು ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು.ಅವರು ಸೋಮವಾರ ಪುತ್ತೂರು ಅಮರ್ ಕಾಂಪ್ಲೆಕ್ಸ್‌ನಲ್ಲಿ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ನಮ್ಮ ನಾಯಕ

ಪುತ್ತೂರಿನಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ Read More »

ವಿಜಯ ಸಂಕಲ್ಪ ಅಭಿಯಾನದ ಮೂಲಕ ಯೋಜನೆಗಳು ಪ್ರತೀ ಮನೆಗೆ ತಲುಪಬೇಕು : ಶಾಸಕ ಸಂಜೀವ ಮಠಂದೂರು

ವಿಟ್ಲ : ಕಮಲ ಕುಟುಂಬ ಮಿಲನ ಮತ್ತು ಕ್ರೀಡೋತ್ಸವ ಜ. 29ರಂದು ವಿಠಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಜಯ ಸಂಕಲ್ಪ ಅಭಿಯಾನದ ಮೂಲಕ ಪ್ರಧಾನಿ ಮೋದಿಯವರ ಯೋಜನೆಗಳು ಪ್ರತೀ ಮನೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ನಮ್ಮೆಲ್ಲ ಸದಸ್ಯರು ಒಂದೇ ಕುಟುಂಬದವರಂತೆ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಇಂದಿನ ಕಾರ್ಯಕ್ರಮದಲ್ಲಿ ಸಿಕ್ಕಿದೆ ಎಂದರು. ಈ ಸಂದರ್ಭದಲ್ಲಿ

ವಿಜಯ ಸಂಕಲ್ಪ ಅಭಿಯಾನದ ಮೂಲಕ ಯೋಜನೆಗಳು ಪ್ರತೀ ಮನೆಗೆ ತಲುಪಬೇಕು : ಶಾಸಕ ಸಂಜೀವ ಮಠಂದೂರು Read More »

ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಪುತ್ತೂರು : ಒಳಮೊಗ್ರು ಗ್ರಾಮ ಪಂಚಾಯುತ್ ಸಾಮಾನ್ಯ ಸಭೆ ಸೋಮವಾರ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಕ್ರಮ ಸಕ್ರಮ ಯೋಜನೆಯಲ್ಲಿ ಜಾಗ ಮಂಜೂರಾತಿಗೊಳಿಸುವ ಸಂದರ್ಭ ಗ್ರಾಪಂ ರಸ್ತೆ ಇರುವ ಬಗ್ಗೆ ಹಾಗೂ ರಸ್ತೆಯು ಕನಿಷ್ಠ 6 ಮೀಟರ್ ಅಗಲ ಇರುವ ಬಗ್ಗೆ ನಕ್ಷೆಯಲ್ಲಿ ತೋರಿಸುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯುವ ನಿರ್ಣಯ ಕೈಗೊಳ್ಳಲಾಯಿತು.ಹೆಣ್ಣು ಮಕ್ಕಳ ಶಾಲಾ ದಾಖಲಾತಿ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯ ಶಾಲೆ ಮತ್ತು ಅಂಗನವಾಡಿಗಳಲ್ಲಿ ಹೊಸದಾಗಿ ದಾಖಲಾದ

ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಹಿರಿಯ ಭೂವಿಜ್ಞಾನಿ ದಾವೂದ್
ಪುತ್ತೂರು ತಾ.ಪಂ.ನಲ್ಲಿ ಜಿಲ್ಲಾ ಅಂತರ್ಜಲ ಇಲಾಖೆಯಿಂದ ಅಂತರ್ಜಲ ಕಾರ್ಯಾಗಾರ

ಪುತ್ತೂರು : ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಅಂತರ್ಜಲ ಕಛೇರಿ ಜಂಟಿ ಆಶ್ರಯದಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಮರುಬಳಕೆ, ಅಂತರ್ಜಲ ಸಂರಕ್ಷಣೆ, ಕಲುಷಿತತೆ ತಡೆಗಟ್ಟುವಿಕೆ, ತೆರೆದ/ ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಹಾಗೂ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಕುರಿತ ಅಂತರ್ಜಲ ಕಾರ್ಯಾಗಾರ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಶೇಕ್ ದಾವೂದ್, ಭೂಮಿಯ ಮೇಲಿರುವ ಎಲ್ಲಾ ಜೀವ ಸಂಕುಲಗಳಿಗೆ ನೀರೇ ಜೀವಾಳ. ನೀರಿನ

ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಹಿರಿಯ ಭೂವಿಜ್ಞಾನಿ ದಾವೂದ್
ಪುತ್ತೂರು ತಾ.ಪಂ.ನಲ್ಲಿ ಜಿಲ್ಲಾ ಅಂತರ್ಜಲ ಇಲಾಖೆಯಿಂದ ಅಂತರ್ಜಲ ಕಾರ್ಯಾಗಾರ
Read More »

ಮಹಾತ್ಮ ಗಾಂಧೀಜಿ ಹುತಾತ್ಮ ದಿನ | ಪುತ್ತೂರು ಗಾಂಧೀ ಕಟ್ಟೆಯಲ್ಲಿ ಸೈರನ್, ಗಾಂಧಿ ಪ್ರತಿಮೆಗೆ ಗೌರವಾರ್ಪಣೆ

ಪುತ್ತೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನವಾದ ಸೋಮವಾರ ಪುತ್ತೂರಿನ ಗಾಂಧೀ ಕಟ್ಟೆಯಲ್ಲಿ ಗಾಂಧೀಜಿ ಅವರ ಪ್ರತಿಮೆಗೆ ಗೌರವಾರ್ಪಣೆ ಹಾಗೂ ಸೈರನ್ ಮೊಳಗಿಸುವ ಮೂಲಕ ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಅವರು ೧೯೩೪ರಲ್ಲಿ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಗಾಂಧೀಕಟ್ಟೆಯ ಬಳಿಯಲ್ಲಿದ್ದ ಅಶ್ವಥ ವೃಕ್ಷದ ಅಡಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಈ ಸ್ಥಳದಲ್ಲಿ ಗಾಂಧೀ ಕಟ್ಟೆ ಸಮಿತಿಯ ವತಿಯಿಂದ ಗಾಂಧೀ ಕಟ್ಟೆಯನ್ನು ನಿರ್ಮಿಸಲಾಗಿತ್ತು. ಈ ಸ್ಥಳದಲ್ಲಿ ಪ್ರತಿವರ್ಷವೂ ಗಾಂಧೀ ಜಯಂತಿ, ಸ್ವಾತಂತ್ರ್ಯೋತ್ಸವ ಗಾಂಧೀ ಹುತಾತ್ಮ

ಮಹಾತ್ಮ ಗಾಂಧೀಜಿ ಹುತಾತ್ಮ ದಿನ | ಪುತ್ತೂರು ಗಾಂಧೀ ಕಟ್ಟೆಯಲ್ಲಿ ಸೈರನ್, ಗಾಂಧಿ ಪ್ರತಿಮೆಗೆ ಗೌರವಾರ್ಪಣೆ Read More »

ಪುತ್ತೂರು ಕಂಬಳದಲ್ಲಿ ನಟಿ ಸಾನಿಯಾ ಅಯ್ಯರ್‍ಗೆ ಅವಮಾನ: ಅಸಹ್ಯವಾಗಿ ವರ್ತಿಸಿದ ಪುಂಡರಿಗೆ ಧರ್ಮದೇಟು

ಪುತ್ತೂರು: ಅವಳಿ ವೀರರ ಹೆಸರಿನಲ್ಲಿ ನಡೆಯುತ್ತಿರುವ ಕೋಟಿ – ಚೆನ್ನಯ ಜೋಡುಕರೆ ಕಂಬಳದಲ್ಲಿ ಮಹಿಳಾ ಅತಿಥಿಯೋರ್ವರನ್ನು ಅವಮಾನಿಸಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದಿ. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಂಬಳ, ಈ ವರ್ಷ ಎನ್. ಚಂದ್ರಹಾಸ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆದಿತ್ತು. ಆದರೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ. ಮಹಿಳಾ ಪರ ಹೋರಾಟದ ಹಿನ್ನೆಲೆಯಿಂದಲೇ ಬಂದ ಶಾಸಕಿ ಶಕುಂತಳಾ ಶೆಟ್ಟಿ ಅವರು ಮುಂಚೂಣಿಯಲ್ಲಿದ್ದ ಕಾರ್ಯಕ್ರಮದಲ್ಲೇ ಮಹಿಳಾ ಅತಿಥಿಯಾಗಿದ್ದ

ಪುತ್ತೂರು ಕಂಬಳದಲ್ಲಿ ನಟಿ ಸಾನಿಯಾ ಅಯ್ಯರ್‍ಗೆ ಅವಮಾನ: ಅಸಹ್ಯವಾಗಿ ವರ್ತಿಸಿದ ಪುಂಡರಿಗೆ ಧರ್ಮದೇಟು Read More »

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್‌ಗೆ ರಸ್ತೆ ಅಪಘಾತ

ಮಂಗಳೂರು: ತುಳು ರಂಗಭೂಮಿ, ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ್ ಬೋಳಾರ್‌ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೊಳಗಾದ ಘಟನೆ ಮಂಗಳೂರು ಪಂಪ್‌ವೆಲ್ ಬಳಿ ಜ. 30ರಂದು ಸಂಭವಿಸಿದೆ. ಅವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾ ಸ್ಕಿಡ್ ಹೊಡೆದು ಅಪಘಾತಕ್ಕೊಳಗಾಗಿದೆ. ಚಿಕಿತ್ಸೆಗಾಗಿ ಎನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಪರೇಷನ್‌ ನಡೆಸುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್‌ಗೆ ರಸ್ತೆ ಅಪಘಾತ Read More »

ಪರ್ಪುಂಜ ಸೌಗಂಧಿಕದಲ್ಲಿ ಅಡಿಕೆ ಪತ್ರಿಕೆ 35ನೇ ವರ್ಚಾಚರಣೆ, ಪುಸ್ತಕ ಬಿಡುಗಡೆ

ಪುತ್ತೂರು : ಅಡಿಕೆ ಪತ್ರಿಕೆಯ 35 ನೇ ವರ್ಷಾಚರಣೆ ಹಾಗೂ ಪತ್ರಿಕೆ ಸಂಪಾದಕ ಅಡಿಕೆ ಚೊಗರು ; ಹೊಸ ನಿರೀಕ್ಷೆಗಳ ಚಿಗುರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಪರ್ಪುಂಜದ ಸೌಗಂಧಿಕದಲ್ಲಿ ನಡೆಯಿತು. ಕೇಂದ್ರ ಸರಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಅಡಕೆ ಬೆಳೆಯುವ 11 ಜಿಲ್ಲೆಗಳಲ್ಲಿ ಅಡಿಕೆ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು. ಹಿರಿಯ ಸಾಹಿತಿ, ಕೃಷಿ ಲೇಖಕ ಡಾ.ನರೇಂದ್ರ ರೈ

ಪರ್ಪುಂಜ ಸೌಗಂಧಿಕದಲ್ಲಿ ಅಡಿಕೆ ಪತ್ರಿಕೆ 35ನೇ ವರ್ಚಾಚರಣೆ, ಪುಸ್ತಕ ಬಿಡುಗಡೆ Read More »

ಫೆ.೧ : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು : ಪುತ್ತೂರಿನ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.೪ ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ವಿತರಣೆ ಮಂಗಳವಾರ ನಡೆಯಲಿದೆ. ನಗರದ ದರ್ಬೆಯಿಂದ ಬೊಳುವಾರು ತನಕ ನಡೆದ ಆಮಂತ್ರಣ ಪತ್ರಿಕೆ ವಿತರಣೆ ನಡೆಯಲಿದ್ದು, ಗ್ರಾಮಸ್ಥರು ಪಾಲ್ಗೊಳ್ಳುವಂತೆ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಫೆ.೧ : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ Read More »

error: Content is protected !!
Scroll to Top