ಸ್ಥಳೀಯ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ಶಾರದಾ ಪ್ರೌಢಶಾಲೆಗೆ 100% ಫಲಿತಾಂಶ

ಸುಳ್ಯ: ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಶ್ರೀ ಶಾರದಾ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 7 ಮಂದಿ ಡಿಸ್ಟಿಂಕ್ಷನ್, 25 ಮಂದಿ ಪ್ರಥಮ ದರ್ಜೆ, 5 ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗುತ್ತಿಗಾರು ಕಮಿಲದ ಕೆ. ಬಾಲಕೃಷ್ಣ ಪೂಜಾರಿ ಮತ್ತು ಲಲಿತಾ ದಂಪತಿಯ ಪುತ್ರಿ ತನುಶ್ರೀ-589 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ದುಗಲಡ್ಕದ ಸುರೇಶ್ ಐ. ಮತ್ತು ಜಯಶೀಲ ಬಿ. ವಿ. ದಂಪತಿಯ ಪುತ್ರಿ ಸಮೀಕ್ಷಾ […]

ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ಶಾರದಾ ಪ್ರೌಢಶಾಲೆಗೆ 100% ಫಲಿತಾಂಶ Read More »

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ, 16 ಡಿಸ್ಟಿಂಕ್ಷನ್

ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 26 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು: ಅಯಿಷತ್ ಇಹ್‌ಶಾನ-602 (ಕಲಂಬಿ ಪಲ್ಲತ್ತಾರು ಅಬ್ಬಾಸ್ ಮತ್ತು ರೆಹನತ್ ದೇಂಬಲೆ ಇವರ ಮಗಳು), ಶಝ ಫಾತಿಮ ಪಿ – 600 (ಉಮ್ಮರ್ ಶಾಫಿ ಪಿ. ಮತ್ತು ಫಾತಿಮತ್ ಶಹರ್ ಬಾನ್ ಪಿ.

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ, 16 ಡಿಸ್ಟಿಂಕ್ಷನ್ Read More »

ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಜನರಿಂದ ಹಲ್ಲೆ: ದೂರು ದಾಖಲು

ಪುತ್ತೂರು: ಏಳು ಜನರ ಗುಂಪೊಂದು ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಸರ್ಕಾರಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿ ಆದಿಲ್ ಹುಸೈನ್ (21) ಎಂದು ಗುರುತಿಸಲಾಗಿದೆ. ಈ ಹಿಂದೆ ನಡೆದಿದ್ದ ಜಗಳವೊಂದನ್ನು ಬಿಡಿಸಿದ್ದಕ್ಕೆ ‌ಪ್ರತಿಕಾರವಾಗಿ ಈತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಎ. 22 ರಂದು ತನ್ನ ಗೆಳೆಯರಿಬ್ಬರ ಜೊತೆಗೆ ಪುತ್ತೂರು ಬಸ್‌ಸ್ಟಾಂಡ್‌ನಲ್ಲಿ ‌ಟಿ ಕುಡಿಯುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ.

ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಜನರಿಂದ ಹಲ್ಲೆ: ದೂರು ದಾಖಲು Read More »

ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಶ್ರೀ ಮಹೇಶ ಮರ್ದಿನಿ ಯಕ್ಷಕಲಾ ಪ್ರತಿಷ್ಠಾನ (ರಿ )ಚಾರ – ಹೆಬ್ರಿ ಸಂಯೋಜನೆಯಲ್ಲಿ ಚಾರ ಪ್ರದೀಪ ಹೆಬ್ಬಾರ್ ರಚಿತ ಉಲೂಪಿ ಕಲ್ಯಾಣ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿ ಪ್ರಸಾದ್ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥಧಾರಿಗಳಾಗಿ ಶ್ರೀಧರ ಎಸ್. ಪಿ. ಕೃಷ್ಣಾಪುರ (ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ(ಉಲೂಪಿ), ಸಂಜೀವ ಪಾರೆಂಕಿ (ಕೌರವ್ಯ), ಚಾರ ಪ್ರದೀಪ ಹೆಬ್ಬಾರ್( ದೃತರಾಷ್ಟ್ರ) ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ

ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ Read More »

ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ ವತಿಯಿಂದ ಭವತಿ ಭಿಕ್ಷಾಂದೇಹಿ ಮೂಲಕ ಸಹಾಯಧನ ವಿತರಣೆ

ಪೊಳಲಿ: ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ (ರಿ.) ಇದರ 8ನೇ ಸೇವಾ ಯೋಜನೆ ಅಡಿಯಲ್ಲಿ ಭವತಿ ಭಿಕ್ಷಾಂದೇಹಿ ಮೂಲಕ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ನಿಧಿ ಸಂಗ್ರಹಣಾ ಅಭಿಯಾನ ನಡೆಸಲಾಗಿದ್ದು, ಒಟ್ಟುಗೂಡಿದ ಒಟ್ಟು ಮೊತ್ತ 1,98,088 ಅನ್ನು ಪೊಳಲಿ ದೇವಸ್ಥಾನದಲ್ಲಿ ಅತಿಥಿಗಳ ಮೂಲಕ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಸಿದಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷರು ಉದಯ್ ಪೂಜಾರಿ, ಉದ್ಯಮಿ ಪ್ರಸಾದ್ ಗರೋಡಿ, ಖ್ಯಾತ ಯೂಟ್ಯೂಬರ್ ವಿಶ್ವನಾಥ್ ಪೂಜಾರಿ ಮತ್ತು ವಿವಿನ್ ಪೂಜಾರಿ, ಲೈಫ್ ಆಫ್

ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ ವತಿಯಿಂದ ಭವತಿ ಭಿಕ್ಷಾಂದೇಹಿ ಮೂಲಕ ಸಹಾಯಧನ ವಿತರಣೆ Read More »

ಪತಂಜಲಿ ಯೋಗ ಕೇಂದ್ರದ ವತಿಯಿಂದ ಪರಶುರಾಮ ಜಯಂತಿ, ಮಹಾಭಾರತ ರಸಪ್ರಶ್ನೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಕ್ಷೀರ ಸಂಗಮ ಸಭಾಭವನ ಕಳಿಯ ಗೇರುಕಟ್ಟೆಯೋಗ ಕೇಂದ್ರದಲ್ಲಿ ಪರಶುರಾಮ ಜಯಂತಿಆಚರಿಸಲಾಯಿತು. ವಿಷ್ಣುವಿನ ದಶಾವತಾರಗಳಲ್ಲಿ 6ನೇ ಅವತಾರದಲ್ಲಿ ಪರಶುರಾಮ ಬ್ರಾಹ್ಮಣ್ಯ ಮತ್ತು ಕ್ಷತ್ರಿಯ ಶಕ್ತಿಯ ಪ್ರತೀಕವಾಗಿ ಕೃತ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆ ಮಾಡಿರುವ ಬಗ್ಗೆ ದಿವಾಕರ ಆಚಾರ್ಯ ಗೇರುಕಟ್ಟೆ ಬೌದ್ಧಿಕ ನೀಡಿದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮವಾಗಿ ಶ್ರೀ ಮಹಾಭಾರತ ರಸಪ್ರಶ್ನೆ ಸ್ಪರ್ಧೆಯನ್ನು

ಪತಂಜಲಿ ಯೋಗ ಕೇಂದ್ರದ ವತಿಯಿಂದ ಪರಶುರಾಮ ಜಯಂತಿ, ಮಹಾಭಾರತ ರಸಪ್ರಶ್ನೆ Read More »

ಬೆಂಗಳೂರಿನಲ್ಲಿ ಕುಮಾರ್ ಪೆರ್ನಾಜೆ – ಸೌಮ್ಯ ದಂಪತಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ

ಸಾಧನೆಗಳ ಸರದಾರನಿಗೆ ಜನತಾ ಕೃಷಿ ರತ್ನ ಪ್ರಶಸ್ತಿ ಪ್ರಧಾನ ಪುತ್ತೂರು: ಜನತಾ ನ್ಯೂಸ್ ಕನ್ನಡ ವತಿಯಿಂದ ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯುನಲ್ಲಿ ಮನರಂಜನೆ ಫ್ಯಾಶನ್ ಶೋ ಮ್ಯೂಸಿಕಲ್ ನೈಟ್ ನೃತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳ ಸರದಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರ ಗಣನೀಯ ಸೇವೆ ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಜನತಾ ಕೃಷಿ ರತ್ನವನ್ನು ಜನತಾ ನ್ಯೂಸ್ ಮ್ಯಾನೇಜಿಂಗ್

ಬೆಂಗಳೂರಿನಲ್ಲಿ ಕುಮಾರ್ ಪೆರ್ನಾಜೆ – ಸೌಮ್ಯ ದಂಪತಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ Read More »

ಮಾನಸಿಕ ಖಿನ್ನತೆ: ವಿಷ ಕುಡಿದು ಯುವಕ ಆತ್ಮಹತ್ಯೆ

ಕಡಬ: ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ‌ನರಳುತ್ತಿದ್ದ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಳಿಕುಕ್ಕುವಿನಲ್ಲಿ ‌ನಡೆದಿದೆ. ಮೃತನನ್ನು ಅಂಬೆಕಲ್ಲು ‌ನಿವಾಸಿ ಕಿಶನ್ ಎ. ಎಚ್.(32) ಎಂದು ಗುರುತಿಸಲಾಗಿದೆ. ಕಿಶನ್ ಕಳೆದ ಎರಡು ವರ್ಷಗಳಿಂದ ಗುತ್ತಿಗಾರಿನ ಸಂಸ್ಥೆಯೊಂದರಲ್ಲಿ ‌ಲೋನ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ಸಮಯದಿಂದ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅವರ ಸ್ಥಿತಿಗೆ ಕಾರಣ ಏನು ಎನ್ನುವ ಬಗ್ಗೆ ಮನೆಯವರು ವಿಚಾರಣೆ ನಡೆಸಿದರೂ ‌ಸಹ ಯಾವುದೇ ಮಾಹಿತಿಯನ್ನು ಅವರಿಂದ ಪಡೆದುಕೊಳ್ಳಲಾಗುತ್ತಿರಲಿಲ್ಲ ಎಂದು

ಮಾನಸಿಕ ಖಿನ್ನತೆ: ವಿಷ ಕುಡಿದು ಯುವಕ ಆತ್ಮಹತ್ಯೆ Read More »

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ

ಅಲುಂಬುಡ: 2026ನೆ ಸಾಲಿನ ಎವಿಜಿ ಸಾಪ್ತಾಹಿಕ ಬೇಸಿಗೆ ಶಿಬಿರವು ಏಪ್ರಿಲ್ 16ರಂದು ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ವರ್ಣರಂಜಿತವಾಗಿ ಸಮಾಪನಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾರತ ಮಾತೆಗೆ ಪುಷ್ಪಾರ್ಚನೆಗೈದು, ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರಿನ ಗಾನಕೋಗಿಲೆ, ಸಾವಿರಾರು ಗಾಯನ ಕಂಠಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಗಾನಸಿರಿ ಖ್ಯಾತಿಯ ಡಾ. ಕಿರಣ್ ಕುಮಾರ್ ಅವರು ಮಾತನಾಡಿ ಮಾತಾಪಿತರನ್ನು ಗೌರವಿಸುವವರು ಜೀವನದಲ್ಲಿ ಸೋತಿಲ್ಲ ಎಂದರು. ಅಂತಹ ಸಂಸ್ಕಾರ ಈ ಎವಿಜಿ ಶಾಲೆಯಲ್ಲಿ ಸಿಗುತ್ತಿದೆ. ಎವಿಜಿ ಕಲಾ

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ Read More »

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ

ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿನ ವಿದ್ಯಾರ್ಥಿನಿ ಶ್ರೇಷ್ಠ ಶೆಟ್ಟಿ ಎಣ್ಮೂರುಗುತ್ತು ಅವರು ಸಿಬಿಎಸ್‌ಸಿ‌ ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ, ಕೀರ್ತಿ ತಂದಿರುತ್ತಾರೆ. ಇವರು ಎಣ್ಮೂರುಗುತ್ತು ರಘುಪ್ರಸಾದ್ ‌ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿ ಪುತ್ರಿ.

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ Read More »

error: Content is protected !!
Scroll to Top