ಅಲ್ಟೋ ಕಾರ್ ಹೊತ್ತುರಿದು ವೃದ್ಧ ಸಜೀವ ದಹನ
ಚಿಕ್ಕಬಳ್ಳಾಪುರ: ಅಲ್ಟೋ ಕಾರೊಂದು ಹೊತ್ತಿ ಉರಿದ ಪರಿಣಾಮ ವೃದ್ಧ ಚಾಲಕ ಸಜೀವ ದಹನವಾದ ಘಟನೆ ಬಾಗೇಪಲ್ಲಿಯ ಆಚೇಪಲ್ಲಿ ಕ್ರಾಸ್ ಬಳಿ ನಡೆದಿದೆ. ಮೃತನನ್ನು ಪೆನುಮಲೆ ಗ್ರಾಮದ ಉದಯ್ ಕುಮಾರ್ (70) ಎಂದು ಗುರುತಿಸಲಾಗಿದೆ. ಅವರು ನಿನ್ನೆ ರಾತ್ರಿ ಬಾಗೇಪಲ್ಲಿಯಿಂದ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿ ಯಾವುದೇ ದೋಷಗಳು, ಅಪಘಾತದ ಕುರುಹುಗಳು ಕಂಡು ಬಂದಿಲ್ಲ. ಆದ್ದರಿಂದ ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎನ್ನುವ ಅನುಮಾನವೂ ಸೃಷ್ಟಿಯಾಗಿದೆ. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಅಲ್ಟೋ ಕಾರ್ ಹೊತ್ತುರಿದು ವೃದ್ಧ ಸಜೀವ ದಹನ Read More »










