ಪುತ್ತೂರು

ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ, ಫಲಕ ಅನಾವರಣ

ಪುತ್ತೂರು (ವಳಾಲು) : ನೂತನ ಸಾಂದ್ರ ಶೀತಲೀಕರನಣ ಘಟಕ ಉದ್ಘಾಟನೆ ಮತ್ತು ನಾಮ ಫಲಕ ಅನಾವರಣ ಕಾರ್ಯಕ್ರಮ ವಳಾಲುನಲ್ಲಿ ಸೋಮವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಘಟಕ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಗೆ ಕೇಂದ್ರ ಸರಕಾರದ ಹಲವು ಯೋಜನೆಗಳು ಜನರಿಗೆ ತಲುಪುವ ಕೆಲಸ ಆಗಿದ್ದು, ಕೃಷಿಯನ್ನು ನಂಬಿ ಬದುಕಿದವರಿಗೆ ಕೃಷಿ ಪೂರಕ ಗೊಬ್ಬರ ಅಗತ್ಯವಾಗಿದ್ದು, ಜತೆಗೆ ದನ ಸಾಕುವವರಿಗೆ ಸಂಘದಿಂದ ಸಾಲ ಸೌಲಭ್ಯ ನೀಡುವ ಕೆಲಸ ಆಗಬೇಕು. ಸ್ಥಳೀಯವಾಗಿ  ಹಾಲಿನ ಉತ್ಪನ್ನಗಳು ಜನರಿಗೆ ಸಿಗುವ ಕೆಲಸ ಆಗಬೇಕು ಎಂದರು. […]

ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ, ಫಲಕ ಅನಾವರಣ Read More »

ಡಾಕ್ಟರೇಟ್ ಪದವಿ ಪಡೆದ ಕುದ್ಮಾರಿನ ಕುವರಿ ಡಾ|| ಶರ್ಮಿಳಾ ನಟರಾಜ್

ಪುತ್ತೂರು : ಶ್ರೀಮತಿ ಶರ್ಮಿಳಾ ನಟರಾಜ್ ಅವರು ಡಾll ಆರ್. ಬಾಲಸುಬ್ರಮಣಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಯೂಸ್ ಆಂಡ್ ಇಂಪ್ಯಾಕ್ಟ್ ಆಫ್ ಆಕ್ಸೆಸ್ ಟು ಎನ್-ಲಿಸ್ಟ್ ಇ-ರಿಸೋರ್ಸಸ್ ಬೈ ದಿ ಫ್ಯಾಕಲ್ಟಿ ಮೆಂಬರ್ಸ್ ಆಂಡ್ ರಿಸರ್ಚ್ ಸ್ಕೊಲರ್ಸ್ ಆಫ್ ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್ ಇನ್  ಬೆಂಗಳೂರು ರೀಜಿಯನ್ ” ಎಂಬ ಪ್ರಬಂಧಕ್ಕೆ ಭಾರತೀಯಾರ್ ಯೂನಿವರ್ಸಿಟಿಯು ಡಾಕ್ಟರೇಟ್ ಪದವಿ ನೀಡಿದೆ.  ಬಾಲ್ಯದಿಂದಲೇ  ನೃತ್ಯ, ಸಂಗೀತ ಹಾಗೂ ಸಾಹಿತ್ಯದಲ್ಲಿ ಪರಿಣತಿ ಹೊಂದಿರುವ ಇವರಿಗೆ ಬೆಳ್ಳಾರೆ ಜೆ.ಸಿ ಸಂಸ್ಥೆಯ ವತಿಯಿಂದ” ಉತ್ತಮ

ಡಾಕ್ಟರೇಟ್ ಪದವಿ ಪಡೆದ ಕುದ್ಮಾರಿನ ಕುವರಿ ಡಾ|| ಶರ್ಮಿಳಾ ನಟರಾಜ್ Read More »

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯತರ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು : ಜಿಡೆಕಲ್ಲು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನಡೆಯಿತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಎಲ್ಲಾ ಅನುದಾನಗಳನ್ನು ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಂಬ್ರ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದುಗಪ್ಪ ನಾಯ್ಕ್, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ನಳಿನಾಕ್ಷಿ ಎ. ಎಸ್, ಸಾಂಸ್ಕೃತಿಕ ಸಂಘ ಸಂಚಾಲಕಿ

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯತರ ಚಟುವಟಿಕೆಗಳ ಉದ್ಘಾಟನೆ Read More »

ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಲು ಸರಕಾರದ ಮೇಲೆ ಒತ್ತಡ

ಪುತ್ತೂರು : ಪುತ್ತೂರಿನಲ್ಲಿ ಈಗಾಗಲೇ ನಿಗದಿಯಾದ ಬನ್ನೂರಿನ ಜಮೀನಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರ ಪ್ರಕ್ರಿಯೆ ಆರಂಭಿಸುವಂತೆ  ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ ಜಾಥಾ ಸೋಮವಾರ ದರ್ಬೆ ವೃತ್ತದಿಂದ ಬೊಳುವಾರು ತನಕ ನಡೆಯಿತು. ಜನ ಬೆಂಬಲಕ್ಕಾಗಿ ನಮ್ಮ ನಡಿಗೆ ಘೋಷ ವಾಕ್ಯದೊಂದಿಹೆ ನಡೆದ ಜಾಥಾವನ್ನುದ್ದೇಶಿಸಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಸಾಮಾನ್ಯ ಜನರಿಗೂ ಉಪಯೋಗವಾಗುವ ನಿಟ್ಟಿನಲ್ಲಿ ಸರಕಾರಿ

ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಲು ಸರಕಾರದ ಮೇಲೆ ಒತ್ತಡ Read More »

ಉಚಿತ ಕಣ್ಣಿನ ತಪಾಸಣಾ ಶಿಬಿರ

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಪುತ್ತೂರು ನಗರಸಭೆ ಹಾಗೂ ಸರಕಾರಿ ಆಸ್ಪತ್ರೆ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಸೋಮವಾರ ನಗರಸಭೆ ಕಟ್ಟಡದಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕೋವಿಡ್ ಬಳಿಕ ಜನತೆ ತಮ್ಮ ಆರೋಗ್ಯದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ದುಡ್ಡಿದ್ದರೂ ಆರೋಗ್ಯ ಕಾಪಾಡಿಕೊಳ್ಳದ ಸ್ಥಿತಿಯಲ್ಲಿದ್ದು, ಆಹಾರ ಪದ್ಧತಿಯನ್ನು ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ . ಈ ನಿಟ್ಟಿನಲ್ಲಿ ನಗರಸಭೆ

ಉಚಿತ ಕಣ್ಣಿನ ತಪಾಸಣಾ ಶಿಬಿರ Read More »

ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ

ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಮುಂದಿನ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು, ಇದರ ನಡುವೆ ನ್ಯೂಸ್ ಪುತ್ತೂರು ನಡೆಸಿದ ಸಮೀಕ್ಷೆಯಲ್ಲಿ ಗೆಲುವಿನ ಅಂತರ ಇನ್ನೂ ಹೆಚ್ಚಳಗೊಳ್ಳುವ ಸುಳಿವು ಲಭಿಸಿದೆ. ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲೂ ಕಣಕ್ಕಿಳಿಯುವುದು ಸಾಮಾನ್ಯ ಸಂಗತಿ. ಇದು ಪುತ್ತೂರಿನ ರಾಜಕೀಯ ವಿದ್ಯಮಾನದಲ್ಲೂ ನಡೆಯಲಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಮತದಾರನೂ ಶಾಸಕ ಸಂಜೀವ ಮಠಂದೂರು ಪರವಾಗಿಯೇ ಬ್ಯಾಟಿಂಗ್ ಮಾಡಿದ್ದು, ಬಿಜೆಪಿಗೆ ಗೆಲುವಿನ ಸರಣಿ ಮುಂದುವರಿಯುವ ಸೂಚನೆ ನಿಚ್ಚಳವಾದಂತಾಗಿದೆ. ಅಭಿವೃದ್ದಿ ಕೆಲಸ,

ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ Read More »

ಜ. 31, ಫೆ. 1: ಕುದ್ಮಾರಿನಲ್ಲಿ ಕಲಿಕಾ ಹಬ್ಬ

ಪುತ್ತೂರು: ಸವಣೂರು ಸಮೂಹ ಸಂಪನ್ಮೂಲ ಕೇಂದ್ರದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ತಿಗಳಿಗೆ ಜ. 31 ಹಾಗೂ ಫೆ. 1ರಂದು ಕುದ್ಮಾರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕಲಿಕಾ ಹಬ್ಬ ನಡೆಯಲಿದೆ. ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿ.ಪಂ., ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸವಣೂರು ಸಮೂಹ ಸಂಪನ್ಮೂಲ ಕೇಂದ್ರ, ಕುದ್ಮಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಎರಡು ದಿನಗಳ ಕಲಿಕಾ ಹಬ್ಬ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜ. 31, ಫೆ. 1: ಕುದ್ಮಾರಿನಲ್ಲಿ ಕಲಿಕಾ ಹಬ್ಬ Read More »

ಶ್ರೀ ಕುಕ್ಕುಮುಗೇರು ಉಳ್ಳಾಕುಲು ನೇಮೋತ್ಸವಕ್ಕೆ ಭಂಡಾರ ಆಗಮನ | ವೈಭವದಿಂದ ಸಾಗಿದ ಕೈಕಾರ ಶ್ರೀ ಕಿನ್ನಿಮಾಣಿ, ಮುಗೇರು ಕದಿಕೆ ಚಾವಡಿ ಶ್ರೀ ಪೂಮಾಣಿ ದೈವದ ಕಿರುವಾಳು ಭಂಡಾರ

ಪುತ್ತೂರು: ಒಳಮೊಗ್ರು ಗ್ರಾಮದ ರಾಜಮಾಡದಲ್ಲಿ ಜ. 30, 31ರಂದು ನಡೆಯಲಿರುವ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರದ ದೈವಗಳ ನೇಮೋತ್ಸವಕ್ಕೆ ಭಾನುವಾರ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರ ತೆರಳಿತು. ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ, ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವ ಕಾರ್ಯಕ್ರಮ ನಡೆಯಿತು. ಸಂಜೆ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಮತ್ತು ಪರಿವಾರ ದೈವಗಳ

ಶ್ರೀ ಕುಕ್ಕುಮುಗೇರು ಉಳ್ಳಾಕುಲು ನೇಮೋತ್ಸವಕ್ಕೆ ಭಂಡಾರ ಆಗಮನ | ವೈಭವದಿಂದ ಸಾಗಿದ ಕೈಕಾರ ಶ್ರೀ ಕಿನ್ನಿಮಾಣಿ, ಮುಗೇರು ಕದಿಕೆ ಚಾವಡಿ ಶ್ರೀ ಪೂಮಾಣಿ ದೈವದ ಕಿರುವಾಳು ಭಂಡಾರ Read More »

ಪಡ್ಡಾಯೂರು ಅಂಗನವಾಡಿಯಲ್ಲಿ ಬಾಲಮೇಳ

ಪುತ್ತೂರು : ಬಾಲಮೇಳ ಕಾರ್ಯಕ್ರಮ ಭಾನುವಾರ ಪಡ್ಡಾಯೂರು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗರ್ಭಿಣಿಯರಿಗೆ ಪೋಷಣೆ, ಮೊಟ್ಟೆ ಕೊಡುವ ಕೇಂದ್ರ, ಮತದಾರ ಪಟ್ಟಿ ಸೇರ್ಪಡೆ ಶ್ರೀ ಶಕ್ತಿ ಸಂಘ ಮಹಿಳಾ ಸಂಘ ಹೀಗೆ ಹಲವು ಕಾರ್ಯಕ್ರಮ ಗಳಿಗೆ ಒಂದು ಕೇಂದ್ರವಾಗಿ ಅಂಗನವಾಡಿ ಕೆಲಸ ಮಾಡುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ, ಕೊಠಡಿ ಹೀಗೆ ಸರಕಾರದ ಯೋಜನೆಗಳನ್ನು ಎಲ್ಲಾ ಅಂಗನವಾಡಿಗಳಿಗೂ ಕೊಡುವ ಕೆಲಸ ಆಗಿದೆ ಎಂದರು. ನಿಶಾನ್ ಕಾರ್ಯಕ್ರಮ ಉದ್ಘಾಟಿಸಿದರು. ವೈಷ್ಣವಿ

ಪಡ್ಡಾಯೂರು ಅಂಗನವಾಡಿಯಲ್ಲಿ ಬಾಲಮೇಳ Read More »

ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹುಟ್ಟುಹಬ್ಬ ಆಚರಣೆ

ಪುತ್ತೂರು: ಯುವಿಕ ಪಟ್ಟೆ ಎಂಬ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಳ್ಳಲಾಗಿದೆ. ಬಿರಮಲೆ ಗುಡ್ಡದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಮಧ್ಯಾಹ್ನ ಮಗುವಿನ ಹುಟ್ಟುಹಬ್ಬವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ನಡೆಯಿತು. ಕೇಕ್ ಕತ್ತರಿಸಿ, ಮೊಂಬತ್ತಿ ಬೆಳಗಿಸಿ, ಪಾರ್ಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸುವ ಇಂದಿನ ದಿನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಮಗುವಿಗೆ ಹಾಗೂ ಜನರಿಗೆ ದೇಶಪ್ರೇಮದ ಪ್ರಜ್ಞೆ ಜಾಗೃತವಾಗಿಸಲು ಇದು ಸಹಕಾರಿಯಾಗಿದೆ. ಕುಟುಂಬ ಸದಸ್ಯರ

ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹುಟ್ಟುಹಬ್ಬ ಆಚರಣೆ Read More »

error: Content is protected !!
Scroll to Top