ಅಪರಾಧ

ನೇಣು ಬಿಗಿದು ವೃದ್ಧ ಆತ್ಮಹತ್ಯೆ !

ಪುತ್ತೂರು : ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿಮಾರಡ್ಕದಲ್ಲಿ 80 ವರ್ಷದ ವೃದ್ಧರೊಬ್ಬರು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿಮಾರಡ್ಕ ನಿವಾಸಿ ಮಾಲಿಂಗ ನಾಯ್ಕ(80) ಆತ್ಮಹತ್ಯೆ ಮಾಡಿಕೊಂಡವರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಡಿ.5 ರಂದು ಅವರು ಮನೆಯ ಸಮೀಪದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಮೃತರ ಪುತ್ರಿ ಭಾಗಿ ಅವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೇಣು ಬಿಗಿದು ವೃದ್ಧ ಆತ್ಮಹತ್ಯೆ ! Read More »

ಹೆಂಡತಿ, ಇಬ್ಬರು ಮಕ್ಕಳ ಅಮಾನುಷವಾಗಿ ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ವೈದ್ಯ!!

ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯ ರೈಲ್ವೇಸ್ ಕಾಲೋನಿಯಲ್ಲಿ ನಡೆದಿದೆ. ರೈಲ್ವೇಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ತಜ್ಞ ಡಾ.ಅರುಣ್ ಕುಮಾರ್ ಅವರನ್ನು ರಾಯ್ ಬರೇಲಿಯಲ್ಲಿರುವ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ. ಮಿರ್ಜಾಪುರದ ನಿವಾಸಿಯಾಗಿರುವ ಡಾ. ಕುಮಾರ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಾಯ್ ಬರೇಲಿಯ ರೈಲ್ವೇ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಕಳೆದ

ಹೆಂಡತಿ, ಇಬ್ಬರು ಮಕ್ಕಳ ಅಮಾನುಷವಾಗಿ ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ವೈದ್ಯ!! Read More »

ರಾಮಕುಂಜ ನಿವಾಸಿ ನೇಣು ಬಿಗಿದು ಆತ್ಮಹತ್ಯೆ

ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಕಲ್ಲೇರಿ ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಚಂದಪ್ಪ ಕುಲಾಲ್‍ (52) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕಾರ್ಮಿಕರಾಗಿದ್ದ ಚಂದಪ್ಪ ಕುಲಾಲ್, ಬೆಳಿಗ್ಗೆ ತೋಟಕ್ಕೆ ಹೋದವರು ಅಡಿಕೆ ಮರಗಳ ಮಧ್ಯೆ ಕಬ್ಬಿಣದ ಸಲಾಕೆ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಮಕುಂಜ ನಿವಾಸಿ ನೇಣು ಬಿಗಿದು ಆತ್ಮಹತ್ಯೆ Read More »

ಮರಳು ಕಳವುಗೈದು ಅಕ್ರಮ ಶೇಖರಣೆ: ಪ್ರಕರಣ ದಾಖಲು

ವಿಟ್ಲ: ಮರಳು ಕಳ್ಳತನ ಮಾಡಿ, ಅಕ್ರಮವಾಗಿ ಶೇಖರಣೆ ಮಾಡಿದ ಪ್ರಕರಣ ಸಾಲೆತ್ತೂರು ಗ್ರಾಮದ ಬೊಳ್ಮಾರು ಎಂಬಲ್ಲಿ ಬೆಳಕಿಗೆ ಬಂದಿದೆ. ಸುದೇಶ್ ಭಂಡಾರಿ ಎಂಬವರ ಜಾಗದಲ್ಲಿ ಮರಳು ಅಕ್ರಮ ಶೇಖರಣೆ ಪತ್ತೆಯಾಗಿದ್ದು, ಸುಮಾರು 20ರಿಂದ 25 ಲೋಡ್ ಮರಳು ರಾಶಿ ಹಾಕಲಾಗಿತ್ತು. ಇದರ ಮೌಲ್ಯ ಸುಮಾರು 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಿಟ್ಲ ಪೊಲೀಸ್ ಉಪ ನಿರೀಕ್ಷಕ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳಾದ ಸುದೇಶ್ ಭಂಡಾರಿ, ಷರೀಪ್, ನಾರಾಯಣ ಪೂಜಾರಿ ಅವರ ವಿರುದ್ಧ ವಿಟ್ಲ

ಮರಳು ಕಳವುಗೈದು ಅಕ್ರಮ ಶೇಖರಣೆ: ಪ್ರಕರಣ ದಾಖಲು Read More »

ಮಂಗಳೂರು ಗೋಡೆ ಬರಹಕ್ಕೆ ‘ಐಎಸ್’ ಉಗ್ರರ ಕೈವಾಡ!! | ಕುಕ್ಕರ್ ಸ್ಫೋಟಕ್ಕೂ ಗೋಡೆ ಬರಹಕ್ಕೂ ನಂಟು!! | ಎನ್.ಐ.ಎ. ತನಿಖೆಯಿಂದ ಮತ್ತಷ್ಟು ವಿವರ ಬಹಿರಂಗ

ಮಂಗಳೂರಿನ ಬಿಜೈ ಹಾಗೂ ನ್ಯಾಯಾಲಯ ರಸ್ತೆಯ ಗೋಡೆಗಳ ಮೇಲೆ ಬರೆದಿದ್ದ ಬರಹದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆ ಉಗ್ರರ ಕೈವಾಡವಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ ಎಂದು ಹೇಳಲಾಗಿದೆ. 2020ರ ನವೆಂಬರ್‌ 27ರಂದು ಲಷ್ಕರ್‌–ಎ–ತಯಬಾ ಹಾಗೂ ತಾಲಿಬಾನ್‌ ಪರವಾಗಿ ಗೋಡೆ ಬರಹ ಬರೆಯಲಾಗಿತ್ತು. ಕೃತ್ಯ ಎಸಗಿದ್ದ ಆರೋಪದಡಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್, ಮಾಝ್ ಮುನೀರ್ ಅಹ್ಮದ್ ಹಾಗೂ ಸಾದತ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ‘ಪ್ರಚಾರಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂಬುದಾಗಿ ಅಭಿಪ್ರಾಯಪಟ್ಟು

ಮಂಗಳೂರು ಗೋಡೆ ಬರಹಕ್ಕೆ ‘ಐಎಸ್’ ಉಗ್ರರ ಕೈವಾಡ!! | ಕುಕ್ಕರ್ ಸ್ಫೋಟಕ್ಕೂ ಗೋಡೆ ಬರಹಕ್ಕೂ ನಂಟು!! | ಎನ್.ಐ.ಎ. ತನಿಖೆಯಿಂದ ಮತ್ತಷ್ಟು ವಿವರ ಬಹಿರಂಗ Read More »

ಸಿ.ಪಿ. ಯೋಗೇಶ್ವರ್ ಭಾವ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆ!!

ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಭಾವನ ಮೃತದೇಹ ಪತ್ತೆಯಾಗಿದೆ. ರಾಮಾಪುರದ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಕೊಲೆಯಾದ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ. ಮೇಲ್ಮನೆ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದರು. ಅಪಹರಣದ ಶಂಕೆಯೂ ವ್ಯಕ್ತವಾಗಿತ್ತು. 62ರ ಹರೆಯದ ಮಹದೇವಯ್ಯ ಅವರು ಯೋಗೇಶ್ವರ ಸಹೋದರಿಯ ಪತಿ. ಮಹದೇವಯ್ಯ ಅವರ ಪತ್ನಿ ಬೆಂಗಳೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅವರೊಬ್ಬರೇ ಇದ್ದರು. ಶನಿವಾರ ಬೆಳಗ್ಗೆ ಮಹದೇಶ್ವರ

ಸಿ.ಪಿ. ಯೋಗೇಶ್ವರ್ ಭಾವ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆ!! Read More »

ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯದಲ್ಲಿ ನಡೆದಿದೆ. ಸಂಪ್ಯ ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ (46) ಮೃತರು. ಪ್ರಕಾಶ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆಯವರು ಬೇರೆ ಕಡೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡು ಎರಡು, ಮೂರು ದಿನ ಕಳೆದಿದೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಗ ಹಾಗೂ ಮನೆಯವರನ್ನು ಅಗಲಿದ್ದಾರೆ. ಸಂಪ್ಯ ಠಾಣಾ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ ಆತ್ಮಹತ್ಯೆ Read More »

ಗೂಡಂಗಡಿ ಧ್ವಂಸ: ಪ್ರಕರಣ ದಾಖಲು

ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿ ಗಳು ರಾತ್ರಿ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಘಟನೆ ನಡೆದಿದೆ. ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ನಿವಾಸಿ ಅಬ್ದುಲ್‌ ಅಜೀಜ್‌ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿ ಇರಿಸಿ ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿಯ ವೇಳೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್‌ ಅಜೀಜ್‌ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು

ಗೂಡಂಗಡಿ ಧ್ವಂಸ: ಪ್ರಕರಣ ದಾಖಲು Read More »

ಹತ್ಯೆಯ ಬಳಿಕ ಮಗು ಮೆಡಿಕಲ್ ವೇಸ್ಟ್‌ಗೆ!! | ಭ್ರೂಣ ಹತ್ಯೆ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನರ್ಸ್!

ಬೆಂಗಳೂರು: ಭ್ರೂಣ ಹತ್ಯೆ ಕುರಿತ ಸ್ಫೋಟಕ ಮಾಹಿತಿಗಳನ್ನು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡಿದ್ದೇನೆ ಹಾಗೂ 6 ತಿಂಗಳ ಮಗುವನ್ನೂ ಹೊರತೆಗೆದಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾಳೆ. ಮೈಸೂರು ಭ್ರೂಣ ಹತ್ಯೆ ಪ್ರಕರಣದಲ್ಲಿ ಪೊಲೀಸರು ನರ್ಸ್ ಮಂಜುಳಾರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿಯನ್ನು ಆಕೆ ಬಹಿರಂಗಪಡಿಸಿದ್ದಾಳೆ. ತಿಂಗಳಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ. ಆ ಮಕ್ಕಳಿಗೆ ಜೀವ ಇರುತ್ತಿತ್ತು. 6

ಹತ್ಯೆಯ ಬಳಿಕ ಮಗು ಮೆಡಿಕಲ್ ವೇಸ್ಟ್‌ಗೆ!! | ಭ್ರೂಣ ಹತ್ಯೆ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನರ್ಸ್! Read More »

ಸ್ಪೈಡರ್​ಮ್ಯಾನ್​ನಂತೆ ಎಸ್ಕೇಪ್ ಆದ ಚಿನ್ನ ಕಳ್ಳ​: ಖದೀಮನ ಚಾಕಚಕ್ಯತೆ ಕಂಡು ದಂಗಾದ ಪೊಲೀಸರು!!

ಆಭರಣದ ಅಂಗಡಿಯೊಂದಕ್ಕೆ ನುಗ್ಗಿ ಬರೋಬ್ಬರಿ 3 ಕೆಜಿ ತೂಕದ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿದ್ದ ಖದೀಮನನ್ನು ಹಿಡಿಯಲು ಹೋದ ಪೊಲೀಸರು,​ ಆತನ ಸ್ಪೈಡರ್​ಮ್ಯಾನ್ ಸಾಹಸ ಕಂಡು ಒಂದು ಕ್ಷಣ ದಂಗಾದ ಪ್ರಸಂಗ ಜರುಗಿದೆ. ಕೊಯಮತ್ತೂರಿನ ಆಭರಣದಂಗಡಿಗೆ ನಸುಕಿನ ಜಾವದಲ್ಲಿ ಗೋಡೆಯನ್ನು ಮೊದಲು ಒಡೆಯುವ ಖದೀಮ ಕಿರಿದಾದ ಕಿಂಡಿಯನ್ನು ಮಾಡಿ, ಅದರೊಳಗೆ ನುಸುಳಿ, ಮೂರನೇ ಮಹಡಿಗೆ ಸರಸರನೇ ಏರಿ, ​ ಆಭರಣದ ಅಂಗಡಿಗೆ ನುಗ್ಗುತ್ತಾನೆ. ಇದಾದ ಬಳಿಕ ತನ್ನ ಬಟ್ಟೆಯನ್ನು ಬದಲಾಯಿಸಿಕೊಂಡು, ಎಚ್ಚರಿಕೆಯಿಂದ ಸುಮಾರು 150 ಸವರನ್​ ಅಂದರೆ,

ಸ್ಪೈಡರ್​ಮ್ಯಾನ್​ನಂತೆ ಎಸ್ಕೇಪ್ ಆದ ಚಿನ್ನ ಕಳ್ಳ​: ಖದೀಮನ ಚಾಕಚಕ್ಯತೆ ಕಂಡು ದಂಗಾದ ಪೊಲೀಸರು!! Read More »

error: Content is protected !!
Scroll to Top