ಸುದ್ದಿ

ಕೊಲ್ಲೂರು ಮೂಕಾಂಬಿಕೆಗೆ 4 ಕೋ.ರೂ. ಮೌಲ್ಯದ ವಜ್ರ ಕಿರೀಟ ಸಮರ್ಪಿಸಿದ ಇಳಯರಾಜ

ದೇವಿಯ ಪರಮ ಭಕ್ತರಾಗಿರುವ ಇಳಯರಾಜ ಉಡುಪಿ: ಕೊಲ್ಲೂರು ಮೂಕಾಂಬಿಕೆ ದೇವಿಗೆ ದಕ್ಷಿಣ ಭಾರತ ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ ಈ ಹಿಂದೆಯೂ ಮೂಕಾಂಬಿಕೆ ದೇವಿಗೆ ಬಗೆಬಗೆಯ ಆಭರಣ ನೀಡಿ ಭಕ್ತಿ ತೋರಿದ್ದರು. ಈ ಬಾರಿ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ. ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ. […]

ಕೊಲ್ಲೂರು ಮೂಕಾಂಬಿಕೆಗೆ 4 ಕೋ.ರೂ. ಮೌಲ್ಯದ ವಜ್ರ ಕಿರೀಟ ಸಮರ್ಪಿಸಿದ ಇಳಯರಾಜ Read More »

ನೇಪಾಳ : ಜೈಲುಗಳಿಗೆ ನುಗ್ಗಿದ ದಂಗೆಕೋರರು, 7000ಕ್ಕೂ ಅಧಿಕ ಕೈದಿಗಳು ಪರಾರಿ

ಘರ್ಷಣೆಯಲ್ಲಿ ಐವರು ಬಾಲಾಪರಾಧಿಗಳು ಸಾವು; ಭಾರತದ ಗಡಿಯಲ್ಲಿ ಕಟ್ಟೆಚ್ಚರ ಕಾಠ್ಮಂಡು : ನೇಪಾಳದಲ್ಲಿ ಪ್ರಾರಂಭವಾಗಿರುವ ಜನರಲ್‌ ಝಡ್‌ ಎಂದು ಕರೆಯಲಾಗುತ್ತಿರುವ ಯುವಜನರ ದಂಗೆ ಸರ್ಕಾರ ಪತನಗೊಂಡ ನಂತರವೂ ತೀವ್ರವಾಗಿ ಮುಂದುವರಿದಿದ್ದು, ದಂಗೆಕೋರರು ವಿವಿಧ ಜೈಲುಗಳಿಗೆ ದಾಳಿ ಮಾಡಿದ ಪರಿಣಾಮ 7000ಕ್ಕೂ ಅಧಿಕ ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಪ್ರಾರಂಭವಾಗಿರುವ ಪ್ರತಿಭಟನೆ ತೀವ್ರ ಹಿಂಸಾಚಾರದ ರೂಪ ತಾಳಿದೆ. ಮಂಗಳವಾರ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ ನೇಪಾಳ ಹಿಂಸಾಚಾರ ಮತ್ತು ಸಾಮೂಹಿಕ ಜೈಲು ದಾಳಿಗಳನ್ನು ಕಂಡಿದೆ.

ನೇಪಾಳ : ಜೈಲುಗಳಿಗೆ ನುಗ್ಗಿದ ದಂಗೆಕೋರರು, 7000ಕ್ಕೂ ಅಧಿಕ ಕೈದಿಗಳು ಪರಾರಿ Read More »

ಎಂ.ಡಿ.ಎಸ್.ಗೆ ಆಯ್ಕೆಯಾದ ಡಾ. ರಾಶಿ ಆರ್. ಎಸ್.

ಪುತ್ತೂರು: ಡಾ. ರಾಶಿ ಆರ್.ಎಸ್. ಅವರು ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಲ್ಲಿ ಬಿ.ಡಿ.ಎಸ್. ಪದವಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯೊಂದಿಗೆ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಿಕ್ಲಿನಿಕಲ್ ಪ್ರಾಸ್ತೋ ಡಾನ್ಸ್ಟಿಕ್‌ನಲ್ಲಿ 6ನೇ ರ್‍ಯಾಂಕ ಗಳಿಸಿದ್ದಾರೆ. ಇದೀಗ ಪ್ರತಿಷ್ಠಿತ ಎ.ಜೆ. ಶಿಕ್ಷಣ ಸಂಸ್ಥೆಯಲ್ಲಿ ಎಂ.ಡಿ. ಎಸ್‌. ಗೆ ಆಯ್ಕೆಯಾಗಿದ್ದಾರೆ. ಅವರು ಅರೆ ಸೇನಾಪಡೆ ಉದ್ಯೋಗಿ ರಾಧಾಕೃಷ್ಣ ಐಪಳ ಮತ್ತು ಕೆ. ಎಸ್. ಎಸ್. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಲತಾ ಕಮಿಲ ಅವರ ಪುತ್ರಿ.

ಎಂ.ಡಿ.ಎಸ್.ಗೆ ಆಯ್ಕೆಯಾದ ಡಾ. ರಾಶಿ ಆರ್. ಎಸ್. Read More »

ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಬಗ್ಗೆ ಮಾಹಿತಿ ಕಾರ್ಯಾಗಾರ

ಪುತ್ತೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಬಗ್ಗೆ ಮಾಹಿತಿ ಕಾರ್ಯಾಗಾರವು ದ. ಕ ಮತ್ತು ಕೊಡಗು ಜಿಲ್ಲಾ ಮಟ್ಟದ ಸಭೆಯು ತೆಂಕಿಲ ಒಕ್ಕಲಿಗ ಸಭಾಭಾವನದ ಚುಂಚಶ್ರೀಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ದೀಪ ಬೆಳಗಿಸಿ ಉದ್ಘಾಟಿಸಿದರು. ಸರ್ಕಾರವು ಸಮಾಜದ ಪ್ರತಿ ವರ್ಗಕ್ಕೂ ನ್ಯಾಯ ನೀಡುವ ದೃಷ್ಟಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಇದರ ಬಗ್ಗೆ

ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಬಗ್ಗೆ ಮಾಹಿತಿ ಕಾರ್ಯಾಗಾರ Read More »

ಬಲವಂತವಾಗಿ ಇಸ್ಲಾಂ‌ಗೆ ಮತಾಂತರ: ಆರೋಪಿಗಳ ಬಂಧನ

ಚೆನ್ನೈ: ವಿವಾಹಿತ ಮಹಿಳೆಯೊಬ್ಬಳನ್ನು ಇಸ್ಲಾಂ ಮತಕ್ಕೆ ಮತಾಂತರ ಮಾಡಿ, ವಿವಾಹವಾಗುವಂತೆ ಪೀಡಿಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ‌ನೊಯ್ಡಾ ಪೊಲೀಸರು ತಿಳಿಸಿದ್ದಾರೆ. ತನ್ನ ಮಗಳನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ಆಕೆಯ ತಾಯಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೋರ್ಟ್ ಆದೇಶದಂತೆ ಆರು ವರ್ಷದ ಮಗುವನ್ನು ಹೊಂದಿರುವ ಮಹಿಳೆಯನ್ನು ಪೊಲೀಸರು ಚೆನ್ನೈನಲ್ಲಿ ಪತ್ತೆಹಚ್ಚಿ ಮರಳಿ ಕರೆತಂದಿದ್ದಾರೆ. ಆರೋಪಿಗಳು ಮಹಿಳೆಯನ್ನು ಸಂಬಂಧಕ್ಕೆ ಆಮಿಷವೊಡ್ಡಿ, ಬಲವಂತವಾಗಿ ಮತಾಂತರಿಸಿದ ನಂತರ ಆಕೆಯ ಹೆಸರನ್ನು

ಬಲವಂತವಾಗಿ ಇಸ್ಲಾಂ‌ಗೆ ಮತಾಂತರ: ಆರೋಪಿಗಳ ಬಂಧನ Read More »

ಪ್ರಧಾನಿ ಮೋದಿ ದೇಶದ ಯುವ ಜನಾಂಗಕ್ಕೆ ಸ್ಪೂರ್ತಿ: ವಿವೇಕ್ ಒಬೆರಾಯ್

ಮುಂಬೈ: ದೇಶದ ಯುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೂರ್ತಿ ಎಂದು ನಟ ವಿವೇಕ್ ಒಬೆರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆ. 17 ರಂದು ಪ್ರಧಾನಿ ಮೋದಿ ಅವರ ಜನ್ಮದಿನ ಮತ್ತು ಅಖಿಲ ಭಾರತೀಯ ತೇರಾಪಂತ್ ಯುವಕ್ ಪರಿಷತ್ (ABTYP) ನ ಸಂಸ್ಥಾಪನಾ ದಿನ ಎರಡೂ ಆಗಿದ್ದು, ಈ ಹಿನ್ನೆಲೆಯಲ್ಲಿ ನಾವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ವಿವೇಕ್ ಒಬೆರಾಯ್ ತಿಳಿಸಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ರಕ್ತದಾನ, ನೇತ್ರದಾನ,

ಪ್ರಧಾನಿ ಮೋದಿ ದೇಶದ ಯುವ ಜನಾಂಗಕ್ಕೆ ಸ್ಪೂರ್ತಿ: ವಿವೇಕ್ ಒಬೆರಾಯ್ Read More »

ಸಮಾಜ ರತ್ನ ಪ್ರಶಸ್ತಿಗೆ ಉದ್ಯಮಿ ಡಾ.ಹರ್ಷ ಕುಮಾರ್ ರೈ ಮಾಡಾವು ಆಯ್ಕೆ

ಪುತ್ತೂರು: ಪುತ್ತೂರು ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ಸಾಧಕರಿಗೆ ನೀಡುವ ಸಮಾಜ ರತ್ನ ಪ್ರಶಸ್ತಿಗೆ ಉದ್ಯಮಿ ಸಮಾಜ ಸೇವಕ ಡಾ. ಹರ್ಪ ಕುಮಾರ್ ರೈ ಮಾಡವು ಈ ಬಾರಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ನಿವೃತ್ತ ಡಿ.ಸಿ.ಪಿ.ಜಿಎ ಬಾವಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಸನ್ಮಾನ್ಯ ಸ್ಪೀಕರ್ ಯು.ಟಿ ಖಾದರ್ ರವರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿರುತ್ತಾರೆ. ಡಾ. ಹರ್ಷ ಕುಮಾರ್

ಸಮಾಜ ರತ್ನ ಪ್ರಶಸ್ತಿಗೆ ಉದ್ಯಮಿ ಡಾ.ಹರ್ಷ ಕುಮಾರ್ ರೈ ಮಾಡಾವು ಆಯ್ಕೆ Read More »

ಪ್ರಕ್ಷುಬ್ಧ ನೇಪಾಳದಲ್ಲಿ ಸಿಲುಕಿದ್ದಾರೆ 39 ಕನ್ನಡಿಗರು

ಮೂರನೇ ದಿನವೂ ಮುಂದುವರಿದ ಹಿಂಸಾಚಾರ; ದೇಶ ಸೇನೆಯ ನಿಯಂತ್ರಣಕ್ಕೆ ಕಠ್ಮಂಡು: ನೇಪಾಳದಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ದಂಗೆಯ ಪರಿಣಾಮವಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಇನ್ನೂ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಕರ್ನಾಟಕದ 39 ಮಂದಿಯ ಸಹಿತ ನೂರಾರು ಭಾರತೀಯರು ನೇಪಾಳದಲ್ಲಿ ಸಿಕ್ಕಿ ಬಿದ್ದಿದ್ದಾರೆ. ನೇಪಾಳದ ಜೊತೆಗಿನ ಎಲ್ಲ ಭೂಗಡಿಗಳನ್ನು ಮುಚ್ಚಿ ಬಿಗು ಭದ್ರತೆ ಏರ್ಪಡಿಸಲಾಗಿದೆ. ನೇಪಾಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಮುಚ್ಚಿರುವುದರಿಂದ ಅಲ್ಲಿ ಸಿಲುಕಿದವರನ್ನು ರಕ್ಷಿಸುವುದು ಸವಾಲಿನ

ಪ್ರಕ್ಷುಬ್ಧ ನೇಪಾಳದಲ್ಲಿ ಸಿಲುಕಿದ್ದಾರೆ 39 ಕನ್ನಡಿಗರು Read More »

ಕತಾರ್‌ : ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಹಮಾಸ್‌ ನಾಯಕರ ಮೇಲೆ ಇಸ್ರೇಲ್‌ ದಾಳಿ

ಹಮಾಸ್‌ ನಾಯಕನ ಪುತ್ರ ಸೇರಿ ಆರು ಮಂದಿ ಬಲಿ ಟೆಲ್‌ಅವಿವ್‌: ಕತಾರ್‌ ರಾಜಧಾನಿ ದೋಹಾದಲ್ಲಿ ಇಸ್ರೇಲ್‌ ನಡೆಸಿದ ಭೀಕರ ವಾಯುದಾಳಿಯಲ್ಲಿ ನಮ್ಮ ನಾಯಕ ಬದುಕುಳಿದಿದ್ದಾರೆ. ಆದ್ರೆ ಹಮಾಸ್‌ ನಾಯಕ ಪುತ್ರ ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ ಬಂಡುಕೋರರ ಗುಂಪು ಅಧಿಕೃತ ಹೇಳಿಕೆ ನೀಡಿದೆ. ಕತಾರ್‌ನ ರಾಜಧಾನಿ ದೋಹಾದಲ್ಲಿ ಮಂಗಳವಾರ ಹಮಾಸ್‌ ಹಿರಿಯ ನಾಯಕರ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ರಕ್ಷಣಾ ಪಡೆ ಮತ್ತು ಇಸ್ರೇಲ್ ಭದ್ರತಾ ಸಂಸ್ಥೆ ವಾಯುದಾಳಿ ನಡೆಸಿತ್ತು. ಇಸ್ರೇಲ್‌ನ ದಾಳಿಯ

ಕತಾರ್‌ : ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಹಮಾಸ್‌ ನಾಯಕರ ಮೇಲೆ ಇಸ್ರೇಲ್‌ ದಾಳಿ Read More »

ಧರ್ಮಸ್ಥಳ ಪ್ರಕರಣ : ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ಇನ್ನೊಂದು ದೂರು ದಾಖಲು

ಯೂಟ್ಯೂಬರ್‌ಗಳಿಗೆ ಹರಿದು ಬಂದ ಹಣದ ಮೂಲ; ಷಡ್ಯಂತ್ರದ ರೂವಾರಿಗಳನ್ನು ಪತ್ತೆ ಹಚ್ಚಲು ಮನವಿ ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿಸಿಕೊಂಡು ಅಕ್ರಮ ಹಣ ವರ್ಗಾವಣೆ, ಕ್ರಿಮಿನಲ್ ಸಂಚು ರೂಪಿಸುತ್ತಿರುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮದ ಸುರೇಂದ್ರ ಪ್ರಭು ಎಂಬವರು ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ಸೆ.9ರಂದು ದೂರು ನೀಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇವಾಲಯದ ವಿರುದ್ಧ ಸುಳ್ಳು ನಿರೂಪಣೆ

ಧರ್ಮಸ್ಥಳ ಪ್ರಕರಣ : ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ಇನ್ನೊಂದು ದೂರು ದಾಖಲು Read More »

error: Content is protected !!
Scroll to Top