ಸುದ್ದಿ

ಸಂತ ಫಿಲೋಮಿನಾ ಎಂ.ಎಸ್.ಡಬ್ಲ್ಯೂ ವಿಭಾಗ ವತಿಯಿಂದ ಉಚಿತ ವೈದ್ಯಕೀಯ ಶಿಬಿರ  

ಸವಣೂರು :ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಎಂ. ಎಸ್. ಡಬ್ಲೂ  ವಿಭಾಗ (ಸ್ನಾತಕೋತ್ತರ ಸಮಾಜಕಾರ್ಯ ), ಸವಣೂರು ಗ್ರಾಮ ಪಂಚಾಯತ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯ  ಇದರ ವತಿಯಿಂದ ಮಂಗಳೂರು ಎ. ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ಜೂ.4 ರಂದು ಸವಣೂರು ಉನ್ನತಿಕರೀಸಿದ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರ ನಡೆಯಿತು . ಕಾರ್ಯಕ್ರಮ ಉದ್ಘಾಟಿಸಿದ ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ  […]

ಸಂತ ಫಿಲೋಮಿನಾ ಎಂ.ಎಸ್.ಡಬ್ಲ್ಯೂ ವಿಭಾಗ ವತಿಯಿಂದ ಉಚಿತ ವೈದ್ಯಕೀಯ ಶಿಬಿರ   Read More »

ಸುಳ್ಯ ಪದವು ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯಪದವು: ಮನೆಯ ಸಮೀಪ ಮರದದಿಮ್ಮಿಯನ್ನು ವಾಹನಕ್ಕೆ ಲೋಡ್ ಮಾಡುತ್ತಿರುವಾಗ ಮರದ ದಿಮ್ಮಿ ಮೈ ಮೇಲೆ ಬಿದ್ದು ಪಡುವನ್ನೂರು ಗ್ರಾಮದ ಸುಳ್ಯ ಪದವು ಬಟ್ಟ್ಯಂಗಳ ನಿವಾಸಿ ಗೋಪಾಲಕೃಷ್ಣ ಎಂಬವರು ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ತನ್ನ ಮನೆಯ ಸಮೀಪ ಇರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡಲಾಗಿತ್ತು. ಟಿಪ್ಪರ್ ವಾಹನದ ಹಿಂದಿನ ಬಾಗಿಲನ್ನು ಸರಿಪಡಿಸುವ ಸಂದರ್ಭದಲ್ಲಿ ಮರದ ದಿಮ್ಮಿ ಹಿಂದಕ್ಕೆ ಬಂದು ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ ಗೋಪಾಲ ಕೃಷ್ಣ ರವರನ್ನು

ಸುಳ್ಯ ಪದವು ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು Read More »

ಗುಂಡ್ಯ ಸಮೀಪ ಬೆಂಗಳೂರು ಬಸ್ಸಿಗೆ ತಿವಿದ ಕಾಡಾನೆ 

ಕಡಬ: ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಕಾಡಾನೆಯೊಂದು ದಂತದಿಂದ ತಿವಿದ ಹಿನ್ನೆಲೆಯಲ್ಲಿ ಬಸ್ ಗೆ ಹಾನಿಯಾದ ಘಟನೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಚಾಲಕ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದರಾದರೂ, ಆನೆಯು ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್ಸಿಗೆ

ಗುಂಡ್ಯ ಸಮೀಪ ಬೆಂಗಳೂರು ಬಸ್ಸಿಗೆ ತಿವಿದ ಕಾಡಾನೆ  Read More »

ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಶುಭಾರಂಭ | ಅಲೋಪಥಿ, ಆಯುರ್ವೇದ, ಜನರಿಕ್, ವೆಟರ್ನರಿ ಉತ್ಪನ್ನಗಳ ಎ.ಎನ್. ಮೆಡಿಕಲ್ಸ್ ಉದ್ಘಾಟನೆ

ಪುತ್ತೂರು: ಒಮ್ಮಿಂದೊಮ್ಮೆಗೆ ಬಂದೆರಗುವ ತೀವ್ರ ತೆರನಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಹಾಗೂ ಎ.ಎನ್. ಮೆಡಿಕಲ್ಸ್ ಪುತ್ತೂರು ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಪಿಂಗ್ ಮಾಲ್ ನಲ್ಲಿ ಜೂನ್ 1ರಂದು ಶುಭಾರಂಭಗೊಂಡಿತು. ತಕ್ಷಣದಲ್ಲಿ ಕಾಡುವ ಸ್ಟ್ರೋಕ್, ಕಾರ್ಡಿಯಾಕ್ (ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ), ನ್ಯೂರೋ (ನರ), ರೆಸ್ಪಿರೇಟರಿ (ಉಸಿರಾಟ) ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರಾದ ಡಾ. ಪ್ರಭು ಚಿಕಿತ್ಸೆ ನೀಡಲಿದ್ದಾರೆ. ವೈದ್ಯರ ಹೆತ್ತವರಾದ ಅನಿಲಾವತಿ, ಪಿ.

ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಶುಭಾರಂಭ | ಅಲೋಪಥಿ, ಆಯುರ್ವೇದ, ಜನರಿಕ್, ವೆಟರ್ನರಿ ಉತ್ಪನ್ನಗಳ ಎ.ಎನ್. ಮೆಡಿಕಲ್ಸ್ ಉದ್ಘಾಟನೆ Read More »

ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿ | ರಾಜ್ಯ ಗುಣ ನಿಯಂತ್ರಣ ಮಾನಿಟರ್ ಪರಿಶೀಲನೆ

ನರಿಮೊಗರು: ಮಹಾತ್ಮ‌ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ‌ ಮಾಡುವ ಸಲುವಾಗಿ ರಾಜ್ಯ ಗುಣ ನಿಯಂತ್ರಣ ಮಾನಿಟರ್ ಎಸ್.ವೈ. ಹೊಂಬಾಳ ಅವರು ಪುತ್ತೂರು ತಾಲೂಕಿನ ವಿವಿಧೆಡೆ ಪರಿಶೀಲನೆ ನಡೆಸಿದರು. ಪುತ್ತೂರು ತಾಲೂಕಿನ ನರಿಮೊಗರು,ಆರ್ಯಾಪು,ಹಿರೇಬಂಡಾಡಿ ಹಾಗೂ ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಗಳಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭ ಸಹಾಯಕ ನಿರ್ದೇಶಕರಾದ ಶೈಲಜಾ ಭಟ್, ತಾಂತ್ರಿಕ ಸಂಯೋಜಕ ವಿನೋದ್ ಕುಮಾರ್, ತಾಂತ್ರಿಕ ಸಹಾಯಕ ಅಭಿಯಂತರರಾದ ಮನೋಜ್ ಕುಮಾರ್, ಶ್ರೀಲಕ್ಷ್ಮೀ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು,

ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿ | ರಾಜ್ಯ ಗುಣ ನಿಯಂತ್ರಣ ಮಾನಿಟರ್ ಪರಿಶೀಲನೆ Read More »

ವಿದ್ಯುತ್ ಆಘಾತ: ಲೈನ್ ಮ್ಯಾನ್ ಮೃತ್ಯು

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್  ಓರ್ವರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ  ಘಟನೆ ಗುರುವಾರದಂದು ಕಡಬದಲ್ಲಿ ನಡೆದಿದೆ. ಕಡಬ ಮೆಸ್ಕಾಂ ಲೈನ್ ಮ್ಯಾನ್  ಬಾಗಲಕೋಟೆ ಮೂಲದ ದ್ಯಾಮಣ್ಣ ಮೃತಪಟ್ಟವರು. ಕಡಬದ ಮುಳಿಮಜಲು ಸಮೀಪದ ಕಾಯರಡ್ಕ ಎಂಬಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯನ್ನು ಕಂಡು ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿತ್ತು.

ವಿದ್ಯುತ್ ಆಘಾತ: ಲೈನ್ ಮ್ಯಾನ್ ಮೃತ್ಯು Read More »

ಪುತ್ತೂರಿನ  ಒಳಿತು ಮಾಡು ಮನುಷ ತಂಡದಿಂದ ನೇತ್ರದಾನ ನೋಂದಣಿ | ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಪುತ್ತೂರು: ಇಲ್ಲಿನ  ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ನೇತ್ರದಾನ ನೋಂದಣಿ, ಮಧುಮೇಹ ಉಚಿತ ತಪಾಸಣೆ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 23ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮ ಪುತ್ತೂರಿನ ಸೈನಿಕ ಭವನ ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಅರುಣ್

ಪುತ್ತೂರಿನ  ಒಳಿತು ಮಾಡು ಮನುಷ ತಂಡದಿಂದ ನೇತ್ರದಾನ ನೋಂದಣಿ | ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ Read More »

ಮನೆ ಮೇಲೆ ಮರಬಿದ್ದು ಅಪಾರ ಹಾನಿ

ಕಡಬ: ಸೋಮವಾರ ರಾತ್ರಿ ಬೀಸಿದ ಗಾಳಿ, ‌ಸಿಡಿಲು ಸಹಿತ ಮಳೆಗೆ ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಪೆಲತ್ತೊಡಿ ಗಣೇಶ್ ಎಂಬವರ ಮನೆಗೆ ಹಾನಿಯಾಗಿದೆ. ಮನೆ ಸಮೀಪದ ಮರವೊಂದು ಮನೆ ಮೇಲೆ ಬಿದ್ದಿದೆ. ವಿದ್ಯುತ್ ಕಂಬದ ಮೇಲೂ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಮನೆ ಮೇಲೆ ಬಿದ್ದಿದೆ. ಮನೆ ಬಾಗಶಃ ಹಾನಿಯಾಗಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಪರಿಸರದ ವಿವಿದೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ.

ಮನೆ ಮೇಲೆ ಮರಬಿದ್ದು ಅಪಾರ ಹಾನಿ Read More »

ಮುರುಳ್ಯ: ಯಶಸ್ವಿಯಾಗಿ ನಡೆದ ಬೇಸಗೆ ಶಿಬಿರ, ಶಾಸಕಿಗೆ ಅಭಿನಂದನೆ

ಕಾಣಿಯೂರು: ಮುರುಳ್ಯ ಗ್ರಾಮ ಪಂಚಾಯಿತಿಯ ಬೇಸಗೆ ಶಿಬಿರವು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು. ಶಿಬಿರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮುರುಳ್ಯ ಉದ್ಘಾಟಿಸಿದ್ದು, ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಕ್ರೀಯಾಶೀಲ ಮಕ್ಕಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಗ್ರಾಮ ಪಂಚಾಯಿತಿಯ ಅಮೃತ ಸರೋವರ ಪೂದೆಕೆರೆ, ಸಂಜೀವಿನಿ ಸದಸ್ಯೆಯರ ಹೈನುಗಾರಿಕೆ, ಮಲ್ಲಿಗೆ ಕೃಷಿ ಹಾಗೂ ವಿಶೇಷ ಚೇತನ ನವೀನ ಕಳತ್ತಜೆ ಅವರ ಜೇನುಕೃಷಿ ಮತ್ತಿತರ ಸ್ಥಳೀಯ ಕೃಷಿ ಉದ್ಯಮಗಳ ವೀಕ್ಷಣೆಗೆ ಹೊರಸಂಚಾರ ಚಟುವಟಿಕೆಯನ್ನು ನಡೆಸಲಾಯಿತು. ಶಿಬಿರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದ್ದು, ಅವರನ್ನು

ಮುರುಳ್ಯ: ಯಶಸ್ವಿಯಾಗಿ ನಡೆದ ಬೇಸಗೆ ಶಿಬಿರ, ಶಾಸಕಿಗೆ ಅಭಿನಂದನೆ Read More »

ಶಿವಮಣಿ ಕಲಾವಿದರ ಹುಟ್ಟುಹಬ್ಬ ಸಂಭ್ರಮಾಚರಣೆ

ಪುತ್ತೂರು: ಇಲ್ಲಿನ ನೆಹರುನಗರದ ಶಿವನಗರ ಶಿವಮಣಿ ಕಲಾ ಸಂಘದ ವತಿಯಿಂದ ಕಲಾವಿದರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಭಾನುವಾರ ಆಚರಿಸಲಾಯಿತು. ಶಿವಮಣಿ ಬಾಲ ಸಮಿತಿಯ ಮುಂದಿನ ಯೋಜನೆಗಳು ಹಾಗೂ ಕಾರ್ಯವೈಖರಿಯನ್ನು ಸಭೆಯ ಮುಂದಿಟ್ಟ ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಉತ್ತಮ ಸಂಘಟನೆ, ಹೊಸ ಹುರುಪು, ಆತ್ಮವಿಶ್ವಾಸ, ಪ್ರಾಮಾಣಿಕತೆ ನಮ್ಮ ಜೀವನದ ಯಶಸ್ಸಿನ ಸೂತ್ರಗಳು. ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಲೆ, ‘ಕಲಿಕೆ’ ಹಾಗೂ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಂಘದ ಉಪಾಧ್ಯಕ್ಷ, ಕಲಾವಿದ ಕೃಷ್ಣಪ್ಪ ಶಿವಾಮಣಿ ಅವರು

ಶಿವಮಣಿ ಕಲಾವಿದರ ಹುಟ್ಟುಹಬ್ಬ ಸಂಭ್ರಮಾಚರಣೆ Read More »

error: Content is protected !!
Scroll to Top