ದ್ವಿಚಕ್ರ ವಾಹನ ಸವಾರನಿಗೆ ಅನ್ಯಕೋಮಿನ ಗುಂಪಿನಿಂದ ಹಲ್ಲೆ | ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳಿಂದ ಮನವಿ
ವಿಟ್ಲ : ದ್ವಿಚಕ್ರ ವಾಹನ ಸವಾರನಿಗೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವಿಟ್ಲ ತಾಲೂಕಿನ ಕನ್ಯಾನ ಸಮೀಪದ ಒಡಿಯೂರು ಐಟಿಐ ಕಾಲೇಜು ಬಳಿ ನಡೆದಿದೆ. ಕನ್ಯಾನ ಸಮೀಪದ ಒಡಿಯೂರು ಐಟಿಐ ಕಾಲೇಜು ಬಳಿ ಪ್ರಕಾಶ್ ಎಂಬವರು ಸ್ಕೂಟಿ ವಾಹನದಲ್ಲಿ ಬರುತ್ತಿರುವ ವೇಳೆ ಕೇರಳ ನೋಂದಣಿಯ ಕಾರಿನಲ್ಲಿ ಬರುತ್ತಿದ್ದ ನಾಲ್ವರು ಅನ್ಯಕೋಮಿನವರು ಗುರಾಯಿಸಿಕೊಂಡು ವಾಹನವನ್ನು ಹಿಂದಕ್ಕೆ ಮುಂದಾಕ್ಕೆ ಓವರ್ ಟೇಕ್ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿಯೇ ಅಡ್ಡ ಇಟ್ಟು ಪ್ರಕಾಶ್ ರವರ ಮೇಲೆ ಹಲ್ಲೆ ನಡೆಸಿದ್ದು, ಜಾತಿ ನಿಂದನೆಗೈದು […]










