ಸುದ್ದಿ

ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೆ ಭೂಕಂಪ : ಸಾವಿನ ಸಂಖ್ಯೆ 700ಕ್ಕೇರಿಕೆ

10 ಸಾವಿರ ಜನ ಬಲಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅಮೆರಿಕ ಮ್ಯಾನ್ಮಾರ್‌ : ನಿನ್ನೆ ಭೀಕರ ಭೂಕಂಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಾಶನಷ್ಟ ಉಂಟಾಗಿದ್ದ ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರೊಂದಿಗೆ ಶುಕ್ರವಾರ ಒಂದೇ ದಿನ ಮೂರು ಬಾರಿ ಭೂಕಂಪ ಸಂಭವಿಸಿದಂತಾಗಿದೆ. ಭೂಕಂಪನದ ತೀವ್ರತೆ 900 ಕಿ.ಮೀ. ದೂರವಿರುವ ಥ್ಯಾಯ್ಲೆಂಡ್‌ನ ಬ್ಯಾಂಕಾಂಕ್ ಮತ್ತು ಬಾಂಗ್ಲಾದೇಶದವರೆಗೂ ವ್ಯಾಪಿಸಿದೆ. ಭೂಕಂಪನದ ಕೇಂದ್ರ ಬಿಂದು ಇದ್ದ ಮ್ಯಾನ್ಮಾರ್‌ನಲ್ಲಿ ಭಾರಿ ಹಾನಿಯಾಗಿದ್ದು, ಈವರೆಗೆ 700ಕ್ಕೂ ಹೆಚ್ಚು […]

ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೆ ಭೂಕಂಪ : ಸಾವಿನ ಸಂಖ್ಯೆ 700ಕ್ಕೇರಿಕೆ Read More »

ಸಲ್ಮಾನ್‌ ಖಾನ್‌ ಧರಿಸಿದ ಕೈಗಡಿಯಾರ ಹರಾಮ್‌ ಎಂದ ಧರ್ಮಗುರು

ರಾಮ ಜನ್ಮಭೂಮಿ ಎಡಿಷನ್ ವಾಚ್‌ ಧರಿಸಿದ್ದಕ್ಕೆ ಆಕ್ರೋಶ ಮುಂಬಯಿ: ನಟ ಸಲ್ಮಾನ್ ಖಾನ್ ಧರಿಸಿರುವ ಕೈಗಡಿಯಾರವೊಂದು ಮುಸ್ಲಿಂ ಧರ್ಮಗುರುಗಳ ಆಕ್ರೋಶಕ್ಕೆ ಗುರಿಯಾಗಿದೆ. ಈ ಕೈಗಡಿಯಾರವನ್ನು ಹರಾಮ್‌ ಎಂದು ಬಣ್ಣಿಸಿರುವ ಧರ್ಮಗುರುಗಳು ಸಲ್ಮಾನ್‌ ಖಾನ್‌ ಕ್ಷಮೆ ಯಚಿಸಬೇಕೆಂದು ಹೇಳಿದ್ದಾರೆ.ಇಷ್ಟಕ್ಕೂ ಈ ವಾಚ್ ‘ರಾಮ ಜನ್ಮಭೂಮಿ ಎಡಿಷನ್’ ಬ್ರ್ಯಾಂಡ್‌ನದ್ದು. ಧರ್ಮಗುರುಗಳ ಕಾರಣ ಇದು. ಈ ಬಗ್ಗೆ ಅಪಸ್ವರ ತೆಗೆದು ಸಲ್ಮಾನ್ ಖಾನ್ ಹರಾಮ್ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಲ್ಮಾನ್

ಸಲ್ಮಾನ್‌ ಖಾನ್‌ ಧರಿಸಿದ ಕೈಗಡಿಯಾರ ಹರಾಮ್‌ ಎಂದ ಧರ್ಮಗುರು Read More »

ಸೈಬರ್‌ ವಂಚಕರ ಕಿರುಕುಳದಿಂದ ವೃದ್ಧ ದಂಪತಿ ಆತ್ಮಹತ್ಯೆ

ಹಣ ಕೊಟ್ಟರೂ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ ವಂಚಕರು ಬೆಂಗಳೂರು: ಸೈಬರ್‌ ವಂಚಕರ ಕಾಟ ತಾಳಲಾರದೆ ವೃದ್ಧ ದಂಪತಿ ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಆತ್ಮಹತ್ಯೆಗೆ ಶರಣಾದ ದಂಪತಿ. ಆತ್ಮಹತ್ಯೆಗೆ ಮುನ್ನ ದಂಪತಿ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಸೈಬರ್‌ ವಂಚನೆಯ ಮಾಹಿತಿ ನೀಡಿದ್ದಾರೆ.ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ

ಸೈಬರ್‌ ವಂಚಕರ ಕಿರುಕುಳದಿಂದ ವೃದ್ಧ ದಂಪತಿ ಆತ್ಮಹತ್ಯೆ Read More »

ಮ್ಯಾನ್ಮಾರ್‌ ಭೂಕಂಪ : ಸಾವಿನ ಸಂಖ್ಯೆ 144ಕ್ಕೇರಿಕೆ; 730 ಮಂದಿಗೆ ಗಾಯ

900 ಕಿ.ಮೀ. ದೂರದಲ್ಲಿರುವ ಕಟ್ಟಡ ಕುಸಿತ ಮ್ಯಾನ್ಮಾರ್‌ : ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 730 ಜನರು ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ತೀವ್ರ ಹಾನಿಗೊಳಗಾದ 2 ನಗರಗಳ ಫೋಟೊಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿವೆ. ನೆರೆಯ ಥೈಲ್ಯಾಂಡ್‌ನಲ್ಲೂ ಭೂಕಂಪನದ ಅನುಭವವಾಗಿದ್ದು, ಥೈಲ್ಯಾಂಡ್ ರಾಜಧಾನಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡವೊಂದು ಕುಸಿದಿದೆ. ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ

ಮ್ಯಾನ್ಮಾರ್‌ ಭೂಕಂಪ : ಸಾವಿನ ಸಂಖ್ಯೆ 144ಕ್ಕೇರಿಕೆ; 730 ಮಂದಿಗೆ ಗಾಯ Read More »

ಶ್ರೀ ಮಹಾಭಾರತ ಸರಣಿಯಲ್ಲಿ ಕರ್ಣ ದಿಗ್ವಿಜಯ ತಾಳಮದ್ದಳೆ

ಉಪ್ಪಿನಂಗಡಿ: ಇಲ್ಲಿನ  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಇಚ್ಚೂರು  ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ  ಕರ್ಣ ದಿಗ್ವಿಜಯ ತಾಳಮದ್ದಳೆ ಜರಗಿತು.  ಭಾಗವತರಾಗಿ ಸುರೇಶ್ ರಾವ್. ಬಿ, ನಿತೀಶ್ ಕುಮಾರ್. ವೈ, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ (ಕೌರವ), ಸತೀಶ ಶಿರ್ಲಾಲು(ಕರ್ಣ 1), ಶ್ರೀಧರ ಎಸ್ಪಿ ಸುರತ್ಕಲ್(ಕರ್ಣ 2), ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ದ್ರುಪದ),

ಶ್ರೀ ಮಹಾಭಾರತ ಸರಣಿಯಲ್ಲಿ ಕರ್ಣ ದಿಗ್ವಿಜಯ ತಾಳಮದ್ದಳೆ Read More »

ಸ್ವರ್ಣ ಸಾಧನಾ’ ಪ್ರಶಸ್ತಿಗೆ ಡಾ. ಎಂ. ಪ್ರಭಾಕರ ಜೋಶಿ ಆಯ್ಕೆ | ಮೇ 1 ರಂದು ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಹಿರಿಯ ಯಕ್ಷಗಾನ ಗಾನ ಅರ್ಥಧಾರಿ, ಸಂಶೋಧಕ, ಸಂಸ್ಕೃತಿ ಚಿಂತಕ, ನಿವೃತ್ತ ಪ್ರಾಚಾರ್ಯ ಡಾ. ಎಂ. ಪ್ರಭಾಕರ ಜೋಶಿಯವರನ್ನು ‘ಸ್ವರ್ಣ ಸಾಧನಾ’ ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ. ಕಳೆದ  3 ವರ್ಷಗಳಿಂದ ನಿವೃತ್ತ ನೌಕರರ ಸಂಘದ ಸ್ವರ್ಣ ಮಹೋತ್ಸವದ  ಸವಿನೆನಪಿಗಾಗಿ ವಿವಿಧ  ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ  ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2022 ರಲ್ಲಿ ಪ್ರಥಮವಾಗಿ ಕೃಷಿ ಮತ್ತು ನೀರಾವರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕತ ಅಮೈ ಮಹಾಲಿಂಗ ನಾಯ್ಕ. 2023

ಸ್ವರ್ಣ ಸಾಧನಾ’ ಪ್ರಶಸ್ತಿಗೆ ಡಾ. ಎಂ. ಪ್ರಭಾಕರ ಜೋಶಿ ಆಯ್ಕೆ | ಮೇ 1 ರಂದು ಪ್ರಶಸ್ತಿ ಪ್ರದಾನ ಸಮಾರಂಭ Read More »

ಪುತ್ತೂರು ರೋಟರಿ ಕ್ಲಬ್ ಗೆ 60 ರ ಸಂಭ್ರಮ | ವಿವಿಧ ಸಮಾಜಮುಖಿ ಯೋಜನೆಗಳ ಲೋಕಾರ್ಪಣೆ

ಪುತ್ತೂರು: 60 ರ ಸಂಭ್ರಮದಲ್ಲಿರುವ ಪುತ್ತೂರು ರೋಟರಿ ಕ್ಲಬ್‍ ವತಿಯಿಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್‍ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಗತ್ತಿನಾದ್ಯಂತ ಹಲವು ಕ್ಲಬ್‍ ಗಳು, ಕೆಲವು ಲಕ್ಷ ಸದಸ್ಯರಿದ್ದಾರೆ. 34 ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಬೆಳೆದು ಬಂದ ಪುತ್ತೂರು ರೋಟರಿ ಕ್ಲಬ್‍ ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ ಎಂದ ಅವರು, 2024-25ನೇ ಸಾಲಿನಲ್ಲಿ ಹಮ್ಮಿಕೊಂಡ ಹಾಗೂ ಮುಂದೆ ಹಮ್ಮಿಕೊಳ್ಳುವ

ಪುತ್ತೂರು ರೋಟರಿ ಕ್ಲಬ್ ಗೆ 60 ರ ಸಂಭ್ರಮ | ವಿವಿಧ ಸಮಾಜಮುಖಿ ಯೋಜನೆಗಳ ಲೋಕಾರ್ಪಣೆ Read More »

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಮದ್ಯಾಹ್ನ 1: 45 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಮಾ.29 ಶುಕ್ರವಾರದಂದು ಮದ್ಯಾಹ್ನ 1: 45ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಮದ್ಯಾಹ್ನ 1: 45 ಕ್ಕೆ ಚಿತ್ರ ಪ್ರದರ್ಶನ Read More »

ನಟ ದರ್ಶನ್‍ ಹೆಸರಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ವಾರ್

ಪುತ್ತೂರು : ನಟ ದರ್ಶನ್ ತನ್ನ ಸಂಕಷ್ಠಗಳು ನಿವಾರಣೆಯಾಗಲಿ ಎಂದು ಫ್ಯಾಮಿಲಿ ಸಮೇತರಾಗಿ  ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ  ವಿಚಾರದಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ನಡುವೆ ಬಾರಿ ಜಗಳಗಳಾಗಿವೆ. ವಾರದ ಹಿಂದೆ ನಟ ದರ್ಶನನ್ನು ಪುತ್ತೂರಿನ ಪ್ರಜ್ವಲ್ ರೈ ಪಾತಾಜೆ ಎಂಬವರು ಮಾಡಾಯಿಕಾವು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರುಸಂಹಾರ ಪೂಜೆ ನೆರವೇರಿಸಿದ್ದರು. ಈ ವೇಳೆ ದರ್ಶನ ಜೊತೆಯಲ್ಲೇ ಮಾಡಾಯಿಕಾವು ದೇವಸ್ಥಾನದಲ್ಲಿ ದರ್ಶನ್ ಜೊತೆ ಪ್ರಜ್ವಲ್ ರೈ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಪ್ರಜ್ವಲ್ ರೈ ತನ್ನ

ನಟ ದರ್ಶನ್‍ ಹೆಸರಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ವಾರ್ Read More »

ಮಾಡಾವು : ಯಕ್ಷಗಾನ ತರಬೇತಿ ಉದ್ಘಾಟನೆ

ಪುತ್ತೂರು : ಅಭಿನವ ಕೇಸರಿ ಮಾಡಾವು ಇದರ ವತಿಯಿಂದ ಅಯ್ಯಪ್ಪ ಭಜನಾ ಮಂದಿರ ಮಾಡಾವು ಇದರ ಸಹಯೋಗದಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯ ಉದ್ಘಾಟನೆ ಅಭಿನವ ಕೇಸರಿ ಯಕ್ಷ ಕಲಾ ಕೇಂದ್ರದಲ್ಲಿ ನಡೆಯಿತು. ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ  ಜಯಂತಿ ಎಸ್.ಭಂಡಾರಿ, ಸದಸ್ಯೆ ಮೀನಾಕ್ಷಿ ವಿ.ರೈ, ಅಯ್ಯಪ್ಪ ಭಜನಾ ಮಂದಿರದ

ಮಾಡಾವು : ಯಕ್ಷಗಾನ ತರಬೇತಿ ಉದ್ಘಾಟನೆ Read More »

error: Content is protected !!
Scroll to Top