ಪುತ್ತೂರು

ಕೇವಲ ಅಂಕ ಪಡೆಯುವುದಷ್ಟೇ ಶಿಕ್ಷಣವಲ್ಲ :  ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವದಲ್ಲಿ ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಅಂಕ ಪಡೆಯುವುದಷ್ಟೇ ಶಿಕ್ಷಣ ಅಲ್ಲ, ಬದಲಾಗಿ ಭಾರತದ ಸಂಸ್ಕೃತಿ ಮತ್ತು ದೇಶ ಪ್ರೇಮ ಶಿಕ್ಷಣದಲ್ಲಿ ಅಡಕವಾಗಿರಬೇಕು. ಹಾಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ರಾಷ್ಟ್ರಸಂಪತ್ತನ್ನು ಬೆಳೆಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಅವ್ಯವಸ್ಥೆಗಳಿಗೆ ಶಿಕ್ಷಣ ಸಂಸ್ಥೆಗಳೇ ಹೊಣೆ. ಸಂಸ್ಕಾರಯುತ ಶಿಕ್ಷಣ ಕೊಟ್ಟಾಗ […]

ಕೇವಲ ಅಂಕ ಪಡೆಯುವುದಷ್ಟೇ ಶಿಕ್ಷಣವಲ್ಲ :  ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವದಲ್ಲಿ ಸುಬ್ರಹ್ಮಣ್ಯ ನಟ್ಟೋಜ Read More »

ವಿವಿಧೆಡೆ ಕಾಡಾನೆ ದಾಳಿ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಪುತ್ತೂರು: ಪುತ್ತೂರು ತಾಲೂಕಿನ ಬೊಳಿಕಳ, ಪುಣ್ಚಪ್ಪಾಡಿ ಗ್ರಾಮದ ನೂಜಾಜೆ, ಅಂಜಯ, ಪಾಲ್ತಾಡಿ ಗ್ರಾಮದ ಅಸಂತಡ್ಕ, ಖಂಡಿಗೆ, ಕೆಯ್ಯೂರು ಗ್ರಾಮದ ಓಲೆಮುಂಡೋವು ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ದಾಳಿ ನಡೆಸಿದ ಪರಿಣಾಮ ಕೃಷಿ ತೋಟಗಳಿಗೆ ಹಾನಿಯಾಗಿದೆ. ದಾಳಿ ನಡೆಸಿದ ಸ್ಥಳಗಳಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದರು. ಶಾಸಕರ ಜೊತೆ ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಇಂದಿರಾ ಬಿ.ಕೆ, ತಾರಾನಾಥ ಕಾಯರ್ಗ, ಸತೀಶ್ ಅಂಗಡಿಮೂಲೆ, ಪ್ರಕಾಶ್ ರೈ ಸಾರಕರೆ ಮೊದಲಾದರಿದ್ದರು.

ವಿವಿಧೆಡೆ ಕಾಡಾನೆ ದಾಳಿ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಸವಣೂರು ವಿದ್ಯಾರಶ್ಮಿ ಶಿಫಾಲಿ ರೈ ಎಸ್‍.ಎಸ್‍.ಎಲ್‍.ಸಿ ಯಲ್ಲಿ 602 ಅಂಕಗಳು | ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 14 ಅಂಕ ಗಳಿಕೆ

ಸವಣೂರು: ಮಾರ್ಚ್ 2024 ರಲ್ಲಿ ನಡೆದ ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಫಾಲಿ ರೈ 588 ಅಂಕ ಗಳಿಸಿದ್ದು, ಇದೀಗ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 14 ಅಂಕಗಳನ್ನು ಗಳಿಸಿ ಒಟ್ಟು 602 (ಶೇ.96.32) ಅಂಕಗಳನ್ನು ಪಡೆದಿದ್ದಾರೆ. ಕನ್ನಡ-124, ಇಂಗ್ಲೀಷ್ 97, ಹಿಂದಿ-100, ಗಣಿತ-93, ವಿಜ್ಞಾನ-91 ಹಾಗೂ ಸಮಾಜ ವಿಜ್ಞಾನದಲ್ಲಿ 97 ಅಂಕಗಳನ್ನು ಪಡೆದಿದ್ದಾರೆ ಶಿಫಾಲಿ ರೈ ಪ್ರವೀಣ ರೈ ಮತ್ತು ಅನಿತಾ ಶೆಟ್ಟಿ ನೂಜಾಜೆ ದಂಪತಿ ಪುತ್ರಿ. ವಿದ್ಯಾರ್ಥಿನಿಯನ್ನು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ

ಸವಣೂರು ವಿದ್ಯಾರಶ್ಮಿ ಶಿಫಾಲಿ ರೈ ಎಸ್‍.ಎಸ್‍.ಎಲ್‍.ಸಿ ಯಲ್ಲಿ 602 ಅಂಕಗಳು | ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 14 ಅಂಕ ಗಳಿಕೆ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ NDA, PDO/VAO, ನವೋದಯ/ ಸೈನಿಕ ಶಾಲೆ ,ಕಂಪ್ಯೂಟರ್ , ಪ್ರಾಕ್ಟಿಕಲ್ ಅಕೌಂಟೆನ್ಸಿ ಸೇರಿದಂತೆ ವಿವಿಧ ತರಬೇತಿಗಳು ಪ್ರಾರಂಭ

ಪುತ್ತೂರು: ಪುತ್ತೂರು, ಸುಳ್ಯ ,ಕಾರ್ಕಳದಲ್ಲಿ ಕಾರ್ಯಚರಿಸುತ್ತಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾ ಮಾತಾ ಅಕಾಡೆಮಿಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹಾಗೂ ಉದ್ಯೋಗ ಕೌಶಲ್ಯಕ್ಕೆ ಸಂಬಂಧಿಸಿದ ವಿವಿಧ ತರಬೇತಿಗಳನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA )ತರಗತಿಗಳು ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ,ನವೋದಯ/ ಸೈನಿಕ ಶಾಲೆ ಪ್ರವೇಶ ಪರೀಕ್ಷೆಗಳ ತರಬೇತಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ,ಭಾರತೀಯ ಸೇನಾ ನೇಮಕಾತಿಗಳ ತರಬೇತಿ ಪ್ರತಿ

ವಿದ್ಯಾಮಾತಾ ಅಕಾಡೆಮಿಯಲ್ಲಿ NDA, PDO/VAO, ನವೋದಯ/ ಸೈನಿಕ ಶಾಲೆ ,ಕಂಪ್ಯೂಟರ್ , ಪ್ರಾಕ್ಟಿಕಲ್ ಅಕೌಂಟೆನ್ಸಿ ಸೇರಿದಂತೆ ವಿವಿಧ ತರಬೇತಿಗಳು ಪ್ರಾರಂಭ Read More »

ಮಾಡಾವಿನಲ್ಲಿ ಕೃಷಿ ತೋಟಗಳಿಗೆ ಆನೆ ದಾಳಿ | ಕೃಷಿ ನಾಶ

ಪುತ್ತೂರು: ತಾಲೂಕಿನ ಮಾಡಾವು ಪ್ರದೇಶದಲ್ಲಿ ಆನೆಗಳ ಸಂಚಾರ ಕಂಡು ಬಂದಿದ್ದು, ಕೃಷಿಕರ ಅಡಿಕೆ ತೋಟಗಳಿಗೆ ದಾಳಿ ಮಾಡಿದೆ. ಬುಧವಾರ ರಾತ್ರಿ ವೇಳೆ ಮಾಡಾವು ಮಲೆ ಸಮೀಪದ ಕೃಷಿಕರ ಅಡಿಕೆ ತೋಟಗಳಿಗೆ ಆನೆ ದಾಳಿ ಮಾಡಿದ್ದು, ಬಾಳೆ ಗಿಡಗಳು ನೆಲಸಮವಾಗಿರುವುದು ಕಂಡುಬಂದಿದೆ. ಆನೆ ದಾಳಿಯಿಂದಾಗಿ ಅಲ್ಲಲ್ಲಿ ಬೆಳೆ ನಾಶ, ಕೃಷಿ ನಷ್ಟ ಸಂಭವಿಸಿದೆ. ಹಲವಾರು ಬಾಳೆಗಿಡಗಳು ನೆಲಸಮವಾಗಿದೆ. ಆನೆಯ ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಡಾವಿನಲ್ಲಿ ಕೃಷಿ ತೋಟಗಳಿಗೆ ಆನೆ ದಾಳಿ | ಕೃಷಿ ನಾಶ Read More »

ಮುಳಿಯ ವೃಕ್ಷಾರೋಪಣ : ಸಾರ್ವಜನಿಕರಿಗೆ 3 ಸಾವಿರಕ್ಕೂ ಅಧಿಕ ಗಿಡಗಳ ವಿತರಣೆ | ಮುಳಿಯ ಜ್ಯುವೆಲ್ಸ್ ನಿಂದ ವಿಶ್ವ ಪರಿಸರ ದಿನಾಚರಣೆ

ಪುತ್ತೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಳಿಯ ಜ್ಯುವೆಲ್ಸ್ ವತಿಯಿಂದ ಮುಳಿಯ ವೃಕ್ಷಾರೋಪಣ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಮುಳಿಯ ಜ್ಯುವೆಲ್ಸ್ ಆವರಣದಲ್ಲಿ ಗ್ರಾಹಕರಿಗೆ ಗಿಡ ವಿತರಣೆ ಮಾಡಲಾಯಿತು. ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಕುಮಾರ್ ಹೊಳ್ಳ ಅವರಿಗೆ ಗಿಡಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ಮುಳಿಯ ಜ್ಯುವೆಲ್ಸ್ ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು, ನೆಲ್ಯಾಡಿ, ಸೋಮವಾರಪೇಟೆ ಶಾಖೆಗಳಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಏಕಕಾಲಕ್ಕೆ ನಡೆಯಿತು. ಎಲ್ಲಾ ಶೋರೂಮ್ ಗಳಲ್ಲಿ ಸಾರ್ವಜನಿಕರಿಗೆ 3

ಮುಳಿಯ ವೃಕ್ಷಾರೋಪಣ : ಸಾರ್ವಜನಿಕರಿಗೆ 3 ಸಾವಿರಕ್ಕೂ ಅಧಿಕ ಗಿಡಗಳ ವಿತರಣೆ | ಮುಳಿಯ ಜ್ಯುವೆಲ್ಸ್ ನಿಂದ ವಿಶ್ವ ಪರಿಸರ ದಿನಾಚರಣೆ Read More »

ಬೊಳುವಾರು ನಿವಾಸಿ ಶಿಲ್ಪಾ ಆರ್. ಪ್ರಭು ನಿಧನ

ಪುತ್ತೂರು: ಬಾರ್ಬಿ ಸಾಫ್ಟ್ ಡ್ರಿಂಕ್ಸ್ ಮಾಲಕರಾಗಿರುವ ಬೊಳುವಾರು ನಿವಾಸಿ ರಾಧೇಶ್ ವಿಠಪ್ಪ ಪ್ರಭು ಪತ್ನಿ ಶಿಲ್ಪಾ ಆರ್. ಪ್ರಭು ನಿಧನರಾದರು. ಶಿಲ್ಪಾ ಅನಾರೋಗ್ಯದಿಂದ ಇದ್ದು, ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಶಿಲ್ಪಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜೂ.7 ರಂದು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬೊಳುವಾರು ನಿವಾಸಿ ಶಿಲ್ಪಾ ಆರ್. ಪ್ರಭು ನಿಧನ Read More »

ನೀಟ್‍ ಫಲಿತಾಂಶ : ಅಂಬಿಕಾ ವಿದ್ಯಾಲಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ 600ಕ್ಕಿಂತ ಹೆಚ್ಚು ಅಂಕ

ಪುತ್ತೂರು: ವೈದ್ಯಕೀಯ ವೃತ್ತಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2024 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ. 6 ವಿದ್ಯಾರ್ಥಿಗಳು 600 ಕ್ಕಿಂತಲೂ ಅಧಿಕ ಅಂಕ, 16 ವಿದ್ಯಾರ್ಥಿಗಳು 500 ಕ್ಕಿಂತಲೂ ಅಧಿಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಅನುಷಾ ಜೇನ್ ಪಾಯ್ಸ್ (642),  ಅಭಿರಾಮ್ ಕೆ.ಟಿ. (625),ಅಭಿಶ್ರೀ ಎ.ಎಸ್‍. (619), ಭಾಗ್ಯಶ್ರೀ ರೈ (619), ಶೃಂಗಾ ನಾಯಕ್ ಪಿ. 616), ಹರ್ಷಿತಾ ರೈ (615), ಶ್ವೇತಾ ಐ.

ನೀಟ್‍ ಫಲಿತಾಂಶ : ಅಂಬಿಕಾ ವಿದ್ಯಾಲಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ 600ಕ್ಕಿಂತ ಹೆಚ್ಚು ಅಂಕ Read More »

ಬರೆಪ್ಪಾಡಿ ಯಲ್ಲಿ ಹೊಯ್ಸಳ ಕಾಲದ 800 ವರ್ಷ ಹಿಂದಿನ ವಿಗ್ರಹಗಳು ಪತ್ತೆ| 584 ವರ್ಷ ಹಿಂದಿನ ಕನ್ನಡ ಶಾಸನದ ಅಧ್ಯಯನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕುದ್ಮಾರ್ ಗ್ರಾಮದ ಬರೆಪ್ಪಾಡಿ ಎಂಬಲ್ಲಿ  ಶ್ರೀ ಪಂಚಲಿಂಗೇಶ್ವರ – ಕೇಪುಳೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಹಾಗೂ ದೇವರ ತೀರ್ಥದ ಬಾವಿಯನ್ನು  ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸುಮಾರು 800 ವರ್ಷ ಹಳೆಯದು ಎನ್ನಲಾದ ಹೊಯ್ಸಳ ಕಾಲದ  ಸುಮಾರು 9 ಲೋಹದ ವಿಗ್ರಹಗಳು ಪತ್ತೆಯಾಗಿದೆ. ಜೊತೆಗೆ ದೇವಸ್ಥಾನದ ಒಳ ಆವರಣದದಲ್ಲಿ ಸುಮಾರು 584 ವರ್ಷ ಹಳೆಯ ವಿಜಯನಗರ ಕಾಲದ 2 ಕನ್ನಡ ಶಿಲಾ ಶಾಸನ ಸ್ಥಾಪಿಸಿದ ಮಹತ್ವ ಮರು ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ

ಬರೆಪ್ಪಾಡಿ ಯಲ್ಲಿ ಹೊಯ್ಸಳ ಕಾಲದ 800 ವರ್ಷ ಹಿಂದಿನ ವಿಗ್ರಹಗಳು ಪತ್ತೆ| 584 ವರ್ಷ ಹಿಂದಿನ ಕನ್ನಡ ಶಾಸನದ ಅಧ್ಯಯನ Read More »

ಹೆಚ್ ಟಿ ಲೈನ್ ಮೇಲೆ ಬಿದ್ದ ಮರ: ಕಂಬಗಳಿಗೆ ಹಾನಿ

ಚಾರ್ವಾಕ : ಮರ ಮತ್ತು ತೆಂಗಿನ ಮರವು ಚಾರ್ವಾಕ ಫೀಡರ್ ನ ಹೆಚ್ ಟಿ ಲೈನ್ ಮೇಲೆ ಬಿದ್ದು ಕಂಬಗಳಿಗೆ ಹಾನಿಯಾದ ಘಟನೆ ನಡೆದಿದೆ. ದೈಪಿಲ ದೇವಸ್ಯ ಹತ್ತಿರ ಹೆಚ್ ಟಿ ಲೈನ್ ಮೇಲೆ ಮರ  ಮತ್ತು ತೆಂಗಿನ ಮರ ಬಿದ್ದು 9 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ತೆಂಗಿನ ಮರ ಮತ್ತು ಮರ ದುರಸ್ಥಿ ಕೆಲಸವನ್ನು ಪ್ರವಿಣ್ ಕುಂಟ್ಯಾನ, ಸುಂದರ ದೇವಸ್ಯ ,ಬೆಳಿಯಪ್ಪ, ಶೇಷಪ್ಪ, ನಾಗೇಶ್ , ತಾರಾನಾಥ, ದಿವಿಶ್ ಖಂಡಿಗ, ನಾಗೇಶ್  ದೈಪಿಲ,  ಹರೀಶ್ ದೈಪಿಲ 

ಹೆಚ್ ಟಿ ಲೈನ್ ಮೇಲೆ ಬಿದ್ದ ಮರ: ಕಂಬಗಳಿಗೆ ಹಾನಿ Read More »

error: Content is protected !!
Scroll to Top