ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಕಾರು ಚಾಲಕನಿಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು

ಬೆಳಗಾವಿ: ಸಚಿವೆ ‌ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನಿಗೆ ಹಾಡು ಹಗಲೇ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾದ ಘಟನೆ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ. ಇರಿತಕ್ಕೊಳಗಾದವರನ್ನು ಬೆಳಗುಂದಿ ಗ್ರಾಮದ ಬಸವಂತ ಗಣಪತ ಕಡೋಲಕರ ಎಂದು ಗುರುತಿಸಲಾಗಿದೆ. ಅವರ ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿಲ್ಲ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಹಲ್ಲೆ […]

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಕಾರು ಚಾಲಕನಿಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು Read More »

ಶಾಲೆಯ ಅಡುಗೆ ಸಿಬ್ಬಂದಿ ಬೆಂಕಿ ತಗುಲಿ‌ ಸಾವು

ಕಾಸರಗೋಡು: ಬಂಗ್ರ ಮಂಜೇಶ್ವರ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೆಲಸಗಾರ್ತಿ ಬೆಂಕಿ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ಮಾಡ ನಿವಾಸಿ ಜಯಾ (56) ಎಂಬವರೇ ‌ಮೃತ ದುರ್ದೈವಿ. ಶಾಲೆಯಲ್ಲಿ ಮಧ್ಯಾಹ್ನದ ಆಹಾರ ತಯಾರಿಸುವ ವೇಳೆ ಸ್ಟವ್‌ನಿಂದ ಬೆಂಕಿ ತಗುಲಿದೆ. ಅವರ ಚೀರಾಟ ಕೇಳಿ ಅಧ್ಯಾಪಕರುಗಳು ಓಡಿ ಬಂದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ. ಕಳೆದ 20 ವರ್ಷಗಳಿಂದ ಅವರು ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಶಾಲೆಯ ಅಡುಗೆ ಸಿಬ್ಬಂದಿ ಬೆಂಕಿ ತಗುಲಿ‌ ಸಾವು Read More »

ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಮತ್ತು ಮೋರ್ಲ ಕುಟುಂಬ ಸ್ವರ ಸಹಯೋಗದಲ್ಲಿ ವಿಧಾನ ಸಭಾ ಸ್ಪೀಕರ್ ಯು. ಟಿ. ಖಾದರ್ ಅವರನ್ನು ಚಂದ್ರಹಾಸ ಶೆಟ್ಟಿ ಮೋರ್ಲ ಅವರ ಸ್ವಗೃಹದಲ್ಲಿ ‌ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಂದ್ರಹಾಸ ಶೆಟ್ಟಿ ಮೋರ್ಲ, ಜಯಶ್ರೀ ಸಿ. ಶೆಟ್ಟಿ, ರತ್ನಾಕರ ಶೆಟ್ಟಿ ಮೋರ್ಲ, ಮುರಳಿಧರ ಶೆಟ್ಟಿ ಮೋರ್ಲ, ಶೈಲಜಾ ಶೆಟ್ಟಿ, ಸೀನಿಯರ್ ಚೇಂಬ‌ರ್ ಇಂಟರ್ನ್ಯಾಷನಲ್ ಅಧ್ಯಕ್ಷೆ ಮಲ್ಲಿಕಾ ಜೆ. ರೈ ಗುಂಡ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು.

ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ Read More »

ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ: ಆರೋಪಿಯ ವಿರುದ್ದ ದೂರು ದಾಖಲು

ಉಪ್ಪಿನಂಗಡಿ: ನೆಲ್ಯಾಡಿ ಸಮೀಪದ ಕಟ್ಟೆಮಜಲಿನಲ್ಲಿ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಪ್ರಯತ್ನ ನಡೆಸಿದ ಆರೋಪದಲ್ಲಿ ‌ಚಂದ್ರಶೇಖರ್ ಎಂಬವರ ‌ವಿರುದ್ಧ ಉಪ್ಪಿನಂಗಡಿ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿರುವುದಾಗಿದೆ. ನೇಮೋತ್ಸವ ಒಂದಕ್ಕೆ ಹೋಗಿದ್ದ ವೇಳೆ ಬಾಲಕಿಯ ಕೈ ಹಿಡಿದು ಆರೋಪಿ ಮಾನಭಂಗ ಮಾಡಲು ಪ್ರಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ: ಆರೋಪಿಯ ವಿರುದ್ದ ದೂರು ದಾಖಲು Read More »

ಜ್ಯೂಸ್ ಸೆಂಟರ್ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ: ನ್ಯಾಯಾಲಯದ ಆದೇಶದನ್ವಯ ಆರೋಪಿಗಳ ಮೇಲೆ ದೂರು ದಾಖಲು

ಉಪ್ಪಿನಂಗಡಿ: ಕೆಲ ಸಮಯದ ಹಿಂದೆ ನಗರದ ಜ್ಯೂಸ್ ಸೆಂಟರ್ ಒಂದಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಐವರು ಆರೋಪಿಗಳ ಮೇಲೆ ನ್ಯಾಯಾಲಯದ ಆದೇಶದ ಅನ್ವಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಗಳನ್ನು ಯಾಹ್ಯಾ, ಸಿರಾಜ್, ಖಾದರ್, ತಾಹಿರಾ, ತಸ್ಮಿಯಾ ಎಂದು ಗುರುತಿಸಲಾಗಿದೆ. ದೂರುದಾರ ಪೆರಿಯಡ್ಕದ ನೌಫ್ ಅವರು ನೀಡಿರುವ ದೂರಿನಲ್ಲಿ, ತಾವು ಉಪ್ಪಿನಂಗಡಿಯ ಜ್ಯೂಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಆಗಮಿಸಿದ ತಾಹಿರ ಮತ್ತು ತಸ್ಮಿಯಾ ಪೆರಿಯಡ್ಕದಲ್ಲಿ

ಜ್ಯೂಸ್ ಸೆಂಟರ್ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ: ನ್ಯಾಯಾಲಯದ ಆದೇಶದನ್ವಯ ಆರೋಪಿಗಳ ಮೇಲೆ ದೂರು ದಾಖಲು Read More »

ಹಳೇ ನೇರೆಂಕಿ ಗಂಗಾಧರ ಆಚಾರ್ಯ ನಿಧನ

ಉಪ್ಪಿನಂಗಡಿ: ಹಳೆನೇರೆಂಕಿ ಗ್ರಾಮದ ಪಾತ್ರ ಮಾಡಿ ನಿವಾಸಿ ಗಂಗಾಧರ ಆಚಾರ್ಯ (64 ವರ್ಷ ) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಪ್ಪಿನಂಗಡಿಯಲ್ಲಿ ನಾಲ್ಕು ದಶಕಗಳಿಂದ ಕಮ್ಮಾರಿಕೆ ವೃತ್ತಿಯನ್ನು ಮಾಡುತ್ತಿದ್ದ ಇವರು ಕೆಲವು ತಿಂಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಜನವರಿ 4ರಂದು ಮಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಅವರು ಅಸ್ವಸ್ಥಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸವಿತ, ಪುತ್ರರಾದ ಮಹೇಶ್, ರಾಜೇಶ್,

ಹಳೇ ನೇರೆಂಕಿ ಗಂಗಾಧರ ಆಚಾರ್ಯ ನಿಧನ Read More »

ಜ.16 – ವಿಟ್ಲ ಜಾತ್ರಾ ಪ್ರಯುಕ್ತ ಸಮರ್ಪಣ್ ಕಲೋತ್ಸವ 2026: ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಸಲುವಾಗಿ ಜ. 16 ರಂದು ಸಮರ್ಪಣ್ ವಿಟ್ಲ ಇವರಿಂದ ‘ಸಮರ್ಪಣ್ ಕಲೋತ್ಸವ 2026’ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವ ಸಮರ್ಪಣೆ, ವಿದ್ಯಾನಿಧಿ ‌ಸಮರ್ಪಣೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಹಿರಿಯ ಸ್ವಯಂಸೇವಕ ಈಶ್ವರ ಡಿ. ಕೂಜಪ್ಪಾಡಿ ಅವರು ಬಿಡುಗಡೆ ಮಾಡಿದರು. ಸಮರ್ಪಣ್ ಕಲೋತ್ಸವದಲ್ಲಿ ಚೈತನ್ಯ ಕಲಾವಿದರು ಬೈಲೂರು ಅವರಿಂದ ರಾಘು ಮಾಸ್ಟ್ರು ಎಂಬ ತುಳು ಹಾಸ್ಯಮಯ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಸಮರ್ಪಣ್

ಜ.16 – ವಿಟ್ಲ ಜಾತ್ರಾ ಪ್ರಯುಕ್ತ ಸಮರ್ಪಣ್ ಕಲೋತ್ಸವ 2026: ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕೋಗಿಲು ಲೇಔಟ್‌ ನೆಲಸಮ : 37 ಕುಟುಂಬಗಳು ಮಾತ್ರ ಸ್ಥಳೀಯ

ಉಳಿದವರೆಲ್ಲ ಹೊರಗಿನವರು ಎಂದು ವರದಿ ಸಲ್ಲಿಸಿದ ಅಧಿಕಾರಿಗಳು ಬೆಂಗಳೂರು: ನೆಲಸಮ ಕಾರ್ಯಾಚರಣೆಯಿಂದ ದೇಶಾದ್ಯಂತ ಸುದ್ದಿಯಾಗಿರುವ ವಿವಾದಗ್ರಸ್ತ ಕೋಗಿಲು ಲೇಔಟ್‌ನಲ್ಲಿ 37 ಕುಟುಂಬಗಳನ್ನು ಹೊರತುಪಡಿಸಿ ಉಳಿದವರೆಲ್ಲ ಹೊರಗಿನಿಂದ ಬಂದವರು ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈಗಾಗಲೇ ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿಯನ್ನು ಸಂಗ್ರಹಿಸಿದ್ದು, ಅವುಗಳ ನೈಜತೆಯನ್ನು ಜಿಬಿಎ, ಕಂದಾಯ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ

ಕೋಗಿಲು ಲೇಔಟ್‌ ನೆಲಸಮ : 37 ಕುಟುಂಬಗಳು ಮಾತ್ರ ಸ್ಥಳೀಯ Read More »

ಆರ್‌ಎಸ್‌ಎಸ್‌ ಅವಹೇಳನ : ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್‌

ಆರ್‌ಎಸ್‌ಎಸ್‌ನವರು ವಿಷಕಾರಿಗಳು ಎಂದಿ ಅವಹೇಳನ ಮಾಡಿದ್ದ ಪ್ರಿಯಾಂಕ್‌ ಖರ್ಗೆ ಬೆಂಗಳೂರು : ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನಗರದ ನಿವಾಸಿ ಹಾಗೂ ಆರ್‌ಎಸ್‌ಎಸ್ ಸದಸ್ಯರಾದ ತೇಜಸ್

ಆರ್‌ಎಸ್‌ಎಸ್‌ ಅವಹೇಳನ : ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್‌ Read More »

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದು ವ್ಯಕ್ತಿಯ ಹತ್ಯೆ : ಮುಂದುವರಿದ ಕೊಲೆಗಳ ಸರಣಿ

24 ತಾಸುಗಳಲ್ಲಿ ಮೂವರು ಹಿಂದೂಗಳ ಮರ್ಡರ್‌ ಢಾಕಾ: ಬಾಂಗ್ಲಾದೇಶದಲ್ಲಿ ದಿನಸಿ ಅಂಗಡಿಯ ಮಾಲೀಕನಾಗಿದ್ದ ಹಿಂದೂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಇದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ. ಹತ್ಯೆಯಾದವರನ್ನು ಮೋನಿ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯಲ್ಲಿ ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ. ಈ ಘಟನೆಗೂ ಕೆಲವು ಗಂಟೆಗಳ ಮೊದಲು, ಜಶೋರ್ ಜಿಲ್ಲೆಯಲ್ಲಿ ಕಾರ್ಖಾನೆ ಮಾಲೀಕರು ಹಾಗೂ ಪತ್ರಿಕೆಯೊಂದರ

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದು ವ್ಯಕ್ತಿಯ ಹತ್ಯೆ : ಮುಂದುವರಿದ ಕೊಲೆಗಳ ಸರಣಿ Read More »

error: Content is protected !!
Scroll to Top