ಅಪರಾಧ

ಪುಟ್ಟ ಮಗುವಿನ ಶವ ತೇಲುತ್ತಿರುವ‌ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆ

ಬೆಂಗಳೂರು: ಪುಟಾಣಿ ಮಗುವಿನ ಶವವೊಂದು ‌ಮಾಗಡಿ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುದೂರು ‌ಪೊಲೀಸ್ ಠಾಣಾ ವ್ಯಾಪ್ತಿಯ ಬಸವಣ್ಣ ದೇಗುಲದ ಬಳಿ ಈ ದೃಶ್ಯ ಕಂಡು ಬಂದಿದೆ. ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಈ ದೃಶ್ಯವನ್ನು ಮೊದಲು ನೋಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿಯನ್ವಯ ಮಗು ಸತ್ತು ಸುಮಾರು ಎರಡು ತಿಂಗಳುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ಆರಂಭ ಮಾಡಿರುವ ಪೊಲೀಸರು ಮಗುವಿನ ಈ ಸ್ಥಿತಿಗೆ ಕಾರಣ ಏನು?, […]

ಪುಟ್ಟ ಮಗುವಿನ ಶವ ತೇಲುತ್ತಿರುವ‌ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆ Read More »

ಹಲವರಿಂದ ಹಲ್ಲೆ: ದೂರು ದಾಖಲು

ಪುತ್ತೂರು: ತನ್ನ ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದಾಗ ಕೆಲವು ಜನರು ಬಂದು ಹಲ್ಲೆ ನಡೆಸಿದ್ದಾಗಿ ಈಶ್ವರಮಂಗಲದ ಪಡುವನ್ನೂರು ನಿವಾಸಿ ಮಹಮ್ಮದ್ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ರಹಮಾನ್, ಸಾಹುಲ್ ಹಮೀದ್, ಮಿಕ್ತಾದ್, ರಶೀದ್, ಮೊಯಿದು ಎಂಬವರು ಬಂದು ಅವಾಚ್ಯವಾಗಿ ನಿಂದಿಸುತ್ತಾ, ನಮ್ಮ ಹಣ ತಿಂದಿದ್ದೀಯಾ ಎಂದು ಗದರಿಸುತ್ತಾ, ನಮ್ಮ ಜಾಗ ಇದು, ಇಲ್ಲಿ ಕಾಂಪೌಂಡ್ ಕಟ್ಟುತ್ತೀಯಾ ಎಂದು ಬೈದು ಹಲ್ಲೆ ನಡೆಸಿದ್ದಾರೆ. ಈ ವೇಳೆ ನನ್ನ ಪತ್ನಿ ಸೆಫಿಯಾ ಬರುವುದನ್ನು ಕಂಡು

ಹಲವರಿಂದ ಹಲ್ಲೆ: ದೂರು ದಾಖಲು Read More »

ಎಂಟು ತಿಂಗಳಾದರೂ ಪತ್ತೆಯಾಗದ ಇಬ್ಬರು ವಿದ್ಯಾರ್ಥಿನಿಯರು : ತನಿಖೆ ಸಿಐಡಿಗೆ ಹಸ್ತಾಂತರ

ಬೆಂಗಳೂರಿನ ವಿದ್ಯಾರಣ್ಯಪುರದಿಂದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಿಗೂಢ ನಾಪತ್ತೆ ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರಿ ಇನ್ನೂ ಪತ್ತೆಯಾಗದಿರುವುದು ಕಳವಳ ಮೂಡಿಸಿದೆ. ಈ ನಿಗೂಢ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಈಗ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಒಪ್ಪಿಸಿದೆ. ಘಟನೆ ನಡೆದು ಎಂಟು ತಿಂಗಳು ಕಳೆದರೂ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಆಕೆಯ

ಎಂಟು ತಿಂಗಳಾದರೂ ಪತ್ತೆಯಾಗದ ಇಬ್ಬರು ವಿದ್ಯಾರ್ಥಿನಿಯರು : ತನಿಖೆ ಸಿಐಡಿಗೆ ಹಸ್ತಾಂತರ Read More »

ಪಶ್ಚಿಮ ಬಂಗಾಳ : ಎರಡನೇ ಹಂತದ ಮತದಾನದ ವೇಳೆ ವ್ಯಾಪಕ ಹಿಂಸಾಚಾರ

ಬಿಜೆಪಿ ಬೂತ್‌ ಏಜೆಂಟ್‌ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನವು ಇಂದು ನಡೆಯುತ್ತಿದ್ದು, ಮತದಾನದ ಆರಂಭಿಕ ಗಂಟೆಗಳಲ್ಲೇ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಳು ನಡೆದ ವರದಿಯಾಗಿದೆ. ಬೆಳಿಗ್ಗೆ 9 ಗಂಟೆಯವರೆಗೆ ರಾಜ್ಯದಲ್ಲಿ ಸರಾಸರಿ 18.39% ಮತದಾನ ದಾಖಲಾಗಿದೆ. ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 20.86% ಮತದಾನವಾಗಿದ್ದರೆ, ಹೂಗ್ಲಿಯಲ್ಲಿ 20.16% ಮತದಾನ ನಡೆದಿದೆ. ಚಪ್ರಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 53ರಲ್ಲಿ

ಪಶ್ಚಿಮ ಬಂಗಾಳ : ಎರಡನೇ ಹಂತದ ಮತದಾನದ ವೇಳೆ ವ್ಯಾಪಕ ಹಿಂಸಾಚಾರ Read More »

ನಳ್ಳಿ ನೀರಿನ ವಿಚಾರಕ್ಕೆ ನಿಂದನೆ, ಹಲ್ಲೆ: ದೂರು ದಾಖಲು

ಪುತ್ತೂರು: ನಳ್ಳಿ ‌ನೀರಿನ ಸರಬರಾಜು ವಿಷಯಕ್ಕೆ ಸಂಬಂಧಿಸಿದ ಹಾಗೆ ಹಲ್ಲೆ ನಡೆದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಶಾಂತಿಗೋಡು ಗ್ರಾಮದ ಉಮೇಶ್ ಖಂಡಿಗ ಅವರು ದೂರು ನೀಡಿರುವುದಾಗಿದೆ. ಉಮೇಶ್ ಅವರು ನರಿಮೊಗರು ಪಂಚಾಯತ್‌ನಿಂದ ನಳ್ಳಿ ‌ನೀರಿನ ಸೌಲಭ್ಯ ಪಡೆದಿದ್ದು, ಅವರ ಮನೆಗೆ ನೀರು ಸರಬರಾಜು ಸ್ಥಗಿತವಾಗಿತ್ತು‌. ಈ ಬಗ್ಗೆ ನೀರು ಬಿಡುವ ಕೆಲಸ ಮಾಡುತ್ತಿದ್ದ ಶೇಖರ್ ಎಂಬವರಿಗೆ ಕರೆ ಮಾಡಿ ನೀರು ಬಿಡುವಂತೆ ಹೇಳಿದ್ದರು. ಆದರೆ ಶೇಖರ್ ಮತ್ತು

ನಳ್ಳಿ ನೀರಿನ ವಿಚಾರಕ್ಕೆ ನಿಂದನೆ, ಹಲ್ಲೆ: ದೂರು ದಾಖಲು Read More »

ನಕಲಿ ನಂಬರ್ ಬಳಸಿ ಕಾರು ಚಲಾಯಿಸಿದ ಹಬೀಬ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ನಕಲಿ ನಂಬರ್ ಪ್ಲೇಟ್ ಬಳಸಿ ಕಾರು ಚಲಾಯಿಸಿದ ವ್ಯಕ್ತಿಯೊಬ್ಬರ ‌ವಿರುದ್ದ ಪುತ್ತೂರು ನಗರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೆಮ್ಮಿಂಜೆಯ ಕೂರ್ನಡ್ಕದ ಸಮೀಪ ಹಬೀಬ್ ಎಂಬವರು ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಚಲಾಯಿಸಿದ ಆರೋಪಿ. ಮಾರುತಿ ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ನಕಲಿ ಬಳಸಿ ಹಬೀಬ್ ಚಲಾಯಿಸುತ್ತಿದ್ದು, ರೌಂಡ್ಸ್‌ನಲ್ಲಿದ್ದ ಪೊಲೀಸರು ಕಾರನ್ನು ತಪಾಸಣೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಪರಿಶೀಲನೆಯ ಸಮಯದಲ್ಲಿ ಕಾರಿನ ನೋಂದಣಿ ಸಂಖ್ಯೆ, ಎಂಜಿನ್ ನಂಬರ್ ಮತ್ತು ಚೇಸೀಸ್ ನಂಬರ್‌ಗಳಲ್ಲಿ

ನಕಲಿ ನಂಬರ್ ಬಳಸಿ ಕಾರು ಚಲಾಯಿಸಿದ ಹಬೀಬ್ ವಿರುದ್ಧ ಪ್ರಕರಣ ದಾಖಲು Read More »

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ : ಉಗ್ರನ ಶಿಕ್ಷೆ ಪ್ರಮಾಣ ಹೆಚ್ಚಿಸಲು ಮೇಲ್ಮನವಿ

ಭೀಕರ ಕೃತ್ಯ ಎಸಗಿದ ಉಗ್ರನಿಗೆ ನೀಡಿದ ಶಿಕ್ಷೆ ಕಡಿಮೆಯಾಯಿತು ಎಂಬ ಅಭಿಪ್ರಾಯ ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್‌ ಬ್ಲಾಸ್ಟ್ ಪ್ರಕರಣದ ಅಪರಾಧಿ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷ ಕಠಿಣ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಎನ್‌ಐಎ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. 10 ವರ್ಷ ಶಿಕ್ಷೆ ತುಂಬಾ ಕಡಿಮೆ ಆಯ್ತು ಎಂದು ಎನ್‌ಐಎ ನಿರ್ಧರಿಸಿದೆ. ಶಾರಿಕ್‌ಗೆ ಈಗ 27 ವರ್ಷ, ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಇನ್ನೂ 7 ವರ್ಷ ಮಾತ್ರ ಜೈಲು ಶಿಕ್ಷೆ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ : ಉಗ್ರನ ಶಿಕ್ಷೆ ಪ್ರಮಾಣ ಹೆಚ್ಚಿಸಲು ಮೇಲ್ಮನವಿ Read More »

ಉಡುಪಿಯಲ್ಲಿ 32 ಅಕ್ರಮ ಹೋಂ ಸ್ಟೇ‌ಗಳು ಪತ್ತೆ

ಉಡುಪಿ: ಕೊಡಗಿನ ಹೋಂ‌ಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇ‌ಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ 32 ಅಕ್ರಮ ಹೋಂಸ್ಟೇಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ

ಉಡುಪಿಯಲ್ಲಿ 32 ಅಕ್ರಮ ಹೋಂ ಸ್ಟೇ‌ಗಳು ಪತ್ತೆ Read More »

ಹೊಸ ಮನೆಯ ಗೃಹ ಪ್ರವೇಶದ ಸಂತಸದಲ್ಲಿದ್ದ ಯಜಮಾನ ಹೃದಯಾಘಾತಕ್ಕೆ ಬಲಿ

ಬಂಟ್ವಾಳ: ಹೊಸ ಮನೆಯ ಗೃಹ ಪ್ರವೇಶದ ಸಂತಸದಲ್ಲಿದ್ದ ಮನೆಯ ಯಜಮಾನ, ಮುಸ್ಲಿಂ ವಿದ್ವಾಂಸರೊಬ್ಬರು ಮೃತಪಟ್ಚ ಘಟನೆ ಸಜೀಪಮುನ್ನೂರಿನ ಆಲಾಡಿ ಕೊಪ್ಪಳದಲ್ಲಿ ‌ನಡೆದಿದೆ. ಅಮೀರ್ ಅರ್ಶದಿ (36) ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ವ್ಯಕ್ತಿ. ಇವರು ಕಾಸರಗೋಡು ತಾಳಿಪಡ್ಪು ಮಸ್ಟಿದುಲ್ ಹುದಾ ಮಸೀದಿಯಲ್ಲಿ ಐದು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದರಿ. ಇತ್ತೀಚೆಗಷ್ಟೆ ಕಿಡ್ನಿ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಮಧ್ಯರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರ

ಹೊಸ ಮನೆಯ ಗೃಹ ಪ್ರವೇಶದ ಸಂತಸದಲ್ಲಿದ್ದ ಯಜಮಾನ ಹೃದಯಾಘಾತಕ್ಕೆ ಬಲಿ Read More »

ವೇಶ್ಯಾವಾಟಿಕೆಗೆ ಪ್ರಚೋದನೆ: 6 ಮಂದಿ ವಿದೇಶಿ ಮಹಿಳೆಯರು ಅರೆಸ್ಟ್

ಬೆಂಗಳೂರು: ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರು ಮಂದಿ ವಿದೇಶಿ ಮಹಿಳೆಯರನ್ನು ಕೋರಮಂಗಲ ಚೆಕ್ ಪೋಸ್ಟ್ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತುಕೊಂಡು ಗಂಡಸರನ್ನು ಪ್ರಚೋದನೆ ಮಾಡುತ್ತಿದ್ದ ವಿದೇಶಿ ಮಹಿಳೆಯರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರೈಡ್ ನಡೆಸಿರುವುದಾಗಿದೆ. ಈ ಪ್ರಕರಣದಲ್ಲಿ ಆರು ಮಂದಿ ವಿದೇಶಿ ಮಹಿಳೆಯರು ಪೊಲೀಸರ ವಶವಾಗಿದ್ದಾರೆ. ಪಾಸ್‌ಪೋರ್ಟ್, ವಿಸಾ ಮೊದಲಾದ ಎಲ್ಲಾ ದಾಖಲೆಗಳನ್ನು ಬಂಧಿತ‌ ಮಹಿಳೆಯರು ಹೊಂದಿದ್ದು, ಅವರು ಇಲ್ಲಿಗೆ ಬಂದು ಯಾತಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದರು ಎನ್ನುವ ಬಗ್ಗೆ

ವೇಶ್ಯಾವಾಟಿಕೆಗೆ ಪ್ರಚೋದನೆ: 6 ಮಂದಿ ವಿದೇಶಿ ಮಹಿಳೆಯರು ಅರೆಸ್ಟ್ Read More »

error: Content is protected !!
Scroll to Top