ಸುದ್ದಿ

ಗ್ರಾಮೀಣ ಮಕ್ಕಳಿಗೆ ನೀಟ್ ತರಬೇತಿಗೆ ಸರ್ಕಾರದಿಂದ ಸೂಕ್ತ ಕ್ರಮದ ಭರವಸೆ

ಬೆಂಗಳೂರು: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ತರಬೇತಿ ನೀಡಲು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ವಿಧಾನಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ, ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ಅವರು, ಗ್ರಾಮೀಣ ಬಡ ವಿದ್ಯಾರ್ಥಿಗಳು ನೀಟ್ ವ್ಯವಸ್ಥೆಯಿಂದ ವೈದ್ಯಕೀಯ ಶಿಕ್ಷಣದಲ್ಲಿ ಹಿಂದುಳಿಯುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿತ್ತು. ದುಬಾರಿ ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಸಾಮರ್ಥ್ಯ ಇಲ್ಲದಿರುವುದು ಪ್ರಮುಖ ಸಮಸ್ಯೆ ಎಂಬುದಾಗಿ ಸರ್ಕಾರದ ಗಮನಕ್ಕೆ ತಂದಿದ್ದರು. ಈ ಬಗ್ಗೆ […]

ಗ್ರಾಮೀಣ ಮಕ್ಕಳಿಗೆ ನೀಟ್ ತರಬೇತಿಗೆ ಸರ್ಕಾರದಿಂದ ಸೂಕ್ತ ಕ್ರಮದ ಭರವಸೆ Read More »

ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸುವ ಶಕ್ತಿ ಭಾರತಕ್ಕಿದೆ: ಫಿನ್‌ಲ್ಯಾಂಡ್

ನವದೆಹಲಿ: ಇಸ್ರೇಲ್ – ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ನಿಲ್ಲಿಸುವ ತಾಕತ್ತು ಭಾರತಕ್ಕೆ ಇದೆ. ಈ ಯುದ್ಧದಿಂದ ಇಡೀ ಜಗತ್ತು ಸಮಸ್ಯೆ ಎದುರಿಸುತ್ತಿದೆ. ಭಾರತ ಮಧ್ಯಸ್ಥಿಕೆ ವಹಿಸಿ‌ ಯುದ್ಧ ನಿಲ್ಲಿಸಲಿ ಎಂದು ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಂತಿ ಸಭೆ ನಡೆಸುವ ಮೂಲಕ ಯುದ್ಧ ನಿರತ ರಾಷ್ಟ್ರಗಳ ಬಿಕ್ಕಟ್ಟು ಶಮನಕ್ಕೆ ಭಾರತ ಪ್ರಯತ್ನ ಮಾಡಬೇಕು. ವಿಶ್ವಕ್ಕೆ ಈಗ ಯುದ್ಧ ವಿರಾಮದ ಅಗತ್ಯತೆ ಇದೆ. ಭಾರತ ಈ ಕಾರ್ಯಕ್ಕೆ ಭಾಗಿಯಾಗಬಹುದೇ ಎನ್ನುವ ಕುತೂಹಲವೂ ಇದೆ.

ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸುವ ಶಕ್ತಿ ಭಾರತಕ್ಕಿದೆ: ಫಿನ್‌ಲ್ಯಾಂಡ್ Read More »

ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ

ಕಾರವಾರ: ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಆ ಮಗುವನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ ಘಟನೆ ಶಿರಸಿಯ ಕಸ್ತೂರ್ಬಾ ‌ನಗರದಲ್ಲಿ ನಡೆದಿದೆ. ಬಾವಿಗೆ ಬಿದ್ದ ಮಗುವನ್ನು ಭುವಿ(2) ಎಂದು ಗುರುತಿಸಲಾಗಿದೆ. ಮಗು ಮನೆಯಲ್ಲಿ ಕಾಣದೇ ಇದ್ದಾಗ ಗಾಬರಿಯಾದ ಅಜ್ಜಿ ಹುಡುಕಾಡಲು ಆರಂಭಿಸಿದ್ದಾರೆ. ಹುಡುಕುತ್ತಾ ಬಾವಿಯ ಹತ್ತಿರ ಹೋದಾಗ ಬಾವಿಯಿಂದ ಮಗು ಅಳುವ ಶಬ್ಧ ಕೇಳಿಸಿದೆ. ಇಣುಕಿದಾಗ ಮಗು ಬಾವಿಗೆ ಇಳಿಸಲಾಗಿದ್ದ ಪಂಪ್‌ನ ‌ಹಗ್ಗದಲ್ಲಿ ನೇತಾಡುತ್ತಾ ಅಳುವುದು ಕಂಡು ಬಂದಿದೆ. ತಕ್ಷಣವೇ ಸಮೀಪದ ಫಯಾಜ್ ಚೌಟಿ

ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ Read More »

ಯಕ್ಷಗುರು ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ತೆಂಕಬೈಲು ಪ್ರಶಸ್ತಿ

ಕಾಸರಗೋಡು: ಜಿಲ್ಲೆಯ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಿಂದ ಕೊಡಲ್ಪಡುವ ತೆಂಕಬೈಲು ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗವತರು, ಹಿಮ್ಮೇಳದ ಗುರು ಮೋಹನ ಬೈಪಾಡಿತ್ತಾಯರಿಗೆ ಉಜಿರೆಯ ಓಡಲದ ಶ್ರೇಯ ನಿವಾಸದಲ್ಲಿ ಪ್ರದಾನಿಸಲಾಯಿತು. ಪ್ರಶಸ್ತಿಯ ಪ್ರಾಯೋಜಕ ಮತ್ತು ಭಾಗವತ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ಹಿಮ್ಮೇಳ ಕಲಾವಿದ ಚಂದ್ರಶೇಖರ ಭಟ್ ಕೊಂಕಣಾಜೆ, ಉಪನ್ಯಾಸಕ, ಕಲಾವಿದ ಜಯಪ್ರಕಾಶ ನಾಕೂರು, ಹವ್ಯಾಸಿ ಭಾಗವತ ವೆಂಕಟ್ರಮಣ ರಾವ್ ಬನ್ನೆಂಗಳ, ಉಪನ್ಯಾಸಕ ಪ್ರೊ. ಜಿ. ಪಿ. ಹೆಗಡೆ ಮೋಹನ

ಯಕ್ಷಗುರು ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ತೆಂಕಬೈಲು ಪ್ರಶಸ್ತಿ Read More »

ಕೋಳಿ ಅಂಕಕ್ಕೆ ದಾಳಿ ಮಾಡಿಸಿದ್ದಾಗಿ ಆರೋಪಿಸಿ ವ್ಯಕ್ತಿಯ ಮೇಲೆ ಹಲ್ಲೆ: ದೂರು ದಾಖಲು

ಹೆಬ್ರಿ: ವ್ಯಕ್ತಿಯೊಬ್ಬರ ಮೇಲೆ ಕೋಳಿ ಅಂಕಕ್ಕೆ ದಾಳಿ ಮಾಡಿಸಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿದ ಘಟನೆ ಹೆಬ್ರಿಯಲ್ಲಿ ವರದಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ನಾಲ್ಕೂರು ಗ್ರಾಮದ ವಿಠಲ ಎಂದು ಗುರುತಿಸಲಾಗಿದೆ. ಕೆಂಜೂರು ಜಯಕರ ಶೆಟ್ಟಿ ಎಂಬವರೇ ಹಲ್ಲೆ ನಡೆಸಿದ ಆರೋಪಿ. ವಿಠಲ ಅವರು ಮುದ್ದೂರಿಗೆ ಹೋಗುವ ಸಂದರ್ಭದಲ್ಲಿ ಜಯಕರ ಅವರು ಪಾದೆ ಮಠದಲ್ಲಿ ನಡೆದ ಕೋಳಿ ಅಂಕಕ್ಕೆ ದಾಳಿ ಮಾಡಿಸಿರುವುದಾಗಿ ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾಗಿ ವಿಠಲ ಅವರು ಹೆಬ್ರಿ ಠಾಣೆಗೆ ದೂರು ನೀಡಿರುವುದಾಗಿದೆ.

ಕೋಳಿ ಅಂಕಕ್ಕೆ ದಾಳಿ ಮಾಡಿಸಿದ್ದಾಗಿ ಆರೋಪಿಸಿ ವ್ಯಕ್ತಿಯ ಮೇಲೆ ಹಲ್ಲೆ: ದೂರು ದಾಖಲು Read More »

ಲೈಂಗಿಕ ಕಿರುಕುಳ ಆರೋಪ : ಮೂಡುಬಿದಿರೆ ಇನ್‌ಸ್ಪೆಕ್ಟರ್‌ರ ಇನ್ನಷ್ಟು ವಿಡಿಯೋ ಬಹಿರಂಗ

ಕಾಂಪೌಂಡ್‌ ಹಾರುವ, ಮಹಿಳೆಯ ಕೈ ಹಿಡಿದು ಡ್ಯಾನ್ಸ್‌ ಮಾಡುವ ವಿಡಿಯೋಗಳು ವೈರಲ್‌ ಮಂಗಳೂರು : ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರದ್ದು ಎನ್ನಲಾದ ಇನ್ನಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ದೂರು ನೀಡಲು ಬಂದ ಮಹಿಳೆಯರನ್ನೇ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿರುವ ಆರೋಪ ಎದುರಿಸುತ್ತಿರುವ ಸಂದೇಶ್ ಪಿಜಿ ವಿರುದ್ಧ ಇದೀಗ ಇನ್ನೂ ಅನೇಕ ಆರೋಪಗಳು ಕೇಳಿಬರುತ್ತಿವೆ. ಸಂದೇಶ್ ಪಿ.ಜಿ.ಅಡುಗೆ ಕೋಣೆಯಲ್ಲಿ ಮಹಿಳೆಯೊಬ್ಬಳ ಕೈಹಿಡಿದು ಬಲವಂತವಾಗಿ ಕುಣಿಸುತ್ತಿರುವ ಹಾಗೂ

ಲೈಂಗಿಕ ಕಿರುಕುಳ ಆರೋಪ : ಮೂಡುಬಿದಿರೆ ಇನ್‌ಸ್ಪೆಕ್ಟರ್‌ರ ಇನ್ನಷ್ಟು ವಿಡಿಯೋ ಬಹಿರಂಗ Read More »

ಭಾರಿ ಗಾಳೆಮಳೆಗೆ ಧರಾಶಾಯಿಯಾದ ನೆಲ್ಲಿಕಟ್ಟೆಯ ಅತಿ ಎತ್ತರದಲ್ಲಿದ್ದ ರಾಷ್ಟ್ರಧ್ವಜ

ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ರಾಷ್ಟ್ರಧ್ವಜ ಪುತ್ತೂರು: ನೆಲ್ಲಿಕಟ್ಟೆ ಉದ್ಯಾನದಲ್ಲಿ ಸ್ಥಾಪಿಸಲಾಗಿದ್ದ ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ದೊಡ್ಡ ಗಾತ್ರದ ರಾಷ್ಟ್ರಧ್ವಜ ಸೋಮವಾರ ರಾತ್ರಿ ಬೀಸಿದ ಭಾರಿ ಗಾಳಿಮಳೆಗೆ ಧರಾಶಾಯಿಯಾಗಿದೆ. ಭಾರಿ ಗಾಳಿಮಳೆಗೆ ಧ್ವಜದ ದಾರ ಕಡಿದು ಧ್ವಜ ಸಮೀಪ ವಿದ್ಯುತ್‌ ತಂತಿಯ ಮೇಲೆ ಬಿದ್ದಾಗ ಶಾರ್ಟ್‌ ಸರ್ಕ್ಯೂಟ್‌ ಆಗಿದ್ದು, ಇದರ ಪರಿಣಾಮ ತುಸು ಹೊತ್ತು ವಿದ್ಯುತ್‌ ಕೈಕೊಟ್ಟಿತ್ತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಧ್ವಜವನ್ನು

ಭಾರಿ ಗಾಳೆಮಳೆಗೆ ಧರಾಶಾಯಿಯಾದ ನೆಲ್ಲಿಕಟ್ಟೆಯ ಅತಿ ಎತ್ತರದಲ್ಲಿದ್ದ ರಾಷ್ಟ್ರಧ್ವಜ Read More »

ತಿಮರೋಡಿಗೆ ಮೂರನೇ ಬಾರಿ ಗಡಿಪಾರು ನೋಟಿಸ್‌

ಮಧ್ಯರಾತ್ರಿ ಹೋಗಿ ಮನೆಗೆ ನೋಟಿಸ್‌ ಅಂಟಿಸಿರುವ ಪೊಲೀಸರು ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಮಾ.16ರಂದು (16-03-2026 ರಿಂದ 16-09-2026 ರವರೆಗೆ) ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಆರು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಎಸಿ ಗಡಿಪಾರು ಆದೇಶದಂತೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ

ತಿಮರೋಡಿಗೆ ಮೂರನೇ ಬಾರಿ ಗಡಿಪಾರು ನೋಟಿಸ್‌ Read More »

ಇರಾಕ್‌ ಮೇಲೂ ಇರಾನ್‌ನಿಂದ ಕ್ಷಿಪಣಿ ದಾಳಿ

ಅಮೆರಿಕ ರಾಯಭಾರ ಕಚೇರಿಗೆ ಅಪ್ಪಳಿಸಿದ ಕ್ಷಿಪಣಿಗಳು ಬಾಗ್ದಾದ್‌: ಇರಾನ್‌, ಇಸ್ರೇಲ್‌ ಮತ್ತು ಅಮೆರಿಕದ ನಡುವಿನ ಭೀಕರ ಯುದ್ಧ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚುತ್ತಾ ಹೋಗುತ್ತಿದ್ದು, ಜತ್ತಿನಾದ್ಯಂತ ಹಾಹಾಕಾರ ಎದ್ದಿದೆ. ಇರಾನ್‌ ತನ್ನ ದಾಳಿಯ ಗುರಿಗಳನ್ನು ಇನ್ನಷ್ಟು ಹೆಚ್ಚಿಸುತ್ತಾ ಹೋಗಿದೆ. ಇರಾಕ್‌ನಲ್ಲಿರುವ ಅಮೆರಿಕದ ದೂತವಾಸದ ಮೇಲೆ ಇರಾನ್‌ ಡ್ರೋನ್‌ ಮತ್ತು ಕ್ಷಿಪಣಿಗಳು ಅಪ್ಪಳಿಸಿದ್ದು, ಈಗ ಇರಾಕನ್ನೂ ಯುದ್ಧಭೂಮಿಗೆ ಕರೆದಂತಾಗಿದೆ. ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಡ್ರೋನ್ ಹಾಗೂ

ಇರಾಕ್‌ ಮೇಲೂ ಇರಾನ್‌ನಿಂದ ಕ್ಷಿಪಣಿ ದಾಳಿ Read More »

ಅಫಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನ ಭೀಕರ ದಾಳಿ : 400ಕ್ಕೂ ಅಧಿಕ ಮಂದಿ ಸಾವು

ಅಫಘಾನಿಸ್ತಾನದ ಇತಿಹಾಸದಲ್ಲೇ ಅತಿದೊಡ್ಡ ದಾಳಿ ; ನೂರಾರು ಮಂದಿಗೆ ಗಾಯ ಕಾಬೂಲ್‌: ಇಲ್ಲಿನ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ಬಾಂಬ್‌ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ. ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. 400 ಮಂದಿ ಸಾವಿಗೀಡಾಗಿದ್ದು, 250 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್

ಅಫಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನ ಭೀಕರ ದಾಳಿ : 400ಕ್ಕೂ ಅಧಿಕ ಮಂದಿ ಸಾವು Read More »

error: Content is protected !!
Scroll to Top