ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಅವರ ತಾಯಿಯ ಫೋಟೋ ಹಂಚಿದ ಕಾಂಗ್ರೆಸ್: ಬಿಜೆಪಿ ಆಕ್ರೋಶ

ನವದೆಹಲಿ: ಬಿಹಾರದ ಕಾಂಗ್ರೆಸ್ ಪಕ್ಷ ತನ್ನ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರ ತಾಯಿ ದಿ. ಹೀರಾಬೆನ್ ಅವರ ಎಐ ವಿಡಿಯೋವನ್ನು ಹಂಚಿಕೊಂಡಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಸುಮಾರು 36 ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ಬಿಹಾರದ ಚುನಾವಣೆಗೂ ಮೊದಲು ವೈಯಕ್ತಿಕ ನೆಲೆಯಲ್ಲಿ ದಾಳಿ ಮಾಡುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಂಡಿದೆ ಎಂದು ಬಿಜೆಪಿ ಆಕ್ರೋಶ ತೋರಿಸಿದೆ. ಆದರೆ ಇದರಲ್ಲಿ ಯಾರಿಗೂ ಅವಮಾನ ಮಾಡಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ವಿಡಿಯೋವನ್ನು ಪ್ರಧಾನಿ […]

ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಅವರ ತಾಯಿಯ ಫೋಟೋ ಹಂಚಿದ ಕಾಂಗ್ರೆಸ್: ಬಿಜೆಪಿ ಆಕ್ರೋಶ Read More »

ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಇಂದು ಪದಗ್ರಹಣ

ಹಲವು ಮುಖ್ಯಮಂತ್ರಿಗಳ ಸಹಿತ ಗಣ್ಯರು ಭಾಗಿಯಾಗುವ ನಿರೀಕ್ಷೆ ನವದೆಹಲಿ: ಎನ್‌ಡಿಎ ಅಭ್ಯರ್ಥಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಇಂದು ದೇಶದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಂಗಳವಾರ (ಸೆ.9) ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳಿಸುವ ಮೂಲಕ ಗೆಲವು ಸಾಧಿಸಿದ್ದರು. ಶುಕ್ರವಾರ ಬೆಳಗ್ಗೆ 10 ಗಂಟೆಗೆ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿ, ಪದಗ್ರಹಣ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕರ್ನಾಟಕ

ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಇಂದು ಪದಗ್ರಹಣ Read More »

ಉಡುಪಿ : ಟ್ರಕ್‌ನಲ್ಲಿ ಸಾಗಿಸುತ್ತಿದ್ದ 65 ಕೆ.ಜಿ.ಗಾಂಜಾ ವಶ, ಇಬ್ಬರ ಬಂಧನ

ಟ್ರಕ್‌ ಸಹಿತ 72 ಲ.ರೂ. ಮೌಲ್ಯದ ಸೊತ್ತು ವಶ ಉಡುಪಿ: ಟ್ರಕ್ ಒಂದರಲ್ಲಿ ಸಾಗಿಸುತ್ತಿದ್ದ ಸುಮಾರು 65 ಕೆಜಿ ಗಾಂಜಾವನ್ನು ಉಡುಪಿ ಸಮೀಪ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಲ್ಪೆ ವೃತ್ತ ನಿರೀಕ್ಷಕ, ಸೆನ್ ವಿಭಾಗದ ಇನ್‌ಸ್ಪೆಕ್ಟರ್ ನಿತ್ಯಾನಂದ ನಾಯಕ್ ಟ್ರಕ್ ಅಡ್ಡ ಹಾಕಿ ತಪಾಸಣೆ ನಡೆಸಿದಾಗ ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ. ಉಡುಪಿಯ ಕಿನ್ನಿಮೂಲ್ಕಿ ಜಂಕ್ಷನ್‌ನಲ್ಲಿ ಲಾರಿಯನ್ನು ಅಡ್ಡ ಹಾಕಿದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಗೋಣಿಯಲ್ಲಿ

ಉಡುಪಿ : ಟ್ರಕ್‌ನಲ್ಲಿ ಸಾಗಿಸುತ್ತಿದ್ದ 65 ಕೆ.ಜಿ.ಗಾಂಜಾ ವಶ, ಇಬ್ಬರ ಬಂಧನ Read More »

ರಾಶಿ ರಾಶಿ ಹೆಣ ಸಿಕ್ಕಿದೆ ಎಂದು ಹೇಳಿದ ವಿಠಲ ಗೌಡ ವಿಡಿಯೋದಿಂದ ತಿರುವು

ವಿಚಾರಣೆ ಮುಗಿದ ಬಳಿಕ ಬಂಗ್ಲೆಗುಡ್ಡೆ ಕಾಡಿನಲ್ಲಿ ಹೆಣಗಳಿವೆ ಎಂದ ವಿಠಲ ಗೌಡ ಧರ್ಮಸ್ಥಳ: ಧರ್ಮಸ್ಥಳದ ಬಂಗ್ಲೆಗುಡ್ಡೆ ಕಾಡಿನಲ್ಲಿ ಹೆಣಗಳ ರಾಶಿ ಸಿಕ್ಕಿದೆ ಎಂದು ಸೌಜನ್ಯಾಳ ಮಾವ ವಿಠಲ ಗೌಡ ಹೇಳಿರುವುದು ನಿನ್ನೆಯಿಂದೀಚೆಗೆ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವುದು ನೀಡಿದೆ. ಎಸ್​​ಐಟಿ ವಿಚಾರಣೆ ಬಳಿಕ ವಿಠಲ್ ಗೌಡ ಖಾಸಗಿ ವಾಹಿನಿಗೆ ನೀಡಿದ ವಿಠಲ ಗೌಡ ಬಂಗ್ಲೆಗುಡ್ಡೆ ಕಾಡಿನಲ್ಲಿ ಹೆಣಗಳ ರಾಶಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ ಎಂಬ ಹೇಳಿಕೆ ಸಂಚಲನ ಸೃಷ್ಟಿಸಿದೆ. ಬುರುಡೆ ಪ್ರಕರಣ ಸಂಬಂಧ ವಿಠಲ ಗೌಡ

ರಾಶಿ ರಾಶಿ ಹೆಣ ಸಿಕ್ಕಿದೆ ಎಂದು ಹೇಳಿದ ವಿಠಲ ಗೌಡ ವಿಡಿಯೋದಿಂದ ತಿರುವು Read More »

ಶ್ರೀ ಮಹಾಭಾರತ ಸರಣಿಯಲ್ಲಿ ಮಹಿಳಾ ಯಕ್ಷಕೂಟ ಕದ್ರಿ ಇವರಿಂದ ಗದಾಯುದ್ಧ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಕಲಾ ಸೇವಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 95ನೇ ಕಾರ್ಯಕ್ರಮವಾಗಿ ಮಹಿಳಾ ಯಕ್ಷಕೂಟ ಕದ್ರಿಮಂಗಳೂರು ಬಳಗದಿಂದ ಎಲ್ಲೂರು ರಾಮಚಂದ್ರರಾವ್ ನಿರ್ದೇಶನದಲ್ಲಿ ಗದಾಯುದ್ಧ ತಾಳಮದ್ದಳೆ ಉಪ್ಪಿನಂಗಡಿ ರಾಮನಗರದ ಶಾರದಾ ಕಲಾಮಂಟಪದಲ್ಲಿ ಜರಗಿತು. ಭಾಗವತರಾಗಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನರ್,ಕೃಷ್ಣರಾವ್, ಚಕ್ರತಾಳದಲ್ಲಿ ರಾಮಚಂದ್ರ ಎಲ್ಲೂರು ಅರ್ಥಧಾರಿಗಳಾಗಿವನಿತಾ ಎಲ್ಲೂರು (ಕೌರವ 1) ರಂಜಿತಾ ಎಲ್ಲೂರು( ಕೌರವ 2) ವಿಶಾಲ ಕೇಶವ ಭಟ್ (ಭೀಮ) ಶೀಲಾ ಜಯಪ್ರಕಾಶ್ (ಅಶ್ವತ್ಥಾಮ) ರಮಾಮಣಿ ಭಟ್ (ಸಂಜಯ) ಸಂಧ್ಯಾ

ಶ್ರೀ ಮಹಾಭಾರತ ಸರಣಿಯಲ್ಲಿ ಮಹಿಳಾ ಯಕ್ಷಕೂಟ ಕದ್ರಿ ಇವರಿಂದ ಗದಾಯುದ್ಧ ತಾಳಮದ್ದಳೆ Read More »

ಬ್ಯಾಂಕ್‌ಗಳಿಗೆ ವಂಚಿಸಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಭಾರತಕ್ಕೆ ಹಸ್ತಾಂತರ ಮಾಡಿದ ಕುವೈತ್

ನವದೆಹಲಿ: ಬ್ಯಾಂಕುಗಳಿಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಆರೋಪಿ ಮುನಾವರ್ ಖಾನ್ ಎಂಬ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಕುವೈತ್‌ನಿಂದ ಗಡೀಪಾರು ಮಾಡುವಲ್ಲಿ ಸಿಬಿಐ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಈತನ ವಿರುದ್ಧ 2022 ರಲ್ಲಿ ಚೆನ್ನೈ‌ನ ಸಿಬಿಐ ಸ್ಪೆಷಲ್ ಟಾಸ್ಕ್ ಬ್ರಾಂಚ್ ರೆಡ್ ಕಾರ್ನರ್ ನೊಟೀಸು ಜಾರಿ ಮಾಡುವಂತೆ ಇಂಟರ್ ಪೋಲ್‌ಗೆ ಮನವಿ ಸಲ್ಲಿಸಿತ್ತು. ಹೀಗಾಗಿ ಕುವೈತ್ ಅಧಿಕಾರಿಗಳ ಅನುಮತಿಯ ಬಳಿಕ ಆರೋಪಿಯನ್ನು ಸಿಬಿಐ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈತನನ್ನು ಕುವೈತ್ ಪೊಲೀಸ್ ಬೆಂಗಾವಲಿನ

ಬ್ಯಾಂಕ್‌ಗಳಿಗೆ ವಂಚಿಸಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಭಾರತಕ್ಕೆ ಹಸ್ತಾಂತರ ಮಾಡಿದ ಕುವೈತ್ Read More »

ನಿರ್ದೇಶಕ, ನಟ ಎಸ್‌.ನಾರಾಯಣ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು

ಸೊಸೆಗೆ ವರದಕ್ಷಿಣೆ ತರಲು ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಆರೋಪ ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ಎಸ್​. ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಾಗಿದೆ. ಸೊಸೆ ಪವಿತ್ರಾ ಅವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ನೀಡಿದ್ದು, ಇದರನ್ವಯ ಎಫ್​ಐಆರ್ ದಾಖಲಾಗಿದೆ. 2021ರಲ್ಲಿ ಎಸ್.ನಾರಾಯಣ್​ ಅವರ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ನಡೆದಿತ್ತು. ನಾಲ್ಕು ವರ್ಷ ಕಳೆಯುವುದರೊಳಗೆ ಸಂಸಾರ ಹಳಿತಪ್ಪದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ನಿರ್ದೇಶಕ, ನಟ ಎಸ್‌.ನಾರಾಯಣ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು Read More »

ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯಿತು : ಓಲಿ ಪಶ್ಚಾತ್ತಾಪ

ಭಾರತ ವಿರೋಧಿಯಾಗಿದ್ದ ಮಾಜಿ ಪ್ರಧಾನಿಯಿಂದ ಈಗ ಗೂಬೆ ಕೂರಿಸುವ ಯತ್ನ ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಜನರಲ್‌ ಝಡ್‌ ಕ್ಷಿಪ್ರ ದಂಗೆಯಲ್ಲಿ ಅಧಿಕಾರ ಕಳೆದುಕೊಂಡು ಪಲಾಯನ ಮಾಡಿರುವ ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಶ್ರೀರಾಮನನ್ನು ವಿರೋಧಿಸಿದ ನಿಲುವಿನಿಂದಾಗಿ ನನ್ನ ಅಧಿಕಾರ ಹೋಯಿತು ಎಂದು ಅಲವತ್ತುಕೊಂಡಿದ್ದಾರೆ. ಈ ಮೂಲಕ ನೇಪಾಳದ ಪ್ರತಿಭಟನೆಯ ಹಿಂದೆ ಭಾರತದ ಕೈವಾಡವಿದೆ ಎಂದು ಗೂಬೆ ಕೂರಿಸುವ ಪ್ರಯತ್ನ ಆರಂಭಿಸಿದ್ದಾರೆ. ಯುವಜನತೆಯ ಪ್ರತಿಭಟನೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶಿವಪುರದಲ್ಲಿರುವ ಬ್ಯಾರಕ್‌ನಲ್ಲಿ ಆಶ್ರಯ ಪಡೆದುಕೊಂಡಿರುವ

ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯಿತು : ಓಲಿ ಪಶ್ಚಾತ್ತಾಪ Read More »

ಮಂಗಳೂರು : ನಕಲಿ ಆಧಾರ್‌ ಕಾರ್ಡ್‌ ಜಾಲ ಬಯಲು; ಇಬ್ಬರು ಸೆರೆ

ಸರ್ಕಾರಿ ಕೆಲಸಗಳಿಗೆ ಸಲ್ಲಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಖದೀಮರು ಮಂಗಳೂರು: ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆರ್‌ಟಿಸಿಗಳನ್ನು ಸೃಷ್ಟಿಸಿ ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿ ವಂಚಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಳ್ಳಲು ಬಳಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೂಲ್ಕಿ ಬಪ್ಪನಾಡು ನಿವಾಸಿಗಳಾದ ಅಬ್ದುಲ್ ರೆಹಮಾನ್ ಮತ್ತು ನಿಶಾಂತ್ ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ನಕಲಿ ಆಧಾರ್‌ ಕಾರ್ಡ್‌ ಮೂಲಕ ಇವರು ಭಾರಿ ವಂಚನೆ ನಡೆಸಿರುವ ಕುರಿತು ಪೊಲೀಸರು ಅನುಮಾನ

ಮಂಗಳೂರು : ನಕಲಿ ಆಧಾರ್‌ ಕಾರ್ಡ್‌ ಜಾಲ ಬಯಲು; ಇಬ್ಬರು ಸೆರೆ Read More »

ಟ್ರಂಪ್‌ ಆಪ್ತ ವಿಶ್ವವಿದ್ಯಾಲಯದೊಳಗೆ ಗುಂಡೇಟಿಗೆ ಬಲಿ

ಬಂದೂಕು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರುವಾಗಲೇ ಎದೆಗೆ ಬಡಿದ ಗುಂಡು ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ 31 ವರ್ಷದ ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಚಾರ್ಲ್ಸ್ ಕಿರ್ಕ್ ಬಲಪಂಥೀಯ ರಾಜಕೀಯ ಕಾರ್ಯಕರ್ತರಾಗಿದ್ದರು. 2012 ರಲ್ಲಿ ʼಟರ್ನಿಂಗ್ ಪಾಯಿಂಟ್ʼ ಹೆಸರಿನಲ್ಲಿ ಸಂಘಟನೆಯನ್ನು ಸ್ಥಾಪಿಸಿದ್ದರು. ಟರ್ನಿಂಗ್ ಪಾಯಿಂಟ್ ಆಕ್ಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಾಷ್ಟ್ರೀಯ ನೀತಿ ಮಂಡಳಿಯ ಸದಸ್ಯರಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಚಾರ್ಲಿ

ಟ್ರಂಪ್‌ ಆಪ್ತ ವಿಶ್ವವಿದ್ಯಾಲಯದೊಳಗೆ ಗುಂಡೇಟಿಗೆ ಬಲಿ Read More »

error: Content is protected !!
Scroll to Top