ದೇಶ

ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಕಾರಣವಲ್ಲ : ವಿಧಿವಿಜ್ಞಾನ ವರದಿ

ಮೃತದೇಹದಲ್ಲಿ ಪ್ರಬಲ ವಿಷಕಾರಿ ಅಂಶ ಪತ್ತೆಯಾದ ಬಳಿಕ ಜಟಿಲಗೊಂಡ ಪ್ರಕರಣ ಮುಂಬೈ: ಮುಂಬೈಯ ಒಂದೇ ಕುಟುಂಬದ ನಾಲ್ಕು ಮಂದಿ ಇತ್ತೀಚೆಗೆ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಸೇವಿಸಿದ ಬೆನ್ನಿಗೆ ಮೃತಪಟ್ಟ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಆದರೆ ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ ಎಂಬುದಾಗಿ ವೈದ್ಯಕೀಯ ವರದಿ ತಿಳಿಸಿದೆ. ಕಳೆದ ವಾರ ಮುಂಬೈನಲ್ಲಿ ತಂದೆ, ತಾಯಿ ಉತ್ತು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಇವರ ಸಾವಿಗೆ ಕಲುಷಿತ ಕಲ್ಲಂಗಡಿ ಕಾರಣ ಎಂದು ಹೇಳಲಾಗಿತ್ತು. […]

ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಕಾರಣವಲ್ಲ : ವಿಧಿವಿಜ್ಞಾನ ವರದಿ Read More »

ಫುಲ್‌ಟೈಟ್‌ ಆಗಿ ವಿಧಾನಸಭೆ ಕಲಾಪಕ್ಕೆ ಬಂದ ಪಂಜಾಬ್‌ ಮುಖ್ಯಮಂತ್ರಿ

ತೊದಲುತ್ತಾ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಪಾನಮತ್ತರಾಗಿ ವಿಧಾನಸಭೆಗೆ ಬಂದು ಕಲಾಪದಲ್ಲಿ ಭಾಗವಹಿಸಿದ ವಿಡಿಯೋ ನಿನ್ನೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಭಗವಂತ್‌ ಮಾನ್‌ ತೊದಲುತ್ತಾ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಈಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಭಗವಂತ್‌ ಮಾನ್‌ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಮ್‌ ಆದ್ಮಿ ಪಾರ್ಟಿಗೆ ಈ ಪ್ರಕರಣ ಬಹಳ ಮುಜುಗರವುಂಟು ಮಾಡಿದೆ. ಭಗವಂತ್‌ ಮಾನ್‌

ಫುಲ್‌ಟೈಟ್‌ ಆಗಿ ವಿಧಾನಸಭೆ ಕಲಾಪಕ್ಕೆ ಬಂದ ಪಂಜಾಬ್‌ ಮುಖ್ಯಮಂತ್ರಿ Read More »

ಸದ್ಯದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬರೆ?

ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ಕೇಂದ್ರ ಚಿಂತನೆ ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದು, ಈಗಾಗಲೇ ವಾಣಿಜ್ಯ ಸಿಲಿಂಡರ್ ದರವನ್ನು 993 ರೂ. ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ತೈಲ ದರ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುವ ಭೀತಿ ಇದೆ. ಮುಂದಿನ ಐದರಿಂದ ಆರು ದಿನಗಳಲ್ಲಿ ಪೆಟ್ರೋಲ್ ದರ ಏರಿಕೆಯಾಗುವ ನಿರೀಕ್ಷೆಯಿದ್ದು,

ಸದ್ಯದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬರೆ? Read More »

ದೇವಸ್ಥಾನದ ಉತ್ಸವಕ್ಕೆ ಕರೆತಂದ ಆನೆಗೆ ಮದವೇರಿ ರಂಪಾಟ : ಮಾವುತ ಬಲಿ, ಸಹ ಮಾವುತ ಗಂಭೀರ

ಕೆರಳಿದ ಆನೆಯ ಅಟ್ಟಹಾಸಕ್ಕೆ ಸಿಲುಕಿ ಕಾರು, ದ್ವಿಚಕ್ರ ವಾಹನ ಧ್ವಂಸ ತಿರುವನಂತಪುರಂ: ಎರ್ನಾಕುಳಂ ಜಿಲ್ಲೆಯ ಅಂಗಾಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು ಮದವೇರಿದ ಆನೆಯೊಂದು ಅಟ್ಟಹಾಸಗೈದಾಗ ಆನೆಯ ತುಳಿತಕ್ಕೆ ಸಿಲುಕಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾವುತನ ಸ್ಥಿತಿ ಗಂಭೀರವಾಗಿದೆ. ಅಕ್ಕಪಕ್ಕದ ದೇವಸ್ಥಾನಗಳ ಉತ್ಸವದಲ್ಲಿ ಪಾಲ್ಗೊಳ್ಳಲು ‘ಮಯ್ಯನಾಡ್ ಪಾರ್ಥಸಾರಥಿ’ ಹೆಸರಿನ ಆನೆಯನ್ನು ಕರೆತರಲಾಗಿತ್ತು. ಇಂದು ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಆನೆಯನ್ನು ಸ್ನಾನ ಮಾಡಿಸಲು ಕಿದಂಗೂರ್ ದೇವಸ್ಥಾನಕ್ಕೆ ಕರೆತಂದಾಗ ಅದು ಇದ್ದಕ್ಕಿದ್ದಂತೆ ಮದವೇರಿ ಗಲಾಟೆ ಮಾಡಲು

ದೇವಸ್ಥಾನದ ಉತ್ಸವಕ್ಕೆ ಕರೆತಂದ ಆನೆಗೆ ಮದವೇರಿ ರಂಪಾಟ : ಮಾವುತ ಬಲಿ, ಸಹ ಮಾವುತ ಗಂಭೀರ Read More »

ಇವಿಎಂ ಇರಿಸಿದ ಸ್ಟ್ರಾಂಗ್‌ ರೂಮ್‌ ಎದುರು ನಡುರಾತ್ರಿ ಮಮತಾ ಬ್ಯಾನನರ್ಜಿ ಹೈಡ್ರಾಮಾ

ಸ್ಟ್ರಾಂಗ್‌ ರೂಮ್‌ ತೆರೆಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಕೋಲ್ಕತ್ತಾ: ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡರಾತ್ರಿ ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ತಾನು ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರದ ಮತ ಎಣಿಕಾ ಕೇಂದ್ರವಾದ ಸಖಾವತ್ ಮೆಮೋರಿಯಲ್ ಸ್ಕೂಲ್ ಬಳಿ ಮಮತಾ ಬ್ಯಾನರ್ಜಿ ಅವರು ಸ್ವತಃ ಭೇಟಿ ನೀಡಿ ಸುಮಾರು ನಾಲ್ಕು ಗಂಟೆಗಳ ಕಾಲ ತಂಗಿದ್ದರು. ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳನ್ನು ಅಕ್ರಮವಾಗಿ ತೆರೆಯಲಾಗಿದೆ

ಇವಿಎಂ ಇರಿಸಿದ ಸ್ಟ್ರಾಂಗ್‌ ರೂಮ್‌ ಎದುರು ನಡುರಾತ್ರಿ ಮಮತಾ ಬ್ಯಾನನರ್ಜಿ ಹೈಡ್ರಾಮಾ Read More »

ವಾಣಿಜ್ಯ ಸಿಲಿಂಡರ್‌ ಬೆಲೆ 993 ರೂ. ಏರಿಕೆ

ಹೋಟೆಲ್‌, ಕ್ಯಾಟರಿಂಗ್‌ ಉದ್ಯಮಿಗಳಿಗೆ ಶಾಕ್‌ ನೀಡಿದ ಬೆಲೆ ಹೆಚ್ಚಳ ನವದೆಹಲಿ : ವಾಣಿಜ್ಯ ಸಿಲಿಂಡರ್​ ಬೆಲೆ ಯಲ್ಲಿ ಭಾರಿ ಏರಿಕೆಯಾಗಿದೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬರೋಬ್ಬರಿ 993 ರೂ. ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರಿ ಏರಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿ ತಲುಪಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,078.50 ರೂಪಾಯಿ ಇತ್ತು. ಬೆಂಗಳೂರಿನಲ್ಲಿ 991 ರೂಪಾಯಿ

ವಾಣಿಜ್ಯ ಸಿಲಿಂಡರ್‌ ಬೆಲೆ 993 ರೂ. ಏರಿಕೆ Read More »

ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಸ್ಫೋಟ ಬೆದರಿಕೆ

ಸೀಸಿಯಮ್ ವಿಕಿರಣ ಹಾಯಿಸಿ ಸ್ಫೋಟಿಸುವ ಎಚ್ಚರಿಕೆ ನಾಗಪುರ : ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿ ಮತ್ತು ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಗುರಿಯಾಗಿಸಿಕೊಂಡು ವಿಕಿರಣಶೀಲ ವಸ್ತುಗಳ ಮೂಲಕ ದಾಳಿ ನಡೆಸುವ ಬೆದರಿಕೆ ಪತ್ರವೊಂದು ಪೊಲೀಸ್ ಇಲಾಖೆಗೆ ಲಭ್ಯವಾಗಿದೆ. ಪತ್ರದ ಗಂಭೀರತೆಯನ್ನು ಅರಿತ ಪೊಲೀಸ್ ಆಯುಕ್ತರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಮುಂಬೈನಿಂದ ಆಗಮಿಸಿದ ಪರಮಾಣು ಶಕ್ತಿ ತಜ್ಞರ ವಿಶೇಷ

ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಸ್ಫೋಟ ಬೆದರಿಕೆ Read More »

ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದ ಪಶ್ಚಿಮ ಬಂಗಾಳದ ಚುನಾವಣಾ ಸಮೀಕ್ಷೆ

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ರಾಜ್ಯದಲ್ಲಿ ಈ ಸಲವೂ ನಿರಾಶೆ ಕಾದಿದೆಯೇ? ನವದೆಹಲಿ: ಪಂಚರಾಜ್ಯಗಳ ಚುನಾವಣೆಗಳು ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು 3 ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರಿಯುವ, ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳುವ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತುರುಸಿನ ಹೋರಾಟದ ಸುಳಿವು ನೀಡಿವೆ. ಈ ಪೈಕಿ ಎಲ್ಲರಲ್ಲೂ ಭಾರಿ ಕುತೂಹಲ ಹುಟ್ಟಿಸಿರುವುದು ಪಶ್ಚಿಮ ಬಂದಾಳದ ಭವಿಷ್ಯ. ಮಮತಾ ಬ್ಯಾನರ್ಜಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಲು ಬಿಜೆಪಿ ತನ್ನ ಸರ್ವ ಸಾಮರ್ಥ್ಯವನ್ನು ಬಳಸಿ

ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದ ಪಶ್ಚಿಮ ಬಂಗಾಳದ ಚುನಾವಣಾ ಸಮೀಕ್ಷೆ Read More »

ಪಶ್ಚಿಮ ಬಂಗಾಳ : ಎರಡನೇ ಹಂತದ ಮತದಾನದ ವೇಳೆ ವ್ಯಾಪಕ ಹಿಂಸಾಚಾರ

ಬಿಜೆಪಿ ಬೂತ್‌ ಏಜೆಂಟ್‌ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನವು ಇಂದು ನಡೆಯುತ್ತಿದ್ದು, ಮತದಾನದ ಆರಂಭಿಕ ಗಂಟೆಗಳಲ್ಲೇ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಳು ನಡೆದ ವರದಿಯಾಗಿದೆ. ಬೆಳಿಗ್ಗೆ 9 ಗಂಟೆಯವರೆಗೆ ರಾಜ್ಯದಲ್ಲಿ ಸರಾಸರಿ 18.39% ಮತದಾನ ದಾಖಲಾಗಿದೆ. ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 20.86% ಮತದಾನವಾಗಿದ್ದರೆ, ಹೂಗ್ಲಿಯಲ್ಲಿ 20.16% ಮತದಾನ ನಡೆದಿದೆ. ಚಪ್ರಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 53ರಲ್ಲಿ

ಪಶ್ಚಿಮ ಬಂಗಾಳ : ಎರಡನೇ ಹಂತದ ಮತದಾನದ ವೇಳೆ ವ್ಯಾಪಕ ಹಿಂಸಾಚಾರ Read More »

ಮೇ ತಿಂಗಳಲ್ಲಿ ಬಿಸಿಲು ಇನ್ನಷ್ಟು ಬಿರುಸು : ಹವಾಮಾನ ಇಲಾಖೆ ಮುನ್ಸೂಚನೆ

ತಾಪಮಾನದಲ್ಲಿ ಇನ್ನೂ 3-4 ಸೆಲ್ಸಿಯಸ್ ಡಿಗ್ರಿ ಏರಿಕೆ ಸಾಧ್ಯತೆ ಬೆಂಗಳೂರು: ಈ ವರ್ಷ ಬೇಸಿಗೆ ಕರ್ನಾಟಕದ ಪಾಲಿಗೆ ಕರಾಳವಾಗಿದೆ. ಕರಾವಳಿ ಜಿಲ್ಲೆಯೂ ಸೇರಿದಂತೆ ಎಲ್ಲೆಡೆ ಸುಡುಬಿಸಿಲಿನಿಂದಾಗಿ ಜನ ಕಂಗಾಲಾಗಿದ್ದಾರೆ. ಕರ್ನಾಟಕ ಕಾದ ಕಾವಲಿಯಂತಾಗಿದೆ. ಇದರ ನಡುವೆ ಮೇ ತಿಂಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಲಿದ್ದು, ಬಿಸಿಲಿನ ಪ್ರತಾಪ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ ತಿಂಗಳಲ್ಲೇ ಸುಡುವ ಸೂರ್ಯನ ಪ್ರತಾಪಕ್ಕೆ ಕರುನಾಡು ಹೈರಾಣಾಗಿದೆ. ಮೇ ತಿಂಗಳಲ್ಲಿ ಸೂರ್ಯ ಇನ್ನೂ ಉಗ್ರ ಪ್ರತಾಪಿಯಾಗಲಿದ್ದಾನೆ. ಮೇ ತಿಂಗಳಲ್ಲಿ ಅಸಲಿ

ಮೇ ತಿಂಗಳಲ್ಲಿ ಬಿಸಿಲು ಇನ್ನಷ್ಟು ಬಿರುಸು : ಹವಾಮಾನ ಇಲಾಖೆ ಮುನ್ಸೂಚನೆ Read More »

error: Content is protected !!
Scroll to Top