ಸುದ್ದಿ

ಬ್ರೈನ್ ಸ್ಟ್ರೋಕ್‌ಗೆ 25 ರ ಯುವತಿ ಸಾವು

ಬೆಂಗಳೂರು: ತಾಯಿ ಜೊತೆಗೆ ಮಾತನಾಡುತ್ತಿದ್ದ ಸಮಯದಲ್ಲೇ ಬ್ರೈನ್ ಸ್ಟ್ರೋಕ್‌ಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಶ್ವೇತಾ (25) ಮೃತ ದುರ್ದೈವಿ. ಎ. 25 ರಂದು ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಮ್ಮ ತಾಯಿಯ ಜೊತೆಗೆ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರು ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ದಾರಿಯಲ್ಲೇ ಶ್ವೇತಾ ಕೋಮಾ‌ಗೆ ಜಾರಿದ್ದು, ಆಗಲೇ ಆಕೆಯ ಅಂಗಾಂಗ […]

ಬ್ರೈನ್ ಸ್ಟ್ರೋಕ್‌ಗೆ 25 ರ ಯುವತಿ ಸಾವು Read More »

ಸಂಬಳ ಕೊಡಲಿಲ್ಲ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ಕೇಬಲ್‌ ಕಟ್‌ ಮಾಡಿದ ನೌಕರರು!

ಐಪಿಎಲ್‌ ಪಂದ್ಯದ ದಿನವೇ ಸಿಸಿಟಿವಿ ಬಂದ್‌ ಆಗಿ ಆತಂಕದ ಪರಿಸ್ಥಿತಿ ಬೆಂಗಳೂರು : ಕಳೆದ ಶುಕ್ರವಾರ ಆರ್​ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಕೇಬಲ್ ಕಟ್ ಆಗಿ ಆತಂಕ ಮೂಡಿಸಿತ್ತು. ಇದು ವಿಧ್ವಂಸಕ ಕೃತ್ಯವಿರಬಹುದು ಎಂಬ ಅನುಮಾನದಲ್ಲಿ ತನಿಖೆ ಕೈಗೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ಈಗ ತೀರಾ ವೈಯಕ್ತಿಕ ಕಾರಣ ತಿಳಿದುಬಂದಿದೆ. ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ನಿರ್ವಹಣೆಯ ಹೊಣೆಯನ್ನು ‘IVS ಡಿಜಿಟಲ್ ಸೊಲ್ಯೂಷನ್’ ಎಂಬ

ಸಂಬಳ ಕೊಡಲಿಲ್ಲ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ಕೇಬಲ್‌ ಕಟ್‌ ಮಾಡಿದ ನೌಕರರು! Read More »

ಚಿನ್ನಾಭರಣಕ್ಕಾಗಿ ಮಹಿಳೆಯ ಕೊಲೆ: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು: ಚಿನ್ನಾಭರಣದ ಆಸೆಯಿಂದ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಸಂಬಂಧಿ ಮಹಿಳೆಯನ್ನು ಹತ್ಯೆ ಮಾಡಿ ಹೈಕೋರ್ಟ್‌ನಿಂದ ‌ಶಿಕ್ಷೆಗೆ ತುತ್ತಾಗಿದ್ದರೂ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಕಡಬ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸುಳ್ಯದ ಅಜ್ಜಾವರ ನಿವಾಸಿ ಅಬ್ದುಲ್ ಅಜೀಜ್ ಎಂದು ಗುರುತಿಸಲಾಗಿದೆ. ಅಜೀಜ್ 2012 ರ ಜನವರಿ 9 ರಂದು ಬೆಳ್ತಂಗಡಿಯ ತಣ್ಣೀರುಪಂಥದ ತನ್ನ ಸಂಬಂಧಿ ಖತೀಜಮ್ಮ ಎಂಬಾಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಈತ ವಿದೇಶದಿಂದ ಮರಳಿದ್ದ ‌ಸಮಯ ಅದಾಗಿದ್ದು, ಆತನಿಗೆ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಆತ ತನ್ನ

ಚಿನ್ನಾಭರಣಕ್ಕಾಗಿ ಮಹಿಳೆಯ ಕೊಲೆ: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಬೈಕ್ – ಕಾರುಗಳ ನಡುವೆ ಅಪಘಾತ

ಪುತ್ತೂರು: ಮುಕ್ರಂಪಾಡಿಯ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಸರಣಿ ಅಪಘಾತ ಎ. 26 ರಂದು ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಬೈಕ್ ಪುತ್ತೂರಿನಿಂದ ‌ಸುಳ್ಯದತ್ತ ತೆರಳುತ್ತಿತ್ತು. ಕಾರುಗಳು ಸುಳ್ಯದಿಂದ ಪುತ್ತೂರಿನ ಕಡೆಗೆ ಸಾಗುತ್ತಿತ್ತು. ಮುಕ್ರಂಪಾಡಿ ಸಮೀಪ ಬೈಕ್ ಮತ್ತು ಕಾರುಗಳ ನಡುವೆ ಮುಖಾಮುಖಿ ಸರಣಿ ಅಪಘಾತ ನಡೆದಿರುವುದಾಗಿದೆ. ಅಪಘಾತದಲ್ಲಿ ಕಾರುಗಳಿಗೂ ತೀವ್ರ ಹಾನಿಯಾಗಿದೆ ಎಂದು ವರದಿಯಾಗಿದೆ. ಬೈಕ್ ಸವಾರರ ಕಾಲಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಮೆಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬೈಕ್ – ಕಾರುಗಳ ನಡುವೆ ಅಪಘಾತ Read More »

ಕೊಳೆತು ನಾರುತ್ತಿದ್ದ ‌ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆ

ಉಪ್ಪಿನಂಗಡಿ: ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದು, ಜನಗಣತಿ ಲೆಕ್ಕ ತೆಗೆಯಲು ಮನೆಯತ್ತ ಜನರು ಬಂದಾಗಲೇ ‌ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಇಳಂತಿಲದ ನೇಜಿಕಾರ್ ನಿವಾಸಿ ಸುಂದರಿ(65) ಎಂದು ಗುರುತಿಸಲಾಗಿದೆ. ಎ. 14 ರಂದು ಸುಂದರಿ ಅವರನ್ನು ಸಾರ್ವಜನಿಕರು ನೋಡಿದ್ದರು. ಆ ಬಳಿಕ ಅವರನ್ನು ಯಾರೂ ನೋಡಿರಲಿಲ್ಲ. ಎ. 18 ರಂದು ಜನಗಣತಿಯ ಹಿನ್ನೆಲೆ ಒಬ್ಬರು ಅವರ ಮನೆಯತ್ತ ಹೋಗಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದೇ

ಕೊಳೆತು ನಾರುತ್ತಿದ್ದ ‌ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆ Read More »

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಮಡಿಕೇರಿ: ಕೋವಿಯಿಂದ ಗುಂಡು ಹೊಡೆದುಕೊಂಡು ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆ ಗ್ರಾಮದಲ್ಲಿ ಸರ್ಕಾರಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿಣಿ(51) ಎಂಬವರೇ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಅವರು ಈ ಕೃತ್ಯ ಎಂದಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ Read More »

ಪಾಕಿಸ್ತಾನದಲ್ಲಿ ಇನ್ನೋರ್ವ ಉಗ್ರ ಮುಖಂಡನ ಹತ್ಯೆ

ಲಷ್ಕರ್‌ನ ಟಾಪ್‌ ಕಮಾಂಡರ್‌ ಬಂದೂಕುಧಾರಿಗಳ ಗುಂಡಿಗೆ ಬಲಿ ಇಸ್ಲಾಮಾಬಾದ್‌: ಲಷ್ಕರ್‌ ಇ ತಯ್ಯಬ ಉಗ್ರಗಾಮಿ ಸಂಘಟನೆಯ ಟಾಪ್‌ ಲೆವೆಲ್‌ ಕಮಾಂಡರ್‌ ಶೇಕ್‌ ಯೂಸುಫ್‌ ಆಫ್ರಿದಿ ಎಂಬಾತನನ್ನು ಅಜ್ಞಾತ ಬಂದೂಕುಧಾರಿಗಳು ಪಾಕಿಸ್ತಾನದ ಖೈಬರ್‌ ಪಖ್ತೂನ್‌ಖ್ವಾದಲ್ಲಿ ಅತಿ ಸಮೀಪದಿಂದ ಗುಂಡಿಕ್ಕಿ ಸಾಯಿಸಿದ್ದಾರೆ. ಲಷ್ಕರ್‌ನ ಸ್ಥಾಪಕ ಹಾಫಿದ್‌ ಸಯೀದ್‌ನ ಅತಿ ನಿಕಟ ಕಮಾಂಡರ್‌ ಅಗಿದ್ದ ಆಫ್ರಿದಿಯನ್ನು ಬಂದೂಕುಧಾರಿಗಳು ತಪ್ಪಿಸಲು ಸಾಧ್ಯವೆ ಇಲ್ಲದ ರೀತಿಯಲ್ಲಿ ಖೆಡ್ಡಾಕ್ಕೆ ಕೆಡವಿ ಗುಂಡಿಕ್ಕಿದ್ದಾರೆ ಎಂದು ವರದಿಯಾಗಿದೆ. ಆಫ್ರಿದಿ ಲಷ್ಕರ್‌ನ ಅತ್ಯುನ್ನತ ಕಮಾಂಡರ್‌ ಆಗಿದ್ದ ಮತ್ತು ಅಫಘಾನಿಸ್ತಾನದ ಗಡಿಗೆ

ಪಾಕಿಸ್ತಾನದಲ್ಲಿ ಇನ್ನೋರ್ವ ಉಗ್ರ ಮುಖಂಡನ ಹತ್ಯೆ Read More »

ಹೊರ್ಮುಜ್‌ ತೆರೆಯಲು ಸಿದ್ಧ, ಆದರೆ… : ಅಮೆರಿಕಕ್ಕೆ ಇರಾನ್‌ ಸಂದೇಶ

ಶಾಂತಿ ಮಾತುಕತೆಗೆ ಹೊಸ ದಾಳ ಉರುಳಿಸಿದ ಇರಾನ್‌ ಟೆಹ್ರಾನ್‌: ಅಮೆರಿಕ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಇರಾನ್ ಸಂಘರ್ಷ ಶಮನಕ್ಕೆ ಹೊಸ ದಾಳ ಉರುಳಿಸಿದೆ. ಪಾಕಿಸ್ತಾನದ ಸಂಧಾನಕಾರರ ಮೂಲಕ ಅಮೆರಿಕಕ್ಕೆ ಹೊಸ ಶಾಂತಿ ಪ್ರಸ್ತಾವನೆಯನ್ನು ರವಾನಿಸಿರುವ ಇರಾನ್, ಪ್ರಮುಖವಾಗಿ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆ ಕೋರಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಲು ಮತ್ತು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ತಾವು ಸಿದ್ಧ ಎಂದು ಇರಾನ್ ತಿಳಿಸಿದೆ.

ಹೊರ್ಮುಜ್‌ ತೆರೆಯಲು ಸಿದ್ಧ, ಆದರೆ… : ಅಮೆರಿಕಕ್ಕೆ ಇರಾನ್‌ ಸಂದೇಶ Read More »

ಬಂಟ್ವಾಳ : ಚಲಿಸುತ್ತಿದ್ದ ರೈಲಿನಲ್ಲೇ ಹೆರಿಗೆ

ತುರ್ತು ಸಂದರ್ಭದಲ್ಲಿ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಿದ ಸಹಪ್ರಯಾಣಿಕ ಮಹಿಳೆಯರು ಮಂಗಳೂರು: ಚಲಿಸುತ್ತಿದ್ದ ರೈಲಿನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆಯಾದ ಘಟನೆ ಬಂಟ್ವಾಳ ರೈಲು ನಿಲ್ದಾಣದಲ್ಲಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೆ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಿದ್ದಾರೆ. ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ರೈಲನ್ನೇರಿದ್ದರು. ರೈಲು ಬಿ.ಸಿ.ರೋಡ್ ಬಳಿ ತಲುಪುತ್ತಿದ್ದಂತೆ ಮಹಿಳೆಗೆ

ಬಂಟ್ವಾಳ : ಚಲಿಸುತ್ತಿದ್ದ ರೈಲಿನಲ್ಲೇ ಹೆರಿಗೆ Read More »

ಖಾಸಗಿ ಜಾಗಕ್ಕೆ ನುಗ್ಗಿ ಹಲ್ಲೆ : 8 ಮಂದಿ ವಿರುದ್ಧ ದೂರು

ಬೆಳ್ತಂಗಡಿ : ಗರ್ಡಾಡಿಯಲ್ಲಿರುವ ಖಾಸಗಿ ಜಾಗಕ್ಕೆ ಆರೋಪಿಗಳು ಅಕ್ರಮವಾಗಿ ಪ್ರವೇಶ ಮಾಡಿ ಕೈಯಿಂದ ಮತ್ತು ಲೈಸೆನ್ಸ್ ಇಲ್ಲದ ಗನ್‌ನಿಂದ ಹಲ್ಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 8 ಮಂದಿ ಆರೋಪಿಗಳ ವಿರುದ್ಧ ಆರ್ಮ್ಸ್ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಾದ ಪಿ.ಆರ್.ಮನೋಹರ ಎಂಬವರು ಏ.24ರಂದು ಮಧ್ಯಾಹ್ನ 12.30 ಗಂಟೆಗೆ ವಕೀಲೆ ಟಿಸ್ಮಿ ಮತ್ತು ಶಾಂತಲಾ ರಾಜೇಶ್ ಪ್ರಭು ಹಾಗೂ ಅವರ ಕೆಲಸದವರ ಜೊತೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ಅವರ ಪಟ್ಟಾ ಜಾಗಕ್ಕೆ ಭೇಟಿ ನೀಡಿದಾಗ

ಖಾಸಗಿ ಜಾಗಕ್ಕೆ ನುಗ್ಗಿ ಹಲ್ಲೆ : 8 ಮಂದಿ ವಿರುದ್ಧ ದೂರು Read More »

error: Content is protected !!
Scroll to Top